ಕೆ ಎಲ್ ರಾಹುಲ್ ಹಾಗೂ ರವೀಂದ್ರ ಜಡೇಜಾ ಅವರ ಆಟದ ನೆರವಿನೊಂದಿಗೆ ಭಾರತ ತಂಡ ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಎರಡನೇ ದಿನದಾಟದಲ್ಲಿ ಟೀ ವಿರಾಮದ ವೇಳೆಗೆ 87 ಓವರ್‌ಗಳಲ್ಲಿ6 ವಿಕೆಟ್ ನಷ್ಟಕ್ಕೆ 356 ರನ್ ಗಳಿಸಿ 110 ರನ್‌ಗಳ ಇನಿಂಗ್ಸ್ ಮುನ್ನಡೆಯಲ್ಲಿದೆ.
ಹೈದರಾಬಾದ್‌ನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ 119/1 ರನ್‌ನೊಂದಿಗೆ ಎರಡನೇ ದಿನದಾಟ ಶುರು ಮಾಡಿದ ಟೀಂ ಇಂಡಿಯಾ 23.4 ಓವರ್‌ಗಳಲ್ಲಿ ತಂಡದ ಮೊತ್ತ 123 ರನ್ ಗಳಿಸಿದ್ದಾಗ ಯಶಸ್ವಿ ಜೈಸ್ವಾಲ್ ಔಟಾದರು. 74 ಚೆಂಡುಗಳಲ್ಲಿ 10 ಬೌಂಡರಿ ಹಾಗೂ 3 ಸಿಕ್ಸರ್‌ಗಳೊಂದಿಗೆ 80 ರನ್ ಗಳಿಸಿ ಜೋರೂಟ್ ಬೌಲಿಂಗ್‌ನಲ್ಲಿ ಪೆವಿಲಿಯನ್‌ಗೆ ತೆರಳಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಇಳಿಸಿದ ಶಕ್ತಿಗಳೇ ಕರ್ಪೂರಿಯವರನ್ನು ಅಟ್ಟಕ್ಕೇರಿಸುತ್ತಿರುವ ಅಣಕ
ಮತ್ತೊಬ್ಬ ಉದಯೋನ್ಮುಖ ಆಟಗಾರ ಶುಭಮನ್ ಗಿಲ್ ಹೆಚ್ಚು ಹೊತ್ತು ನಿಲ್ಲದೆ 23 ರನ್‌ಗಳಿಗೆ ನಿರ್ಗಮಿಸಿದರು. ಕೆ ಎಲ್ ರಾಹುಲ್ ಹಾಗೂ ಶ್ರೇಯಸ್ ಅಯ್ಯರ್ ಅವರ ಜೋಡಿ 4ನೇ ವಿಕೆಟ್ ಜೊತೆಯಾಟದಲ್ಲಿ 64 ರನ್ ಪೇರಿಸಿದರು. 35 ರನ್ ಗಳಿಸಿದ ಅಯ್ಯರ್ ಔಟಾದರು.
ಆಲ್‌ರೌಂಡರ್ ರವೀಂದ್ರ ಜಡೇಜಾ ಅವರಿಗೂ ಒಂದಷ್ಟು ಹೊತ್ತು ಜೊತೆಯಾಟ ನೀಡಿದ ಕೆ ಎಲ್ ರಾಹುಲ್ 86 ರನ್ ಗಳಿಸಿದ್ದಾಗ ಹಾರ್ಟಲೇ ಬೌಲಿಂಗ್‌ನಲ್ಲಿ ರಿಹಾನ್ ಅಹಮದ್‌ಗೆ ಕ್ಯಾಚಿತ್ತು 14 ರನ್‌ಗಳಿಂದ ಶತಕ ವಂಚಿತರಾದರು. ರಾಹುಲ್ ಇನಿಂಗ್ಸ್‌ನಲ್ಲಿ 8 ಬೌಂಡರಿ 2 ಸಿಕ್ಸರ್‌ಗಳಿದ್ದವು.
ರಾಹುಲ್ ನಂತರ ಕ್ರೀಸ್ ಗಿಳಿದ ವಿಕೆಟ್ ಕೀಪರ್ ಶ್ರೀಕರ್ ಭರತ್, ಕೊಂಚ ನಿಧಾನಗತಿಯಲ್ಲಿ ಆಟ ಆರಂಭಿಸಿದರೂ, ನಂತರ ಜಡೇಜಾ ಜೊತೆಯಾಟದಲ್ಲಿ ಬಿರುಸಿನ ಹೊಡೆತಗಳ ಫಲವಾಗಿ 35 ರನ್ ಪೇರಿಸಿದರು. ರೂಟ್ ಬೌಲಿಂಗ್ ನಲ್ಲಿ ಎಲ್ಬಿಯಾಗಿ ಔಟ್ ಆದರು.
ಅರ್ಧ ಶತಕ ಗಳಿಸಿರುವ ರವೀಂದ್ರ ಜಡೇಜಾ(60) ಜೊತೆಗೆ ಮತ್ತೊಬ್ಬ ಸ್ಪಿನ್ ಬೌಲರ್ ರವಿಚಂದ್ರನ್ ಅಶ್ವಿನ್ ಜೊತೆಯಾಟದೊಂದಿಗೆ ಆಟವಾಡುತ್ತಿದ್ದಾರೆ.