ವಿಕೆಟ್ ಕೀಪರ್ ಧ್ರುವ್ ಜುರೆಲ್ 90 ರನ್ಗಳ ಅಮೋಘ ಆಟದಿಂದ ಟೀಂ ಇಂಡಿಯಾ ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಟೆಸ್ಟ್ನಲ್ಲಿ 307 ರನ್ ಗಳಿಸಲು ನೆರವಾಯಿತು.
ರಾಂಚಿಯಲ್ಲಿ ನಡೆಯುತ್ತಿರುವ ಮೂರನೇ ದಿನದಲ್ಲಿ ಭೋಜನ ವಿರಾಮದ ವೇಳೆಗೆ ಭಾರತ 103.2 ಓವರ್ಗಳಲ್ಲಿ 307 ರನ್ಗಳಿಗೆ ಆಲೌಟ್ ಆಗಿ 46 ರನ್ಗಳ ಹಿನ್ನೆಡೆ ಪಡೆಯಿತು. ಟೀಂ ಇಂಡಿಯಾ ಪರ ಮೂರನೇ ದಿನ ಧ್ರವ್ ಜುರೆಲ್ ಉತ್ತಮ ಆಟವಾಡಿದರು.
ಕುಲ್ದೀಪ್(28) ಅವರೊಂದಿಗೆ 80 ರನ್ಗಳ ಜೊತೆಯಾಟವಾಡಿ 90 ರನ್ ಗಳಿಸಿದ ಜುರೆಲ್ 10 ರನ್ಗಳಿಂದ ಶತಕ ವಂಚಿತರಾದರು. ಜುರೆಲ್ ಸೊಗಸಾದ ಆಟದಲ್ಲಿ 6 ಬೌಂಡರಿ ಹಾಗೂ 4 ಭರ್ಜರಿ ಸಿಕ್ಸರ್ಗಳಿದ್ದವು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ವಿಪಕ್ಷ ನಾಯಕ ಅಶೋಕ್ ಮತ್ತು ಸಾರ್ವಜನಿಕ ಸಭ್ಯತೆ
ಇಂಗ್ಲೆಂಡ್ ಪರ ಶೋಹೆಬ್ ಬಷೀರ್ 119/5, ಟಾಮ್ ಹಾರ್ಟ್ಲಿ 68/3 ಹಾಗೂ ಜೇಮ್ಸ್ ಆಂಡರ್ಸನ್ 48/2 ವಿಕೆಟ್ ಕಬಳಿಸಿದರು.
ಎರಡನೇ ಇನಿಂಗ್ಸ್ ಆರಂಭಿಸಿರುವ ಇಂಗ್ಲೆಂಡ್ ಎರಡು ವಿಕೆಟ್ ಕಳೆದುಕೊಂಡು ಆರಂಭಿಕ ಆಘಾತಕ್ಕೊಳಗಾಗಿದೆ. ಬೆನ್ ಡೆಕೆಟ್ (15) ಹಾಗೂ ಓಲಿ ಪೋಪ್ (0) ಅವರನ್ನು ಸ್ಪಿನ್ನರ್ ಆರ್ ಅಶ್ವಿನ್ ಪೆವಿಲಿಯನ್ಗೆ ಕಳಿಸಿದ್ದಾರೆ.
ಇತ್ತೀಚಿನ ವರದಿಗಳಂತೆ ಇಂಗ್ಲೆಂಡ್ 112 ಓವರ್ಗಳಲ್ಲಿ 52/2 ರನ್ ಗಳಿಸಿದೆ. ರೂಟ್(9) ಹಾಗೂ ಜಾಕ್ ಕ್ರಾಲಿ(28) ಆಟವಾಡುತ್ತಿದ್ದಾರೆ.