ಆ್ಯಂಟಿಗುವಾದ ಸರ್ ವಿವಿಯನ್ ರಿಚರ್ಡ್ಸ್ ಕ್ರೀಡಾಂಗಣದಲ್ಲಿ ಇಂದು ಬಾಂಗ್ಲಾದೇಶ ವಿರುದ್ಧ 2024ರ ಟಿ20 ವಿಶ್ವಕಪ್‌ನ ಸೂಪರ್-8 ಪಂದ್ಯದಲ್ಲಿ ಟೀಮ್ ಇಂಡಿಯಾವು 50 ರನ್‌ಗಳಿಂದ ಭರ್ಜರಿಯಾಗಿ ಗೆದ್ದುಕೊಂಡಿದೆ.
ಟಾಸ್ ಸೋತ ಹಿನ್ನೆಲೆಯಲ್ಲಿ ಮೊದಲು ಬ್ಯಾಟಿಂಗ್ ಇಳಿದ ಟೀಮ್ ಇಂಡಿಯಾವು ಹಾರ್ದಿಕ್ ಪಾಂಡ್ಯ ಅವರ ಅರ್ಧಶತಕದ ನೆರವಿನಿಂದ 196 ರನ್ ಗಳಿಸುವ ಮೂಲಕ ಬಾಂಗ್ಲಾದೇಶಕ್ಕೆ 197 ರನ್‌ಗಳ ಗುರಿ ನೀಡಿತ್ತು.
𝘼 𝙘𝙡𝙞𝙣𝙞𝙘𝙖𝙡 𝙨𝙝𝙤𝙬 𝙞𝙣 𝘼𝙣𝙩𝙞𝙜𝙪𝙖 𝙛𝙧𝙤𝙢 #𝙏𝙚𝙖𝙢𝙄𝙣𝙙𝙞𝙖! 👏 👏
A 5⃣0⃣-run win over Bangladesh for @ImRo45 & Co as they seal their 2️⃣nd win on the bounce in Super Eight. 🙌 🙌
Scorecard ▶️ https://t.co/QZIdeg3h22 #T20WorldCup | #INDvBAN pic.twitter.com/GJ4eZzDUaA
— BCCI (@BCCI) June 22, 2024
ಈ ಗುರಿಯನ್ನು ಬೆನ್ನತ್ತಿದ ಬಾಂಗ್ಲಾದೇಶವು ನಿಗದಿತ ಕುಲ್‌ದೀಪ್ ಯಾದವ್ ಅವರ ಸ್ಪಿನ್ ದಾಳಿಗೆ ನಲುಗಿ, ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 146 ರನ್ ಗಳಿಸಲಷ್ಟೇ ಶಕ್ತವಾಯಿತು. ಆ ಮೂಲಕ 50 ರನ್‌ಗಳಿಂದ ಸೋಲೊಪ್ಪಿಕೊಂಡಿತು. ಈ ಗೆಲುವಿನೊಂದಿಗೆ ಟೀಮ್ ಇಂಡಿಯಾವು ಸೆಮಿಫೈನಲ್ ಪ್ರವೇಶಿಸುವುದು ಬಹುತೇಕ ಖಚಿತವಾಗಿದೆ. ಮೊದಲ ಪಂದ್ಯದಲ್ಲಿ ಅಫ್ಘಾನಿಸ್ತಾನ ತಂಡವನ್ನು ಸೋಲಿಸಿತ್ತು.
ಇಂದಿನ ಪಂದ್ಯದಲ್ಲಿ ಟೀಮ್ ಇಂಡಿಯಾ ಪರ ಉತ್ತಮ ಬೌಲಿಂಗ್ ದಾಳಿ ನಡೆಸಿದ ಕುಲ್‌ದೀಪ್ ಯಾದವ್, ಕೇವಲ 19 ರನ್ ನೀಡಿ 3 ವಿಕೆಟ್ ಗಳಿಸಿದರು. ಉಳಿದಂತೆ ಜಸ್‌ಪ್ರೀತ್ ಬುಮ್ರಾ ಹಾಗೂ ಅರ್ಷ್‌ದೀಪ್ ಸಿಂಗ್ ತಲಾ 2 ವಿಕೆಟ್ ಗಳಿಸಿದರೆ, ಹಾರ್ದಿಕ್ ಪಾಂಡ್ಯ 1 ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು.
India crush Bangladesh to take a huge step into the semifinals 💪
🔗 https://t.co/TViqUcv5FD | #INDvBAN pic.twitter.com/9DTOsBVEkp
— ESPNcricinfo (@ESPNcricinfo) June 22, 2024
ಬಾಂಗ್ಲಾ ಪರ ಬ್ಯಾಟಿಂಗ್‌ನಲ್ಲಿ ನಾಯಕ ನಜ್ಮುಲ್ ಹಸನ್ ಸಾಂಟೊ 40 ರನ್ ಗಳಿಸಿದರೆ, ತಂಝೀದ್ ಹಸನ್ 29 ರನ್ ಹಾಗೂ ರಿಶಾದ್ ಹುಸೇನ್ 24 ರನ್ ಗಳಿಸಿದರು.
ಹಾರ್ದಿಕ್ ಪಾಂಡ್ಯ ಅರ್ಧಶತಕ
ಟಾಸ್ ಗೆದ್ದಿದ್ದ ಬಾಂಗ್ಲಾದೇಶವು ಬೌಲಿಂಗ್ ಆಯ್ದುಕೊಂಡಿತ್ತು. ಮೊದಲಿಗೆ ಭಾರತ ತಂಡದಿಂದ ನಾಯಕ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಬ್ಯಾಟ್ ಬೀಸಿ ಉತ್ತಮ ಆರಂಭ ನೀಡಿದರು. 11 ಎಸೆತಗಳಿಗೆ 23 ರನ್ ಸಿಡಿಸಿ ರೋಹಿತ್ ಶರ್ಮಾ ಔಟಾಗುವ ಮೂಲಕ ಟೀಂ ಇಂಡಿಯಾದ ಮೊದಲ ವಿಕೆಟ್ ಪತನಗೊಂಡಿತು. 11 ಬಾಲ್‌ಗಳಲ್ಲಿ ರೋಹಿತ್ ಶರ್ಮಾ 3 ಬೌಂಡರಿ ಹಾಗೂ 1 ಸಿಕ್ಸ್ ಸಿಡಿಸಿ ಒಟ್ಟು 23 ಅಂಕಗಳನ್ನು ತಂಡಕ್ಕೆ ಗಳಿಸಿಕೊಟ್ಟರು. ವಿರಾಟ್ ಕೊಹ್ಲಿ 28 ಎಸೆತಗಳಲ್ಲಿ ಒಟ್ಟು 37 ರನ್ ಸಿಡಿಸಿ 2ನೇ ವಿಕೆಟ್ ಬಿಟ್ಟುಕೊಟ್ಟರು.
ಬಳಿಕ ಕ್ರೀಸ್‌ಗೆ ಬಂದ ಸೂರ್ಯಕುಮಾರ್ ಯಾದವ್ ಮೊದಲ ಎಸೆತಕ್ಕೆ ಸಿಕ್ಸ್ ಬಾರಿಸಿ ಎರಡನೇ ಬಾಲ್ ಅನ್ನು ವಿಕೆಟ್ ಕೀಪರ್ ಕೈಗೆ ಕ್ಯಾಚ್ ನೀಡುವ ಮೂಲಕ ಒಟ್ಟು 6 ರನ್ ಗಳಿಸಿ ಪೆವಿಲಿಯನ್‌ಗೆ ಮರಳಿದರು. ರಿಷಭ್ ಪಂತ್ 4 ಬೌಂಡರಿ ಹಾಗೂ 2 ಸಿಕ್ಸ್ ಸಿಡಿಸಿ, 24 ಎಸೆತಗಳಲ್ಲಿ ಒಟ್ಟು 36 ರನ್, ಗಳಿಸಿ ವಿಕೆಟ್ ಒಪ್ಪಿಸಿದರು.
ಬಳಿಕ ಕ್ರೀಸ್‌ಗೆ ಬಂದ ಶಿವಂ ದುಬೆ 24 ಎಸೆತಗಳಿಗೆ 34 ರನ್ ಸಿಡಿಸಿ ಔಟಾದರು. ಶಿವಂ ದುಬೆ ಹಾಗೂ ಹಾರ್ದಿಕ್ ಪಾಂಡ್ಯ ಜೊತೆಯಾಟವಾಡಿ ತಂಡಕ್ಕೆ 54 ರನ್ ಗಳಿಸಿಕೊಟ್ಟರು.
ಅಕ್ಷರ್ ಪಟೇಲ್ 5 ಎಸೆತಗಳಿಗೆ 3 ರನ್ ಗಳಿಸಿ ಔಟಾಗದೇ ಆಟವನ್ನು ಕೊನೆಗೊಳಿಸಲು ಸಹಕರಿಸಿದರು. ಹಾರ್ದಿಕ್ ಪಾಂಡ್ಯ ಕೊನೆಯ 1 ಬಾಲ್‌ನಲ್ಲಿ ಫೋರ್ ಸಿಡಿಸಿ 27 ಎಸೆತಗಳಿಗೆ ಅರ್ಧಶತಕ ಪೂರ್ಣಗೊಳಿಸಿ ಔಟಾಗದೇ ಉಳಿದರು. ಕೊನೆಯಲ್ಲಿ ಟೀಮ್ ಇಂಡಿಯಾವು ನಿಗದಿತ 20 ಓವರ್‌ಗಳಲ್ಲಿ 196 ರನ್ ಗಳಿಸಿತು.
ಬಾಂಗ್ಲಾ ಪರ ಬೌಲಿಂಗ್‌ನಲ್ಲಿ ರಿಶಾದ್ ಹುಸೇನ್ ಹಾಗೂ ತಂಝೀಮ್ ಹಸನ್ ಸಾಕಿಬ್ 2 ವಿಕೆಟ್ ಗಳಿಸಿದರೆ, ಶಾಕಿಬುಲ್ ಹಸನ್ 1 ವಿಕೆಟ್ ಪಡೆಯಲು ಸಫಲರಾದರು.
