ರಾಂಚಿಯ ಜೆಎಸ್ಸಿಎ ಕ್ರೀಡಾಂಗಣದಲ್ಲಿ ನಡೆದ ನಾಲ್ಕನೇ ಟೆಸ್ಟ್ನಲ್ಲಿ ಭಾರತವನ್ನು ಸೋಲಿನ ದವಡೆಯಿಂದ ಪಾರು ಮಾಡಿದ ಆಟಗಾರರಲ್ಲಿ ಮೊದಲ ಮನ್ನಣೆ ಸಿಗಬೇಕಾದುದು ವಿಕೆಟ್ ಕೀಪರ್ ಕಂ ಬ್ಯಾಟ್ಸ್ಮನ್ ಧ್ರುವ್ ಜುರೆಲ್ ಅವರಿಗೆ. ಒಂದು ವೇಳೆ ಎರಡೂ ಇನಿಂಗ್ಸ್ಗಳಲ್ಲಿ ಈತ ಬ್ಯಾಟಿಂಗ್ನಲ್ಲಿ ಕೈಚಳಕ ತೋರಿಸದಿದ್ದರೇ ಪ್ರವಾಸಿ ಇಂಗ್ಲೆಂಡ್ಗೆ ಗೆಲುವು ಸುಲಭವಾಗಿ ಸರಣಿ ಗೆಲ್ಲಲು ಮತ್ತೊಂದು ಪಂದ್ಯ ಕಾಯಬೇಕಿತ್ತು.
ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಸರಣಿಯಲ್ಲಿ 2-1ರಲ್ಲಿ ಪಂದ್ಯ ಗೆದ್ದು ಮುನ್ನಡೆ ಕಾಯ್ದುಕೊಂಡಿದ್ದ ಭಾರತ ರಾಂಚಿಯಲ್ಲಿ ನಾಲ್ಕನೇ ಟೆಸ್ಟ್ ಶುರು ಮಾಡಿತ್ತು. ಟಾಸ್ ಗೆದ್ದ ಆಂಗ್ಲ ಪಡೆಯ ನಾಯಕ ಬೆನ್ ಸ್ಟೋಕ್ಸ್ ಬ್ಯಾಟಿಂಗ್ ಆಯ್ದುಕೊಂಡಿದ್ದರು. ಜೋರೂಟ್ ಅವರ ತಾಳ್ಮೆಯ ಶತಕದ ನೆರವಿನಿಂದಾಗಿ ಮೊದಲ ಇನಿಂಗ್ಸ್ನಲ್ಲಿ ಇಂಗ್ಲೆಂಡ್ 353 ಪೇರಿಸಿತ್ತು. ನಂತರ ಮೊದಲ ಇನಿಂಗ್ಸ್ ಶುರು ಮಾಡಿದ್ದ ಟೀಂ ಇಂಡಿಯಾ ಆರಂಭದಿಂದಲೇ ಆಘಾತ ಶುರುವಾಗಿತ್ತು. ಯುವ ಪ್ರತಿಭೆ ಜೈಸ್ವಾಲ್ ಚೂರು ಬೀಸಿ ಆಡಿದ ಪರಿಣಾಮ ತಂಡದ ಮೊತ್ತ 170 ದಾಟಿತಾದರೂ ಅದಾಗಲೇ ನಾಯಕ ರೋಹಿತ್ ಶರ್ಮಾ ಸೇರಿ 7 ವಿಕೆಟ್ಗಳು ಉರುಳಿಬಿದ್ದಿದ್ದವು.
A fantastic victory in Ranchi for #TeamIndia 😎
India clinch the series 3⃣-1⃣ with the final Test to be played in Dharamsala 👏👏
Scorecard ▶️ https://t.co/FUbQ3MhXfH#INDvENG | @IDFCFIRSTBank pic.twitter.com/5I7rENrl5d
— BCCI (@BCCI) February 26, 2024
177 ರನ್ಗಳಿಗೆ 7 ವಿಕೆಟ್ಗಳನ್ನು ಕಳೆದುಕೊಂಡ ಭಾರತಕ್ಕೆ ಆಪತ್ಭಾಂಧವರಾದವರು 7ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಆರಂಭಿಸಿದ ಧ್ರುವ್ ಜುರೆಲ್. ಕುಲ್ದೀಪ್ ಯಾದವ್ ಹಾಗೂ ಆಕಾಶ್ದೀಪ್ ಅವರು ಕೊಟ್ಟ ನೆರವಿನಿಂದ ತಾಳ್ಮೆಯ ಜೊತೆ ಆಗಾಗ ಬ್ಯಾಟ್ ಬೀಸುತ್ತ 90 ರನ್ ಗಳಿಸಿ ತಂಡದ ಮೊತ್ತವನ್ನು 300ರ ಗಡಿ ದಾಟಲು ನೆರವಾದರು. 211 ಚೆಂಡುಗಳ ಜುರೆಲ್ ಅವರ ಬ್ಯಾಟಿಂಗ್ನಲ್ಲಿ ನಾಲ್ಕು ಅದ್ಭುತ ಸಿಕ್ಸರ್ಗಳೊಂದಿಗೆ 6 ಆಕರ್ಷಕ ಬೌಂಡರಿಗಳಿದ್ದವು. 10 ರನ್ಗಳಿಂದ ಶತಕ ತಪ್ಪಿಸಿಕೊಂಡರೂ ಟೀಂ ಇಂಡಿಯಾಗೆ ಉತ್ತಮ ಅಡಿಪಾಯ ಹಾಕಿದರು. ಭಾರತ ಮೊದಲ ಇನಿಂಗ್ಸ್ನಲ್ಲಿ 46 ರನ್ಗಳ ಹಿನ್ನಡೆ ಉಂಟಾದರೂ ತಂಡ ಅಪಾಯದಿಂದ ಪಾರಾಗಿತ್ತು.
Dhruv Jurel impressed everyone with resilient knocks with the bat in both the innings 👏👏
He becomes the Player of the Match in Ranchi 🏆
Scorecard ▶️ https://t.co/FUbQ3MhXfH#TeamIndia | #INDvENG | @IDFCFIRSTBank pic.twitter.com/SBu4LVbn7C
— BCCI (@BCCI) February 26, 2024
ಭಾರತದ ಅನುಭವಿ ಬೌಲರ್ಗಳ ಕೈಚಳಕದಿಂದ ಇಂಗ್ಲೆಂಡ್ ಎರಡನೇ ಇನಿಂಗ್ಸ್ನಲ್ಲಿ 145 ರನ್ಗಳಿಗೆ ಆಲೌಟ್ ಆಗಿತ್ತು. ಆಗ ಭಾರತದ ಗೆಲುವಿಗೆ ಬೇಕಿದ್ದು 192 ರನ್ಗಳು. ಸ್ವದೇಶಿ ಪಿಚ್ನಲ್ಲಿ ಗೆಲುವಿನ ಗುರಿ ಕಡಿಮೆಯಾದರೂ ಇಂಗ್ಲೆಂಡ್ ಬೌಲರ್ಗಳು 120 ರನ್ಗಳಿಗೆ ಐದು ವಿಕೆಟ್ ಉರುಳಿಸಿದ್ದರು. ಮತ್ತೊಬ್ಬ ಉದಯೋನ್ಮುಖ ಪ್ರತಿಭೆ ಶುಭಮನ್ ಗಿಲ್ (52) ಅವರೊಂದಿಗೆ 6ನೇ ವಿಕೆಟ್ ಜೊತೆಯಾಟದಲ್ಲಿ 72 ಜೊತೆಯಾಟವಾಡಿದ ಜುರೆಲ್ 39 ರನ್ಗಳ ಕೊಡುಗೆ ನೀಡಿ ಭಾರತದ ಗೆಲುವಿನ ಪ್ರಮುಖ ರೂವಾರಿಯಾದರು. ಗೆಲುವಿನ ಕಾಣ್ಕೆಯಾಗಿ ಪಂದ್ಯಶ್ರೇಷ್ಠ ಪ್ರಶಸ್ತಿಗೂ ಭಾಜನರಾದರು.
ಈ ಸುದ್ದಿ ಓದಿದ್ದೀರಾ? 70ರ ದಶಕದ ಕ್ರಿಕೆಟ್ ಪ್ರಿಯರ ಆರಾಧ್ಯ ದೈವ ಜಿಆರ್ ವಿಶ್ವನಾಥ್ಗೆ 75ರ ಸಂಭ್ರಮ
ತಂಡಕ್ಕೆ ಜಯ ತಂದುಕೊಟ್ಟ ಜುರೆಲ್ ಅವರನ್ನು ತಂಡದ ನಾಯಕ ಎರಡೂ ಕೈಗಳನ್ನು ಕುಲುಕಿ ಧನ್ಯವಾದ ಹೇಳಿದರೆ, ಕೋಚ್ ರಾಹುಲ್ ದ್ರಾವಿಡ್ ಧ್ರುವ್ ಅವರನ್ನು ಕೊಂಡಾಡಿದರು. ತಂಡದ ಉಳಿದ ಸದಸ್ಯರೆಲ್ಲರೂ ಜುರೆಲ್ ಅವರನ್ನು ಅಪ್ಪಿಕೊಂಡು ಸಂತಸ ವ್ಯಕ್ತಪಡಿಸಿದರು. ಇಷ್ಟಲ್ಲದೆ ಧ್ರುವ್ ಅವರ ಆಟಕ್ಕೆ ಕೋಟ್ಯಂತರ ಅಭಿಮಾನಿಗಳಲ್ಲದೆ ಕ್ರಿಕೆಟ್ ದಂತಕತೆಗಳಾದ ಸುನಿಲ್ ಗವಾಸ್ಕರ್, ಸಚಿನ್ ತೆಂಡೂಲ್ಕರ್, ವೀರೇಂದ್ರ ಸೆಹ್ವಾಗ್ ಸೇರಿದಂತೆ ಹಲವು ಹಿರಿಯ ಕ್ರಿಕೆಟ್ ಆಟಗಾರರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಕ್ರಿಕೆಟ್ ನೋಡುತ್ತ ಬೆಳೆದ ಯೋಧನ ಮಗ
ಆಗೆ ನೋಡಿದರೆ ಧ್ರುವ್ ಜುರೆಲ್ ಅವರಿಗೆ ಇದು ಎರಡನೇ ಅಂತಾರಾಷ್ಟ್ರೀಯ ಟೆಸ್ಟ್. ದೇಶಾದ್ಯಂತದ ಹಲವು ಕ್ರಿಕೆಟ್ ಕಲಿಗಳ ನಡುವೆ ಟೀಂ ಇಂಡಿಯಾದಲ್ಲಿ ಸ್ಥಾನ ಸಿಗಬೇಕಾದರೆ ಪ್ರತಿಭೆಯ ಜೊತೆ ಅದೃಷ್ಟವೂ ಇರಬೇಕು ಎನ್ನುತ್ತಾರೆ. ಸ್ಟಾರ್ ಆಟಗಾರ ಕೆ ಎಲ್ ರಾಹುಲ್ ಗಾಯದ ಸಮಸ್ಯೆಯಿಂದಾಗಿ ಇಂಗ್ಲೆಂಡ್ ಟೆಸ್ಟ್ ಸರಣಿಗೆ ಧ್ರುವ್ ಜುರೆಲ್ ಹಾಗೂ ಶ್ರೀಕರ್ ಭರತ್ ಅವರನ್ನು ಆಯ್ಕೆ ಮಾಡಲಾಗಿತ್ತು. ಆದರೂ ಮೊದಲ ಎರಡು ಟೆಸ್ಟ್ಗಳಲ್ಲಿ ಸ್ಥಾನ ಸಿಕ್ಕಿರೆ ಶ್ರೀಕರ್ ಅವರನ್ನು ಆಯ್ಕೆ ಮಾಡಿ ಧ್ರುವ್ ಅವರನ್ನು ಬೆಂಚ್ನಲ್ಲಿ ಕೂರಿಸಲಾಗಿತ್ತು. ಎರಡು ಟೆಸ್ಟ್ಗಳಲ್ಲಿ ಶ್ರೀಕರ್ ಭರತ್ ವಿಫಲರಾದ ಕಾರಣ ಮೂರನೇ ಟೆಸ್ಟ್ನಲ್ಲಿ ಧ್ರುವ್ ಜುರೆಲ್ ಅವರಿಗೆ ಸ್ಥಾನ ಲಭಿಸಿತ್ತು. ಮೂರನೇ ಟೆಸ್ಟ್ನಲ್ಲೂ 8ನೇ ಕ್ರಮಾಂಕದ ಆಟಗಾರನಾಗಿ 46 ರನ್ ಬಾರಿಸಿದ್ದು ತಂಡದ ಇತರ ಆಟಗಾರರ ಗಮನ ಸೆಳೆದಿತ್ತು. ಜೊತೆಗೆ ಕೀಪಿಂಗ್ನಲ್ಲಿ ಚುರುಕಾದ ಕ್ಷೇತ್ರರಕ್ಷಣೆ ಧ್ರುವ್ ಅವರಿಗೆ ಮತ್ತಷ್ಟು ಬಲ ತಂದುಕೊಟ್ಟಿತು. ಇವೆಲ್ಲವನ್ನು ಎರಡನೇ ಟೆಸ್ಟ್ನಲ್ಲಿ ಭಾರತಕ್ಕೆ ಗೆಲುವು ದೊರಕಿಸಿ 23 ವರ್ಷದ ಆಟಗಾರ ತಮ್ಮ ಪ್ರತಿಭೆಯನ್ನು ಸಾಬೀತು ಪಡಿಸಿದ್ದಾರೆ.
The score is 3-won! 😉
India once again came back from a pressure situation and fought back to win the match. It shows the character and the mental strength of our players.
A great first spell in Test cricket for Akashdeep. @dhruvjurel21 was terrific at reading the length in… pic.twitter.com/DgaFoqMiTa
— Sachin Tendulkar (@sachin_rt) February 26, 2024
ಉತ್ತರ ಪ್ರದೇಶದ ಆಗ್ರಾದಲ್ಲಿ ಜನಿಸಿದ ಧ್ರುವ್ ಜುರೆಲ್ ಕುಟುಂಬ ಶ್ರೀಮಂತರಲ್ಲ ಮತ್ತು ಕ್ರಿಕೆಟ್ ಕ್ರೀಡಾಸಕ್ತರಿಂದ ಕೂಡಿಲ್ಲ. ತಂದೆ ಸೇನಾ ಯೋಧರು. ಕಾರ್ಗಿಲ್ ಹೋರಾಟದಲ್ಲಿ ಪಾಲ್ಗೊಂಡು ದೇಶಕ್ಕಾಗಿ ಸೇವೆ ಸಲ್ಲಿಸಿದ್ದಾರೆ. ಆರಂಭದಲ್ಲಿ ಎಲ್ಲರಂತೆ ಮನೆಯಲ್ಲಿ ಕ್ರಿಕೆಟ್ ನೋಡುತ್ತ, ಟೆನಿಸ್ ಕ್ರಿಕೆಟ್ ಆಡುತ್ತ ಆಸಕ್ತಿ ಬೆಳೆಸಿಕೊಂಡರು. ಕ್ರಿಕೆಟ್ನಲ್ಲಿದ್ದ ಶ್ರದ್ಧೆಯಿಂದಲೇ ರಣಜಿ, ಐಪಿಎಲ್, ಟಿಂ ಇಂಡಿಯಾ ಅಂಡರ್-19, ಈಗ ಭಾರತ ತಂಡಕ್ಕೂ ಆಯ್ಕೆಯಾಗಿದ್ದಾರೆ. ಮುಂದೊಂದು ದಿನ ಈ ಪ್ರತಿಭೆ ಸ್ಟಾರ್ ಆಟಗಾರನಾಗುವುದರಲ್ಲಿ ಯಾವುದೇ ಸಂದೇಹವಿಲ್ಲ.