ಅಹಮದಾಬಾದಿನ ಮೊಟೇರಾದ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ – ಆಸ್ಟ್ರೇಲಿಯಾ ನಡುವಣ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಬ್ಯಾಟಿಂಗ್ ಆಡುತ್ತಿರುವ ನೀರಸ ಪ್ರದರ್ಶನ ನೀಡುತ್ತಿದೆ.
ಮೊದಲ ಹತ್ತು ಓವರ್‌ಗಳಲ್ಲಿ ಉತ್ತಮ ಬ್ಯಾಟಿಂಗ್ ನಡೆಸಿದ ಟೀಂ ಇಂಡಿಯಾ ನಂತರದ ಓವರ್‌ಗಳಲ್ಲಿ ವೇಗದ ರನ್ ಗಳಿಸಲು ಪರದಾಡುತ್ತಿದೆ. 47 ರನ್ ಗಳಿಸಿದ್ದ ನಾಯಕ ರೋಹಿತ್ ಶರ್ಮಾ ಮ್ಯಾಕ್ಸ್‌ವೆಲ್ ಬೌಲಿಂಗ್‌ನಲ್ಲಿ ಟ್ರಾವಿಸ್ ಹೆಡ್ ಹಿಡಿದ ಅದ್ಭುತ ಕ್ಯಾಚ್‌ನಿಂದಾಗಿ ಪೆವಿಲಿಯನ್‌ಗೆ ತೆರಳಿದರು. ಅವರ ಆಟದಲ್ಲಿ 3 ಭರ್ಜರಿ ಸಿಕ್ಸರ್ ಹಾಗೂ 4 ಬೌಂಡರಿಗಳಿದ್ದವು.
ರೋಹಿತ್‌ಗೂ ಮೊದಲು ಶುಭ್‌ಮನ್‌ಗಿಲ್ (4) ಮಿಚೆಲ್ ಸ್ಟಾರ್ಕ್ ಬೌಲಿಂಗ್‌ನಲ್ಲಿ ಜಂಪಾಗೆ ಕ್ಯಾಚ್ ನೀಡಿ ಔಟಾಗಿದ್ದರು. ಸತತ ಎರಡು ಶತಕ ಗಳಿಸಿದ್ದ ಶ್ರೇಯಸ್ ಅಯ್ಯರ್ (4) ಕೂಡ ಆಸೀಸ್ ನಾಯಕ ಕಮ್ಮಿನ್ಸ್ ಬೌಲಿಂಗ್‌ನಲ್ಲಿ ವಿಕೆಟ್ ಕೀಪರ್ ಇಂಗ್ಲಿಸ್‌ಗೆ ಕ್ಯಾಚ್ ನೀಡಿ ಔಟಾದರು.
ಈ ಸುದ್ದಿ ಓದಿದ್ದೀರಾ? ವಿಶ್ವಕಪ್ | ದ್ರಾವಿಡ್, ಕೊಹ್ಲಿ,ಶಮಿ ಯಾರಿಗಾಗಿ ಈ ಬಾರಿಯ ಕಪ್; ರೋಚಕ ಹಣಾಹಣಿಯ ನಿರೀಕ್ಷೆಯಲ್ಲಿ ಕ್ರಿಕೆಟ್ ಜಗತ್ತು
ವಿಶ್ವಕಪ್ ಟೂರ್ನಿನಲ್ಲಿ 6 ಅರ್ಧ ಶತಕ ಗಳಿಸಿದ ವಿರಾಟ್ ಕೊಹ್ಲಿ 54 ರನ್ ಗಳಿಸಿ ಕೀಪರ್ ಇಂಗ್ಲಿಸ್‌ಗೆ ಕ್ಯಾಚ್ ನೀಡಿ ಔಟಾದರು. ವಿರಾಟ್ ಅವರು ಕೆ ಎಲ್ ರಾಹುಲ್ ಅವರೊಂದಿಗೆ ನಾಲ್ಕನೆ ವಿಕೆಟ್‌ಗೆ 109 ಎಸೆತಗಳಲ್ಲಿ 67 ರನ್ ಜೊತೆಯಾಟವಾಡಿದರು.
ಸದ್ಯ ರವೀಂದ್ರ ಜಡೇಜ (6) ಜೊತೆ ಕ್ರೀಸ್‌ನಲ್ಲಿರುವ ಕೆ ಎಲ್ ರಾಹುಲ್ 80 ಚೆಂಡುಗಳಲ್ಲಿ 47 ರನ್ ಗಳಿಸಿ ಆಡುತ್ತಿದ್ದಾರೆ.
ವಿರಾಟ್ ಹಾಗೂ ರಾಹುಲ್ ಜೊತೆ ನಾಲ್ಕನೆ ವಿಕೆಟ್‌ಗೆ ಜೊತೆಯಾಟವಾಡುವಾಗ 97 ಚೆಂಡುಗಳಿಂದ ಬೌಂಡರಿಯೆ ಬಂದಿರಲಿಲ್ಲ. 98 ಎಸೆತಕ್ಕೆ ರಾಹುಲ್ ಮ್ಯಾಕ್ಸ್‌ವೆಲ್ ಬೌಲಿಂಗ್‌ನಲ್ಲಿ ಬೌಂಡರಿ ಬಾರಿಸಿದರು.
ಇತ್ತೀಚಿನ ವರದಿಗಳಂತೆ ಭಾರತ 33 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 165 ರನ್ ಗಳಿಸಿದೆ.
It took 97 balls, but India FINALLY get a boundary during the middle overs!https://t.co/uGuYjoOWie #CWC23 #CWC23Final #INDvAUS pic.twitter.com/Gn1Dr7uhWG
— ESPNcricinfo (@ESPNcricinfo) November 19, 2023