ಭಾರತ ಮತ್ತು ಪಾಕಿಸ್ತಾನದ ಟಿ20 ವಿಶ್ವಕಪ್ ಕ್ರಿಕೆಟ್ ಎಂದಿಗೂ ಅಭಿಮಾನಿಗಳಲ್ಲಿ ಕುತೂಹಲ ಕೆರಳಿಸುತ್ತದೆ. ಎಷ್ಟರಮಟ್ಟಿಗೆಂದರೆ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯದ ಟಿಕೆಟ್ ಬರೋಬ್ಬರಿ 10,000 ಡಾಲರ್‌ಗೆ ಅಂದರೆ 8.34 ಲಕ್ಷ ರೂಪಾಯಿಗೆ ಮಾರಾಟವಾಗಿದೆ.
ಜೂನ್ 9ರಂದು ನ್ಯೂಯಾರ್ಕ್‌ನಲ್ಲಿ ನಡೆಯಲಿರುವ ಐಸಿಸಿ ಟಿ20 ವಿಶ್ವಕಪ್‌ನಲ್ಲಿ ಭಾರತವು ಪಾಕಿಸ್ತಾನವನ್ನು ಎದುರಿಸಲಿದೆ. 34,000 ಪ್ರೇಕ್ಷಕರ ಸಾಮರ್ಥ್ಯ ಹೊಂದಿರುವ ನಸ್ಸೌ ಕೌಂಟಿಯಲ್ಲಿ ಹೊಸದಾಗಿ ಸ್ಥಾಪಿಸಲಾದ ಕ್ರೀಡಾಂಗಣದಲ್ಲಿ ಈ ಪಂದ್ಯವು ಪ್ರೇಕ್ಷಕರನ್ನು ಸೆಳೆಯುವ ನಿರೀಕ್ಷೆಯಿದೆ.
ಇದನ್ನು ಓದಿದ್ದೀರಾ? ಭಾರತ-ಪಾಕಿಸ್ತಾನ ಟಿ20 ವಿಶ್ವಕಪ್ ಪಂದ್ಯ: ಉಗ್ರರಿಂದ ದಾಳಿ ಬೆದರಿಕೆ, ನ್ಯೂಯಾರ್ಕ್‌ನಲ್ಲಿ ಭದ್ರತೆ ಹೆಚ್ಚಳ
ನಸ್ಸೌ ಕೌಂಟಿ ಡೈಮಂಡ್ ಕ್ಲಬ್, ಕ್ಯಾಬನಾಸ್, ಪ್ರೀಮಿಯಂ ಕ್ಲಬ್ ಲಾಂಜ್‌ಗಳು, ಕಾರ್ನರ್ ಕ್ಲಬ್, ಪೆವಿಲಿಯನ್ ಕ್ಲಬ್ ಮತ್ತು ಬೌಂಡರಿ ಕ್ಲಬ್‌ನಲ್ಲಿ ಆರು ಆತಿಥ್ಯ ಪ್ಯಾಕೇಜ್‌ಗಳು ಲಭ್ಯವಿದೆ. ಆದರೆ ಭಾರತ ಮತ್ತು ಪಾಕ್ ಆಟಕ್ಕೆ ಈಗ ಮೂರು ಪ್ಯಾಕೇಜ್‌ಗಳು ಮಾತ್ರ ಲಭ್ಯವಿವೆ.
Nassau County International Cricket Stadium gears up for the warm-up match between India and Bangladesh ahead of the #T20WorldCup 🏏
Purchase tickets to Premium Club Lounge for the massive games in New York, including India vs. Pakistan 👉 https://t.co/DwUbSZcDGm pic.twitter.com/e69wZuEu1J
— ICC (@ICC) May 31, 2024
ಟಿಕೆಟ್ ಬೆಲೆ ಎಷ್ಟಿದೆ?
ಐಸಿಸಿ ವೆಬ್‌ಸೈಟ್‌ನ ಪ್ರಕಾರ, ಡೈಮಂಡ್ ಕ್ಲಬ್ ಟಿಕೆಟ್‌ಗಳನ್ನು 4 ವರ್ಗಗಳಾಗಿ ವರ್ಗೀಕರಿಸಲಾಗಿದೆ. ಪ್ರತಿ ವರ್ಗದ ಒಂದು ಟಿಕೆಟ್ ಬೆಲೆ 10,000 ಡಾಲರ್ ಅಥವಾ 8,34,323 ರೂಪಾಯಿ ಆಗಿದೆ. ಪ್ರೀಮಿಯಂ ಕ್ಲಬ್ ಲಾಂಜ್‌ಗಳ ವರ್ಗದ ಟಿಕೆಟ್ ಒಂದರ ಬೆಲೆ 2,500 ಡಾಲರ್ ಅಥವಾ 2.8 ಲಕ್ಷ ರೂಪಾಯಿ ಆಗಿದೆ. ಕಾರ್ನರ್ ಕ್ಲಬ್ ಟಿಕೆಟ್ ಬೆಲೆ 2,750.00 ಡಾಲರ್ ಅಥವಾ 2.29 ಲಕ್ಷ ರೂಪಾಯಿ ಆಗಿದೆ.
ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಶುಕ್ರವಾರ ಸಂಜೆ ನ್ಯೂಯಾರ್ಕ್‌ಗೆ ಬಂದಿಳಿದಿದ್ದು, ಪಂದ್ಯಾವಳಿಯ ತಯಾರಿಯಲ್ಲಿ ನಿರತರಾಗಿದ್ದಾರೆ. “ನಾವು ಸ್ಟೇಟ್ಸ್‌ನಲ್ಲಿ (ಯುಎಸ್) ಕ್ರಿಕೆಟ್ ಆಡುತ್ತೇವೆ ಎಂದು ನಾನು ಎಂದಿಗೂ ಭಾವಿಸಿರಲಿಲ್ಲ. ಆದರೆ ಈಗ ಅದು ನಿಜವಾಗಿದೆ” ಎಂದು ಯುಎಸ್ ಕಾನ್ಸುಲೇಟ್ ಮುಂಬೈ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಎಕ್ಸ್‌ನಲ್ಲಿ ಹಂಚಿಕೊಂಡ ವೀಡಿಯೊದಲ್ಲಿ ಕೊಹ್ಲಿ ಹೇಳಿದ್ದಾರೆ.
ಈ ನಡುವೆ ಈಗಾಗಲೇ ಭಾರತ-ಪಾಕಿಸ್ತಾನ ಟಿ20 ವಿಶ್ವಕಪ್ ಪಂದ್ಯಕ್ಕೆ ಉಗ್ರರಿಂದ ಒಂಟಿ ತೋಳ (ಒಬ್ಬ ದಾಳಿಕೋರ) ಮಾದರಿ ದಾಳಿಯ ಬೆದರಿಕೆಯನ್ನು ಹಾಕಲಾಗಿದ್ದು ನ್ಯೂಯಾರ್ಕ್ ಭದ್ರತೆಯನ್ನು ಹೆಚ್ಚಿಸುತ್ತಿದೆ. ಕ್ರಿಕೆಟ್ ಪಂದ್ಯದಲ್ಲಿ ಭಾಗಿಯಾಗುವವರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಭದ್ರತೆಯನ್ನು ಹೆಚ್ಚಿಸಲಾಗುತ್ತದೆ ಎಂದು ಎಕ್ಸ್ ಪೋಸ್ಟ್‌ನಲ್ಲಿ ಗವರ್ನರ್ ಕ್ಯಾಥಿ ಹೊಚುಲ್ ತಿಳಿಸಿದ್ದಾರೆ.