ಭಾರತ-ಪಾಕಿಸ್ತಾನ ಟಿ20 ವಿಶ್ವಕಪ್ ಪಂದ್ಯ: ಉಗ್ರರಿಂದ ದಾಳಿ ಬೆದರಿಕೆ, ನ್ಯೂಯಾರ್ಕ್‌ನಲ್ಲಿ ಭದ್ರತೆ ಹೆಚ್ಚಳ

Date:

ಮುಂಬರುವ ಜೂನ್‌ನಲ್ಲಿ ನಡೆಯಲಿರುವ ಭಾರತ-ಪಾಕಿಸ್ತಾನ ಟಿ20 ವಿಶ್ವಕಪ್ ಪಂದ್ಯಕ್ಕೆ ಉಗ್ರರಿಂದ ಒಂಟಿ ತೋಳ (ಒಬ್ಬ ದಾಳಿಕೋರ) ಮಾದರಿ ದಾಳಿಯ ಬೆದರಿಕೆಯನ್ನು ಹಾಕಲಾಗಿದ್ದು ನ್ಯೂಯಾರ್ಕ್ ಭದ್ರತೆಯನ್ನು ಹೆಚ್ಚಿಸಲಿದೆ.

ಕ್ರಿಕೆಟ್ ಪಂದ್ಯದಲ್ಲಿ ಭಾಗಿಯಾಗುವವರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಭದ್ರತೆಯನ್ನು ಹೆಚ್ಚಿಸಲಾಗುತ್ತದೆ ಎಂದು ಎಕ್ಸ್‌ ಪೋಸ್ಟ್‌ನಲ್ಲಿ ಗವರ್ನರ್‌ ಕ್ಯಾಥಿ ಹೊಚುಲ್ ತಿಳಿಸಿದ್ದಾರೆ.


“ಈ ಸಮಯದಲ್ಲಿ ಯಾವುದೇ ವಿಶ್ವಾಸಾರ್ಹ ಬೆದರಿಕೆ ಇಲ್ಲದಿದ್ದರೂ, ಭದ್ರತಾ ಕ್ರಮಗಳನ್ನು ಹೆಚ್ಚಿಸಲು ನಾನು ನ್ಯೂಯಾರ್ಕ್ ಪೊಲೀಸರಿಗೆ ನಿರ್ದೇಶನ ನೀಡಿದ್ದೇನೆ. ಪಂದ್ಯ ಸಮೀಪಿಸುತ್ತಿದ್ದಂತೆ ನಾವು ಮೇಲ್ವಿಚಾರಣೆಯನ್ನು ಮುಂದುವರಿಸುತ್ತೇವೆ” ಎಂದು ಗವರ್ನರ್‌ ಹೇಳಿದ್ದಾರೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಇದನ್ನು ಓದಿದ್ದೀರಾ?  ಭಾರತ – ಪಾಕ್ ಟಿ20 ವಿಶ್ವಕಪ್ ಪಂದ್ಯದ ಪ್ರತಿ ಟಿಕೆಟ್ ಬೆಲೆ ಬರೋಬ್ಬರಿ 17 ಲಕ್ಷ ರೂ!

ಟಿ20 ಕ್ರಿಕೆಟ್ ವಿಶ್ವಕಪ್ ಜೂನ್ 1ರಿಂದ 29ರವರೆಗೆ ನಡೆಯಲಿದೆ. ಜೂನ್ 9ರಂದು ನ್ಯೂಯಾರ್ಕ್‌ನ ನಸ್ಸೌ ಕೌಂಟಿಯಲ್ಲಿರುವ ಐಸೆನ್‌ಹೋವರ್ ಪಾರ್ಕ್ ಸ್ಟೇಡಿಯಂನಲ್ಲಿ ಭಾರತ-ಪಾಕಿಸ್ತಾನ ಪಂದ್ಯವನ್ನು ನಿಗದಿಪಡಿಸಲಾಗಿದೆ.

ವೆಸ್ಟ್ ಇಂಡೀಸ್ ಮತ್ತು ಯುನೈಟೆಡ್ ಸ್ಟೇಟ್ಸ್‌ನ ಒಂಬತ್ತು ಕ್ರೀಡಾಂಗಣಗಳಲ್ಲಿ ಟಿ20 ಕ್ರಿಕೆಟ್ ವಿಶ್ವಕಪ್ ಪಂದ್ಯಗಳು ನಡೆಯಲಿವೆ. ಯುನೈಟೆಡ್ ಸ್ಟೇಟ್ಸ್ ಮತ್ತು ಕೆನಡಾ ನಡುವೆ ಮೊದಲ ಪಂದ್ಯ ನಡೆಯಲಿದೆ.

ಒಂಟಿ ತೋಳ ಮಾದರಿ ದಾಳಿ ಬೆದರಿಕೆ

ವರದಿ ಪ್ರಕಾರ ಐಸಿಸ್-ಕೆ ಉಗ್ರ ಸಂಘಟನೆ ಕೇವಲ ಭಾರತ-ಪಾಕಿಸ್ತಾನ ಪಂದ್ಯಕ್ಕೆ ಮಾತ್ರ ಈ ಉಗ್ರ ದಾಳಿಯ ಬೆದರಿಕೆಯನ್ನೊಡ್ಡಿದೆ. ಭಾರತ-ಪಾಕಿಸ್ತಾನ ಪಂದ್ಯದ ವೇಳೆ ‘ಒಂಟಿ ತೋಳ’ ಮಾದರಿ (ಒಬ್ಬ ದಾಳಿಕೋರ) ದಾಳಿಯನ್ನು ನಡೆಸುವಂತೆ ತನ್ನ ಸದಸ್ಯರಿಗೆ ಈ ಉಗ್ರ ಸಂಘಟನೆಯು ಕರೆ ನೀಡಿದೆ.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಟಿ20 ವಿಶ್ವಕಪ್ | ಆತಿಥೇಯ ಅಮೆರಿಕ ಸೋಲಿಸಿ ಸೂಪರ್ 8ರ ಘಟ್ಟಕ್ಕೆ ಪ್ರವೇಶಿಸಿದ ಟೀಮ್ ಇಂಡಿಯಾ

ನ್ಯೂಯಾರ್ಕ್‌ನ ನಸ್ಸೌ ಕೌಂಟಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಇಂದು ನಡೆದ ಐಸಿಸಿ...

ಟಿ20 ವಿಶ್ವಕಪ್‌ | ಭಾರತಕ್ಕೆ ಗೆಲ್ಲಲು 111 ರನ್‌ಗಳ ಗುರಿ ನೀಡಿದ ಆತಿಥೇಯ ಅಮೆರಿಕ: ಮಿಂಚಿದ ಅರ್ಷ್‌ದೀಪ್ ಸಿಂಗ್

ನ್ಯೂಯಾರ್ಕ್‌ನ ನಸ್ಸೌ ಕೌಂಟಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ 2024ರ ಐಸಿಸಿ...

ಟಿ20 ವಿಶ್ವಕಪ್ | ಟೀಮ್ ಇಂಡಿಯಾ-ಅಮೆರಿಕ ಮೊದಲ ಮುಖಾಮುಖಿ: ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿದ ರೋಹಿತ್ ಶರ್ಮಾ

ನ್ಯೂಯಾರ್ಕ್‌ನ ನಸ್ಸೌ ಕೌಂಟಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿರುವ 2024ರ ಐಸಿಸಿ...

2026ರ ಫಿಫಾ ವಿಶ್ವಕಪ್​ ಅರ್ಹತಾ ಟೂರ್ನಿ | ಕತಾರ್​ ಮೋಸದಾಟಕ್ಕೆ ಭಾರತ ಫುಟ್ಬಾಲ್​ ತಂಡ ‘ಔಟ್’; ವ್ಯಾಪಕ ಆಕ್ರೋಶ

ಕ್ರಿಕೆಟ್​​ನಂತೆ ಫುಟ್ಬಾಲ್​ನಲ್ಲಿ ಮಹತ್ತರ ಬದಲಾವಣೆ ತರಬೇಕಿದೆ ಎಂಬ ಕೂಗು ಸಾಮಾಜಿಕ ಜಾಲತಾಣಗಳಲ್ಲಿ...