ವಿರಾಟ್ ಕೊಹ್ಲಿ ಹಾಗೂ ಶ್ರೇಯಸ್ ಅಯ್ಯರ್ ಅವರ ಭರ್ಜರಿ ಶತಕದ ನೆರವಿನಿಂದ ನ್ಯೂಜಿಲ್ಯಾಂಡ್ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ ಬೃಹತ್ ಮೊತ್ತದ ಸವಾಲು ನೀಡಿದೆ.
Innings Break!
A stellar batting display by #TeamIndia as we set a target of 398 in Semi-Final 1! 🙌
Over to our bowlers 💪
Scorecard ▶️ https://t.co/FnuIu53xGu#CWC23 | #MenInBlue | #INDvNZ pic.twitter.com/R4CKq3u16m
— BCCI (@BCCI) November 15, 2023
ಮುಂಬೈಯ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಸೆಮಿಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ರೋಹಿತ್ ಶರ್ಮಾ ನೇತೃತ್ವದ ತಂಡ ನಿಗದಿತ 50 ಓವರ್‌ಗಳಲ್ಲಿ ಕೇವಲ 4 ವಿಕೆಟ್ ಕಳೆದುಕೊಂಡು 397 ರನ್ ದಾಖಲಿಸಿದೆ.
ಕೊಹ್ಲಿ – 117 (113 ಎಸೆತ), ಶ್ರೇಯಸ್ ಅಯ್ಯರ್ 105 (70 ಎಸೆತ), ಶುಭಮನ್ ಗಿಲ್ ಔಟಾಗದೆ 80* (66 ಎಸೆತ), ನಾಯಕ ರೋಹಿತ್ ಶರ್ಮಾ 47 (29 ಎಸೆತ), ಕೆ ಎಲ್ ರಾಹುಲ್ ಔಟಾಗದೆ 39(20 ಎಸೆತ) ರನ್‌ಗಳ ನೆರವಿನಿಂದ ಟೀಮ್ ಇಂಡಿಯಾ ವಾಂಖೆಡೆಯಲ್ಲಿ ನ್ಯೂಜಿಲೆಂಡ್ ವಿರುದ್ಧ 397 ಸ್ಕೋರ್ ದಾಖಲಿಸಿತು. ಸೆಮಿಫೈನಲ್‌ನಲ್ಲಿ ಭಾರತದ ಶ್ರೇಷ್ಠ ಬ್ಯಾಟಿಂಗ್ ಪ್ರದರ್ಶನ ಇದಾಗಿದೆ.