ನಿನ್ನೆ ನಡೆದ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳ ನಡುವಿನ ನಾಲ್ಕನೆ ಟಿ-20 ಕ್ರಿಕೆಟ್ ಪಂದ್ಯದಲ್ಲಿ, ಟೀಮ್ ಇಂಡಿಯಾ 20 ರನ್‌ಗಳ ಅಂತರದಿಂದ ಗೆಲ್ಲುವ ಮೂಲಕ ಐದು ಪಂದ್ಯಗಳ ಸರಣಿಯಲ್ಲಿ ಇನ್ನೂ ಒಂದು ಪಂದ್ಯ ಬಾಕಿ ಉಳಿದಿರುವಂತೆಯೇ 3-1 ಮುನ್ನಡೆಯೊಂದಿಗೆ ಸರಣಿಯನ್ನು ತನ್ನ ಕೈವಶ ಮಾಡಿಕೊಂಡಿತ್ತು.
ಈ ಪಂದ್ಯ ನಡೆದಿದ್ದು ಛತ್ತೀಸ್‌ಗಢದ ರಾಯ್‌ಪುರದಲ್ಲಿರುವ ಶಹೀದ್ ವೀರ್ ನಾರಾಯಣ್ ಸಿಂಗ್ ಕ್ರೀಡಾಂಗಣದಲ್ಲಿ. ಆದರೆ, ಈ ಮಹತ್ವದ ಪಂದ್ಯ ನಡೆದಿದ್ದು ವಿದ್ಯುತ್ ಸಂಪರ್ಕ ಇಲ್ಲದೆ, ಕೇವಲ ಜನರೇಟರ್‌ನ ನೆರವಿನಿಂದ ಎಂದರೆ ನೀವು ನಂಬಲೇಬೇಕು.
ಹೌದು. ಇದಕ್ಕೆ ಕಾರಣ 2009ರಿಂದ ವಿದ್ಯುತ್ ಶುಲ್ಕ ಬಾಕಿಯನ್ನು ಪಾವತಿ ಮಾಡದೆ ಇರುವುದು. ಈ ಕ್ರೀಡಾಂಗಣವು ರೂ. ₹3.16 ಕೋಟಿ ವಿದ್ಯುತ್ ಶುಲ್ಕವನ್ನು ಬಾಕಿ ಉಳಿಸಿಕೊಂಡ ಹಿನ್ನೆಲೆಯಲ್ಲಿ, ಕಳೆದ ಐದು ವರ್ಷಗಳ ಹಿಂದೆಯೇ ಈ ಕ್ರೀಡಾಂಗಣಕ್ಕೆ ವಿದ್ಯುತ್ ಪೂರೈಕೆಯನ್ನು ಕಡಿತಗೊಳಿಸಲಾಗಿದೆ.
India Vs Australia in Raipur yesterday was played on generators and power backups which cost 1.4cr. The Stadium’s electricity was snapped 5 years ago due to an unpaid dues of 3.1cr. (TOI). pic.twitter.com/X0TB4MwfzE
— Mufaddal Vohra (@mufaddal_vohra) December 2, 2023
ಛತ್ತೀಸ್‌ಗಢದಲ್ಲಿ ಕೆಲ ದಿನಗಳ ಹಿಂದಷ್ಟೇ ಮತದಾನ ಪ್ರಕ್ರಿಯೆ ಮುಗಿದಿದ್ದು, ನಾಳೆ(ಡಿ.3) ಫಲಿತಾಂಶ ಪ್ರಕಟವಾಗಲಿದೆ. ಈ ನಡುವೆಯೇ ಈ ಸುದ್ದಿ ಸಾಕಷ್ಟು ಚರ್ಚೆಗೂ ಕಾರಣವಾಗಿದೆ.
ಇದನ್ನು ಓದಿದ್ದೀರಾ? ಟಿ20 । ಆಸ್ಟ್ರೇಲಿಯಾ ವಿರುದ್ಧ ಭಾರತಕ್ಕೆ 3-1 ಸರಣಿ ಜಯ
ಬಿಲ್ ಬಾಕಿ ಇರುವ ಬಗ್ಗೆ ಮಾಧ್ಯಮಗಳು ಸುದ್ದಿ ಮಾಡುತ್ತಿದ್ದಂತೆಯೇ ಛತ್ತೀಸ್‌ಗಢ ರಾಜ್ಯ ಕ್ರಿಕೆಟ್ ಒಕ್ಕೂಟವು ಮುಖಭಂಗದಿಂದ ತಪ್ಪಿಸಲು ಹಾಗೂ ಪಂದ್ಯವು ಸುಗಮವಾಗಿ ಸಾಗಲು ಜನರೇಟರ್‍ನ ವ್ಯವಸ್ಥೆ ಮಾಡಿದ್ದವು. ಆದರೆ ಈ ಜನರೇಟರ್ ವ್ಯವಸ್ಥೆಗಾಗಿ ಕ್ರೀಡಾಂಗಣದ ಅಧಿಕಾರಿಗಳು 1.4 ಕೋಟಿ ಖರ್ಚು ಮಾಡಿದ್ದಾರೆ. ಅಂದರೆ ಬಾಕಿ ಇರುವ ವಿದ್ಯುತ್ ಬಿಲ್‌ನ( ₹3.16 ಕೋಟಿ) 40 ಶೇಕಡಾದಷ್ಟು ಎಂದು ‘ಟೈಮ್ಸ್ ಆಫ್ ಇಂಡಿಯಾ‘ ವರದಿ ಮಾಡಿದೆ.
Secret behind the giant six 😎
Roaring Raipur crowd 🔥
Adding calmness to the partnership 👏On the mic with Rinku Singh & Jitesh Sharma 👌👌 – By @28anand
Watch the full Video 🎥🔽 #TeamIndia | #INDvAUS https://t.co/lc8Dfk7hI7 pic.twitter.com/RHaXeFnsmP
— BCCI (@BCCI) December 2, 2023
ರಾಜ್ಯ ಕ್ರಿಕೆಟ್ ಒಕ್ಕೂಟದ ಮನವಿಯ ಮೇರೆಗೆ ಈ ಕ್ರೀಡಾಂಗಣಕ್ಕೆ ತಾತ್ಕಾಲಿಕ ವಿದ್ಯುತ್ ಪೂರೈಕೆಯನ್ನು ಒದಗಿಸಲಾಗಿದ್ದರೂ, ಈ ವಿದ್ಯುತ್ ಪ್ರೇಕ್ಷಕರ ಗ್ಯಾಲರಿ ಹಾಗೂ ಬಾಕ್ಸ್ ಗಳಿಗೆ ಮಾತ್ರ ಸಾಕಾಗಿತ್ತು. ಈ ಹಿನ್ನೆಲೆಯಲ್ಲಿ ಪಂದ್ಯದ ವೇಳೆ ಜನರೇಟರ್ ನೆರವಿನಿಂದ ಹೊನಲು ಬೆಳಕಿನ ವ್ಯವಸ್ಥೆ ಮಾಡಿದೆ ಎಂದು ವರದಿ ತಿಳಿಸಿದೆ.
2018ರಲ್ಲಿ ನಡೆದಿದ್ದ ಮ್ಯಾರಥಾನ್ ವೇಳೆ ಅಥ್ಲೀಟ್‌ಗಳು ಭಾಗವಹಿಸಿದ್ದಾಗ, ಕ್ರೀಡಾಂಗಣದಲ್ಲಿ ವಿದ್ಯುತ್ ಪೂರೈಕೆ ಇಲ್ಲ ಎಂಬ ಸಂಗತಿ ಬೆಳಕಿಗೆ ಬಂದು ಭಾರೀ ಗದ್ದಲವಾಗಿತ್ತು. ಇದಾದ ನಂತರ, ವಿದ್ಯುತ್ ಶುಲ್ಕವನ್ನು 2009ರಿಂದ ಪಾವತಿಸಲಾಗಿಲ್ಲ ಎಂದು ಪ್ರಕಟಿಸಲಾಗಿತ್ತು. ಆ ವೇಳೆಗೆ ವಿದ್ಯುತ್ ಶುಲ್ಕ ಬಾಕಿ ಮೊತ್ತವು ರೂ. 3.16 ಕೋಟಿಗೂ ಅಧಿಕವಾಗಿತ್ತು.
2018ರಲ್ಲಿ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಿದಾಗಿನಿಂದ ಇಲ್ಲಿಯವರೆಗೆ ಈ ಕ್ರೀಡಾಂಗಣದಲ್ಲಿ ಮೂರು ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳು ನಡೆದಿವೆ ಎಂದು ವರದಿಯಾಗಿದೆ.