ಭಾರತ-ಐರ್ಲೆಂಡ್ ನಡುವೆ ಇಂದು(ಆಗಸ್ಟ್ 20) ಡಬ್ಲಿನ್ನ ದಿ ವಿಲೇಜ್ ಮೈದಾನದಲ್ಲಿ ಎರಡನೇ ಟಿ20 ಪಂದ್ಯ ನಡೆಯಲಿದೆ. ಈಗಾಗಲೇ ಮೊದಲ ಪಂದ್ಯದಲ್ಲಿ ಡಕ್ವರ್ಥ್ ಲೂಯಿಸ್ ನಿಯಮದ ಅಡಿಯಲ್ಲಿ 2 ರನ್ಗಳಿಂದ ಗೆಲುವು ಸಾಧಿಸಿರುವ ಟೀಂ ಇಂಡಿಯಾ ಸರಣಿ ಗೆಲ್ಲುವ ತವಕದಲ್ಲಿದೆ.
ಎರಡನೇ ಪಂದ್ಯದಲ್ಲಿ ಟಾಸ್ ಗೆದ್ದಿರುವ ಐರ್ಲೆಂಡ್ ತಂಡದ ನಾಯಕ ಪೌಲ್ ಸ್ಟಿರ್ಲಿಂಗ್ ಕ್ಷೇತ್ರ ರಕ್ಷಣೆ ಆಯ್ದುಕೊಂಡಿದ್ದಾರೆ. ಭಾರತ ತಂಡ ಬ್ಯಾಂಟಿಂಗ್‌ಗೆ ಇಳಿದಿದ್ದು 5 ಓವರ್‌ಗಳಲ್ಲಿ ಎರಡು ವಿಕೆಟ್ ಕಳೆದುಕೊಂಡು 37 ರನ್ ಪೇರಿಸಿದೆ. ಯಶಸ್ವಿ ಜೈಸ್ವಾಲ್ 18, ತಿಲಕ್ ವರ್ಮಾ 1 ರನ್ ಗಳಿಸಿ ಔಟಾಗಿದ್ದಾರೆ. ಋತುರಾಜ್ ಗಾಯಕ್ವಾಡ್ ಅಜೇಯ 15 ರನ್, ಸಂಜು ಸ್ಯಾಮ್ಸನ್ 2 ರನ್ ಗಳಿಸಿ ಆಡುತ್ತಿದ್ದಾರೆ.
ಮೊದಲ ಪಂದ್ಯದಲ್ಲಿ ಯುವ ಆಟಗಾರರು ಅಚ್ಚುಕಟ್ಟಾಗಿ ಪ್ರದರ್ಶನ ನೀಡಿದ ಹಿನ್ನೆಲೆ ಆಡುವ 11ರ ಬಳಗದಲ್ಲಿ ಬದಲಾವಣೆ ಮಾಡದಿರುವ ನಾಯಕ ಜಸ್ಪ್ರೀತ್ ಬೂಮ್ರಾ ಗೆಲುವಿನ ತಂಡವನ್ನೇ ಕಣಕ್ಕಿಳಿಸಿದ್ದಾರೆ. ಅಲ್ಲದೆ ವಿಶ್ವಕಪ್ ಸಲುವಾಗಿ ಬೂಮ್ರಾರನ್ನು ಈ ಸರಣಿಗೆ ಕಳುಹಿಸಲಾಗಿದೆ. ಹಾಗಾಗಿ, ಇಂದು ಕೂಡ ಅವರ ಪ್ರದರ್ಶನ ಮೇಲೆ ಕಣ್ಣು ನೆಟ್ಟಿದೆ.
ಇನ್ನು ಬ್ಯಾಟಿಂಗ್ನಲ್ಲಿ ಆಟಗಾರರಿಗೆ ಅವಕಾಶ ಸಿಕ್ಕಿಲ್ಲ. ಮಳೆ ಬಂದ ಕಾರಣ, ಪ್ರದರ್ಶನ ಹೊರ ಬರಲು ಸಾಧ್ಯವಾಗಿಲ್ಲ. ಆರಂಭಿಕರಾಗಿ ಕಣಕ್ಕಿಳಿದಿದ್ದ ಯಶಸ್ವಿ ಜೈಸ್ವಾಲ್ ಹಾಗೂ ಋತುರಾಜ್ ಗಾಯಕ್ವಾಡ್ ತಂಡಕ್ಕೆ ಉತ್ತಮ ಆರಂಭ ಒದಗಿಸಿದ್ದರು. ಆದರೆ ನಿಧಾನಗತಿಯಲ್ಲಿ ಸ್ಕೋರ್ ಮಾಡಿದ್ದರು. ಮೊದಲ ವಿಕೆಟ್ಗೆ 47 ರನ್‌ಗಳ ಜೊತೆಯಾಟ ತಂದುಕೊಟ್ಟರು. ಜೈಸ್ವಾಲ್ ಫುಲ್ ಫಾರ್ಮ್ನಲ್ಲಿದ್ದರೆ, ಋತುರಾಜ್ ತಂಡದ ಉಪನಾಯಕ. ಹೀಗಾಗಿ ಬದಲಾವಣೆ ಅನುಮಾನ.
ವೆಸ್ಟ್ ಇಂಡೀಸ್ ಸರಣಿಯಲ್ಲಿ ಉತ್ತಮವಾಗಿ ಆಡಿದ್ದ ಎಡಗೈ ಆಟಗಾರ ತಿಲಕ್ ವರ್ಮಾ ಶೂನ್ಯಕ್ಕೆ ಔಟಾಗಿ ನಿರಾಸೆ ಮೂಡಿಸಿದ್ದರು. ಆದರೆ, ಈ ಹಿಂದಿನ ಪ್ರದರ್ಶನವನ್ನೇ ಆಧಾರವಾಗಿಟ್ಟುಕೊಂಡು ಮತ್ತೆ ಅವಕಾಶ ಸಿಗುವ ಸಾಧ್ಯತೆ ಹೆಚ್ಚಿದೆ. ಮೊದಲ ಪಂದ್ಯದಲ್ಲಿ ಬ್ಯಾಟಿಂಗ್ ಮಾಡಲು ಅವಕಾಶ ಸಿಗದ ಕಾರಣ ಈ ಪಂದ್ಯದಲ್ಲೂ ಅವರು ಆಡುವುದು ಖಚಿತವಾಗಿದೆ.
ಈ ಸುದ್ದಿ ಓದಿದ್ದೀರಾ? ಐರ್ಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯಕ್ಕೆ ಮಳೆ ಅಡ್ಡಿ; ಡಿಎಲ್‌ಎಸ್ ನಿಯಮದಂತೆ ಭಾರತಕ್ಕೆ 2 ರನ್‌ಗಳ ಜಯ
ಮೊದಲ ಪಂದ್ಯ ಸೋತಿರುವ ಐರ್ಲೆಂಡ್ ತಂಡ ಪಂದ್ಯವನ್ನು ಗೆಲ್ಲಲೇಬೇಕೆಂದು ನಿರ್ಧರಿಸಿದ್ದು, ನಾಯಕ ಪೌಲ್ ಸ್ಟಿರ್ಲಿಂಗ್ ಭಾರತ ತಂಡವನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿದ್ದಾರೆ.
ಉಭಯ ತಂಡಗಳ ಸಂಭಾವ್ಯ ಆಟಗಾರರ ಪಟ್ಟಿ:
ಭಾರತ:
ಜಸ್ಪ್ರೀತ್ ಬುಮ್ರಾ (ನಾಯಕ), ಋತುರಾಜ್ ಗಾಯಕ್ವಾಡ್ (ಉಪನಾಯಕ), ಯಶಸ್ವಿ ಜೈಸ್ವಾಲ್, ತಿಲಕ್ ವರ್ಮಾ, ರಿಂಕು ಸಿಂಗ್, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಶಿವಂ ದುಬೆ, ಪ್ರಸಿದ್ಧ ಕೃಷ್ಣ, ಅರ್ಷದೀಪ್ ಸಿಂಗ್, ಮುಖೇಶ್ ಕುಮಾರ್ ಮತ್ತು ಅವೇಶ್ ಖಾನ್.
ಐರ್ಲೆಂಡ್:
ಪಾಲ್ ಸ್ಟಿರ್ಲಿಂಗ್ (ನಾಯಕ), ಆಂಡ್ರ್ಯೂ ಬಾಲ್ಬಿರ್ನಿ, ಹ್ಯಾರಿ ಟೆಕ್ಟರ್, ಕರ್ಟಿಸ್ ಕ್ಯಾಂಫರ್, ಜಾರ್ಜ್ ಡಾಕ್ರೆಲ್, ಲೋರ್ಕನ್ ಟಕರ್ (ವಿಕೆಟ್ ಕೀಪರ್), ಮಾರ್ಕ್ ಅಡೈರ್, ಬ್ಯಾರಿ ಮೆಕಾರ್ಥಿ, ಬೆಂನ್ ವೈಟ್,ಕ್ರೇಗ್ ಯಂಗ್ ಮತ್ತು ಕ್ರೇಗ್ ಯಂಗ್.
ಪಂದ್ಯ ಆರಂಭ: ಸಂಜೆ 7.30
ನೇರ ಪ್ರಸಾರ: ಜಿಯೋ ಸಿನಿಮಾ ಆಪ್,ಸ್ಪೋರ್ಟ್ಸ್ 18 ಮತ್ತು ಡಿಡಿ ಸ್ಪೋರ್ಟ್ಸ್
—