ಟೀಂ ಇಂಡಿಯಾದ ಭರವಸೆಯ ಆಟಗಾರ್ತಿ ಜೆಮಿಮಾ ರೊಡ್ರಿಗಸ್ ಬಾರಿಸಿದ ಅರ್ಧಶತಕ ಹಾಗೂ ಅಮನ್ಜೋತ್ ಕೌರ್ ಅವರ ಭರ್ಜರಿ ಆಲ್‌ರೌಂಡರ್ ಆಟದದಿಂದ ಮಂಗಳವಾರ ಬ್ರಿಸ್ಟಲ್‌ನಲ್ಲಿ ನಡೆದ ಎರಡನೇ ಟಿ20 ಪಂದ್ಯದಲ್ಲಿ ಭಾರತ ತಂಡ 24 ರನ್‌ಗಳಿಂದ, ಆತಿಥೇಯ ಇಂಗ್ಲೆಂಡ್ ತಂಡವನ್ನು ಮಣಿಸಿತು. ಈ ಮೂಲಕ 5 ಪಂದ್ಯಗಳ ಸರಣಿಯನ್ನು 2-0ಯಿಂದ ಮುನ್ನಡೆ ಸಾಧಿಸಿದೆ.
ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಭಾರತದ ವನಿತೆಯರು 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 181 ರನ್ ಸೇರಿಸಿತು. ಗುರಿಯನ್ನು ಬೆನ್ನಟ್ಟಿದ ಇಂಗ್ಲೆಂಡ್ ನಿಗದಿತ ಓವರ್‌ಗಳಲ್ಲಿ 7 ವಿಕೆಟ್‌ಗೆ 157 ರನ್ ಸೇರಿಸಿ ಸೋಲು ಕಂಡಿತು. ಪಂದ್ಯದಲ್ಲಿ ಅಮೋಘ ಆಲ್‌ರೌಂಡರ್ ಪ್ರದರ್ಶನ ನೀಡಿದ ಅಮನ್ಜೋತ್ ಕೌರ್ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಪಡೆದು ಬೀಗಿದರು.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಪತ್ರಿಕಾ ದಿನಾಚರಣೆ: ಅತಿರೇಕ ಅಳಿಯುತ್ತದೆ, ಒಳಿತು ಉಳಿಯುತ್ತದೆ
ಮೊದಲ ಬ್ಯಾಟ್ ಮಾಡಿದ ಟೀಮ್ ಇಂಡಿಯಾದ ಆರಂಭ ಕಳಪೆಯಾಗಿತ್ತು. ಶೆಫಾಲಿ ವರ್ಮಾ (3) ಹಾಗೂ ಮೊದಲ ಪಂದ್ಯದಲ್ಲಿ ಶತಕ ಬಾರಿಸಿದ ಸ್ಮೃತಿ ಮಂಧನಾ (13) ರನ್ ಕಲೆ ಹಾಕುವಲ್ಲಿ ವಿಫಲರಾದರು. ಇನ್ನು ನಾಯಕಿ ಹರ್ಮನ್ ಪ್ರೀತ್ ಕೌರ್ (1) ರನ್ ಕಲೆ ಹಾಕುವಲ್ಲಿ ವಿಫಲರಾದರು. ಪರಿಣಾಮ ಭಾರತ 31 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಇಲ್ಲಿಂದ ತಂಡವನ್ನು ಮುನ್ನಡೆಸುವ ಜವಾಬ್ದಾರಿಯನ್ನು ಜೆಮಿಮಾ ರೊಡ್ರಿಗಸ್ ಅಮನ್ಜೋತ್ ಕೌರ್ ತಂಡಕ್ಕೆ ನೆರವಾದರು. ಜೆಮಿಮಾ, ಅಮನ್ಜೋತ್ ಉತ್ತಮ ಆಟ ಸಂಕಷ್ಟದಲ್ಲಿದ್ದ ತಂಡಕ್ಕೆ ಜೆಮಿಮಾ ರೊಡ್ರಿಗಸ್ ಅಮನ್ಜೋತ್ ಕೌರ್ ಸಮಯೋಚಿತ ಆಟವಾಡಿ ತಂಡಕ್ಕೆ ಆಧಾರವಾದರು.
ಈ ಜೋಡಿ 55 ಎಸೆತಗಳಲ್ಲಿ 93 ರನ್ ಸೇರಿಸಿತು. ಈ ವೇಳೆ ಜೆಮಿಮಾ ಇಲ್ಲದ ಹೊಡೆತಕ್ಕೆ ಮುಂದಾಗಿ ಔಟ್ ಆದರು. ಜೆಮಿಮಾ ರೊಡ್ರಿಗಸ್ 9 ಬೌಂಡರಿ, 1 ಸಿಕ್ಸರ್ ಸಹಾಯದಿಂದ 63 ರನ್ ಸಿಡಿಸಿದರು. ಐದನೇ ವಿಕೆಟ್‌ಗೆ ಅಮನ್ಜೋತ್ ಕೌರ್ ಹಾಗೂ ರಿಚಾ ಘೋಷ್ ಜೋಡಿ ಸಹ ತಂಡದ ಪರ ಉತ್ತಮ ಕೊಡುಗೆ ನೀಡಿದರು. ಈ ಜೋಡಿ ಅಜೇಯ 57 ರನ್ ಕೊಡುಗೆ ನೀಡಿತು. ಅಮನ್ಜೋತ್ 40 ಎಸೆತಗಳಲ್ಲಿ 9 ಬೌಂಡರಿ ನೆರವಿನಿಂದ ಅಜೇಯ 63 ರನ್ ಸಿಡಿಸಿದರು. ಭರವಸೆಯ ಆಟಗಾರ್ತಿ ರಿಚಾ 6 ಬೌಂಡರಿ ನೆರವಿನಿಂದ ಅಜೇಯ 32 ರನ್ ಸಿಡಿಸಿದರು.
ಗುರಿಯನ್ನು ಬೆನ್ನಟ್ಟಿದ ಇಂಗ್ಲೆಂಡ್ ತಂಡದ ಆರಂಭ ಕಳಪೆಯಾಗಿತ್ತು. ಸೋಫಿಯಾ ಡಂಕ್ಲಿ (1), ಡ್ಯಾನಿ ವ್ಯಾಟ್-ಹಾಡ್ಜ್ (1), ನ್ಯಾಟ್ ಸಿವರ್-ಬ್ರಂಟ್ (13) ರನ್ ಕಲೆ ಹಾಕುವಲ್ಲಿ ವಿಫಲರಾದರು. ಇಂಗ್ಲೆಂಡ್ 3 ವಿಕೆಟ್‌ಗೆ 17 ರನ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ನಾಲ್ಕನೇ ವಿಕೆಟ್‌ಗೆ ಟ್ಯಾಮಿ ಬ್ಯೂಮಾಂಟ್ ಹಾಗೂ ಆಮಿ ಜೋನ್ಸ್ (32) ಜೋಡಿ ಅಬ್ಬರಿಸಿತು. ಈ ಜೋಡಿ 49 ಎಸೆತಗಳಲ್ಲಿ 70 ರನ್ ಸೇರಿಸಿತು. ಟ್ಯಾಮಿ ಬ್ಯೂಮಾಂಟ್ 8 ಬೌಂಡರಿ, 1 ಸಿಕ್ಸರ್ ಸಹಾಯದಿಂದ 54 ರನ್ ಬಾರಿಸಿ ಇಲ್ಲದ ರನ್ ಕದಿಯಲು ಹೋಗಿ ಔಟ್ ಆದರು. ಸೋಫಿ ಎಕ್ಲೆಸ್ಟೋನ್ (35) ರನ್ ಬಾರಿಸಿ ತಂಡಕ್ಕೆ ಆಧಾರವಾದರು. ಉಳಿದ ಬ್ಯಾಟರ್‌ಗಳು ರನ್ ಕಲೆ ಹಾಕುವಲ್ಲಿ ವಿಫಲರಾದರು.