ಐಸಿಸಿ ಏಕದಿನ ವಿಶ್ವಕಪ್ 2023ರ ಟೂರ್ನಿಯಲ್ಲಿ ಭಾರತ ಸತತ ಗೆಲುವುಗಳೊಂದಿಗೆ ಮುನ್ನುಗ್ಗುತ್ತಿದೆ. ಇಂದು ನಡೆದ ಟೂರ್ನಿಯ 17ನೇ ಪಂದ್ಯದಲ್ಲಿ ಬಾಂಗ್ಲಾದೇಶ ತಂಡವನ್ನು 7 ವಿಕೆಟ್‌ಗಳಿಂದ ಸೋಲಿಸಿದೆ. ಈ ಮೂಲಕ ನಾಲ್ಕು ಪಂದ್ಯಗಳನ್ನು ಗೆದ್ದಿರುವ ರೋಹಿತ್ ಶರ್ಮಾ ಸಾರಥ್ಯದ ಟೀಂ ಇಂಡಿಯಾ ಪಡೆ ಅಂಕಪಟ್ಟಿಯಲ್ಲಿ ಎರಡನೇಯ ಸ್ಥಾನ ಪಡೆದಿದೆ.
ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಬಾಂಗ್ಲಾದೇಶ ನೀಡಿದ್ದ 257 ರನ್‌ಗಳ ಸವಾಲನ್ನು ಬೆನ್ನಟ್ಟಿದ ಭಾರತ ತಂಡ 41.3 ಓವರ್‌ಗಳಲ್ಲಿ 51 ಎಸೆತಗಳು ಬಾಕಿಯಿರುವಂತೆಯೆ ಗುರಿ ಸಾಧಿಸಿತು.
ಸ್ಫೋಟಕ ಬ್ಯಾಟ್ಸ್‌ಮನ್‌ಗಾದ ವಿರಾಟ್ ಕೊಹ್ಲಿ (ಅಜೇಯ 103), ಶುಭಮನ್ ಗಿಲ್(53), ರೋಹಿತ್ ಶರ್ಮಾ(48) ಅವರ ಅಬ್ಬರದೊಂದಿಗೆ ಭಾರತವು ಗೆಲುವಿನ ಓಟ ಮುಂದುವರೆಸಿತು.
ಮೊದಲು ಆರಂಭಿಕರಾದ ನಾಯಕ ರೋಹಿತ್ ಶರ್ಮಾ 48((40 ಚೆಂಡು – 7 ಬೌಂಡರಿ 2 ಸಿಕ್ಸರ್)) ಹಾಗೂ ಶುಭಮನ್ ಗಿಲ್ 53 (55 ಎಸೆತ, 5 ಬೌಂಡರಿ 2 ಸಿಕ್ಸರ್) ಅಡಿಪಾಯ ಹಾಕಿಕೊಟ್ಟರು
ನಂತರ ಕೆ ಎಲ್ ರಾಹುಲ್ (34) ಜೊತೆಯಾಟದಲ್ಲಿ ಅಬ್ಬರಿಸಿದ ವಿರಾಟ್ ಕೊಹ್ಲಿ 97 ಚೆಂಡುಗಳಲ್ಲಿ 4 ಭರ್ಜರಿ ಸಿಕ್ಸರ್ ಹಾಗೂ 6 ಬೌಂಡರಿಗಳೊಂದಿಗೆ 103 ರನ್ ಗಳಿಸಿ ಅಜೇಯರಾಗಿ ಉಳಿದರು.
2⃣0⃣0⃣ up for #TeamIndia! 🇮🇳
56 more runs to get off 96 deliveries.
Follow the match ▶️ https://t.co/GpxgVtP2fb#CWC23 | #INDvBAN | #MenInBlue pic.twitter.com/ZhkH4aRe2p
— BCCI (@BCCI) October 19, 2023
ಭಾರತವು ಏಕದಿನ ವಿಶ್ವಕಪ್ ಟೂರ್ನಿಯ ತನ್ನ 5ನೇ ಪಂದ್ಯವನ್ನು ಅಕ್ಟೋಬರ್ 22 ರಂದು ಹಿಮಾಚಲ ಪ್ರದೇಶದ ಧರ್ಮಶಾಲಾ ಕ್ರೀಡಾಂಗಣದಲ್ಲಿ ನ್ಯೂಜಿಲೆಂಡ್ ವಿರುದ್ಧ ಆಡಲಿದೆ.
ಬಾಂಗ್ಲಾದ ಗೌರವಾನ್ವಿತ ಮೊತ್ತ
ಶಕೀಬ್ ಅಲ್ ಹಸನ್ ಅನುಪಸ್ಥಿತಿಯಲ್ಲಿ ಮೊದಲು ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ನಾಯಕ ನಜ್ಮುಲ್ ಹೊಸೈನ್ ಶಾಂಟೊ ಸಾರಥ್ಯದ ಬಾಂಗ್ಲಾದೇಶ ತಂಡ 50 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 256 ರನ್ ಕಲೆ ಹಾಕಿತ್ತು.
ಆರಂಭಿಕರಾಗಿ ಕಣಕ್ಕಿಳಿದ ಲಿಟ್ಟನ್ ದಾಸ್ ಹಾಗೂ ತಂಝೀದ್ ಹಸನ್ ಬಿರುಸಿನ ಹೊಡೆತಗಳ ಮೂಲಕ ಮೊದಲ 14 ಓವರ್‌ಗಳಲ್ಲಿ ತಂಡಕ್ಕೆ ಉತ್ತಮ ಅಡಿಪಾಯ ಹಾಕಿಕೊಟ್ಟರು. 14.4 ಓವರ್‌ನಲ್ಲಿ ತಂಡದ ಮೊತ್ತ 93 ಆಗಿದ್ದಾಗ ತಂಝೀದ್ ಹಸನ್(51) ಅವರನ್ನು ಎಲ್‌ಬಿ ಬಲೆಗೆ ಕೆಡವುದರ ಮೂಲಕ ಇವರಿಬ್ಬರ ಜೋಡಿಯನ್ನು ಕುಲದೀಪ್ ಯಾದವ್ ಮುರಿದರು.
ಈ ಸುದ್ದಿ ಓದಿದ್ದೀರಾ? ಭಾರತೀಯ ಕ್ರಿಕೆಟ್ ಪ್ರಿಯರಿಗೆ ಶುಭಸುದ್ದಿ: 2028ರ ಒಲಿಂಪಿಕ್ಸ್‌ಗೆ ಟಿ20 ಕ್ರಿಕೆಟ್ ಸೇರ್ಪಡೆ
ನಂತರ ಬಂದ ನಜ್ಮುಲ್ ಹೊಸೈನ್ ಶಾಂಟೊ(8), ಮೆಹಿದಿ ಹಸನ್ ಮಿರಾಜ್(3) ಹಾಗೂ ತೌಹಿದ್ ಹೃದಯೋಯ್(16) ಅವರು ಸಿರಾಜ್ ಹಾಗೂ ಜಡೇಜಾ ದಾಳಿಗೆ ಕ್ರೀಸ್‌ನಲ್ಲಿ ಹೆಚ್ಚು ಕಾಲ ಉಳಿಯದೆ ಪೆವಿಲಿಯನ್ ಕಡೆ ಮುಖಮಾಡಿದರು.
A six off the last ball of the innings, and Bangladesh go past 250 in Pune!
Will this be a tricky chase or smooth sailing for India? 🤔 https://t.co/LH9lKy1VRP #INDvBAN #CWC23 pic.twitter.com/C8UtiuU4w8
— ESPNcricinfo (@ESPNcricinfo) October 19, 2023
ರವೀಂದ್ರ ಜಡೇಜಾ ಬೌಲಿಂಗ್‌ನಲ್ಲಿ ಲಿಟ್ಟನ್ ದಾಸ್ (66) ಔಟಾದ ನಂತರ ತಂಡಕ್ಕೆ ಚೇತರಿಕೆ ನೀಡಿದವರು ಮುಶ್ಫಿಕರ್ ರಹೀಮ್(38) ಹಾಗೂ ಮಹಮ್ಮದುಲ್ಲಾ(46). ಅಂತಿಮವಾಗಿ 50 ಓವರ್‌ಗಳಲ್ಲಿ ಬಾಂಗ್ಲಾದೇಶ 256 ರನ್ ಕಲೆ ಹಾಕಿತು.
ಭಾರತದ ಪರ ರವೀಂದ್ರ ಜಡೇಜಾ 38/2, ಮೊಹಮ್ಮದ್ ಸಿರಾಜ್ 52/2, ಜಸ್ಪ್ರೀತ್ ಬುಮ್ರಾ 41/2 ಗಳಿಸಿದರೆ, ಶಾರ್ದೂಲ್ ಠಾಕೂರ್, ಕುಲದೀಪ್ ಯಾದವ್ ತಲಾ ಒಂದೊಂದು ವಿಕೆಟ್ ಕಬಳಿಸಿದರು.
ಗಾಯಗೊಂಡ ಹಾರ್ದಿಕ್, ಕೊಹ್ಲಿ ಬೌಲಿಂಗ್
ಮೂರು ಚೆಂಡುಗಳನ್ನು ಹಾಕಿದ ನಂತರ ಬೌಲಿಂಗ್ ಮಾಡುವ ವೇಳೆ ಗಾಯಗೊಂಡ ಮಧ್ಯಮ ವೇಗಿ ಹಾರ್ದಿಕ್ ಪಾಂಡ್ಯ ಪಂದ್ಯದಿಂದ ಹೊರಗುಳಿದರು. ಹಾರ್ದಿಕ್‌ನ ಬಾಕಿ ಮೂರು ಎಸೆತವನ್ನು ವಿರಾಟ್ ಕೊಹ್ಲಿ ಮಾಡಿ 2 ರನ್‌ಗಳಷ್ಟನ್ನೇ ನೀಡಿದರು. ಇದರೊಂದಿಗೆ 6 ವರ್ಷಗಳ ನಂತರ ಕೊಹ್ಲಿ ಬೌಲಿಂಗ್ ಮಾಡಿದರು.