ಇಂಗ್ಲೆಂಡ್ ವಿರುದ್ಧ ನಡೆಯಲಿರುವ ಅಂಡರ್ 19 ಕ್ರಿಕೆಟ್ ಸರಣಿಗಾಗಿ ಪ್ರವಾಸಿ ಭಾರತ ತಂಡವನ್ನು ಬಿಸಿಸಿಐ ಇಂದು (ಗುರುವಾರ) ಪ್ರಕಟಿಸಿದೆ.
ಭಾರತ ತಂಡವನ್ನು 17 ವರ್ಷದ ಆಯುಷ್ ಮಾತ್ರೆ ಮುನ್ನಡೆಸಲಿದ್ದು, 14 ವರ್ಷದ ವೈಭವ್ ಸೂರ್ಯವಂಶಿ ಸಹ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.
ಪ್ರಸಕ್ತ ಸಾಗುತ್ತಿರುವ ಐಪಿಎಲ್ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಆಯುಷ್ ಮತ್ತು ರಾಜಸ್ಥಾನ ರಾಯಲ್ಸ್ ತಂಡವನ್ನು ವೈಭವ್ ಪ್ರತಿನಿಧಿಸುತ್ತಿದ್ದಾರೆ.ಐಪಿಎಲ್‌ನಲ್ಲಿ ಈ ಉದಯೋನ್ಮುಖ ಆಟಗಾರರು ಅತ್ಯುತ್ತಮ ಪ್ರದರ್ಶನ ತೋರಿದ್ದಾರೆ.
ಇಂಗ್ಲೆಂಡ್ ವಿರುದ್ಧದ ಅಂಡರ್ 19 ಸರಣಿಯು ಜೂನ್ 24ರಿಂದ ಆರಂಭವಾಗಲಿದೆ. 50 ಓವರ್‌ಗಳ ಅಭ್ಯಾಸ ಪಂದ್ಯದ ಬಳಿಕ ಐದು ಪಂದ್ಯಗಳ ಯೂತ್ ಏಕದಿನ ಸರಣಿಯು ನಡೆಯಲಿದೆ. ತದನಂತರ ನಾಲ್ಕು ದಿನಗಳ ಎರಡು ಪಂದ್ಯಗಳು ನಡೆಯಲಿವೆ.
ಇದನ್ನು ಓದಿದ್ದೀರಾ? 90.23 ಮೀಟರ್ ದೂರ ಜಾವೆಲಿನ್ ಎಸೆದು ಹೊಸ ದಾಖಲೆ ಬರೆದ ನೀರಜ್ ಚೋಪ್ರಾ
14 ವರ್ಷದ ಸೂರ್ಯವಂಶಿ, ಐಪಿಎಲ್ ನಲ್ಲಿ ಶತಕ ಗಳಿಸಿದ (35 ಎಸೆತ) ಅತಿ ಕಿರಿಯ ಬ್ಯಾಟರ್ ಎಂಬ ದಾಖಲೆ ಬರೆದಿದ್ದಾರೆ. ಹಾಗೆಯೇ ಐಪಿಎಲ್ ನಲ್ಲಿ ವೇಗದ ಶತಕ ಗಳಿಸಿದ ಭಾರತೀಯ ಬ್ಯಾಟರ್ ಎನಿಸಿದ್ದಾರೆ. ಕ್ರಿಸ್ ಗೇಲ್ ಬಳಿಕ ಐಪಿಎಲ್‌ನಲ್ಲಿ ವೇಗದ ಶತಕ ಗಳಿಸಿದ 2ನೇ ಆಟಗಾರರಾಗಿದ್ದಾರೆ. ಸಿಎಸ್‌ಕೆ ಪರ ಆಡುತ್ತಿರುವ ಆಯುಷ್ ಮಾತ್ರೆ ಕೂಡ ಅತ್ಯುತ್ತಮ ಪ್ರದರ್ಶನ ತೋರಿದ್ದಾರೆ.
ಕಳೆದ ವರ್ಷ ಆಸ್ಟ್ರೇಲಿಯಾ ಅಂಡರ್ 19 ತಂಡದ ವಿರುದ್ಧದ ಪ್ರದರ್ಶನದ ಮೂಲಕ ಗಮನ ಸೆಳೆದಿರುವ ಕೇರಳದ ಬೆಗ್ ಸ್ಪಿನ್ನರ್ ಮೊಹಮ್ಮದ್ ಇನಾನ್ ಸಹ ಸ್ಥಾನ ಪಡೆದಿದ್ದಾರೆ. ಇಂಗ್ಲೆಂಡ್ ಪ್ರವಾಸ ಜೂನ್ 24 ರಂದು ಆರಂಭವಾಗಿ ಜುಲೈ ಅಂತ್ಯದವರೆಗೂ ನಡೆಯಲಿದೆ.
ಭಾರತ ಅಂಡರ್-19 ತಂಡ:
ಆಯುಷ್ ಮಾತ್ರೆ (ನಾಯಕ), ವೈಭವ್ ಸೂರ್ಯವಂಶಿ, ವಿಹಾನ್ ಮಲ್ಹೋತ್ರ, ಮೌಲ್ಯರಾಜ್‌ಸಿನ್ಹ್ ಚಾವ್ಡಾ, ರಾಹುಲ್ ಕುಮಾರ್, ಅಭಿಜ್ಞಾನ್ ಕುಂಡು (ಉಪನಾಯಕ ಮತ್ತು ವಿಕೆಟ್ ಕೀಪರ್), ಹರ್ವಾಂಶ್ ಸಿಂಗ್ (ವಿಕೆಟ್ ಕೀಪರ್), ಆರ್.ಎಸ್. ಅಂಬರೀಶ್, ಕನಿಷ್ಕ್ ಚೌಹಾಣ್, ಖಿಲಾನ್ ಪಟೇಲ್, ಹೆನಿಲ್ ಪಟೇಲ್, ಯುಧಾಜಿತ್ ಗುಹಾ, ಪ್ರಣವ್ ರಾಘವೇಂದ್ರ, ಮೊಹಮ್ಮದ್ ಇಹಾನ್, ಆದಿತ್ಯ ರಾಣಾ, ಅನ್ಮೋಲ್‌ಜೀತ್ ಸಿಂಗ್
ಮೀಸಲು ಆಟಗಾರರು: ನಮನ್ ಪುಷ್ಕಕ್, ಡಿ. ದಿಪೇಶ್, ವೇದಾಂತ್ ತ್ರಿವೇದಿ, ವಿಕಲ್ಪ್ ತಿವಾರಿ, ಅಲಂಕೃತ್ ರಾಪೊಲ್.