ಐಸಿಸಿ ಟೆಸ್ಟ್ ಮತ್ತು ಟಿ20 ರ‍್ಯಾಂಕಿಂಗ್‌ನಲ್ಲಿ ಭಾರತ ನಂ.1 ಸ್ಥಾನದಲ್ಲಿದೆ. ಆದರೆ ಐಸಿಸಿ ಆಯೋಜಿಸುವ ಟೂರ್ನಿಗಳಲ್ಲಿ ಭಾರತ ಪ್ರಶಸ್ತಿ ಗೆಲ್ಲದೇ ದಶಕವೇ ಕಳದಿದೆ.
ಲಂಡನ್‌ನ ಓವಲ್ ಮೈದಾನದಲ್ಲಿ ಭಾನುವಾರ ಮುಕ್ತಾಯಗೊಂಡ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ, 209 ರನ್‌ಗಳ ಬೃಹತ್ ಅಂತರದಲ್ಲಿ ರೋಹಿತ್ ಪಡೆಯನ್ನು ಬಗ್ಗುಬಡಿದು ತನ್ನ ಚೊಚ್ಚಲ ಡಬ್ಲ್ಯೂಟಿಸಿ ಪ್ರಶಸ್ತಿ ಗೆದ್ದು ಬೀಗಿತ್ತು. ಮತ್ತೊಂದೆಡೆ ಸತತ ಎರಡನೇ ಬಾರಿ ಫೈನಲ್ ಪ್ರವೇಶಿಸಿದರೂ ಸಹ ಭಾರತ, ಯಾವುದೇ ಹಂತದಲ್ಲೂ ಪ್ರತಿರೋಧ ತೋರದೆ ಶರಾಣಗಿತ್ತು. ಎದುರಾಳಿಗಳು ಕಳೆದ ಬಾರಿ ನ್ಯೂಜಿಲೆಂಡ್ ಮತ್ತು ಈ ಬಾರಿ ಆಸ್ಟ್ರೇಲಿಯಾ ಎಂಬುದಷ್ಟೇ ವ್ಯತ್ಯಾಸ. ಆದರೆ ಫಲಿತಾಂಶದಲ್ಲಿ ಮಾತ್ರ ಯಾವುದೇ ಬದಲವಾವಣೆ ಆಗಿಲ್ಲ.
ಓವಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಹೀನಾಯ ಸೋಲು ಕಾಣುವ ಮೂಲಕ ಭಾರತ, ಕಳೆದ 10 ವರ್ಷಗಳಲ್ಲಿ ಐಸಿಸಿ ಟೂರ್ನಿಗಳಲ್ಲಿ ನಾಲ್ಕನೇ ಬಾರಿಗೆ ಫೈನಲ್‌ನಲ್ಲಿ ಸೋಲು ಕಂಡಂತಾಗಿದೆ.
2011ರಲ್ಲಿ ಭಾರತದ ನೆಲದಲ್ಲಿ ನಡೆದಿದ ಐಸಿಸಿ ಏಕದಿನ ವಿಶ್ವಕಪ್‌ನಲ್ಲೂ ಪ್ರಶಸ್ತಿ ಜಯಿಸಿದ್ದ ಭಾರತ ಆ ಬಳಿಕ 2013ರಲ್ಲಿ ಇಂಗ್ಲೆಂಡ್‌ನಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿಯಲ್ಲಿ ಚಾಂಪಿಯನ್ ಆಗಿ ಸಂಭ್ರಮಿಸಿತ್ತು. ಈ ಎರಡೂ ಟೂರ್ನಿಗಳಲ್ಲೂ ಭಾರತ ತಂಡವನ್ನು ಮಹೇಂದ್ರ ಸಿಂಗ್ ಧೋನಿ ಮುನ್ನಡೆಸಿದ್ದರು. ಅದುವೇ ಕೊನೆ. ಆ ನಂತರದಲ್ಲಿ ಐಸಿಸಿ ಟ್ರೋಫಿ ಭಾರತದ ಪಾಲಿಗೆ ಮರೀಚಿಕೆಯಾಗಿಯೇ ಉಳಿದಿದೆ.
ಕಳೆದ ಒಂದು ದಶಕದಿಂದ ಭಾರತಕ್ಕೆ ಐಸಿಸಿ ಸೆಮಿಫೈನಲ್- ಫೈನಲ್‌ನಲ್ಲಿ ಸೋಲಿನ ಸರಪಳಿ ಕಳಚಲು ಸಾಧ್ಯವಾಗಿಲ್ಲ.
ಧೋನಿ ನಾಯಕತ್ವದಲ್ಲಿ,
2014ರ ಟಿ-20 ವಿಶ್ವಕಪ್; ಫೈನಲ್‌ನಲ್ಲಿ ಶ್ರೀಲಂಕಾ ವಿರುದ್ಧ ಸೋಲು.
2015ರ ಏಕದಿನ ವಿಶ್ವಕಪ್; ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋಲು
2016ರ ಟಿ20 ವಿಶ್ವಕಪ್; ಸೆಮಿಫೈನಲ್‌ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಸೋಲು.
ಕೊಹ್ಲಿ ನಾಯಕತ್ವದಡಿಯಲ್ಲಿ,
2017ರ ಚಾಂಪಿಯನ್ಸ್ ಟ್ರೋಫಿ; ಫೈನಲ್‌ನಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಸೋಲು
2019ರ ಏಕದಿನ ವಿಶ್ವಕಪ್; ಸೆಮಿಫೈನಲ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಸೋಲು
2021ರ ಟೆಸ್ಟ್ ಚಾಂಪಿಯನ್‌ಶಿಪ್; ಫೈನಲ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಸೋಲು
ರೋಹಿತ್ ಶರ್ಮಾ ನಾಯಕತ್ವದಲ್ಲಿ,
2022ರ ಟಿ20 ವಿಶ್ವಕಪ್; ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಸೋಲು
2023ರ ಟೆಸ್ಟ್ ಚಾಂಪಿಯನ್‌ಶಿಪ್; ಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋಲು.