ಕೆಲವೇ ತಿಂಗಳ ಅಂತರದಲ್ಲಿ ಏಳು-ಬೀಳು ಎದುರಿಸಿ ಗೆದ್ದು ಬಂದ ಹಾರ್ದಿಕ್ ಪಾಂಡ್ಯ!

Date:

Advertisements

ಅಂದು ಡಿಸೆಂಬರ್ 19, 2023. ಐಪಿಎಲ್ 2024ರ ಪಂದ್ಯಾವಳಿಯ ಹರಾಜಿನ ಸಮಯ. ಗುಜರಾತ್ ಟೈಟನ್ಸ್ ನಾಯಕನಾಗಿದ್ದ ಹಾರ್ದಿಕ್ ಪಾಂಡ್ಯಾನನ್ನು ಮುಂಬೈ ಇಂಡಿಯನ್ಸ್‌ಗೆ ಹರಾಜು ಮಾಡಲಾಗಿತ್ತು. 2022ಕ್ಕಿಂತ ಮೊದಲು ಮುಂಬೈ ಇಂಡಿಯನ್ಸ್ ತಂಡದ ಆಟಗಾರನಾಗಿದ್ದ ಹಾರ್ದಿಕ್ ಪಾಂಡ್ಯ, 2022 ರಲ್ಲಿ ನಾಯಕನಾಗಿ ಗುಜರಾತ್ ಟೈಟನ್ಸ್ ತಂಡವನ್ನು ಸೇರಿದರು. ಅದೇ ಸೀಸನ್ ನಲ್ಲಿ ಗುಜರಾತ್ ತಂಡವನ್ನು ಐಪಿಎಲ್ ಚಾಂಪಿಯನ್ ಮಾಡಿದ್ದ ಪಾಂಡ್ಯ, 2023ರಲ್ಲೂ ಗುಜರಾತ್ ಫೈನಲ್ ತಲುಪಿಸುವಲ್ಲಿ ಯಶಸ್ವಿಯಾಗಿದ್ದರು. ಆ ಮೂಲಕ ಹಾರ್ದಿಕ್ ನಾಯಕನಾಗಿ ಜನರ ಮನಸ್ಸಿಗೆ ಹತ್ತಿರವಾಗಿದ್ದರು.

2024ರ ಐಪಿಎಲ್ ಮೆಗಾ ಆಕ್ಷನ್ ಸಂದರ್ಭ, ಗುಜರಾತ್ ತಂಡ ಹಾರ್ದಿಕ್ ಅವರನ್ನು ಮುಂಬೈ ಇಂಡಿಯನ್ಸ್‌ಗೆ ಬಿಟ್ಟುಕೊಟ್ಟಿದ್ದರು. 15 ಕೋಟಿ ರೂಪಾಯಿಗೆ ಮುಂಬೈ ಇಂಡಿಯನ್ಸ್ ತಂಡಕ್ಕೆ ಪಾಂಡ್ಯ ವಾಪಾಸಾದ ಬಗ್ಗೆ ಅಭಿಮಾನಿಗಳು ಸಂಭ್ರಮಿಸಿದ್ದರು. ಆಯ್ಕೆಯಾದರು. ಆದರೆ ಯಾವಾಗ ಮುಂಬೈ ಇಂಡಿಯನ್ಸ್ ತಂಡ, ನಾಯಕ ರೋಹಿತ್ ಶರ್ಮಾ‌ರನ್ನು ನಾಯಕತ್ವದಿಂದ ಕೆಳಗಿಳಿಸಿ, ಹಾರ್ದಿಕ್‌ರನ್ನು ತಮ್ಮ ತಂಡದ ನಾಯಕ ಎಂದು ಘೋಷಿಸಿತ್ತೋ, ಅದು ಜನರಲ್ಲಿ ಭಾರೀ ಬೇಸರ ತಂದಿತ್ತು.

Hardik and Rohit Sharma 1

ಅಲ್ಲಿಂದ ಪಾಂಡ್ಯ ಬದುಕಿನಲ್ಲಿ ಒಂದಷ್ಟು ಒತ್ತಡಗಳು ಶುರುವಾಯಿತು. ಹಾರ್ದಿಕ್ ಪಾಂಡ್ಯ‌ರನ್ನು ನಾಯಕತ್ವದಿಂದ ಕೆಳಗಿಳಿಸಬೇಕು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನ ನಡೆಸಿದರು. ಇನ್ಸ್ಟಾಗ್ರಾಮ್‌ನಲ್ಲಿ ಪಾಂಡ್ಯ ಪೋಸ್ಟ್‌ಗೆ ಬಹಳ ಕೆಟ್ಟದಾಗಿ ಕಾಮೆಂಟ್ ಮಾಡಿದರು ಮುಂಬೈ ಅಭಿಮಾನಿಗಳು. ಈ ಮೂಲಕ ವಿವಿಧ ರೀತಿಯಲ್ಲಿ ತಮ್ಮ ಸಿಟ್ಟನ್ನು ಹೊರಹಾಕಿದರು. ಆದರೆ ಹಾರ್ದಿಕ್ ಪಾಂಡ್ಯ, ಇದಾವುವುದಕ್ಕೂ ತಲೆಕೆಡಿಸಿಕೊಳ್ಳದೆ ಐಪಿಎಲ್‌ನಲ್ಲಿ ನಾಯಕರಾಗಿ ತಮ್ಮ ಜವಾಬ್ದಾರಿ ನಿಭಾಯಿಸತೊಡಗಿದರು.

Advertisements

ಐಪಿಎಲ್ ಶುರುವಾದರೂ ಅಭಿಮಾನಿಗಳ ಸಿಟ್ಟು ಕಡಿಮೆ ಆಗಿರಲಿಲ್ಲ. ಪಂದ್ಯಗಳು ನಡೆಯುವಾಗ, ಸ್ಟೇಡಿಯಂಗೆ ಆಗಮಿಸಿದ ಜನರೆಲ್ಲ ಹಾರ್ದಿಕ್ ಪಾಂಡ್ಯ ವಿರುದ್ಧವಾಗಿ ಘೋಷಣೆ‌ಗಳನ್ನು ಕೂಗಿದರು, ಜೋರಾಗಿ ಕಿರುಚಾಡಿದರು. ರೋಹಿತ್ ಶರ್ಮಾರನ್ನು ಫೀಲ್ಡಿಂಗ್‌ನಲ್ಲಿ ಸರಿಯಾಗಿ ನಿಲ್ಲಿಸುತ್ತಿಲ್ಲ, ದೂರ ನಿಲ್ಲಿಸುತ್ತಿದ್ದಾರೆ ಎಂದೂ ಜನ ನಿಂದಿಸತೊಡಗಿದರು. ಇವೆಲ್ಲ ಸುದ್ದಿ ಇಡೀ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ಹಾರ್ದಿಕ್ ಮೇಲಿನ ಜನರ ದ್ವೇಷ ಹೆಚ್ಚಿತು.

ಪಾಂಡ್ಯ ದುರಾದೃಷ್ಟವೋ ಏನೋ! ಐಪಿಎಲ್ 2024ರಲ್ಲಿ ಮುಂಬೈ ಇಂಡಿಯನ್ಸ್ ಪ್ರದರ್ಶನ ಭಾರೀ ಕಳಪೆಯಾಗಿತ್ತು. 14 ಪಂದ್ಯಗಳ ಪೈಕಿ ಕೇವಲ 4 ಪಂದ್ಯಗಳನ್ನು ಗೆದ್ದು, ಪ್ಲೇ ಆಫ್ ರೇಸ್‌ನಿಂದ ಮುಂಬೈ ಹೊರಬಿತ್ತು. ಈ ಬಗ್ಗೆ ಹಿರಿಯ ಕ್ರಿಕೆಟ್ ಆಟಗಾರರೂ ಬೇಸರ ವ್ಯಕ್ತಪಡಿಸಿ, ನೇರವಾಗಿ ಹಾರ್ದಿಕ್ ನಾಯಕತ್ವವನ್ನೇ ಹೊಣೆಯಾಗಿಸಿದರು.

“ಹಾರ್ದಿಕ್ ನಾಯಕನಾದ ಮೇಲೆ ಪಂದ್ಯದ ಸಮಯದಲ್ಲಿ ಆಟಗಾರರ ಮಧ್ಯೆ ಒಳ್ಳೆಯ ಸಮನ್ವಯ ಕಂಡುಬರಲಿಲ್ಲ. ನಾನು ಆಡಿದ ತಂಡವನ್ನು ಈ ಸ್ಥಿತಿಯಲ್ಲಿ ನೋಡಲು ಬೇಸರವಾಗುತ್ತಿದೆ” ಎಂದು ಹರ್ಭಜನ್ ಸಿಂಗ್ ಹೇಳಿಕೆ ನೀಡಿದ್ದರು.

ಐಪಿಎಲ್‌ನಲ್ಲಿ ಯಶಸ್ವಿ ತಂಡಗಳಲ್ಲೊಂದಾಗಿರುವ, ಐದು ಬಾರಿ ಚಾಂಪಿಯನ್ಸ್ ಮುಂಬೈ ತಂಡ, ಹೀನಾಯ ಪ್ರದರ್ಶನ ನೀಡಿದ್ದಕ್ಕೆ ಹಾರ್ದಿಕ್ ಅವರನ್ನೇ ದೂರಲಾಯಿತು. ಇದರ ಮಧ್ಯೆ ಆತನ ಜೀವನದಲ್ಲಿ ಇನ್ನೊಂದು ಸಮಸ್ಯೆ ಎದುರಾಯಿತು. ಪಾಂಡ್ಯನ ಹೆಂಡತಿ ನತಾಶಾ ಸ್ಟ್ಯಾಂಕೋವಿಕ್, ಐಪಿಎಲ್‌ನಲ್ಲಿ ಪಾಂಡ್ಯನ ಕಳಪೆ ಪ್ರದರ್ಶನವನ್ನು ದೂರಿ ಡಿವೋರ್ಸ್ ಗೆ ಮುಂದಾದರು. 14 ಪಂದ್ಯಗಳಿಂದ ಕೇವಲ 216 ರನ್ ಬಾರಿಸಿದ್ದರು ಪಾಂಡ್ಯ.

ಹಾರ್ದಿಕ್ ಪಾಂಡ್ಯ

ಜನರಿಂದ ಕೆಟ್ಟ ಅಭಿಪ್ರಾಯ, ವೈವಾಹಿಕ ಜೀವನದಲ್ಲಿ ಸಮಸ್ಯೆ, ಹೀಗೆ ಎಲ್ಲವೂ ಒಟ್ಟಾಗಿ ಬಂದರೂ, ಹಾರ್ದಿಕ್ ಎಲ್ಲವನ್ನೂ ಎದುರಿಸಿದರು. ಐಪಿಎಲ್ ಮುಗಿಯುತ್ತಿದ್ದಂತೆ 2024 ಟಿ20 ವಿಶ್ವಕಪ್ ತಯಾರಿ ನಡೆಯಲು ಆರಂಭವಾಯಿತು. ಜೀವನದಲ್ಲಿ ಯಾವಾಗ ದೇವರು ಕಷ್ಟ – ಸುಖಗಳನ್ನು ಕೊಡುತ್ತಾರೆ ಎಂದು ಊಹಿಸಲಾಗುವುದಿಲ್ಲ. ಪಾಂಡ್ಯನಿಗೂ ತನ್ನ ಭವಿಷ್ಯದ ಬಗ್ಗೆ ಅರಿವಿರಲಿಲ್ಲ.

ಅರ್ಜುನ ಅವಾರ್ಡ್ ಮತ್ತು ಸರ್ ಗಾರ್ಫಿಲ್ದ್ ಪದಕ ವಿಜೇತನಾದ ಹಾರ್ದಿಕ ಪಾಂಡ್ಯ, 2024ರ ಭಾರತದ ಟಿ20 ವಿಶ್ವಕಪ್ ತಂಡಕ್ಕೆ ಆಯ್ಕೆಯಾದರು. ರೋಹಿತ್ ಶರ್ಮಾ, ಅಕ್ಷರ್ ಪಟೇಲ್, ಅರ್ಶ್ ದೀಪ್ ಸಿಂಗ್ ಮತ್ತು ಜಸ್ಪ್ರೀತ್ ಬೂಮ್ರಾರವರ ಉತ್ತಮ ಪ್ರದರ್ಶನದಿಂದ, ಭಾರತ ತಂಡ ಒಂದು ಪಂದ್ಯವನ್ನೂ ಸೋಲದೇ, ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಎದುರಿಸಲು ಸಿದ್ಧವಾದರು.

Hardik Pandya

“ಹೀರೋ” ಎಂಬುವ ಪದದ ಅರ್ಥವೇನು? ಕಷ್ಟದ ಸಮಯದಲ್ಲಿ ಎದುರಾಳಿಯ ವಿರುದ್ಧ ಹೋರಾಡಿ ಗೆಲ್ಲುವವನನ್ನೇ ಹೀರೋ ಎಂದು ಕರೆಯುತ್ತಾರೆ. ಅದರಂತೆಯೇ ಹಾರ್ದಿಕ್ ಫೈನಲ್ ಮ್ಯಾಚ್‌ನಲ್ಲಿ ಭಾರತದ ಪಾಲಿಗೆ ಹೀರೋ ಆದರು.‌ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿದ ಭಾರತ, 7 ವಿಕೆಟ್ ನಷ್ಟಕ್ಕೆ 176 ರನ್ ಕಲೆಹಾಕಿತು. ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ, ಬಹುತೇಕ ಗೆಲುವಿನ ಕಡೆಗೆ ಸಾಗುತ್ತಿತ್ತು. ಭಾರತದ ಕೈಯಿಂದ ಪಂದ್ಯ ಜಾರುತ್ತಿದೆ ಅನ್ನುವಾಗ, ರೋಹಿತ್ ಶರ್ಮಾ ಹಾರ್ದಿಕ್ ಪಾಂಡ್ಯ ಅವರ ಕೈಗೆ ಚೆಂಡು ನೀಡಿ ಬೌಲ್ ಮಾಡಲು ಹೇಳಿದರು. ಮ್ಯಾಚ್ ಕೈ ಬಿಟ್ಟು ಹೋಗುವ ಸನ್ನಿವೇಶ ಹಾರ್ದಿಕ ಪಾಂಡ್ಯ ಬೌಲಿಂಗ್ ಮಾಡಲು ನಿಂತಿದ್ದರು. 17 ನೇ ಓವರ್ ಹಾಕಿದ ಹಾರ್ದಿಕ್, ಮೊದಲ ಎಸೆತದಲ್ಲೇ ಅರ್ಧಶತಕ ಬಾರಿಸಿ ಭರ್ಜರಿ ಆಟವಾಡುತ್ತಿದ್ದ ದಕ್ಷಿಣ ಆಫ್ರಿಕಾ ತಂಡದ ಹೆನ್ರಿಚ್‌ ಕ್ಲಾಸೆನ್‌ರ ವಿಕೆಟ್ ಕಬಳಿಸಿದರು. ಅದಲ್ಲದೇ 20ನೇ ಓವರ್ ಎಸೆಯುವ ಸೌಭಾಗ್ಯವೂ ಪಾಂಡ್ಯ ಅವರಿಗೆ ಒದಗಿತ್ತು. ಸ್ಟ್ರೈಕ್ ನಲ್ಲಿ ಆಫ್ರಿಕಾದ ಫಿನಿಶರ್ ಖ್ಯಾತಿಯ ಡೇವಿಡ್ ಮಿಲ್ಲರ್ ನಿಂತಿದ್ದರು. ಹಾರ್ದಿಕ್ ಫುಲ್ ಟಾಸ್ ಹಾಕಿದ್ದರು. ಅದನ್ನು ಬಾನೆತ್ತರಕ್ಕೆ ಬೀಸಿದರು. ಸಿಕ್ಸ್ ಹೋಗೇ ಬಿಟ್ಟಿತು ಅನ್ನುವಾಗ ಬೌಂಡರಿ ಬಳಿ, ಭಾರತದ ಸೂರ್ಯ ಕುಮಾರ್ ಯಾದವ್ ಅತ್ಯಾಕರ್ಷಕ ಕ್ಯಾಚ್ ಹಿಡಿದರು.

Hardik t20

ಆ ಪಂದ್ಯದಲ್ಲಿ ಹಾರ್ದಿಕ್ ಮೂರು ವಿಕೆಟ್ ಕಬಳಿಸಿ ಪಂದ್ಯದ ಹೀರೋವಾಗಿ ಹೊರಹೊಮ್ಮಿದರು. ವಿಶ್ವಕಪ್ ಬೆನ್ನಲ್ಲೇ, ಅಂತಾರಾಷ್ಟ್ರೀಯ ಟಿ20 ಆಲ್‌ರೌಂಡರ್‌ಗಳ ಶ್ರೇಯಾಂಕದಲ್ಲಿ ಹಾರ್ದಿಕ್ ಪಾಂಡ್ಯ ನಂ.1 ಸ್ಥಾನ ಪಡೆದರು. ಈ ಸ್ಥಾನ ಪಡೆದ ಭಾರತ ಮೊದಲ ಭಾರತದ ಮೊದಲ ಆಲ್‌ರೌಂಡರ್‌ ಎನಿಸಿದರು. ಇದೆಲ್ಲ ನಡೆದದ್ದು ಕೇವಲ ಒಂದು ವರ್ಷದಲ್ಲಿ. ಎಂತಹ ಸ್ಪೂರ್ತಿದಾಯಕ ಕಥೆ ಹಾರ್ದಿಕ್ ಪಾಂಡ್ಯದ್ದು.

ಜಗತ್ತೇ ನಮ್ಮ ವಿರುದ್ಧವಿದ್ದರೂ, ಎಲ್ಲರೂ ನಾವು ಸೋಲುತ್ತೇವೆ ಎಂದು ಅಭಿಪ್ರಾಯಪಟ್ಟರೂ, ಗೆಲ್ಲುತ್ತೇನೆ ಎಂಬ ಹಠ, ನಂಬಿಕೆ ನಮ್ಮಲ್ಲಿ ಇದ್ದರೆ ನಾವೂ ಯಶಸ್ವಿಯಾಗಬಹುದು ಎಂಬುವುದಕ್ಕೆ ಇವರ ಜೀವನವೇ ಸಾಕ್ಷಿ.

ಜೀವನದಲ್ಲಿ ಎಂತಹ ಸಮಸ್ಯೆ ಇದ್ದರೂ ಕೂಡ ನಾವು ಇಷ್ಟ ಪಡುವ ಕೆಲಸವನ್ನು ಬಹಳ ಭಕ್ತಿಯಿಂದ ನಿರ್ವಹಿಸಿದರೆ ನಮಗೆ ಖಂಡಿತವಾಗಿ ಯಶಸ್ಸು ಸಿಗುತ್ತದೆ. ಯಾರು ತನ್ನನ್ನು ಕೀಳಾಗಿ ನೋಡಿದರೂ ಅವರೇ ಇವತ್ತು ಹೀರೊ ಎಂದು ಪ್ರೋತ್ಸಾಹಿಸುತ್ತಿದ್ದಾರೆ. ಹಾರ್ದಿಕ್ ಪಾಂಡ್ಯಾರ ಯಶಸ್ಸು ನಮ್ಮ ಜೀವನಕ್ಕೆ ನಂಬಿಕೆ ಎನ್ನುವ ಪದದ ಅರ್ಥ ತೋರಿಸಿಕೊಡುತ್ತದೆ.

ಬರಹ: ತರುಣ್ ಶರಣ್, ಬಿವೋಕ್ (ಡಿಎಂಎಫ್) ವಿದ್ಯಾರ್ಥಿ, ಎಸ್‌ಡಿಎಂ ಕಾಲೇಜು, ಉಜಿರೆ

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತಾಂತ್ರಿಕ ಕಾರಣದಿಂದ ಯುವಕನಿಗೆ ಸಿಕ್ಕ ಆರ್‌ಸಿಬಿ ಆಟಗಾರನ ಸಿಮ್‌; ಕೊಹ್ಲಿ, ಎಬಿಡಿಯಿಂದ ನಿತ್ಯ ಕರೆ!

ಛತ್ತೀಸ್‌ಗಢದ ಯುವಕನೊಬ್ಬನಿಗೆ ತಾಂತ್ರಿಕ ದೋಷದಿಂದಾಗಿ ಆರ್‌ಸಿಬಿ ತಂಡದ ನಾಯಕ ರಜತ್ ಪಾಟೀದಾರ್‌ರ...

ಬಿಸಿಸಿಐ ಷರತ್ತಿನಿಂದ ವಿರಾಟ್‌, ರೋಹಿತ್‌ 2027ರ ಏಕದಿನ ವಿಶ್ವಕಪ್‌ ಕನಸು ಕಮರಿ ಹೋಗಲಿದೆಯೇ?

ಟೀಂ ಇಂಡಿಯಾದ ದಿಗ್ಗಜ ಆಟಗಾರರಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ...

ಊಹಾಪೋಹಗಳಿಗೆ ತೆರೆ: ಭಾರತ–ಪಾಕ್‌ ಏಷ್ಯಾಕಪ್‌ ಕ್ರಿಕೆಟ್‌ ಪಂದ್ಯ ರದ್ದಾಗುವುದಿಲ್ಲ

ಪಹಲ್ಗಾಮ್‌ ಉಗ್ರ ದಾಳಿಯ ನಂತರ ಭಾರತ–ಪಾಕಿಸ್ತಾನದ ನಡುವಿನ ಬಿಕ್ಕಟ್ಟು ಹೆಚ್ಚಾದ ಹಿನ್ನೆಲೆಯಲ್ಲಿ...

ಕೇರಳ ಭೇಟಿ ರದ್ದುಗೊಳಿಸಿದ ಮೆಸ್ಸಿ ನೇತೃತ್ವದ ಅರ್ಜೆಂಟೀನಾ ತಂಡ

ಲಿಯೊನೆಲ್ ಮೆಸ್ಸಿ ನೇತೃತ್ವದ ಫೀಫಾ ವಿಶ್ವಕಪ್ ವಿಜೇತ ಅರ್ಜೆಂಟೀನಾ ತಂಡವನ್ನು ಕೇರಳಕ್ಕೆ...

Download Eedina App Android / iOS

X