ಐಪಿಎಲ್ 16ನೇ ಆವೃತ್ತಿಯ ಲೀಗ್ ಹಂತ ಅರ್ಧದಾರಿ ಕ್ರಮಿಸಿದೆ. ಒಟ್ಟು 14 ಪಂದ್ಯಗಳಲ್ಲಿ ಎಲ್ಲಾ 10 ತಂಡಗಳು ಈಗಾಗಲೇ ತಲಾ 7 ಪಂದ್ಯಗಳನ್ನಾಡಿವೆ.
ಮಾರ್ಚ್ 31ರಂದು ಅಹಮದಾಬಾದ್‌ನಲ್ಲಿ ಆರಂಭವಾದ ಟೂರ್ನಿಯಲ್ಲಿ ಈಗಾಗಲೇ 35 ಪಂದ್ಯಗಳು ಮುಗಿದಿವೆ. ಅಂಕಪಟ್ಟಿಯಲ್ಲಿ ತಲಾ 10 ಅಂಕಗಳೊಂದಿಗೆ ಚೆನ್ನೈ ಸೂಪರ್ ಕಿಂಗ್ಸ್ ಮೊದಲ ಮತ್ತು ಹಾಲಿ ಚಾಂಪಿಯನ್ ಗುಜರಾತ್ ಎರಡನೇ ಸ್ಥಾನದಲ್ಲಿದೆ. ಎರಡೂ ತಂಡಗಳು 7 ಪಂದ್ಯಗಳನ್ನಾಡಿದ್ದು 5 ಗೆಲುವು ಮತ್ತು ಎರಡು ಸೋಲು ಕಂಡಿದೆ. ಚೆನ್ನೈ (+0.662), ಗುಜರಾತ್ ತಂಡಕ್ಕಿಂತಲೂ (0.580) ಉತ್ತಮ ರನ್‌ರೇಟ್ ಹೊಂದಿದೆ.
ಕೆಕೆಆರ್, ಎಸ್‌ಆರ್‌ಎಚ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು 7 ಪಂದ್ಯಗಳಲ್ಲಿ ಕೇವಲ ಎರಡು ಗೆಲುವು ಕಂಡಿದ್ದು, ಅಂಕಪಟ್ಟಿಯಲ್ಲಿ ಕ್ರಮವಾಗಿ ಎಂಟು, ಒಂಬತ್ತು ಮತ್ತು 10ನೇ ಸ್ಥಾನದಲ್ಲಿವೆ.
- ಚೆನ್ನೈ ಸೂಪರ್ ಕಿಂಗ್ಸ್
- ಅತಿಹೆಚ್ಚು ಮೊತ್ತ; 235/4 vs ಕೋಲ್ಕತ್ತಾ ನೈಟ್ ರೈಡರ್ಸ್
- ಅತಿಹೆಚ್ಚು ರನ್ ಗಳಿಸಿದ ಬ್ಯಾಟರ್| ಡೆವೋನ್ ಕಾನ್ವೆ; 314 ರನ್.
- ಅತಿಹೆಚ್ಚು ವಿಕೆಟ್ ಗಳಿಸಿದ ಬೌಲರ್| ತುಶಾರ್ ದೇಶಪಾಂಡೆ; 12 ವಿಕೆಟ್
- ಅತಿಹೆಚ್ಚು ಸಿಕ್ಸರ್ ಬಾರಿಸಿದ ಬ್ಯಾಟರ್| ಋತುರಾಜ್ ಗಾಯಕ್ವಾಡ್; 17
2. ಗುಜರಾತ್ ಟೈಟನ್ಸ್
- ಅತಿಹೆಚ್ಚು ಮೊತ್ತ; 207/6 vs ಮುಂಬೈ ಇಂಡಿಯನ್ಸ್
- ಅತಿಹೆಚ್ಚು ರನ್ ಗಳಿಸಿದ ಬ್ಯಾಟರ್| ಶುಭಮನ್ ಗಿಲ್; 284 ರನ್.
- ಅತಿಹೆಚ್ಚು ವಿಕೆಟ್ ಗಳಿಸಿದ ಬೌಲರ್| ರಶೀದ್ ಖಾನ್; 14 ವಿಕೆಟ್
- ಅತಿಹೆಚ್ಚು ಸಿಕ್ಸರ್ ಬಾರಿಸಿದ ಬ್ಯಾಟರ್| ಡೇವಿಡ್ ಮಿಲ್ಲರ್; 8
3. ರಾಜಸ್ಥಾನ ರಾಯಲ್ಸ್
- ಅತಿಹೆಚ್ಚು ಮೊತ್ತ; 203/5 vs ಸನ್‌ರೈಸರ್ಸ್ ಹೈದರಾಬಾದ್
- ಅತಿಹೆಚ್ಚು ರನ್ ಗಳಿಸಿದ ಬ್ಯಾಟರ್| ಜಾಸ್ ಬಟ್ಲರ್; 244 ರನ್.
- ಅತಿಹೆಚ್ಚು ವಿಕೆಟ್ ಗಳಿಸಿದ ಬೌಲರ್| ಯಜುವೇಂದ್ರ ಚಹಾಲ್; 12 ವಿಕೆಟ್
- ಅತಿಹೆಚ್ಚು ಸಿಕ್ಸರ್ ಬಾರಿಸಿದ ಬ್ಯಾಟರ್| ಶಿಮ್ರಾನ್ ಹೆಟ್ಮಯರ್; 15
ಈ ಸುದ್ದಿ ಓದಿದ್ದೀರಾ?: ಕುಸ್ತಿ ಪಟುಗಳ ಪ್ರತಿಭಟನೆ: ದೆಹಲಿ ಪೊಲೀಸರಿಗೆ ಸುಪ್ರೀಂ ನೋಟಿಸ್
4. ಲಕ್ನೋ ಸೂಪರ್ ಜಯಂಟ್ಸ್
- ಅತಿಹೆಚ್ಚು ಮೊತ್ತ; 213/9 vs ರಾಯಲ್ ಚಾಲೆಂಜರ್ಸ್ ಬೆಂಗಳೂರು
- ಅತಿಹೆಚ್ಚು ರನ್ ಗಳಿಸಿದ ಬ್ಯಾಟರ್| ಕೆ.ಎಲ್. ರಾಹುಲ್; 262 ರನ್.
- ಅತಿಹೆಚ್ಚು ವಿಕೆಟ್ ಗಳಿಸಿದ ಬೌಲರ್| ಮಾರ್ಕ್ ವುಡ್; 11 ವಿಕೆಟ್
- ಅತಿಹೆಚ್ಚು ಸಿಕ್ಸರ್ ಬಾರಿಸಿದ ಬ್ಯಾಟರ್| ಕೈಯ್ಲ್ ಮೇಯರ್ಸ್; 16
5. ರಾಯಲ್ ಚಾಲೆಂಜರ್ಸ್ ಬೆಂಗಳೂರು
- ಅತಿ ಹೆಚ್ಚು ಮೊತ್ತ; 218/8 vs ಚೆನ್ನೈ ಸೂಪರ್ ಕಿಂಗ್ಸ್
- ಅತಿಹೆಚ್ಚು ರನ್ ಗಳಿಸಿದ ಬ್ಯಾಟರ್| ಫಾಫ್ ಡುಪ್ಲೆಸ್ಸಿಸ್; 405 ರನ್.
- ಅತಿಹೆಚ್ಚು ವಿಕೆಟ್ ಗಳಿಸಿದ ಬೌಲರ್| ಮುಹಮ್ಮದ್ ಸಿರಾಜ್; 13 ವಿಕೆಟ್
- ಅತಿಹೆಚ್ಚು ಸಿಕ್ಸರ್ ಬಾರಿಸಿದ ಬ್ಯಾಟರ್| ಫಾಫ್ ಡುಪ್ಲೆಸ್ಸಿಸ್; 25