ಐಪಿಎಲ್‌ 2023 | 4 ವರ್ಷಗಳ ಬಳಿಕ ಅದ್ಧೂರಿ ಉದ್ಘಾಟನಾ ಸಮಾರಂಭ

Date:

Advertisements

4 ವರ್ಷಗಳ ಬಳಿಕ ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಶುಕ್ರವಾರ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣ ಸಾಕ್ಷಿಯಾಗಲಿದೆ.

ಬಹುನಿರೀಕ್ಷಿತ ಇಂಡಿಯನ್ ಪ್ರೀಮಿಯರ್ ಲೀಗ್, ಐಪಿಎಲ್‌ ಟೂರ್ನಿಯ 16ನೇ ಆವೃತ್ತಿಗೆ ಕ್ಷಣಗಣನೆ ಆರಂಭವಾಗಿದೆ. 10 ತಂಡಗಳ ನಡುವೆ ಸುಮಾರು ಎರಡು ತಿಂಗಳ ಕಾಲ ನಡೆಯಲಿರುವ ಟೂರ್ನಿಯಲ್ಲಿ ಒಟ್ಟು 74 ಪಂದ್ಯಗಳು ನಡೆಯಲಿವೆ.

4 ವರ್ಷಗಳ ಬಳಿಕ ಉದ್ಘಾಟನಾ ಸಮಾರಂಭ

Advertisements

2008ರಲ್ಲಿ ಆರಂಭವಾದ ಚುಟುಕು ಕ್ರಿಕೆಟ್‌ ಟೂರ್ನಿ ಐಪಿಎಲ್‌, ಪ್ರತಿ ವರ್ಷವೂ ಅದ್ಧೂರಿ ಉದ್ಘಾಟನಾ ಸಮಾರಂಭಕ್ಕೆ ಸಾಕ್ಷಿಯಾಗುತ್ತಿತ್ತು. ಆದರೆ ಕೋವಿಡ್‌ ಕಾರಣದಿಂದಾಗಿ ಐಪಿಎಲ್‌ನಲ್ಲಿ ಹಲವು ಮಾರ್ಪಾಟುಗಳನ್ನು ಮಾಡಲಾಗಿತ್ತು. ಜೊತೆಗೆ ಉದ್ಘಾಟನಾ ಸಮಾರಂಭ ಕೈಬಿಡಲಾಗಿತ್ತು. 4 ವರ್ಷಗಳ ಬಳಿಕ ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಶುಕ್ರವಾರ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣ ಸಾಕ್ಷಿಯಾಗಲಿದೆ.

ಸಂಜೆ 6 ಗಂಟೆಗೆ ಉದ್ಘಾಟನಾ ಸಮಾರಂಭ ಆರಂಭಗೊಳ್ಳಲಿದ್ದು, ಖ್ಯಾತ ಗಾಯಕ ಅರ್ಜಿತ್ ಸಿಂಗ್‌‌, ಬಾಲಿವುಡ್‌ ತಾರೆಯರಾದ ತಮನ್ಹಾ ಭಾಟಿಯಾ, ರಶ್ಮಿಕಾ ಮಂದಣ್ಣ ಸುಮಾರು ಒಂದು ಗಂಟೆಗಳ ಕಾಲ ಪ್ರದರ್ಶನ ನೀಡಲಿದ್ದು, ನೃತ್ಯದ ಮೂಲಕ ಎಲ್ಲರನ್ನು ರಂಜಿಸಲಿದ್ದಾರೆ. ಬಳಿಕ ಹಾಲಿ ಚಾಂಪಿಯನ್ಸ್‌ ಗುಜರಾತ್ ಟೈಟನ್ಸ್‌ ಮತ್ತು ಚೆನ್ನೈ ಸೂಪರ್‌ ಕಿಂಗ್ಸ್‌ ನಡುವೆ ಐಪಿಎಲ್ -2023ರ ಮೊದಲ ಹಣಾಹಣಿ ನಡೆಯಲಿದೆ.

ರೋಹಿತ್‌ ಶರ್ಮಾ ಗೈರು

ಐಪಿಎಲ್‌ ಟೂರ್ನಿಯ 16ನೇ ಆವೃತ್ತಿಯ ಆರಂಭಕ್ಕೂ ಮುನ್ನುಡಿಯಾಗಿ ಗುರುವಾರ ಐಪಿಎಲ್‌ ಟ್ರೋಫಿ ಜೊತೆ ತಂಡಗಳ ನಾಯಕರ ಫೋಟೋಶೂಟ್‌ ನಡೆಯಿತು. ಈ ವೇಳೆ ಮುಂಬೈ ಇಂಡಿಯನ್ಸ್‌ ತಂಡದ ನಾಯಕ ರೋಹಿತ್‌ ಶರ್ಮಾ ಹೊರತುಪಡಿಸಿ ಉಳಿದ 9 ತಂಡಗಳ ನಾಯಕರು ಭಾಗವಹಿಸಿದ್ದರು. ಅನಾರೋಗ್ಯದ ಕಾರಣ ಅಹಮದಾಬಾದ್‌ಗೆ ಪ್ರಯಾಣಿಸಲು ರೋಹಿತ್‌ ನಿರಾಕರಿಸಿದ್ದರು. ಸನ್‌ರೈಸರ್ಸ್‌ ತಂಡದ ನಾಯಕ ಏಡನ್ ಮಾರ್ಕ್ರಾಮ್ ಅನುಪಸ್ಥಿತಿಯಲ್ಲಿ, ಭುವನೇಶ್ವರ್ ಕುಮಾರ್ ಫೋಟೂಶೂಟ್‌ನಲ್ಲಿ ಭಾಗವಹಿಸಿದ್ದರು.

ಈ ಸುದ್ದಿ ಓದಿದ್ದೀರಾ?: ಪಾಕಿಸ್ತಾನ ವಿರುದ್ಧ ಚೊಚ್ಚಲ ಟಿ20 ಸರಣಿ ಗೆದ್ದ ಅಫ್ಘಾನಿಸ್ತಾನ

ಮೂಲ ಸ್ವರೂಪಕ್ಕೆ ಮರಳಿದ ಐಪಿಎಲ್‌

ಐಪಿಎಲ್‌ ಮತ್ತೆ ತನ್ನ ಹಳೆಯ ಮಾದರಿಗೆ ವಾಪಸಾಗಿದ್ದು, 2019ರ ಬಳಿಕ ಎಲ್ಲಾ ತಂಡಗಳು ತಮ್ಮ ತವರು ಮತ್ತು ಎದುರಾಳಿ ತಂಡಗಳ ಮೈದಾನದಲ್ಲಿ ತಲಾ 7 ಪಂದ್ಯಗಳನ್ನು ಆಡಲಿವೆ. 18 ಡಬಲ್ ಹೆಡರ್‌ ಸೇರಿದಂತೆ ಲೀಗ್ ಹಂತದಲ್ಲಿ ಒಟ್ಟು 70 ಪಂದ್ಯಗಳು ನಡೆಯಲಿವೆ. ಅಹಮದಾಬಾದ್‌, ಮೊಹಾಲಿ, ಲಕ್ನೋ, ಹೈದರಾಬಾದ್, ಬೆಂಗಳೂರು, ಚೆನ್ನೈ, ದೆಹಲಿ, ಕೋಲ್ಕತ್ತಾ, ಜೈಪುರ, ಮುಂಬೈ, ಗುವಾಹಟಿ ಹಾಗೂ ಧರ್ಮಶಾಲಾ ಮೈದಾನಗಳಲ್ಲಿ ಪಂದ್ಯಗಳು ನಡೆಯಲಿದೆ.

ರಾಜಸ್ಥಾನ ತಂಡವು ತನ್ನ ತವರಿನ ಪಂದ್ಯಗಳನ್ನು ಜೈಪುರ, ಗುವಾಹಟಿಯಲ್ಲಿ ಆಡಲಿದೆ. ಮತ್ತೊಂದೆಡೆ ಪಂಜಾಬ್ ಕಿಂಗ್ಸ್  ತವರಿನ 5 ಪಂದ್ಯಗಳನ್ನು ಮೊಹಾಲಿಯಲ್ಲಿ ಮತ್ತು ಉಳಿದ ಎರಡು ತವರು ಪಂದ್ಯಗಳನ್ನು ಧರ್ಮಶಾಲಾದಲ್ಲಿ ಆಡಲಿದೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮಹಿಳಾ ವಿಶ್ವಕಪ್‌, ಆಸೀಸ್‌ ಪ್ರವಾಸಕ್ಕೆ ಟೀಂ ಇಂಡಿಯಾ ತಂಡ ಪ್ರಕಟ

ಮುಂದಿನ ತಿಂಗಳು ಭಾರತ ಹಾಗೂ ಶ್ರೀಲಂಕಾದಲ್ಲಿ ನಡೆಯಲಿರುವ ಮಹಿಳೆಯರ ಏಕದಿನ ವಿಶ್ವಕಪ್‌ಗೆ...

ಏಷ್ಯಾಕಪ್​ಗೆ ಅಚ್ಚರಿಯ ಭಾರತ ತಂಡ ಪ್ರಕಟ; ಹಲವರಿಗೆ ಕೊಕ್‌, ಪ್ರಮುಖರ ಆಗಮನ

ಮಹತ್ವದ ಟಿ20 ಏಷ್ಯಾಕಪ್ ಟೂರ್ನಿಗೆ ಭಾರತ ತಂಡವನ್ನು ಪ್ರಕಟಿಸಲಾಗಿದೆ. 15 ಸದಸ್ಯರ...

ಏಷ್ಯನ್ ಚಾಂಪಿಯನ್‌ಶಿಪ್‌ | 10 ಮೀಟರ್ ಏರ್ ಪಿಸ್ತೂಲ್‌ನಲ್ಲಿ ಕಂಚು ಗೆದ್ದ ಮನು ಭಾಕರ್

ಕಝಾಕಿಸ್ತಾನದ ಶಿಮ್ಕೆಂಟ್‌ನಲ್ಲಿ ನಡೆದ ಏಷ್ಯನ್ ಶೂಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಮಹಿಳೆಯರ 10 ಮೀಟರ್...

ಬುಲಾ ಚೌಧರಿ ಪದ್ಮಶ್ರೀ ಪದಕ ಕಳವು: ‘ಎಲ್ಲವನ್ನೂ ಕಳೆದುಕೊಂಡೆ’ ಎಂದ ಈಜುಪಟು

ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯ ತಮ್ಮ ಪೂರ್ವಜರ ಮನೆಯಿಂದ ಪದ್ಮಶ್ರೀ ಪದಕ...

Download Eedina App Android / iOS

X