ಡೊನಾಲ್ಡ್ ಟ್ರಂಪ್ ವಿರುದ್ಧ ದೋಷಾರೋಪಣೆ | ನೀಲಿಚಿತ್ರ ತಾರೆ ಆರೋಪ ನಿರಾಕರಿಸಿದ ಅಮೆರಿಕದ ಮಾಜಿ ಅಧ್ಯಕ್ಷ

Date:

  • ಅತ್ಯುನ್ನತ ಮಟ್ಟದ ರಾಜಕೀಯ ಕಿರುಕುಳ ಎಂದ ಡೊನಾಲ್ಡ್‌ ಟ್ರಂಪ್
  • ಟ್ರಂಪ್ ಜತೆ ಸಂಬಂಧ ಹೊಂದಿದ್ದೆ ಎಂದು 2018ರಲ್ಲಿ ಸ್ಟಾರ್ಮಿ ಆರೋಪ

ಅಮೆರಿಕ ಅಧ್ಯಕ್ಷೀಯ ಚುನಾವಣೆ ಸಂದರ್ಭದಲ್ಲಿ ನೀಲಿಚಿತ್ರ ತಾರೆಗೆ ಹಣ ಸಂದಾಯ ಮಾಡಿದ ಆರೋಪದ ಮೇಲೆ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ಮ್ಯಾನ್ ಹ್ಯಾಟನ್ ಗ್ರ್ಯಾಂಡ್ ಜ್ಯೂರಿ ಗುರುವಾರ (ಮಾರ್ಚ್ 30) ದೋಷಾರೋಪಣೆ ಸಲ್ಲಿಸಿದೆ.

ತಮ್ಮ ಮೇಲಿನ ಮ್ಯಾನ್ ಹ್ಯಾಟನ್ ನ್ಯಾಯಾಲಯದ ಈ ದೋಷಾರೋಪಣೆಯನ್ನು ಟ್ರಂಪ್ ತಿರಸ್ಕರಿಸಿದ್ದಾರೆ. ಆದರೆ ದೋಷಾರೋಪಕ್ಕೆ ಕಾರಣವಾಗಿರುವ ಪಾರ್ನ್ ಸ್ಟಾರ್ ಸ್ಟಾರ್ಮಿ ಡ್ಯಾನಿಯಲ್ ನ್ಯಾಯಾಲಯದ ಈ ತೀರ್ಮಾನವನ್ನು ಸ್ವಾಗತಿಸಿದ್ದಾರೆ.

ಈ ಕುರಿತು ಶುಕ್ರವಾರ (ಮಾರ್ಚ್ 31) ನೀಲಿಚಿತ್ರ ತಾರೆ ಸ್ಟಾರ್ಮಿ ಟ್ವೀಟ್ ಮೂಲಕ ಪ್ರತಿಕ್ರಿಯಿಸಿದ್ದಾರೆ.
“ಈ ಹೋರಾಟದಲ್ಲಿ ಬೆಂಬಲಿಸಿದ ಮತ್ತು ಪ್ರೀತಿ ನೀಡಿದ ಎಲ್ಲರಿಗೂ ಧನ್ಯವಾದ ಸಲ್ಲಿಸುತ್ತೇನೆ. ನಾನು ಪ್ರತಿಕ್ರಿಯಿಸಲು ಸಾಧ್ಯವಾಗದಷ್ಟು ಸಂದೇಶಗಳು ಬರುತ್ತಿವೆ. ಅಲ್ಲದೆ, ಆ ಬಗ್ಗೆ ಮಾತನಾಡಲು ನನಗೆ ಇಷ್ಟವಿಲ್ಲ” ಎಂದು ಟ್ವೀಟ್‌ನಲ್ಲಿ ಅವರು ಬರೆದುಕೊಂಡಿದ್ದಾರೆ.

“ಅಂತಿಮವಾಗಿ ಸತ್ಯಕ್ಕೆ ಜಯ ದೊರೆತಿದೆ. ಟ್ರಂಪ್ ನನ್ನೊಂದಿಗೆ ವ್ಯವಹರಿಸಿದ ರೀತಿ ಹೇಗೆಂಬುದು ಎಲ್ಲ ಅಮೆರಿಕನ್ನರಿಗೆ ತಿಳಿದಿದೆ. ಆದರೆ ನ್ಯಾಯಾಲಯದಲ್ಲಿ ಹೋರಾಟಕ್ಕೆ ಜಯ ದೊರೆತಿರುವುದು ನನಗೆ ಅತೀವ ಸಂತಸ ತಂದಿದೆ” ಎಂದು ಸ್ಟಾರ್ಮಿ ಡೇನಿಯಲ್ಸ್ ಭಾವುಕರಾಗಿ ನುಡಿದಿದ್ದಾರೆ.

“ಸಂತೋಷಕ್ಕೆ ಯಾವುದೇ ಕಾರಣವಿಲ್ಲ, ಆದರೆ ನ್ಯಾಯಾಲಯದ ಗ್ರ್ಯಾಂಡ್ ಜ್ಯೂರಿಗಳ ಕಠಿಣ ಪರಿಶ್ರಮ ಮತ್ತು ಆತ್ಮಸಾಕ್ಷಿಯನ್ನು ಗೌರವಿಸಬೇಕು. ಈಗ ಸತ್ಯ ಮತ್ತು ನ್ಯಾಯಕ್ಕೆ ಜಯವಾಗಲಿ. ಯಾರೂ ಕಾನೂನಿಗಿಂತ ದೊಡ್ಡವರಲ್ಲ” ಎಂದು ಸ್ಟಾರ್ಮಿ ಪರ ವಕೀಲ ಕ್ಲಾರ್ಕ್ ಬ್ರೀವ್‌ಸ್ಟರ್‌ ಹೇಳಿದ್ದಾರೆ.

ವಕೀಲ ಕ್ಲಾರ್ಕ್ ಅವರ ಟ್ವೀಟ್ ಅನ್ನು ರೀಟ್ವೀಟ್ ಮಾಡಿರುವ ಸ್ಟಾರ್ಮಿ ಡ್ಯಾನಿಯಲ್ಸ್, ವಕೀಲರಿಗೆ ಧನ್ಯವಾದ ಹೇಳಿದ್ದಾರೆ.

ಆರೋಪ ನಿರಾಕರಿಸಿದ ಟ್ರಂಪ್

ಆದರೆ, ತಮ್ಮ ವಿರುದ್ಧದ ಎಲ್ಲ ಆರೋಪಗಳನ್ನು ಡೊನಾಲ್ಡ್ ಟ್ರಂಪ್ ನಿರಾಕರಿಸಿದ್ದಾರೆ. “ಇದು ಅಮೆರಿಕದ ಇತಿಹಾಸದಲ್ಲಿ ಕಂಡು ಕೇಳರಿಯದ ಅತ್ಯುನ್ನತ ಮಟ್ಟದ ರಾಜಕೀಯ ಕಿರುಕುಳ. ಇದು ಚುನಾವಣಾ ಹಸ್ತಕ್ಷೇಪ” ಎಂದು ಕಿಡಿಕಾರಿದ್ದಾರೆ.

“ನಾನು ಅಮೆರಿಕದ ಅಧ್ಯಕ್ಷನಾಗಿ ಪ್ರಮಾಣವಚನ ಸ್ವೀಕರಿಸುವ ಮೊದಲೇ, ಈ ದೇಶದ ಕಠಿಣಪರಿಶ್ರಮಿ ಪುರುಷರು ಮತ್ತು ಮಹಿಳೆಯರ ಶತ್ರುವಾದ ಮೂಲಭೂತ ಎಡ ಪ್ರಜಾಪ್ರಭುತ್ವವಾದಿಗಳು ಆರೋಪ ಹೊರಿಸಲು ಆರಂಭಿಸಿದ್ದರು” ಎಂದು ಟ್ರಂಪ್ ತಮ್ಮ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದ್ದಾರೆ.

‘ದಿ ಅಪ್ರೆಂಟಿಸ್’ ನೀಲಿಚಿತ್ರ ತಾರೆ ಸ್ಟಾರ್ಮಿ ಡೇನಿಯಲ್ಸ್ 2018ರಲ್ಲಿ ಪ್ರಕಟಿಸಿದ ಟೆಲ್-ಆಲ್ ಪುಸ್ತಕದಲ್ಲಿ, ಪೆಂಟ್‌ಹೌಸ್‌ನಲ್ಲಿ ರಾತ್ರಿ ಔತಣ ಮಾಡಿದ್ದಾಗಿ ಮತ್ತು ಟ್ರಂಪ್ ಜೊತೆಗೆ ಲೈಂಗಿಕ ಸಂಬಂಧ ಬೆಳೆಸಿದ್ದಾಗಿ ಸ್ಟಾರ್ಮಿ ಡೇನಿಯಲ್ಸ್ ಪರೋಕ್ಷವಾಗಿ ಉಲ್ಲೇಖಿಸಿದ್ದರು.

ಆದರೆ ತಾವು ಸ್ಟಾರ್ಮಿ ಡೇನಿಯಲ್ಸ್ ಅವರೊಂದಿಗೆ ಲೈಂಗಿಕ ಸಂಬಂಧ ಬೆಳೆಸಿಲ್ಲ ಎಂದು ಟ್ರಂಪ್ ವಾದಿಸಿದ್ದರು. “ಸ್ಟಾರ್ಮಿ ಸುಲಿಗೆ ಮತ್ತು ಹಣ ದೋಚುವ ಮೋಸದ ಕೆಲಸದಲ್ಲಿ ನಿರತಳಾಗಿದ್ದಾಳೆ” ಎಂದು ಆರೋಪಿಸಿದ್ದಾರೆ.

ಆದರೆ ಟ್ರಂಪ್ ಅವರ ವೈಯಕ್ತಿಕ ವಕೀಲ ಮೈಕೆಲ್ ಕೋಹೆನ್ ಅವರು, 2006ರಲ್ಲಿ ನಡೆದ ಈ ಘಟನೆಯ ಬಗ್ಗೆ ಮಾತನಾಡದಂತೆ ಸ್ಟಾರ್ಮಿಗೆ 1 ಲಕ್ಷ ಮೂವತ್ತು ಸಾವಿರ ಅಮೆರಿಕನ್ ಡಾಲರ್ ಹಣ ಪಾವತಿ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ. ಈ ಪಾವತಿ ಮಾಹಿತಿಯನ್ನು 2018ರ ಜನವರಿಯಲ್ಲಿ ‘ದಿ ವಾಲ್ ಸ್ಟ್ರೀಟ್ ಜರ್ನಲ್’ ಪ್ರಕಟಿಸಿದ ವರದಿಯಲ್ಲಿ ಬಹಿರಂಗವಾಗಿದೆ. ಅಲ್ಲದೇ ಟ್ರಂಪ್ ವಿರುದ್ಧ ಮಾಡಿರುವ ದೋಷಾರೋಪಣೆ ಆರೋಪಗಳಿಗೆ ಇದು ಪ್ರಮುಖ ಆಧಾರವಾಗಿದೆ.

“2006ರ ಬೇಸಿಗೆಯಲ್ಲಿ ನಾವಿಬ್ಬರೂ ಲೈಂಗಿಕ ಸಂಬಂಧ ಹೊಂದಿದ್ದೆವು” ಎಂದು 2018ರಲ್ಲಿ ಸ್ಟಾರ್ಮಿ ಆರೋಪಿಸಿದ್ದರು. ಆ ನಂತರ ಡೊನಾಲ್ಡ್ ಟ್ರಂಪ್ ಅವರು, ಅವರ ಬೆಂಬಲಿಗರು ಸಾಮಾಜಿಕ ಮಾಧ್ಯಮಗಳಲ್ಲಿ ಸ್ಟಾರ್ಮಿ ಅವರನ್ನು ತೀವ್ರವಾಗಿ ಅವಮಾನಿಸಿದ್ದರು.

ಈ ಸುದ್ದಿ ಓದಿದ್ದೀರಾ? ಟಿಕ್‌ಟಾಕ್‌ ಮೂಲಕ ಚೀನಾ ಬೇಹುಗಾರಿಕೆ ಸಾಧ್ಯತೆ; ಅಮೆರಿಕ ಕಳವಳ

ಪ್ರಕರಣದ ವಿಚಾರಣೆ ನಡೆಸುತ್ತಿರುವ ಮ್ಯಾನ್‌ಹಾಟನ್ ಜಿಲ್ಲಾ ಅಟಾರ್ನಿ ಆಲ್ವಿನ್ ಬ್ರಾಗ್ ಅವರ ಕಚೇರಿಯು ಗುರುವಾರ ಸಂಜೆ ಟ್ರಂಪ್ ಅವರ ವಕೀಲರನ್ನು ಸಂಪರ್ಕಿಸಿ, ಡೊನಾಲ್ಡ್ ಟ್ರಂಪ್ ಶರಣಾಗತಿಗೆ ಸಹಕರಿಸುವಂತೆ ಸೂಚಿಸಿದ್ದಾರೆ ಎಂದು ವರದಿಯಾಗಿದೆ.

2016ರ ಅಧ್ಯಕ್ಷೀಯ ಚುನಾವಣೆಯ ಪ್ರಚಾರದ ಸಂದರ್ಭದಲ್ಲಿ ತಮ್ಮ ಜತೆಗಿನ ಸಂಬಂಧ ಬಹಿರಂಗಪಡಿಸದಿರಲು ನೀಲಿಚಿತ್ರ ತಾರೆಗೆ ಟ್ರಂಪ್ ಹಣ ಸಂದಾಯ ಮಾಡಿದ್ದ ಪ್ರಕರಣ ಇದಾಗಿದೆ. ಆ ಮೂಲಕ ಅಪರಾಧದ ಆರೋಪ ಹೊತ್ತ ಅಮೆರಿಕದ ಮೊದಲ ಮಾಜಿ ಅಧ್ಯಕ್ಷ ಎಂಬ ಅಪಖ್ಯಾತಿಗೆ ಟ್ರಂಪ್ ಒಳಗಾಗಿದ್ದಾರೆ. ಅಲ್ಲದೆ, ಬಂಧನಕ್ಕೆ ಒಳಗಾಗುವ ಸಾಧ್ಯತೆಯೂ ಇದೆ.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕದನ ವಿರಾಮಕ್ಕಾಗಿ ಇಸ್ರೇಲ್ ಜೊತೆ ಮಾತುಕತೆಗೆ ಹತ್ತಿರವಾಗುತ್ತಿದ್ದೇವೆ: ಹಮಾಸ್

ಇಸ್ರೇಲ್‌ ಹಾಗೂ ಹಮಾಸ್ ನಡುವೆ ಕಳೆದ ಅಕ್ಟೋಬರ್ 7ರಿಂದ ನಡೆಯುತ್ತಿರುವ ಸಂಘರ್ಷವು...

ವಿಶ್ವ ಶೌಚಾಲಯ ದಿನದಂದು ಒಳಚರಂಡಿಗೆ ಇಳಿದ ಬಿಲ್ ಗೇಟ್ಸ್

ನವೆಂಬರ್‌ 19ರ ವಿಶ್ವ ಶೌಚಾಲಯ ದಿನದ ಅಂಗವಾಗಿ ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್‌...

ವಿಶ್ವಕಪ್ ಫೈನಲ್‌ಗೂ ತಟ್ಟಿದ ಪ್ಯಾಲೆಸ್ತೀನ್ ಪರ ಹೋರಾಟ: ಮೈದಾನಕ್ಕೆ ನುಗ್ಗಿ ಕೊಹ್ಲಿಯನ್ನು ತಬ್ಬಿಕೊಂಡ ಯುವಕ

ಇಸ್ರೇಲ್ ಹಾಗೂ ಪ್ಯಾಲೆಸ್ತೀನ್‌ ನಡುವೆ ನಡೆಯುತ್ತಿರುವ ಸಂಘರ್ಷದ ಬಿಸಿ ಗುಜರಾತಿನ ಅಹ್ಮದಾಬಾದ್‌ನ...

ಮಿಸ್ ಯೂನಿವರ್ಸ್ ಆಗಿ ಆಯ್ಕೆಯಾದ ಶೆನ್ನಿಸ್ ಪಲಾಸಿಯೋಸ್

ನಿಕರಾಗುವಾ ದೇಶದ ಶೆನ್ನಿಸ್ ಪಲಾಸಿಯೋಸ್ ಅವರು ಮಿಸ್ ಯೂನಿವರ್ಸ್ 2023 ಆಗಿ...