ಐಪಿಎಲ್ 2024ನೇ ಸಾಲಿನ 61ನೇ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ 5 ವಿಕೆಟ್ಗಳ ಸುಲಭ ಗೆಲುವುಗಳಿಸಿತು. ರಾಜಸ್ಥಾನ ನೀಡಿದ್ದ 142 ರನ್ಗಳ ಗುರಿಯನ್ನು ಬೆನ್ನಟ್ಟಿದ ಚೆನ್ನೈ18.2 ಓವರ್ಗಳಲ್ಲಿ ಗೆಲುವಿನ ದಡ ಸೇರಿತು.
ನಾಯಕ ರುತುರಾಜ್ ಗಾಯಕ್ವಾಡ್ 2 ಸಿಕ್ಸರ್ 1 ಬೌಂಡರಿಯೊಂದಿಗೆ ಅಜೇಯ 42, ರಚಿನ್ ರವೀಂದ್ರ 18 ಚೆಂಡುಗಳಲ್ಲಿ 2 ಸಿಕ್ಸರ್ ಹಾಗೂ ಒಂದು ಬೌಂಡರಿಯೊಂದಿಗೆ 27, ಡೇರಿಲ್ ಮಿಚಲ್ 22 ರನ್ ಗಳಿಸುವುದರ ಮೂಲಕ ಜಯದ ರೂವಾರಿಗಳಾದರು.
7ನೇ ಗೆಲುವಿನೊಂದಿಗೆ 14 ಅಂಕಗಳಿಸಿ ಚೆನ್ನೈ ತನ್ನ ಪ್ಲೇಆಫ್ ಕನಸನ್ನು ಮತ್ತಷ್ಟು ಗಟ್ಟಿ ಮಾಡಿಕೊಂಡಿದೆ. 16 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ 2ನೇ ಸ್ಥಾನದಲ್ಲಿರುವ ರಾಜಸ್ಥಾನ್ಗೆ ಪ್ಲೇಆಫ್ ಸ್ಥಾನವೇರಲು ಇನ್ನು ಎರಡು ಪಂದ್ಯಗಳು ಬಾಕಿಯಿವೆ.
ಈ ಸುದ್ದಿ ಓದಿದ್ದೀರಾ? ಕೆ ಎಲ್ ರಾಹುಲ್ ನಾಯಕನ ಹುದ್ದೆ ತೊರೆಯುವ ಸಾಧ್ಯತೆ: ಮುಂದಿನ ವರ್ಷ ತಂಡಕ್ಕೆ ಸೇರ್ಪಡೆ ಅಸಂಭವ
ಚೆನ್ನೈ ಜಯದೊಂದಿಗೆ ಆರ್ಸಿಬಿ ಪ್ಲೇಆಪ್ ಗುರಿ ಮತ್ತಷ್ಟು ಕ್ಷೀಣಗೊಂಡಿದೆ. 10 ಅಂಕಗಳಿಸಿರುವ ಆರ್ಸಿಬಿ ಉಳಿದ 2 ಪಂದ್ಯಗಳನ್ನು ಉತ್ತಮ ರನ್ರೇಟ್ನೊಂದಿಗೆ ಗೆದ್ದರೂ ಮೊದಲ ನಾಲ್ಕರ ಸ್ಥಾನ ಪಡೆಯಲು ಕಷ್ಟಸಾಧ್ಯವಿದೆ.
ಈಗಾಗಲೇ ಕೆಕೆಆರ್ ಪ್ಲೇಆಪ್ ಹಂತ ತಲುಪಿದ್ದು, ಉಳಿದ ಮೂರು ಸ್ಥಾನ ಪಡೆಯಲು ಆರ್ಆರ್, ಎಸ್ಆರ್ಹೆಚ್, ಸಿಎಸ್ಕೆ, ಡೆಲ್ಲಿ ಹಾಗೂ ಎಲ್ಎಸ್ಜಿ ತಂಡಗಳು ಪೈಪೋಟಿ ನಡೆಸಬೇಕಿದೆ.
ಚೆನ್ನೈನ ಎಂ ಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಟಾಸ್ ಗೆದ್ದ ರಾಜಸ್ಥಾನ ರಾಯಲ್ಸ್ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಸಿಮರ್ಜಿತ್ ಸಿಂಗ್(26/3) ಹಾಗೂ ತುಷಾರ್ ದೇಶ್ಪಾಂಡೆ(30/2) ಸೇರಿದಂತೆ ಚೆನ್ನೈ ಬೌಲರ್ಗಳ ಬೌಲಿಂಗ್ ದಾಳಿಗೆ ರಾಜಸ್ಥಾನ ಬ್ಯಾಟರ್ಗಳು ರನ್ ಗಳಿಸಲು ಪರದಾಡಿದರು.
ರಿಯಾನ್ ಪರಾಗ್ ಅಜೇಯ 47, ಧ್ರವ್ ಜುರೆಲ್ 28, ಯಶಸ್ವಿ ಜೈಸ್ವಾಲ್ 24, ಜಾಸ್ ಬಟ್ಲರ್ 21 ಹಾಗೂ ನಾಯಕ ಸಂಜು ಸ್ಯಾಮ್ಸನ್ 15 ರನ್ ಗಳಿಸಿದ ಪರಿಣಾಮ ರಾಜಸ್ಥಾನ ರಾಯಲ್ಸ್ ತಂಡ 20 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 141 ರನ್ ಕಲೆ ಹಾಕಿತು.
ರವೀಂದ್ರ ಜಡೇಜಾ ವಿವಾದಾತ್ಮಕ ಔಟ್
16ನೇ ಓವರ್ನಲ್ಲಿ ಆವೇಶ್ ಖಾನ್ ಬೌಲಿಂಗ್ ಐದನೇ ಚಂಡು ಬೌಲ್ ಮಾಡಿದಾಗ ಬ್ಯಾಟ್ ಮಾಡುತ್ತಿದ್ದ ನಾಯಕ ರುತುರಾಜ್ ಗಾಯಕ್ವಾಡ್ ಬ್ಯಾಟ್ ಬೀಸಿದಾಗ ಚೆಂಡು ವಿಕೇಟ್ ಕೀಪರ್ ಆರ್ಆರ್ನ ನಾಯಕ ಸಂಜು ಸ್ಯಾಮ್ಸ್ನ್ ಕೈಗೆ ಸಿಕ್ಕಿತು.ಅಷ್ಟರಲ್ಲಾಗಲೇ ಎದುರು ಕ್ರೀಸ್ನಲ್ಲಿ 5 ರನ್ ಗಳಿಸಿದ್ದ ಆಲ್ರೌಂಡರ್ ರವೀಂದ್ರ ಜಡೇಜಾ ಒಂದಷ್ಟು ದೂರ ಓಡಿ ವಾಪಸ್ ಕ್ರೀಸ್ಗೆ ಬರುವಾಗ ಸಂಜು ಸ್ಯಾಮ್ಸ್ನ್ ರನ್ ಔಟ್ ಮಾಡಲು ಚೆಂಡು ಎಸೆದರು.
ಆದರೆ ಬಾಲ್ ರವೀಂದ್ರ ಜಡೇಜಾ ಬೆನ್ನಿಗೆ ಬಡಿಯಿತು. ಅದಲ್ಲದೆ ಜಡೇಜಾ ವಿಕೆಟ್ಗೆ ಅಡ್ಡವಾಗಿದ್ದರಿಂದ ‘ಕ್ಷೇತ್ರ ರಕ್ಷಣೆಗೆ ಅಡ್ಡಿ’ ಪಡಿಸಿದ ನಿಯಮದ ಮೇಲೆ ಆರ್ಆರ್ ತಂಡ ಔಟ್ಗೆ ಮನವಿ ಸಲ್ಲಿಸಿದರು. ಅಂಪೈರ್ ಕೂಡ ಔಟ್ ನೀಡಿದರು.
ಐಪಿಎಲ್ನಲ್ಲಿ ಕ್ಷೇತ್ರ ರಕ್ಷಣೆಗೆ ಅಡ್ಡಿ ಪಡಿಸಿ ಔಟಾದ ಮೂರನೇ ಬ್ಯಾಟರ್ ರವೀಂದ್ರ ಜಡೇಜಾ ಹೆಸರಿಗೆ ಸೇರ್ಪಡೆಯಾಯಿತು. ಈ ಮೊದಲು 2013ರಲ್ಲಿ ಕೆಕೆಆರ್ ಪರವಾಗಿ ಆಡಿದ್ದ ಯೂಸಫ್ ಪಠಾಣ್ ಪುಣೆ ತಂಡದ ಎದುರು ಹಾಗೂ ಡಿಲ್ಲಿಗಾಗಿ ಆಡಿದ್ದ ಅಮಿತ್ ಮಿಶ್ರಾ 2019ರಲ್ಲಿ ಹೈದರಾಬಾದ್ ತಂಡದ ಎದುರು ‘ಕ್ಷೇತ್ರ ರಕ್ಷಣೆಗೆ ಅಡ್ಡಿ’ ತೀರ್ಪಿನಲ್ಲಿ ಔಟಾಗಿದ್ದರು.
