ಐಪಿಎಲ್ 2025 | ಇಂದು ಆರ್‌ಆರ್‌ – ಕೆಕೆಆರ್, ಪಂಜಾಬ್ – ಲಖನೌ; 3 ತಂಡಗಳಿಗೆ ಮಹತ್ವದ ಪಂದ್ಯ

Date:

Advertisements

ಇಂದು ಐಪಿಎಲ್‌ 18ನೇ ಆವೃತ್ತಿಯಲ್ಲಿ ರಾಜಸ್ಥಾನ ರಾಯಲ್ಸ್‌ – ಕೋಲ್ಕತ್ತಾ ನೈಟ್‌ ರೈಡರ್ಸ್‌ ನಡುವೆ 53ನೇ ಪಂದ್ಯ ಹಾಗೂ ಧರ್ಮಶಾಲದಲ್ಲಿ 54ನೇ ಪಂದ್ಯ ಪಂಜಾಬ್‌ ಕಿಂಗ್ಸ್‌ – ಲಖನೌ ಸೂಪರ್‌ ಜೈಂಟ್ಸ್‌ ತಂಡದ ನಡುವೆ ನಡೆಯಲಿವೆ. ಈ ಎರಡು ಪಂದ್ಯಗಳಲ್ಲಿ ಕೆಕೆಆರ್‌ಗೆ ಪ್ರಮುಖ ಪಂದ್ಯವಾಗಿದ್ದರೆ, ಪಂಜಾಬ್‌ ಹಾಗೂ ಲಖನೌ ಮಹತ್ವದ ಪಂದ್ಯವಾಗಿದೆ.

ರಾಜಸ್ಥಾನ ರಾಯಲ್ಸ್‌ – ಕೋಲ್ಕತ್ತಾ ನೈಟ್‌ ರೈಡರ್ಸ್‌ ಪಂದ್ಯವು ಈಡನ್ ಗಾರ್ಡನ್ಸ್‌ನಲ್ಲಿ ಮಧ್ಯಾಹ್ನ 3.30 ರಿಂದ ಆರಂಭವಾಗಲಿದೆ. ಪ್ಲೇಆಫ್ ಓಟದಲ್ಲಿ ಉಳಿಯಲು ಕೆಕೆಆರ್‌ಗೆ ಈ ಪಂದ್ಯ ಬಹಳ ಮುಖ್ಯವಾಗಿದೆ. ಈ ಪಂದ್ಯದಲ್ಲಿ ಸೋತರೆ, ಐಪಿಎಲ್ 2025 ರ ಪ್ಲೇಆಫ್‌ನಿಂದ ಹೊರಬಿದ್ದ ಮೂರನೇ ತಂಡವಾಗಲಿದೆ.

ಐಪಿಎಲ್ 2025 ರಲ್ಲಿ ಇಲ್ಲಿಯವರೆಗೆ ರಾಜಸ್ಥಾನ ರಾಯಲ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಪ್ಲೇಆಫ್‌ನಿಂದ ಹೊರಬಿದ್ದಿವೆ. ಆದ್ದರಿಂದ, ಈ ಪಂದ್ಯವು ರಾಜಸ್ಥಾನಕ್ಕೆ ತಂಡದ ಸ್ಥಿತಿಯನ್ನು ಸುಧಾರಿಸಬಹುದು. ಜೊತೆಗೆ ಎದುರಾಳಿ ತಂಡವನ್ನು ಪ್ಲೇಆಫ್ ರೇಸ್‌ನಿಂದ ಹೊರಗಿಡಬಹುದು. ರಾಜಸ್ಥಾನ ತಂಡ 11 ಪಂದ್ಯಗಳಿಂದ 6 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ 8ನೇ ಸ್ಥಾನದಲ್ಲಿದೆ. ಕೋಲ್ಕತ್ತಾ ತಂಡ 10 ಪಂದ್ಯಗಳಿಂದ 9 ಅಂಕಗಳೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದೆ.

Advertisements

ಐಪಿಎಲ್ ಇತಿಹಾಸದಲ್ಲಿ ರಾಜಸ್ಥಾನ ರಾಯಲ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ನಡುವೆ ಹಲವು ರೋಚಕ ಪಂದ್ಯಗಳು ನಡೆದಿವೆ. ಇದುವರೆಗೆ ಉಭಯ ತಂಡಗಳ ನಡುವೆ 31 ಪಂದ್ಯಗಳು ನಡೆದಿದೆ. ಕೋಲ್ಕತ್ತಾ 15 ಪಂದ್ಯಗಳನ್ನು ಗೆದ್ದರೆ, ರಾಜಸ್ಥಾನ 14 ರಲ್ಲಿ ಜಯ ಸಾಧಸಿದೆ. ಎರಡು ಪಂದ್ಯಗಳು ಫಲಿತಾಂಶ ಕಂಡಿಲ್ಲ. ಈ ಅಂಕಿಅಂಶಗಳನ್ನು ನೋಡಿದರೆ, ಎರಡೂ ತಂಡಗಳು ಸಮಾನ ಬಲವನ್ನು ಹೊಂದಿವೆ.

ಜೈಪುರದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ 100 ರನ್‌ಗಳಿಂದ ಸೋತ ನಂತರ ರಾಜಸ್ಥಾನ ರಾಯಲ್ಸ್ ತಂಡ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಫಾರ್ಮ್ ಸಮಸ್ಯೆ ಎದುರಿಸುತ್ತಿದೆ. ಇದರ ಹೊರತಾಗಿಯೂ, ರಾಜಸ್ಥಾನ ತಂಡದಲ್ಲಿ 14 ವರ್ಷದ ವೈಭವ್ ಸೂರ್ಯವಂಶಿ ಮತ್ತು ಯಶಸ್ವಿ ಜೈಸ್ವಾಲ್ ಬ್ಯಾಟಿಂಗ್‌ನಲ್ಲಿ ತಂಡದ ಪರ ಅಬ್ಬರಿಸುತ್ತಿದ್ದಾರೆ. ಆದರೆ, ನಾಯಕ ರಿಯಾನ್ ಪರಾಗ್, ಧ್ರುವ್ ಜುರೆಲ್ ಮತ್ತು ಶಿಮ್ರಾನ್ ಹೆಟ್ಮೆಯರ್ ಅವರಂತಹ ಬ್ಯಾಟರ್ಸ್ ಉತ್ತಮ ಫಾರ್ಮ್‌ನಲ್ಲಿಲ್ಲ. ರಾಜಸ್ಥಾನ ಬೌಲಿಂಗ್‌ನಲ್ಲಿಯೂ ಹಲವು ಸಮಸ್ಯೆಗಳನ್ನು ಎದುರಿಸುತ್ತಿದೆ. ಜೋಫ್ರಾ ಆರ್ಚರ್ ಮತ್ತು ಮಹೇಶ್ ತೀಕ್ಷಣ ಅವರಂತಹ ಸ್ಟಾರ್ ಬೌಲರ್‌ಗಳು ದುಬಾರಿ ಆಗುತ್ತಿದ್ದಾರೆ.

ಐಪಿಎಲ್ 2025 ರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ ಇಲ್ಲಿಯವರೆಗೆ ನಿರೀಕ್ಷಿಸಿದಷ್ಟು ಯಶಸ್ಸು ದೊರಕಿಲ್ಲ. ಏಕೆಂದರೆ ಕೋಲ್ಕತ್ತಾ ತಂಡ ತವರು ನೆಲದಲ್ಲಿ ಸೋಲುಗಳನ್ನು ಎದುರಿಸಿದೆ. ಈಡನ್ ಗಾರ್ಡನ್‌ನಲ್ಲಿ ಆಡಿರುವ ಐದು ಪಂದ್ಯಗಳಲ್ಲಿ ಅವರು ಗೆದ್ದಿರುವುದು ಒಂದೇ ಪಂದ್ಯ. ಕೆಕೆಆರ್ ಬ್ಯಾಟರ್‌ಗಳು ರನ್ ಗಳಿಸುವಲ್ಲಿ ಎಡುವುತ್ತಿದ್ದಾರೆ. ರಿಂಕು ಸಿಂಗ್ ಮತ್ತು ವೆಂಕಟೇಶ್ ಅಯ್ಯರ್ ಅವರಿಂದಲ್ಲೂ ಉತ್ತಮ ಪ್ರದರ್ಶನ ಬಂದಿಲ್ಲ.

ಈ ಸುದ್ದಿ ಓದಿದ್ದೀರಾ? 2026ರ ಏಷ್ಯನ್ ಕ್ರೀಡಾಕೂಟದಲ್ಲಿ ಕ್ರಿಕೆಟ್‌ಗೆ ಸ್ಥಾನ; ಒಲಿಂಪಿಕ್ ಕೌನ್ಸಿಲ್ ಆಫ್ ಏಷ್ಯಾ ಒಪ್ಪಿಗೆ

ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ 14 ರನ್‌ಗಳ ಗೆಲುವು ಕೋಲ್ಕತ್ತಾ ತಂಡಕ್ಕೆ ಪ್ಲೇಆಫ್ ಆಸೆಯನ್ನು ಇನ್ನೂ ಜೀವಂತವಾಗಿರಿಸಿದೆ. ಈ ಪಂದ್ಯದಲ್ಲಿ ಕೈಗೆ ಗಾಯ ಮಾಡಿಕೊಂಡಿದ್ದ ನಾಯಕ ಅಜಿಂಕ್ಯ ರಹಾನೆ ಕೂಡ ಚೇತರಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ಭಾನುವಾರದ ಪಂದ್ಯಕ್ಕೆ ಅವರು ಫಿಟ್ ಆಗುವ ನಿರೀಕ್ಷೆಯಿದೆ. ಬೌಲಿಂಗ್‌ನಲ್ಲಿ ಸ್ವಲ್ಪ ಸಮಾಧಾನ ಕಂಡುಬಂದಿದೆ. ಡೆಲ್ಲಿ ವಿರುದ್ಧ ಅದ್ಭುತ ಆಲ್‌ರೌಂಡ್ ಪ್ರದರ್ಶನ ನೀಡಿದ ಸುನಿಲ್ ನರೈನ್ ಮತ್ತು ವರುಣ್ ಚಕ್ರವರ್ತಿ ಅವರ ಸ್ಪಿನ್ ಜೋಡಿ ಅತ್ಯುತ್ತಮ ಪ್ರದರ್ಶನ ನೀಡಿದೆ. ಹರ್ಷತ್ ರಾಣಾ ಕೂಡ ಉತ್ತಮ ಲಯದಲ್ಲಿದ್ದಾರೆ.

ಉಭಯ ತಂಡಗಳ ಸಂಭಾವ್ಯ ಬಳಗ:

ಕೆಕೆಆರ್:
ಅಜಿಂಕ್ಯ ರಹಾನೆ (ನಾಯಕ), ರಹಮಾನುಲ್ಲಾ ಗುರ್ಬಾಜ್ (ವಿಕೆಟ್ ಕೀಪರ್), ಸುನಿಲ್ ನರೈನ್, ವೆಂಕಟೇಶ್ ಅಯ್ಯರ್, ರಿಂಕು ಸಿಂಗ್, ಆಂಡ್ರೆ ರಸೆಲ್, ಆಂಗ್‌ಕ್ರಿಶ್ ರಘುವಂಶಿ, ವೈಭವ್ ಅರೋರಾ, ಹರ್ಷಿತ್ ರಾಣಾ, ವರುಣ್ ಚಕ್ರವರ್ತಿ, ವರುಣ್ ಚಕ್ರವರ್ತಿ.

ಆರ್‌ಆರ್‌:
ಯಶಸ್ವಿ ಜೈಸ್ವಾಲ್, ಸಂಜು ಸ್ಯಾಮ್ಸನ್, ರಿಯಾನ್ ಪರಾಗ್ (ನಾಯಕ), ನಿತೀಶ್ ರಾಣಾ, ವನಿಂದು ಹಸರಂಗ, ಧ್ರುವ್ ಜುರೆಲ್ (ವಿಕೆಟ್ ಕೀಪರ್), ಶುಭಂ ದುಬೆ, ಶಿಮ್ರಾನ್ ಹೆಟ್ಮೆಯರ್, ಜೋಫ್ರಾ ಆರ್ಚರ್, ಮಹೇಶ್ ತೀಕ್ಷಣ, ತುಷಾರ್ ದೇಶಪಾಂಡೆ, ಕುನಾಲ್ ಸಿಂಗ್ ರಾಥೋರ್, ಕೆ. ಫಜಲ್ಹಕ್ ಫಾರೂಕಿ, ಯುದ್ವೀರ್ ಸಿಂಗ್ ಚರಕ್, ಅಶೋಕ್ ಶರ್ಮಾ, ವೈಭವ್ ಸೂರ್ಯವಂಶಿ.

ಪಂದ್ಯ ಆರಂಭ: 3 ಗಂಟೆಗೆ

ಪಂಜಾಬ್ – ಲಖನೌ ಪಂದ್ಯದಲ್ಲಿ ಗೆಲ್ಲುವವರು ಯಾರು?

ಎರಡನೇ ಪಂದ್ಯದಲ್ಲಿ ಪಂಜಾಬ್‌ ಕಿಂಗ್ಸ್ ಹಾಗೂ ಲಖನೌ ಸೂಪರ್ ಜೈಂಟ್ಸ್ ತಂಡಗಳು ಸ್ಪರ್ಧೆ ನಡೆಸಲಿವೆ. ಈ ಪಂದ್ಯದಲ್ಲಿ ಗೆಲುವು ದಾಖಲಿಸಿ ಪ್ಲೇ ಆಫ್‌ಗೆ ಹತ್ತಿರವಾಗಲು ಪಂಜಾಬ್‌ ಯೋಜಿಸಿಕೊಂಡಿದ್ದರೆ, ಲಖನೌ ಈ ಪಂದ್ಯದಲ್ಲಿ ಜಯ ಸಾಧಿಸಿ ಮುಂದಿನ ಹಂತದ ಆಸೆಯನ್ನು ಜೀವಂತವಾಗಿರಿಸಿಕೊಳ್ಳುವ ಇರಾದೆಯನ್ನು ಹೊಂದಿದೆ. ಉಭಯ ತಂಡಗಳಲ್ಲೂ ಸ್ಟಾರ್ ಆಟಗಾರರು ಇದ್ದು ರೋಚಕತೆ ಹೆಚ್ಚಿಸಿದೆ. ಪಂಜಾಬ್‌ ಕಿಂಗ್ಸ್ ಅಂಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನವನ್ನು ಹೊಂದಿದೆ. ಆಡಿದ 10 ಪಂದ್ಯಗಳಲ್ಲಿ 6 ಜಯ ಸಾಧಿಸಿದ್ದು, 13 ಅಂಕ ಕಲೆ ಹಾಕಿದೆ. ಇನ್ನು ಲಖನೌ ತಂಡ 10 ಪಂದ್ಯಗಳಲ್ಲಿ 10 ಅಂಕ ಗಳಿಸಿದೆ. ಲಖನೌ ತಂಡಕ್ಕೆ ಪ್ಲೇ ಆಫ್‌ ಪ್ರವೇಶಿಸಲು ಈ ಪಂದ್ಯ ಮಹತ್ವದಾಗಿದೆ.

ಪಂಜಾಬ್‌ ಕಿಂಗ್ಸ್ ತಂಡಕ್ಕೆ ಯುವ ಆಟಗಾರರೇ ಆಸರೆಯಾಗಿದ್ದಾರೆ. ಪ್ರಿಯಾಂಶ್ ಆರ್ಯ ಈಗಾಗಲೇ ಟೂರ್ನಿಯಲ್ಲಿ ಶತಕ ಬಾರಿಸಿ ಅಬ್ಬರಿಸಿದ್ದಾರೆ. ಇನ್ನು ಪ್ರಭಸಿಮ್ರನ್‌ ಸಿಂಗ್‌ ಸಹ ಸ್ಥಿರವಾಗಿ ರನ್‌ಗಳನ್ನು ಕಲೆ ಹಾಕುತ್ತಿದ್ದು ಭರವಸೆ ಮೂಡಿಸಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ಶ್ರೇಯಸ್‌ ಅಯ್ಯರ್‌, ನೇಹಾಲ್‌ ವಧೇರಾ, ಶಶಾಂಕ್‌ ಸಿಂಗ್‌, ಜೋಶ್‌ ಇಂಗ್ಲಿಷ್‌, ತಮ್ಮ ಫಾರ್ಮ್‌ಗೆ ತಕ್ಕ ಆಟವನ್ನು ಆಡಿದರೆ ದೊಡ್ಡ ಮೊತ್ತ ದಾಖಲಿಸಬಹುದು. ಪಂಜಾಬ್‌ ತಂಡದ ವೇಗದ ಬೌಲರ್‌ ಅರ್ಷದೀಪ್ ಸಿಂಗ್ ಲಯದಲ್ಲಿದ್ದಾರೆ. ಇವರು ಎದುರಾಳಿ ಬ್ಯಾಟರ್‌ಗಳಿಗೆ ಪವರ್‌ ಪ್ಲೇನಲ್ಲಿ ಕಾಟ ನೀಡುವ ಕ್ಷಮತೆ ಹೊಂದಿದ್ದಾರೆ. ಮಾರ್ಕೋ ಜಾನ್ಸನ್‌ ಸಹ ತಮ್ಮ ಬಿಗುವಿನ ದಾಳಿಯ ಮೂಲಕ ಬ್ಯಾಟರ್‌ಗಳಿಗೆ ಕಾಡಬಲ್ಲರು. ಸ್ಪಿನ್ ಬೌಲರ್ ಯುಜುವೇಂದ್ರ ಚಹಾಲ್‌ ಲಯಕ್ಕೆ ಮರಳಿದ್ದಾರೆ. ಉಳಿದ ಬೌಲರ್‌ಗಳು ಇವರಿಗೆ ಉತ್ತಮ ಜೊತೆ ನಿಡಿದರೆ ಗೆಲುವು ಸುಲಭವಾಗುತ್ತದೆ.

ಲಖನೌ ಸೂಪರ್‌ ಜೈಂಟ್ಸ್ ತಂಡಕ್ಕೆ ಅನುಭವಿಗಳೇ ಅಸ್ತ್ರ. ಐಡೇನ್‌ ಮಾರ್ಕ್ರಾಮ್‌, ಮಿಚೆಲ್‌ ಮಾರ್ಷ್ ತಂಡಕ್ಕೆ ಭರ್ಜರಿ ಆರಂಭ ನೀಡಬಲ್ಲರು. ಇನ್ನು ಮಧ್ಯಮ ಕ್ರಮಾಂಕದ ಆಧಾರ ಸ್ಥಂಬ ನಿಕೋಲಸ್ ಪೂರನ್‌ ರನ್‌ವೇಗಕ್ಕೆ ಚುರುಕು ಮುಟ್ಟಿಸಬಲ್ಲ ಆಟಗಾರ. ಮಧ್ಯಮ ಓವರ್‌ಗಳಲ್ಲಿ ಆಯುಷ್‌ ಬದೋನಿ ಸಹ ಕಮಾಲ್ ಮಾಡಬಲ್ಲ ಆಟಗಾರ. ತಂಡದ ಉಳಿದ ಆಟಗಾರರು ಸ್ಥಿರ ಪ್ರದರ್ಶನದ ಮೇಲೆ ಒತ್ತು ನೀಡಿದರೆ ಎರಡು ಪೂರ್ಣ ಅಂಕ ಕಲೆ ಹಾಕಬಹುದು. ಇನ್ನು ರವಿ ಬಿಷ್ಣೋಯಿ ಹಾಗೂ ದಿಗ್ವೇಶ್ ರಾಠಿ ಸ್ಪಿನ್ ಜಾದು ನಡೆಸಬೇಕಿದೆ. ವೇಗದ ಬೌಲಿಂಗ್ ವಿಭಾಗದಲ್ಲಿ ಮಯಾಂಕ್ ಯಾದವ್, ಆವೇಶ್ ಖಾನ್‌, ಪ್ರಿನ್ಸ್‌ ಯಾದವ್ ಬಿಗುವಿನ ದಾಳಿ ನಡೆಸಿ ಎದುರಾಳಿಗಳಿಗೆ ಕಾಟ ನೀಡಬೇಕಿದೆ.

ಉಭಯ ತಂಡಗಳ ಸಂಭಾವ್ಯ ಆಟಗಾರರು

ಪಂಜಾಬ್‌: ಪ್ರಿಯಾಂಶ್ ಆರ್ಯ, ಪ್ರಭುಸಿಮ್ರಾನ್ ಸಿಂಗ್, ಶ್ರೇಯಸ್ ಅಯ್ಯರ್ (ನಾಯಕ), ಜೋಶ್ ಇಂಗ್ಲಿಸ್ (ವಿಕೆಟ್ ಕೀಪರ್), ನೆಹಾಲ್ ವಧೇರಾ, ಶಶಾಂಕ್ ಸಿಂಗ್, ಮಾರ್ಕೊ ಜಾನ್ಸೆನ್, ಅಜ್ಮತುಲ್ಲಾ ಒಮರ್ಜಾಯ್, ಸೂರ್ಯಾಂಶ್ ಶೆಡ್ಜ್, ಕ್ಸೇವಿಯರ್ ಬಾರ್ಟ್ಲೆಟ್, ಯುಜ್ವೇಂದ್ರ ಚಾಹಲ್

ಲಖನೌ: ಐಡೆನ್ ಮಾರ್ಕ್ರಾಮ್, ಮಿಚೆಲ್ ಮಾರ್ಷ್ , ನಿಕೋಲಸ್ ಪೂರನ್, ರಿಷಭ್ ಪಂತ್ (ನಾಯಕ ಮತ್ತು ವಿಕೆಟ್ ಕೀಪರ್), ಡೇವಿಡ್ ಮಿಲ್ಲರ್, ಅಬ್ದುಲ್ ಸಮದ್ , ಆಯುಷ್ ಬಡೋನಿ, ದಿಗ್ವೇಶ್ ಸಿಂಗ್ ರಾಠಿ, ರವಿ ಬಿಷ್ಣೋಯ್ , ಅವೇಶ್ ಖಾನ್ , ಪ್ರಿನ್ಸ್ ಯಾದವ್

ಪಂದ್ಯ ಆರಂಭ 7.30

ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ಮತ್ತು ಜಿಯೋ ಹಾಟ್‌ ಸ್ಟಾರ್

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತಾಂತ್ರಿಕ ಕಾರಣದಿಂದ ಯುವಕನಿಗೆ ಸಿಕ್ಕ ಆರ್‌ಸಿಬಿ ಆಟಗಾರನ ಸಿಮ್‌; ಕೊಹ್ಲಿ, ಎಬಿಡಿಯಿಂದ ನಿತ್ಯ ಕರೆ!

ಛತ್ತೀಸ್‌ಗಢದ ಯುವಕನೊಬ್ಬನಿಗೆ ತಾಂತ್ರಿಕ ದೋಷದಿಂದಾಗಿ ಆರ್‌ಸಿಬಿ ತಂಡದ ನಾಯಕ ರಜತ್ ಪಾಟೀದಾರ್‌ರ...

ಬಿಸಿಸಿಐ ಷರತ್ತಿನಿಂದ ವಿರಾಟ್‌, ರೋಹಿತ್‌ 2027ರ ಏಕದಿನ ವಿಶ್ವಕಪ್‌ ಕನಸು ಕಮರಿ ಹೋಗಲಿದೆಯೇ?

ಟೀಂ ಇಂಡಿಯಾದ ದಿಗ್ಗಜ ಆಟಗಾರರಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ...

ಊಹಾಪೋಹಗಳಿಗೆ ತೆರೆ: ಭಾರತ–ಪಾಕ್‌ ಏಷ್ಯಾಕಪ್‌ ಕ್ರಿಕೆಟ್‌ ಪಂದ್ಯ ರದ್ದಾಗುವುದಿಲ್ಲ

ಪಹಲ್ಗಾಮ್‌ ಉಗ್ರ ದಾಳಿಯ ನಂತರ ಭಾರತ–ಪಾಕಿಸ್ತಾನದ ನಡುವಿನ ಬಿಕ್ಕಟ್ಟು ಹೆಚ್ಚಾದ ಹಿನ್ನೆಲೆಯಲ್ಲಿ...

ಕೇರಳ ಭೇಟಿ ರದ್ದುಗೊಳಿಸಿದ ಮೆಸ್ಸಿ ನೇತೃತ್ವದ ಅರ್ಜೆಂಟೀನಾ ತಂಡ

ಲಿಯೊನೆಲ್ ಮೆಸ್ಸಿ ನೇತೃತ್ವದ ಫೀಫಾ ವಿಶ್ವಕಪ್ ವಿಜೇತ ಅರ್ಜೆಂಟೀನಾ ತಂಡವನ್ನು ಕೇರಳಕ್ಕೆ...

Download Eedina App Android / iOS

X