ಆರ್‌ಸಿಬಿ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ತಮ್ಮ ಅಮೋಘ ಆಟವನ್ನು ಮುಂದುವರೆಸಿದ್ದಾರೆ. ಐಪಿಎಲ್‌ನಲ್ಲಿ ಉತ್ತಮ ಫಾರ್ಮ್‌ನಲ್ಲಿರುವ ಕೊಹ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ ಅರ್ಧಶತಕವನ್ನು ಪೂರೈಸಿದರು. ಇವರ ಉತ್ತಮ ಇನಿಂಗ್ಸ್ ಬಲದಿಂದ ಆರ್‌ಸಿಬಿ ಉತ್ತಮ ಮೊತ್ತ ಪೇರಿಸಿತು. ವಿರಾಟ್ ಈ ಲೀಗ್‌ನಲ್ಲಿ ಸತತ ಅರ್ಧ ಶತಕಗಳನ್ನು ಪೂರೈಸಿ ನೆರೆದ ಅಭಿಮಾನಿಗಳಿಗೆ ಮನರಂಜನೆಯನ್ನು ನೀಡಿದರು.
ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಆರ್‌ಸಿಬಿ ತಂಡದ ಆರಂಭಿಕರಾದ ವಿರಾಟ್ ಕೊಹ್ಲಿ ಹಾಗೂ ಫಿಲ್ ಸಾಲ್ಟ್ ಜೋಡಿ ತಂಡಕ್ಕೆ ಭರ್ಜರಿ ಜೊತೆಯಾಟದ ಕಾಣಿಕೆ ನೀಡಿತು. ಈ ಜೊಡಿಯ ಆಟಕ್ಕೆ ಬ್ರೇಕ್ ಹಾಕಲು ರಾಜಸ್ಥಾನ ಬೌಲರ್‌ಗಳು ವಿಫಲರಾದರು. ವಿರಾಟ್ ಕೊಹ್ಲಿ ರಾಜಸ್ಥಾನ ವಿರುದ್ಧದ ಪಂದ್ಯದಲ್ಲಿ42 ಎಸೆತಗಳಲ್ಲಿ 8 ಬೌಂಡರಿ, 2 ಸಿಕ್ಸರ್ ಸಹಾಯದಿಂದ 70 ರನ್ ಸಿಡಿಸಿದರು. ಈ ಇನಿಂಗ್ಸ್‌ನ ಮೂಲಕ ವಿರಾಟ್ ಕೊಹ್ಲಿ ದೊಡ್ಡ ದಾಖಲೆಯನ್ನು ನಿರ್ಮಿಸಿದರು.
ವಿರಾಟ್ ಕೊಹ್ಲಿಅರ್ಧಶತಕ ಬಾರಿಸುತ್ತಿದ್ದಂತೆ ಟಿ20 ಕ್ರಿಕೆಟ್ ಇತಿಹಾಸದಲ್ಲಿ ಮೊದಲು ಬ್ಯಾಟಿಂಗ್ ಮಾಡಿ ಅತಿ ಹೆಚ್ಚು 50 ಕ್ಕೂ ಹೆಚ್ಚು ರನ್ ಗಳಿಸಿದ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಇದು ಟಿ20 ಕ್ರಿಕೆಟ್‌ನಲ್ಲಿ ವಿರಾಟ್ ಕೊಹ್ಲಿ ಮೊದಲು ಬ್ಯಾಟ್ ಮಾಡಿ ಸಿಡಿಸಿದ 62 ಅರ್ಧಶತಕವಾಗಿದೆ. ಈ ಮೂಲಕ ವಿರಾಟ್ ಕೊಹ್ಲಿ ಪಾಕ್ ತಂಡದ ಬಾಬರ್ ಅಜಮ್ ಅವರ ದಾಖಲೆಯ್ನು ಅಳಿಸಿ ಹಾಕಿದರು. ಬಾಬರ್ ಮೊದಲು ಬ್ಯಾಟ್ ಮಾಡಿದಾಗ 61 ಅರ್ಧಶತಕ ಸಿಡಿಸಿದ ದಾಖಲೆಯನ್ನು ಹೊಂದಿದ್ದಾರೆ.
ಟಿ20 ಕ್ರಿಕೆಟ್‌ನಲ್ಲಿ ಮೊದಲು ಬ್ಯಾಟ್ ಮಾಡಿ ಅತಿ ಹೆಚ್ಚು ಅರ್ಧಶತಕ ಬಾರಿಸಿದ ಆಟಗಾರರು
ವಿರಾಟ್ ಕೊಹ್ಲಿ – 62, ಬಾಬರ್ ಅಜಮ್ – 61, ಕ್ರಿಸ್ ಗೇಲ್ – 57, ಡೇವಿಡ್ ವಾರ್ನರ್ – 55, ಜೋಸ್ ಬಟ್ಲರ್ – 52, ಫಾಫ್ ಡು ಪ್ಲೆಸಿಸ್ – 52
ವಿರಾಟ್ ಕೊಹ್ಲಿ ಈ ಪಂದ್ಯದಲ್ಲಿ 8 ಬೌಂಡರಿ ಬಾರಿಸುವ ಮೂಲಕ ಮತ್ತೊಂದು ದಾಖಲೆ ಬರೆದರು. ಈ ಮೂಲಕ ಐಪಿಎಲ್‌ನಲ್ಲಿ ಒಂದೇ ತಂಡದ ವಿರುದ್ಧ ನೂರು ಅರ್ಧಶತಕ ಬಾರಿಸಿದ ಹಿರಿಮೆ ತನ್ನದಾಗಿಸಿಕೊಂಡಿದ್ದಾರೆ. ವಿರಾಟ್ ಕೊಹ್ಲಿ ಶತಕದ ಬೌಂಡರಿಗಳನ್ನು ಏಳನೇ ತಂಡದ ವಿರುದ್ಧ ಮಾಡಿದ ಹಿರಿಮೆಗೆ ಪಾತ್ರರಾದರು. ಈ ಮೂಲಕ ಐಪಿಎಲ್‌ನಲ್ಲಿ ಯಾವೊಬ್ಬ ಪ್ಲೇಯರ್ ಮಾಡದ ಸಾಧನೆ ಮಾಡಿದರು. ಇವರನ್ನು ಬಿಟ್ಟರೆ ಶಿಖರ್ ಧವನ್ ಹಾಗೂ ರೋಹಿತ್ ಶರ್ಮಾ ಮಾತ್ರ ಐದು ತಂಡಗಳ ವಿರುದ್ಧ ನೂರು ಬೌಂಡರಿ ಬಾರಿಸಿದ ದಾಖಲೆ ಹೊಂದಿದ್ದಾರೆ.
ಐಪಿಎಲ್‌ನಲ್ಲಿ ತಂಡಗಳ ವಿರುದ್ಧ ನೂರಕ್ಕು ಹೆಚ್ಚು ಬೌಂಡರಿ ಸಾಧನೆ
ಪಂಜಾಬ್ ಕಿಂಗ್ಸ್, 148, ಡೆಲ್ಲಿ ಕ್ಯಾಪಿಟಲ್ಸ್ 130, ಚೆನ್ನೈ ಸೂಪರ್ ಕಿಂಗ್ಸ್ 121, ಕೋಲ್ಕತ್ತಾ ನೈಟ್ ರೈಡರ್ಸ್ 119, ಮುಂಬೈ ಇಂಡಿಯನ್ಸ್ 112, ಸನ್‌ರೈಸರ್ಸ್ ಹೈದರಾಬಾದ್ 104, ರಾಜಸ್ಥಾನ ರಾಯಲ್ಸ್, 104