ಐಪಿಎಲ್ | ಕೆಕೆಆರ್‌ vs ಆರ್‌ಸಿಬಿ ಹಣಾಹಣಿ: ಈ ಆಟಗಾರರ ಮೇಲಿವೆ ಹೆಚ್ಚು ನಿರೀಕ್ಷೆಗಳು

Date:

Advertisements

2025ರ ಐಪಿಎಲ್ ಟೂರ್ನಿಯು ಇಂದಿನಿಂದ (ಮಾರ್ಚ್‌ 22) ಆರಂಭವಾಗುತ್ತಿದೆ. ಉದ್ಘಾಟನಾ ಪಂದ್ಯವು ಕೆಕೆಆರ್ ಮತ್ತು ಆರ್‌ಸಿಬಿ ನಡುವೆ ಕೋಲ್ಕತ್ತಾದಲ್ಲಿ ನಡೆಯಲಿದೆ. 18 ವರ್ಷಗಳಿಂದ ಟ್ರೋಫಿಗಾಗಿ ಎದುರು ನೋಡುತ್ತಿರುವ ಆರ್‌ಸಿಬಿ, ಈ ಬಾರಿಯದರೂ ಕಪ್ ಗೆಲ್ಲಬೇಕೆಂದು ಹರಸಾಹಸಪಡುತ್ತಿದೆ. ಹಾಲಿ ಚಾಂಪಿಯನ್‌ ಕೆಕೆಆರ್‌ ಕೂಡ ಮತ್ತೆ ಟ್ರೋಫಿ ಗೆಲ್ಲಲು ಎದುರು ನೋಡುತ್ತಿದೆ.

ಆರ್‌ಸಿಬಿಯಲ್ಲಿ ಬ್ಯಾಟಿಂಗ್‌ ವಿಭಾಗದಲ್ಲಿ ಸ್ಟಾರ್‌ ಕ್ರಿಕೆಟಿಗ ವಿರಾಟ್‌ ಕೊಹ್ಲಿ, ನಾಯಕ ರಜತ್ ಪಾಟೀದಾರ್‌ ಹಾಗೂ ಫಿಲ್‌ ಸಾಲ್ಟ್‌ ಮೇಲೆ ಹೆಚ್ಚು ನಿರೀಕ್ಷೆಗಳಿವೆ. ಅಂತೆಯೇ, ಕೆಕೆಆರ್‌ನಲ್ಲಿ ಕ್ವಿಂಟನ್‌ ಡಿ ಕಾಕ್, ನಾಯಕ ಅಜಿಂಕ್ಯ ರಹಾನೆ, ರಿಂಕು ಸಿಂಗ್‌, ವೆಂಕಟೇಶ್‌ ಅಯ್ಯರ್, ಮೇಲೆ ತಂಡವು ನಿರೀಕ್ಷೆ ಇಟ್ಟಿದೆ. ಅದರಲ್ಲೂ, ಕೆಕೆಆರ್‌ನಲ್ಲಿ ಕ್ವಿಂಟನ್‌ ಡಿ ಕಾಕ್ ಮತ್ತು ರಿಂಕು ಸಿಂಗ್‌ ಮೇಲೆ ತಂಡಕ್ಕೆ ಹೆಚ್ಚು ವಿಶ್ವಾಸವಿದೆ.

  • ವಿರಾಟ್‌ ಕೊಹ್ಲಿ: 2008ರಲ್ಲಿ ಐಪಿಎಲ್‌ ಆರಂಭವಾದಾನಿಂದ ಈವರೆಗೆ ಆರ್‌ಸಿಬಿ ತಂಡದಲ್ಲೇ ಇರುವ ವಿರಾಟ್‌ ಕೊಹ್ಲಿ ಮೇಲೆ ಭಾರೀ ನಿರೀಕ್ಷೆಗಳಿವೆ. ಅವರು ಈವರೆಗೆ ಐಪಿಎಲ್‌ನಲ್ಲಿ ಒಟ್ಟು 244 ಇನಿಂಗ್ಸ್‌ಗಳನ್ನು ಆಡಿದ್ದು, 8 ಶತಕ, 55 ಅರ್ಧಶತಕ ಬಾರಿಸಿ, ಒಟ್ಟು 8,004 ರನ್‌ ಕಲೆಹಾಕಿದ್ದಾರೆ.
  • ರಜತ್ ಪಾಟಿದಾರ್: ಆರ್‌ಸಿಬಿ ತಂಡದ ನಾಯಕನಾಗಿ ಬಡ್ತಿ ಪಡೆದಿರುವ ರಜತ್ ಪಾಟಿದಾರ್ ಮೇಲೂ ಹೆಚ್ಚಿನ ನಿರೀಕ್ಷೆ ಇದೆ. ಸ್ಪಿನ್ನರ್‌ಗಳಿಗೆ ಚಳ್ಳೆ ಹಣ್ಣು ತಿನ್ನಿಸಿ, ಹೆಚ್ಚು ರನ್ ಗಳಿಸುವ ಸಾಮರ್ಥ್ಯ ಪಾಟಿದಾರ್‌ಗೆ ಇದೆ ಎಂಬ ವಿಶ್ವಾಸವಿದೆ. ಅವರು ಈವರೆಗೆ ಐಪಿಎಲ್‌ನಲ್ಲಿ 27 ಪಂದ್ಯಗಳಲ್ಲಿ ಆಡಿದ್ದು, 1 ಶತಕ ಮತ್ತು 7 ಅರ್ಧಶತಕಗಳೊಂದಿಗೆ 799 ರನ್‌ ಬಾರಿಸಿದ್ದಾರೆ.
  • ಫಿಲ್‌ ಸಾಲ್ಟ್‌: ಆರ್‌ಸಿಬಿಯ ಹೆಚ್ಚು ನಿರೀಕ್ಷೆ ಇರುವ ಬ್ಯಾಟರ್‌ಗಳಲ್ಲಿ ಫಿಲ್‌ ಸಾಲ್ಟ್‌ ಕೂಡ ಒಬ್ಬರು. ಕಳೆದ ಬಾರಿ ಕೆಕೆಆರ್‌ ತಂಡದಲ್ಲಿ ಆಡಿದ್ದು, ಟ್ರೋಫಿ ಗೆಲ್ಲಲು ನೆರವಾಗಿದ್ದರು. ಈಗ ಅವರು ಆರ್‌ಸಿಬಿ ಸೇರಿದ್ದಾರೆ. ಈವರೆಗೆ 21 ಪಂದ್ಯಗಳಲ್ಲಿ ಆಡಿರುವ ಫಿಲ್ ಸಾಲ್ಟ್, 653 ರನ್‌ಗಳನ್ನು ಗಳಿಸಿದ್ದಾರೆ. ಕಳೆದ ವರ್ಷ (2024) ಟೂರ್ನಿಯಲ್ಲಿಯೇ 12 ಪಂದ್ಯಗಳಲ್ಲಿ ಆಡಿ, 4 ಅರ್ಧಶತಕದೊಂದಿಗೆ 435 ರನ್ ಕಲೆಹಾಕಿದ್ದರು.
  • ಕ್ವಿಂಟನ್‌ ಡಿ ಕಾಕ್‌: ಕಳೆದ ವರ್ಷ ನಡೆದ ಐಪಿಎಲ್‌ನಲ್ಲಿ ಎಲ್‌ಎಸ್‌ಜಿ ತಂಡದಲ್ಲಿದ್ದ ಕ್ವಿಂಟನ್, ಈ ಬಾರಿ ಕೆಕೆಆರ್‌ ತಂಡದಲ್ಲಿದ್ದಾರೆ. ಐಪಿಎಲ್‌ನಲ್ಲಿ ಈವರೆಗೆ 107 ಪಂದ್ಯಗಳಲ್ಲಿ ಬ್ಯಾಟ್‌ ಬೀಸಿರುವ ಕ್ವಿಂಟನ್, 2 ಶತಕ ಮತ್ತು 23 ಅರ್ಧಶತಕದೊಂದಿಗೆ 3,157 ರನ್‌ ಕಲೆಹಾಕಿದ್ದಾರೆ.
  • ರಿಂಕು ಸಿಂಗ್: ಕೆಕೆಆರ್‌ ತಂಡದ ಪ್ರಮುಖ ಬ್ಯಾಟರ್‌ಗಳಲ್ಲಿ ರಿಂಕು ಸಿಂಗ್ ಒಬ್ಬರು. ಬೌಲರ್‌ಗಳ ದಾಳಿಗೆ ಭದ್ರವಾಗಿ ನಿಂತು ಆರಾಮದಾಯವಾಗಿ ರನ್ ಕಲೆ ಹಾಕುವ ಸಾಮರ್ಥ್ಯ ಹೊಂದಿದ್ದಾರೆ. ಐಪಿಎಲ್‌ನಲ್ಲಿ 45 ಪಂದ್ಯಗಳಲ್ಲಿ ಆಡಿರುವ ರಿಂಕು ಸಿಂಗ್, 893 ರನ್ ಕಲೆಹಾಕಿದ್ದಾರೆ.

ಬೌಲಿಂಗ್ ವಿಭಾಗದಲ್ಲಿ ಆರ್‌ಸಿಬಿಯಲ್ಲಿ ಭುವನೇಶ್ವರ್ ಕುಮಾರ್‌ ಮತ್ತು ಜೋಶ್ ಹ್ಯಾಜಲ್‌ವುಡ್‌ ಬೌಲಿಂಗ್‌ ಮೇಲೆ ತಂಡವು ಹೆಚ್ಚು ನಿರೀಕ್ಷೆ ಇಟ್ಟುಕೊಂಡಿದೆ. ಅಂತೆಯೇ, ಕೆಕೆಆರ್‌ನಲ್ಲಿ ವರುಣ್ ಚಕ್ರವರ್ತಿ, ಸುನಿಲ್ ನಾರಾಯಣ್‌ ಹಾಗೂ ಹರ್ಷಿತ್‌ ರಾಣಾ ಮೇಲೆ ಹೆಚ್ಚು ನಿರೀಕ್ಷೆಗಳಿವೆ.

Advertisements

ಈ ವರದಿ ಓದಿದ್ದೀರಾ?: ಐಪಿಎಲ್‌ | ಅತಿ ಹೆಚ್ಚು ಆದಾಯ ಗಳಿಕೆಯಲ್ಲಿ ರೋಹಿತ್ ಶರ್ಮಾ ನಂ.1; ಕೊಹ್ಲಿ ಸ್ಥಾನ ಎಲ್ಲಿ?

  • ಭುವನೇಶ್ವರ್ ಕುಮಾರ್‌: ಆರ್‌ಸಿಬಿ ತಂಡದಲ್ಲಿರುವ ಭುವನೇಶ್ವರ್ ಕುಮಾರ್ ಐಪಿಎಲ್‌ ಟೂರ್ನಿಯಲ್ಲಿ ಅತಿ ಕಡಿಮೆ ಎಕಾನಮಿ ದರದಲ್ಲಿ ರನ್‌ ಕೊಟ್ಟಿರುವ ಬೌಲರ್‌ ಎಂಬ ಹೆಗ್ಗಳಿಕೆ ಹೊಂದಿದ್ದಾರೆ. ಐಪಿಎಲ್‌ನಲ್ಲಿ ಈವರೆಗೆ 176 ಪಂದ್ಯಗಳಲ್ಲಿ ಬೌಲಿಂಗ್ ಮಾಡಿರುವ ಭುವನೇಶ್ವರ್ 7.56ರ ದರದಲ್ಲಿ ರನ್‌ ಬಿಟ್ಟುಕೊಟ್ಟಿದ್ದು, 181 ವಿಕೆಟ್‌ಗಳನ್ನು ಪಡೆದಿದ್ದಾರೆ.
  • ಜೋಶ್ ಹ್ಯಾಜಲ್‌ವುಡ್‌: ಆರ್‌ಸಿಬಿಯ ಮತ್ತೊರ್ವ ನಿರ್ಣಾಯಕ ಬೌಲರ್ ಜೋಶ್ ಹ್ಯಾಜಲ್‌ವುಡ್‌ ಆಗಿದ್ದಾರೆ. ವೇಗದ ಬೌಲಿಂಗ್‌ಗೆ ಹೆಸರುವಾಸಿಯಾಗಿರುವ ಜೋಶ್‌, ಐಪಿಎಲ್‌ನಲ್ಲಿ ಈವರೆಗೆ 27 ಪಂದ್ಯಗಳಲ್ಲಿ ಬೌಲಿಂಗ್ ಮಾಡಿದ್ದು, 8.06 ದರದಲ್ಲಿ ರನ್‌ ಕೊಟ್ಟಿದ್ದಾರೆ. 35 ವಿಕೆಟ್‌ಗಳನ್ನು ಪಡೆದಿದ್ದಾರೆ.
  • ವರುಣ್ ಚಕ್ರವರ್ತಿ: ಟೀಮ್ ಇಂಡಿಯಾದ ಸ್ಟಾರ್‌ ಬೌಲರ್‌ಗಳಲ್ಲಿ ಒಬ್ಬರಾದ ವರಣು ಚಕ್ರವರ್ತಿ ಕೆಕೆಆರ್‌ ತಂಡದಲ್ಲಿದ್ದಾರೆ. 2023ರಲ್ಲಿ ಐಪಿಎಲ್‌ಗೆ ಪಾದಾರ್ಪಣೆ ಮಾಡಿರುವ ವರುಣ್, ಈವರೆಗೆ 28 ಪಂದ್ಯಗಳಲ್ಲಿ ಬೌಲಿಂಗ್ ಮಾಡಿದ್ದು, 41 ವಿಕೆಟ್‌ ಗಳಿಸಿದ್ದಾರೆ.
  • ಸುನಿಲ್ ನಾರಾಯಣ್‌: ಕೆಕೆಆರ್‌ ತಂಡದಲ್ಲಿ ಬೌಲಿಂಗ್‌ಗೆ ಮತ್ತೊಂದು ಬಲ ಸುನಿಲ್ ನಾರಾಯಣ್. 2012ರಿಂದ ಐಪಿಎಲ್‌ನಲ್ಲಿ ಆಡುತ್ತಿರುವ ಸುನಿಲ್, ಅಂದಿನಿಂದಲೂ ಕೆಕೆಆರ್‌ನಲ್ಲಿಯೇ ಉಳಿದಿದ್ದಾರೆ. ಈವರೆಗೆ 175 ಪಂದ್ಯಗಳಲ್ಲಿ ಆಡಿದ್ದು, ಕೇವಲ 6.73ರ ದರದಲ್ಲಿ ರನ್ ಕೊಟ್ಟಿದ್ದು, 180 ವಿಕೆಟ್‌ಗಳನ್ನು ಪಡೆದಿದ್ದಾರೆ.
  • ಹರ್ಷಿತ್‌ ರಾಣಾ: ಕೆಕೆಆರ್‌ ತಂಡದಲ್ಲಿರುವ ಸ್ಟಾರ್ ವೇಗಿ ಬೌಲರ್. 2024ರಲ್ಲಿ ಐಪಿಎಲ್‌ಗೆ ಪ್ರವೇಶಿದ ರಾಣ ಕೆಕೆಆರ್‌ ತಂಡದಲ್ಲಿಯೇ ಆಡಿದ್ದರು. 11 ಪಂದ್ಯಗಳಲ್ಲಿ ಆಡಿರುವ ರಾಣಾ, 19 ವಿಕೆಟ್‌ಗಳನ್ನು ಕಬಳಿಸಿದ್ದಾರೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತಾಂತ್ರಿಕ ಕಾರಣದಿಂದ ಯುವಕನಿಗೆ ಸಿಕ್ಕ ಆರ್‌ಸಿಬಿ ಆಟಗಾರನ ಸಿಮ್‌; ಕೊಹ್ಲಿ, ಎಬಿಡಿಯಿಂದ ನಿತ್ಯ ಕರೆ!

ಛತ್ತೀಸ್‌ಗಢದ ಯುವಕನೊಬ್ಬನಿಗೆ ತಾಂತ್ರಿಕ ದೋಷದಿಂದಾಗಿ ಆರ್‌ಸಿಬಿ ತಂಡದ ನಾಯಕ ರಜತ್ ಪಾಟೀದಾರ್‌ರ...

ಬಿಸಿಸಿಐ ಷರತ್ತಿನಿಂದ ವಿರಾಟ್‌, ರೋಹಿತ್‌ 2027ರ ಏಕದಿನ ವಿಶ್ವಕಪ್‌ ಕನಸು ಕಮರಿ ಹೋಗಲಿದೆಯೇ?

ಟೀಂ ಇಂಡಿಯಾದ ದಿಗ್ಗಜ ಆಟಗಾರರಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ...

ಊಹಾಪೋಹಗಳಿಗೆ ತೆರೆ: ಭಾರತ–ಪಾಕ್‌ ಏಷ್ಯಾಕಪ್‌ ಕ್ರಿಕೆಟ್‌ ಪಂದ್ಯ ರದ್ದಾಗುವುದಿಲ್ಲ

ಪಹಲ್ಗಾಮ್‌ ಉಗ್ರ ದಾಳಿಯ ನಂತರ ಭಾರತ–ಪಾಕಿಸ್ತಾನದ ನಡುವಿನ ಬಿಕ್ಕಟ್ಟು ಹೆಚ್ಚಾದ ಹಿನ್ನೆಲೆಯಲ್ಲಿ...

ಕೇರಳ ಭೇಟಿ ರದ್ದುಗೊಳಿಸಿದ ಮೆಸ್ಸಿ ನೇತೃತ್ವದ ಅರ್ಜೆಂಟೀನಾ ತಂಡ

ಲಿಯೊನೆಲ್ ಮೆಸ್ಸಿ ನೇತೃತ್ವದ ಫೀಫಾ ವಿಶ್ವಕಪ್ ವಿಜೇತ ಅರ್ಜೆಂಟೀನಾ ತಂಡವನ್ನು ಕೇರಳಕ್ಕೆ...

Download Eedina App Android / iOS

X