ಐಪಿಎಲ್ನ ಬಾಕಿ ಇರುವ ಒಂದು ಪ್ಲೇ-ಆಫ್ ಸ್ಥಾನಕ್ಕಾಗಿ ಇಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ‘ಮಾಡು ಇಲ್ಲವೇ ಮಡಿ’ ಪಂದ್ಯದಲ್ಲಿ ಆರ್ಸಿಬಿ ತಂಡವು ಚೆನ್ನೈಗೆ 219 ರನ್ಗಳ ಸವಾಲಿನ ಗುರಿ ನೀಡಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು, ನಾಯಕ ಫಾಫ್ ಡು ಪ್ಲೆಸಿ ಅವರ ಅರ್ಧಶತಕ ಹಾಗೂ ಮಧ್ಯಮ ಕ್ರಮಾಂಕದ ಬ್ಯಾಟರ್ಗಳ ಸಮಯೋಚಿತ ಬ್ಯಾಟಿಂಗ್ನ ನೆರವಿನಿಂದ ನಿಗದಿತ 20 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 218 ರನ್ ಗಳಿಸುವ ಮೂಲಕ, ಸವಾಲಿನ ಗುರಿ ನೀಡಿದೆ.
CSK need 201 to book their playoffs ticket
🔗https://t.co/iwDl175AqY | #IPL2024 pic.twitter.com/wWVaQ8jGM3
— ESPNcricinfo (@ESPNcricinfo) May 18, 2024
ಐದು ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ನಡೆಯುತ್ತಿರುವ ‘ನಾಕೌಟ್’ ಪಂದ್ಯ ಆರಂಭಗೊಂಡು ಮೂರು ಓವರ್ ಮುಗಿದ ವೇಳೆ ಮಳೆ ಬಂದಿದ್ದರಿಂದ ಕೆಲಹೊತ್ತು ಪಂದ್ಯವನ್ನು ಸ್ಥಗಿತಗೊಳಿಸಲಾಗಿತ್ತು.
ಆ ಬಳಿಕ ಉತ್ತಮ ಬ್ಯಾಟಿಂಗ್ ನಡೆಸಿದ ಆರಂಭಿಕ ಹಾಗೂ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಹಾಗೂ ಫಾಫ್ ಡು ಪ್ಲೆಸಿ ಮೊದಲ ವಿಕೆಟ್ಗೆ 78 ರನ್ಗಳ ಜೊತೆಯಾಟ ನಡೆಸಿದರು.
Faf – 54 (39).
Kohli – 47 (29).
Patidar – 41 (23).
Green – 38* (17).RCB SCORED 80 IN THE LAST 5 OVERS TO REACH 218/5…!!! 🤯 pic.twitter.com/qUjPoWVtJt
— Mufaddal Vohra (@mufaddal_vohra) May 18, 2024
29 ಎಸೆತಗಳಲ್ಲಿ 4 ಭರ್ಜರಿ ಸಿಕ್ಸರ್ ಹಾಗೂ 3 ಬೌಂಡರಿಯ ನೆರವಿನೊಂದಿಗೆ 47 ರನ್ ಗಳಿಸಿದ್ದ ವೇಳೆ ವಿರಾಟ್ ಕೊಹ್ಲಿ, ಸ್ಯಾಂಟ್ನರ್ ಎಸೆತದಲ್ಲಿ ಬೌಂಡರಿ ಲೈನ್ನಲ್ಲಿದ್ದ ಡೇರಿಲ್ ಮಿಚೆಲ್ಗೆ ಕ್ಯಾಚಿತ್ತು ನಿರ್ಗಮಿಸಿದರು. ಆ ಮೂಲಕ 3 ರನ್ಗಳಿಂದ ಅರ್ಧಶತಕದಿಂದ ವಂಚಿತರಾದರು.
ಆ ಬಳಿಕ ಕ್ರೀಸ್ನಲ್ಲಿದ್ದ ನಾಯಕ ಫಾಫ್ ಡು ಪ್ಲೆಸಿ 39 ಎಸೆತಗಳಲ್ಲಿ 54 ರನ್(3 ಸಿಕ್ಸರ್, 3 ಬೌಂಡರಿ) ಗಳಿಸಿದ್ದಾಗ, 12.6 ಓವರ್ ವೇಳೆ ಸ್ಯಾಂಟ್ನರ್ ಎಸೆತದಲ್ಲಿ ಸ್ಟ್ರೈಕ್ನಲ್ಲಿದ್ದ ರಜತ್ ಪಾಟೀದಾರ್ ಬೌಲರ್ ಕಡೆಗೆ ನೇರವಾಗಿ ಹೊಡೆದರು. ಈ ವೇಳೆ ಈ ಹೊಡೆತವನ್ನು ಸ್ಯಾಂಟ್ನರ್ ತಡೆದದ್ದರಿಂದ, ಬಾಲ್ ನೇರವಾಗಿ ನಾನ್ ಸ್ಟ್ರೈಕ್ನಲ್ಲಿದ್ದ ವಿಕೆಟ್ಗೆ ಬಡಿಯಿತು.
ಆ ಬಳಿಕ ಧರ್ಡ್ ಅಂಪೈರ್ ನಾನ್ ಸ್ಟ್ರೈಕ್ನಲ್ಲಿದ್ದ ಫಾಫ್ ಡು ಪ್ಲೆಸಿ ಬ್ಯಾಟ್ ಗಾಳಿಯಲ್ಲಿದ್ದರಿಂದ ‘ಔಟ್’ ಎಂದು ತೀರ್ಪು ನೀಡಿದರು. ಧರ್ಡ್ ಅಂಪೈರ್ ತೀರ್ಪು ಆರ್ಸಿಬಿ ತಂಡ ಹಾಗೂ ಅಭಿಮಾನಿಗಳಿಗೆ ಒಮ್ಮೆಗೆ ಆಘಾತ ಉಂಟು ಮಾಡಿತು. ಧರ್ಡ್ ಅಂಪೈರ್ ತೀರ್ಪಿನ ಹಿನ್ನೆಲೆಯಲ್ಲಿ ನಾಯಕ ಫಾಫ್ ಡು ಪ್ಲೆಸಿ ನಿರಾಶೆಯಿಂದ ಪೆವಿಲಿಯನ್ಗೆ ಮರಳಿದರು.
ಫಾಫ್ ಔಟಾದ ಬಳಿಕ ಕ್ಯಾಮರೂನ್ ಗ್ರೀನ್ ಜೊತೆಗೆ ಜೊತೆಯಾಟ ನಡೆಸಿದ ಉತ್ತಮ ಫಾರ್ಮ್ನಲ್ಲಿರುವ ರಜತ್ ಪಾಟೀದಾರ್, ತಮ್ಮದೇ ಆದ ಕೊಡುಗೆ ನೀಡಿದರು. ಡೇರಿಲ್ ಮಿಚೆಲ್ಗೆ ಕ್ಯಾಚಿತ್ತು ನಿರ್ಗಮಿಸುವುದಕ್ಕೂ ಮುನ್ನ 23 ಎಸೆತಗಳನ್ನು ಎದುರಿಸಿದ ರಜತ್ ಪಾಟೀದಾರ್, 4 ಭರ್ಜರಿ ಸಿಕ್ಸರ್ ಹಾಗೂ 2 ಬೌಂಡರಿಯ ನೆರವಿನಿಂದ 41 ರನ್ ಗಳಿಸಿದರು.
ಆ ಬಳಿಕ ಬ್ಯಾಟಿಂಗ್ಗೆ ಇಳಿದ ದಿನೇಶ್ ಕಾರ್ತಿಕ್, 6 ಎಸೆತಗಳಲ್ಲಿ 1 ಬೌಂಡರಿ ಹಾಗೂ 1 ಸಿಕ್ಸ್ನ ನೆರವಿನಿಂದ 14 ರನ್ ಬಾರಿಸಿದರೆ, ಕೊನೆಯಲ್ಲಿ ಬ್ಯಾಟಿಂಗ್ಗೆ ಬಂದ ಗ್ಲೆನ್ ಮ್ಯಾಕ್ಸ್ವೆಲ್ ಕೇವಲ 5 ಎಸೆತಗಳಲ್ಲಿ 2 ಬೌಂಡರಿ ಹಾಗೂ 1 ಸಿಕ್ಸ್ನ ನೆರವಿನಿಂದ 16 ರನ್ ಗಳಿಸಿದರು. ಕೊನೆಯಲ್ಲಿ 17 ಎಸೆತಗಳಲ್ಲಿ 3 ಬೌಂಡರಿ ಹಾಗೂ 3 ಸಿಕ್ಸರ್ನ ನೆರವಿನಿಂದ ಕ್ಯಾಮರೂನ್ ಗ್ರೀನ್ 38 ರನ್ ಗಳಿಸಿ, ಔಟಾಗದೇ ಉಳಿದರು.
ಚೆನ್ನೈ ಪರ ಬೌಲಿಂಗ್ನಲ್ಲಿ ಶಾರ್ದೂಲ್ ಠಾಕೂರ್ 2 ವಿಕೆಟ್, ತುಷಾರ್ ದೇಶಪಾಂಡೆ ಹಾಗೂ ಮಿಚೆಲ್ ಸ್ಯಾಂಟ್ನರ್ ತಲಾ ಒಂದೊಂದು ವಿಕೆಟ್ ಗಳಿಸುವಲ್ಲಿ ಯಶಸ್ವಿಯಾದರು.
RCB NEED TO RESTRICT CSK AT 200 TO QUALIFY FOR PLAYOFFS OF IPL 2024. 🏆 pic.twitter.com/QIms0GRgYh
— Mufaddal Vohra (@mufaddal_vohra) May 18, 2024
ಈ ಪಂದ್ಯವನ್ನು ಆರ್ಸಿಬಿ ಗೆಲ್ಲಬೇಕಿದೆಯಲ್ಲದೇ, ಚೆನ್ನೈ ತಂಡವನ್ನು 200 ರನ್ ಗಡಿ ದಾಟದಂತೆ ನೋಡಿಕೊಳ್ಳಬೇಕಿದೆ. ಆರ್ಸಿಬಿಯು, ರನ್ರೇಟ್ ಆಧಾರದಲ್ಲಿ ಪ್ಲೇ-ಆಫ್ ಪ್ರವೇಶಿಸಲು ಈ ಲೆಕ್ಕಾಚಾರ ಬಹಳ ಮುಖ್ಯವಾಗಿದೆ.
ಪಂದ್ಯ ವೀಕ್ಷಿಸಿದ ಸಿಎಂ ಸಿದ್ದರಾಮಯ್ಯ
ಸಿಎಂ ಸಿದ್ದರಾಮಯ್ಯ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇಂದು ನಡೆಯುತ್ತಿರುವ ಪಂದ್ಯವನ್ನು ವೀಕ್ಷಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, “ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಆರ್.ಸಿ.ಬಿ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಐಪಿಎಲ್ ಪಂದ್ಯ ವೀಕ್ಷಿಸಿದೆ. ಈ ನಿರ್ಣಾಯಕ ಪಂದ್ಯದಲ್ಲಿ ನಮ್ಮವರು ಗೆದ್ದು ಮುಂದಿನ ಹಂತಕ್ಕೆ ಹೋಗಲಿ ಎಂಬ ಹಾರೈಕೆ ನನ್ನದು” ಎಂದು ತಿಳಿಸಿದ್ದಾರೆ.
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಆರ್.ಸಿ.ಬಿ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಐಪಿಎಲ್ ಪಂದ್ಯ ವೀಕ್ಷಿಸಿದೆ.
ಈ ನಿರ್ಣಾಯಕ ಪಂದ್ಯದಲ್ಲಿ ನಮ್ಮವರು ಗೆದ್ದು ಮುಂದಿನ ಹಂತಕ್ಕೆ ಹೋಗಲಿ ಎಂಬ ಹಾರೈಕೆ ನನ್ನದು. #ಈಸಲಕಪ್ನಮ್ದೆ pic.twitter.com/2OQKjuY9EW— Siddaramaiah (@siddaramaiah) May 18, 2024
ಈ ವೇಳೆ ಗೃಹ ಸಚಿವ ಪರಮೇಶ್ವರ್, ಹೆಚ್ ಸಿ ಮಹದೇವಪ್ಪ, ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಸ್ಯಾಂಡಲ್ವುಡ್ ನಟ ಡಾ. ಶಿವರಾಜ್ಕುಮಾರ್ ಜೊತೆಗಿದ್ದರು.
