ಐಪಿಎಲ್‌ನಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಭರ್ಜರಿ ಗೆಲುವು ಸಾಧಿಸಿ ಹಳೆಯ ಸೇಡನ್ನು ತೀರಿಸಿಕೊಂಡಿದ್ದಲ್ಲದೇ, ಈವರೆಗೆ ಆಡಿರುವ 10 ಪಂದ್ಯಗಳಲ್ಲಿ ಏಳು ಗೆಲುವಿನೊಂದಿಗೆ 14 ಅಂಕ ಗಳಿಸಿದೆ. ಆ ಮೂಲಕ ಸದ್ಯ +0.521 ನೆಟ್ ರನ್‌ರೇಟ್‌ನೊಂದಿಗೆ ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ಬಂದು ಕುಳಿತಿದೆ.
ಆರ್‌ಸಿಬಿ ತವರಲ್ಲಿ ಈವರೆಗೆ ಆಡಿದ್ದ 4 ಪಂದ್ಯಗಳ ಪೈಕಿ ಮೂರರಲ್ಲಿಯೂ ಸೋತಿತ್ತು. ರಾಜಸ್ಥಾನದ ವಿರುದ್ಧ ನಡೆದಿದ್ದ ಪಂದ್ಯದಲ್ಲಿ ರೋಚಕವಾಗಿ ಗೆಲುವು ಸಾಧಿಸುವ ಮೂಲಕ ತವರು ಮೈದಾನ ಚಿನ್ನಸ್ವಾಮಿಯಲ್ಲಿ ಸೋಲಿನ ಬಲೆಯಿಂದ ಮೇಲೆದ್ದು ಬಂದಿತ್ತು.
ಭಾನುವಾರ ಡೆಲ್ಲಿ ವಿರುದ್ಧದ ಗೆಲುವು ಸಾಧಿಸಿರುವ ಆರ್‌ಸಿಬಿ, ತವರು ಮೈದಾನ ಬಿಟ್ಟು ಹೊರಗಡೆ ಆಡಿರುವ ಎಲ್ಲ ಆರು ಪಂದ್ಯಗಳಲ್ಲಿಯೂ ಗೆಲ್ಲುವ ಮೂಲಕ ಐಪಿಎಲ್‌ನಲ್ಲಿ ವಿಶಿಷ್ಟ ಸಾಧನೆ ಮಾಡಿದ ಹೆಗ್ಗಳಿಕೆಗೂ ಪಾತ್ರವಾಗಿದೆ. ಆರ್‌ಸಿಬಿಗೆ ಇನ್ನೂ ಕೂಡ 4 ಪಂದ್ಯಗಳು ಬಾಕಿ ಉಳಿದಿದ್ದು, ಅವುಗಳ ಪೈಕಿ ಮೂರು ಪಂದ್ಯಗಳು ಬೆಂಗಳೂರಿನ ತವರು ಮೈದಾನದಲ್ಲೇ ನಡೆಯಲಿದೆ. ಲಕ್ನೋ ವಿರುದ್ಧ ಮೇ 9ರಂದು ನಡೆಯಲಿರುವ ಪಂದ್ಯ ಮಾತ್ರ ಲಕ್ನೋದ ಏಕನಾ ಸ್ಟೇಡಿಯಂನಲ್ಲಿ ನಡೆಯಲಿದೆ.
Playing 𝘽𝙤𝙡𝙙 and marching on 😎
— IndianPremierLeague (@IPL) April 27, 2025
The red-hot @RCBTweets claim the top of the points table after Match 4️⃣6️⃣ ❤
Will they continue to stay on the 🔝? 🤔#TATAIPL pic.twitter.com/EB0E14pVGc
ಬೆಂಗಳೂರಿನ ಚಿನ್ನಸ್ವಾಮಿಯಲ್ಲಿ ನಡೆಯಲಿರುವ ಮೂರು ಪಂದ್ಯಗಳು ಮೇ 3ರಂದು ಚೆನ್ನೈ ವಿರುದ್ಧ, ಮೇ 13ರಂದು ಸನ್‌ರೈಸರ್ಸ್ ಹೈದರಾಬಾದ್ ಹಾಗೂ ಮೇ 17ರಂದು ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ತಮ್ಮ ಲೀಗ್ ಹಂತದ ಕೊನೆಯ ಪಂದ್ಯವನ್ನಾಡಲಿದೆ. ಈವರೆಗೆ ಆಡಿರುವ ಏಳು ಪಂದ್ಯಗಳನ್ನು ಗೆಲ್ಲುವ ಮೂಲಕ ಆರ್‌ಸಿಬಿ ಪ್ಲೇ-ಆಫ್‌ಗೇರುವ ಸ್ಥಾನವನ್ನು ಬಹುತೇಕ ಶೇಕಡಾ 90ರಷ್ಟು ಖಚಿತಪಡಿಸಿಕೊಂಡಿದೆ. ಇನ್ನುಳಿದ ನಾಲ್ಕೂ ಪಂದ್ಯಗಳನ್ನು ಗೆಲ್ಲಲಿ ಎಂಬುದು ಆರ್‌ಸಿಬಿ ಅಭಿಮಾನಿಗಳ ಬಯಕೆಯಾಗಿದೆ.
6 Away wins on the trot. Never done before. 😤
— Royal Challengers Bengaluru (@RCBTweets) April 28, 2025
We will continue to #PlayBold. ⚡️#ನಮ್ಮRCB #IPL2025 #DCvRCB pic.twitter.com/4S0RE0ixnd
ಪ್ಲೇ-ಆಫ್‌ಗೇರಲು ಯಾವ ತಂಡಕ್ಕೆ ಎಷ್ಟು ಶೇಕಡಾ ಅವಕಾಶ?
ಆರ್‌ಸಿಬಿ ಪ್ಲೇ-ಆಫ್‌ಗೇರುವ ಸ್ಥಾನವನ್ನು ಬಹುತೇಕ ಶೇಕಡಾ 90ರಷ್ಟು ಖಚಿತಪಡಿಸಿಕೊಂಡಿದೆ. ಇನ್ನುಳಿದಂತೆ ಸದ್ಯದ ಅಂಕಪಟ್ಟಿಯ ಪ್ರಕಾರ, ಗುಜರಾತ್ ಟೈಟಾನ್ಸ್ 2ನೇ ಸ್ಥಾನ, ಸತತವಾಗಿ ಕಳೆದ ಐದೂ ಪಂದ್ಯಗಳನ್ನು ಗೆದ್ದುಕೊಂಡಿರುವ ಹಾರ್ದಿಕ್ ಪಾಂಡ್ಯ ನೇತೃತ್ವದ ಮುಂಬೈ ಇಂಡಿಯನ್ಸ್ 3ನೇ ಸ್ಥಾನದಲ್ಲಿದೆ. ಈವರೆಗೆ ಒಂಭತ್ತು ಪಂದ್ಯಗಳನ್ನಾಡಿ ಆರರಲ್ಲಿ ಗೆದ್ದು, ಸದ್ಯ +0.482 ನೆಟ್ ರನ್‌ರೇಟ್‌ನೊಂದಿಗೆ ಅಕ್ಷರ್ ಪಟೇಲ್ ನೇತೃತ್ವದ ಡೆಲ್ಲಿ ಕ್ಯಾಪಿಟಲ್ಸ್ ಅಂಕಪಟ್ಟಿಯಲ್ಲಿ 4ನೇ ಸ್ಥಾನಲ್ಲಿದೆ. ಗುಜರಾತ್ 87 ಶೇ, ಮುಂಬೈ 64 ಶೇ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ಶೇಕಡಾ 75ರಷ್ಟು ಅವಕಾಶ ಹೊಂದಿದೆ.
IPL 2025 Playoffs Chances:
— Mufaddal Vohra (@mufaddal_vohra) April 28, 2025
RCB – 90%.
GT – 87%.
DC – 75%.
MI – 64%.
PBKS – 58%.
LSG – 19%.
KKR – 6%.
SRH – 1%.
RR ~ 0.1%.
CSK ~ 0.03%.
ಇನ್ನುಳಿದಂತೆ ಸದ್ಯದ ಲೆಕ್ಕಾಚಾರದ ಪ್ರಕಾರ, ಪ್ಲೇ-ಆಫ್‌ಗೇರಲು ಉಳಿದ ಯಾವ ತಂಡಕ್ಕೆ ಎಷ್ಟು ಶೇಕಡಾದಷ್ಟು ಅವಕಾಶ ಎನ್ನುವುದನ್ನು ಗಮನಿಸಿದರೆ, ಈವರೆಗೆ ಆಡಿರುವ ಒಂಭತ್ತು ಪಂದ್ಯಗಳ ಪೈಕಿ ಏಳರಲ್ಲಿ ಸೋತು ಕಳಪೆ ಪ್ರದರ್ಶನ ನೀಡಿರುವ ಐದು ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಕೇವಲ 0.03% ಶೇಕಡಾದಷ್ಟು ಮಾತ್ರ ಅವಕಾಶ ಹೊಂದಿದೆ. ಆ ಮೂಲಕ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ.
ಇನ್ನುಳಿದಂತೆ ಪಂಜಾಬ್ ಕಿಂಗ್ಸ್ ಶೇ.58ರಷ್ಟು, ಲಕ್ನೋ ಶೇ. 19ರಷ್ಟು, ಹಾಲಿ ಚಾಂಪಿಯನ್ ಕೋಲ್ಕತ್ತಾ ನೈಟ್ ರೈಡರ್ಸ್ ಕೇವಲ 6 ಶೇಕಡಾ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ಶೇ.1, ರಾಜಸ್ಥಾನ ರಾಯಲ್ಸ್ 0.1 ಶೇಕಡಾ ಮಾತ್ರ ಅವಕಾಶ ಹೊಂದಿದೆ.
ಅಂಕಪಟ್ಟಿಯಲ್ಲಿ ಬಲಿಷ್ಠವಾಗಿರುವ ಶುಭಮನ್ ಗಿಲ್ ನೇತೃತ್ವದ ಗುಜರಾತ್ ತಂಡ!
ಈ ಬಾರಿಯ ಐಪಿಎಲ್‌ನ ಹತ್ತೂ ತಂಡಗಳಲ್ಲಿ ಗುಜರಾತ್ ತಂಡವೇ ಅಂಕಪಟ್ಟಿಯಲ್ಲಿ ಬಲಿಷ್ಠವಾಗಿ ಗೋಚರಿಸುತ್ತಿದೆ. ಯಾಕೆಂದರೆ ಕಡಿಮೆ ಪಂದ್ಯಗಳಿಂದ ಹೆಚ್ಚು ಅಂಕ ಗಳಿಸಿರುವ ತಂಡ ಇದಾಗಿದ್ದು, ಉತ್ತಮ ನೆಟ್ ರನ್ ರೇಟ್ ಅನ್ನು ಸಹ ಹೊಂದಿದೆ. ಸೋಮವಾರ(ಏಪ್ರಿಲ್ 28) ಸಂಜೆ ಜೈಪುರದ ಮೈದಾನದಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ವಿರುದ್ಧ ನಡೆಯಲಿರುವ ಲೀಗ್‌ನ 47ನೇ ಪಂದ್ಯದಲ್ಲಿ ಗುಜರಾತ್ ಒಂದು ವೇಳೆ ಗೆದ್ದಲ್ಲಿ ಮತ್ತೊಮ್ಮೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನಿಯಾಗಲಿದೆ.
ಅಂಕಪಟ್ಟಿಯ ಈ ಹಾವು ಏಣಿಯಾಟದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತನ್ನ ನೆಲೆ ಕಂಡುಕೊಳ್ಳಬೇಕಾದ ಅಗತ್ಯವಿದೆ. ಪ್ಲೇ ಆಫ್ ರೇಸ್ ನಲ್ಲಿ 16 ಅಂಕ ಗಳಿಸಿದಲ್ಲಿ ‘ಸಂಪೂರ್ಣ ಸೇಫ್’ ಆಗಲಿದೆ. ಅಂದರೆ ಆರ್‌ಸಿಬಿ ಇನ್ನುಳಿದ 4 ಪಂದ್ಯಗಳಲ್ಲಿ ಒಂದನ್ನು ಗೆದ್ದರೂ ಅಗ್ರ 4ರೊಳಗೆ ಆಯ್ಕೆ ಆಗುವುದು ಖಚಿತ. ಎರಡಕ್ಕಿತ ಹೆಚ್ಚು ಗೆಲುವು ರಜತ್ ಪಾಟೀದಾರ್ ಬಳಗವನ್ನು ಮತ್ತಷ್ಟು ಸುರಕ್ಷಿತ ಮತ್ತು ಉನ್ನತ ಸ್ಥಾನಕ್ಕೆ ಕೊಂಡೊಯ್ಯಬಹುದು. ಆಗ ಉಳಿದ ತಂಡಗಳ ಸೋಲು ಗೆಲುವುಗಳು ಆರ್‌ಸಿಬಿಯ ಪ್ಲೇ ಆಫ್ ಹಾದಿಯಲ್ಲಿ ಸಮಸ್ಯೆಯನ್ನು ಉಂಟು ಮಾಡಲಾರದು.
ಆರ್‌ಸಿಬಿ ಬಳಗಕ್ಕೆ ಬಂದ ಆರೆಂಜ್ & ಪರ್ಪಲ್ ಕ್ಯಾಪ್
ಆರ್‌ಸಿಬಿ ಆಡಿರುವ 10 ಪಂದ್ಯಗಳಲ್ಲಿಯೂ ಬ್ಯಾಟಿಂಗ್ ಮಾಡಿರುವ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ, 2025ರ ಸೀಸನ್‌ನಲ್ಲಿ 443 ರನ್‌ಗಳನ್ನು ಬಾರಿಸುವ ಮೂಲಕ ಸದ್ಯ ‘ಆರೆಂಜ್ ಕ್ಯಾಪ್’ ಅನ್ನು ಧರಿಸುವಲ್ಲಿ ಯಶಸ್ವಿಯಾಗಿದ್ದಾರೆ.
CAPturing the Orange and Purple! 🧡💜 pic.twitter.com/2qmRiOLqRA
— Royal Challengers Bengaluru (@RCBTweets) April 28, 2025
ಆರು ಅರ್ಧಶತಕ ಬಾರಿಸಿರುವ ಕಿಂಗ್ ಕೊಹ್ಲಿ, 138.87 ಸ್ಟ್ರೈಕ್ ರೇಟ್ ಹೊಂದಿದ್ದಾರೆ. ವಿರಾಟ್ ಬ್ಯಾಟ್‌ನಿಂದ ಬಂದಿರುವ 443 ರನ್‌ಗಳ ಪೈಕಿ 39 ಬೌಂಡರಿ ಹಾಗೂ 13 ಸಿಕ್ಸ್ ಒಳಗೊಂಡಿದೆ. ಪಂಜಾಬ್ ಕಿಂಗ್ಸ್ ವಿರುದ್ಧ ನಡೆದಿದ್ದ ಪಂದ್ಯದಲ್ಲಿ ಔಟಾಗದೇ 73 ರನ್ ಗಳಿಸಿರುವುದು ಈ ಸೀಸನ್‌ನಲ್ಲಿ ಗಳಿಸಿರುವ ಅತ್ಯಧಿಕ ಸ್ಕೋರ್ ಆಗಿದೆ.
ಇನ್ನು ಅತಿ ಹೆಚ್ಚು ವಿಕೆಟ್ ಪಡೆದವರಿಗೆ ನೀಡುವ ಪರ್ಪಲ್ ಕ್ಯಾಪ್ ಕೂಡ ಸದ್ಯ ಆರ್‌ಸಿಬಿ ಬಳಗದಲ್ಲಿದೆ. ಆರ್‌ಸಿಬಿಯ ಸ್ಟಾರ್ ಬೌಲರ್ ಆಗಿರುವ ಜೋಶ್ ಹೇಝಲ್‌ವುಡ್, 18 ವಿಕೆಟ್‌ಗಳನ್ನು ಪಡೆಯುವ ಮೂಲಕ ಪರ್ಪಲ್ ಕ್ಯಾಪ್ ಧರಿಸಿಕೊಂಡಿದ್ದಾರೆ. ರಾಜಸ್ಥಾನದ ವಿರುದ್ಧ ತವರು ಮೈದಾನ ಚಿನ್ನಸ್ವಾಮಿಯಲ್ಲಿ ನಡೆದಿದ್ದ ಪಂದ್ಯದಲ್ಲಿ 33 ರನ್ ನೀಡಿ 4 ವಿಕೆಟ್ ಪಡೆದಿದ್ದ ಹೇಝಲ್‌ವುಡ್, ರೋಚಕವಾಗಿ ಗೆಲುವು ಸಾಧಿಸಲು ನೆರವಾಗಿದ್ದರು. ಸದ್ಯ ಈ ಸೀಸನ್‌ನಲ್ಲಿ ಇದು ಅವರ ‘ಬೆಸ್ಟ್ ಬೌಲಿಂಗ್’ ಆಗಿದೆ.