IPL | RCB ಪಂದ್ಯದಲ್ಲಿ RR ಮ್ಯಾನೇಜರ್ ಮೊಬೈಲ್ ಹಿಂದಿನ ಅಸಲಿ ಕಥೆ ಏನು?

Date:

ಡಗೌಟ್‌ನಲ್ಲಿ ಮೊಬೈಲ್ ಬಳಕೆಯನ್ನು ಕೇವಲ ಸಾಮಾನ್ಯ ತಪ್ಪು ಎಂದು ಪರಿಗಣಿಸಲು ಬಿಸಿಸಿಐ ಸಿದ್ಧವಿಲ್ಲ. ಭ್ರಷ್ಟಾಚಾರ ನಿಗ್ರಹ ದಳ ತನಿಖೆ ಆರಂಭಿಸಿರುವುದರಿಂದ, ಪಂದ್ಯದ ವೇಳೆ ಬೆಟ್ಟಿಂಗ್, ಬುಕ್ಕಿಗಳ ಜೊತೆ ಸಂಪರ್ಕ ಅಥವಾ ಪಂದ್ಯದ ಒಳಗಿನ ಮಾಹಿತಿಯನ್ನು ಸೋರಿಕೆ ಮಾಡುವಂತಹ ಬೇರೆ ಯಾವುದೇ ನಿಗೂಢ ಚಟುವಟಿಕೆಗಳು ನಡೆಯುತ್ತಿದೆಯೇ ಎಂಬ ಅನುಮಾನಗಳು ಹುಟ್ಟಿಕೊಂಡಿವೆ

- Advertisement -

ಕ್ರೀಡಾಂಗಣದಲ್ಲಿ ಹೈವೋಲ್ಟೇಜ್ ಪಂದ್ಯ ನಡೆಯುತ್ತಿದ್ದರೆ, ಇತ್ತ ಡಗೌಟ್‌ನಲ್ಲಿ(ಮೈದಾನದ ಬೌಂಡರಿ ಗೆರೆಯ ಪಕ್ಕದಲ್ಲಿಯೇ ತಂಡದ ಆಟಗಾರರು ಮತ್ತು ಸಿಬ್ಬಂದಿ ಕುಳಿತುಕೊಳ್ಳಲು ಮೀಸಲಾಗಿರುವ ವಿಶೇಷ ಸ್ಥಳವಾಗಿದೆ) ಮಾತ್ರ ಬೇರೆಯದ್ದೇ ‘ಆಟ’ ನಡೆಯುತ್ತಿತ್ತಾ? ಐಪಿಎಲ್ 2026ರ  ಆರ್‌ಸಿಬಿ ಮತ್ತು ರಾಜಸ್ಥಾನ್ ರಾಯಲ್ಸ್ ನಡುವಿನ ರೋಚಕ ಪಂದ್ಯವೀಗ ಮೈದಾನದ ಆಚೆಗೂ ಭಾರೀ ಸಂಚಲನ ಸೃಷ್ಟಿಸಿದೆ. ಕಟ್ಟುನಿಟ್ಟಿನ ನಿಯಮಗಳನ್ನು ಗಾಳಿಗೆ ತೂರಿ, ಪಂದ್ಯದ ನಡುವೆಯೇ ಡಗೌಟ್‌ನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ಮ್ಯಾನೇಜರ್ ರೋಮಿ ಭಿಂದರ್ ಮೊಬೈಲ್ ಬಳಸಿದ್ದು ಲೈವ್ ಕ್ಯಾಮರಾದಲ್ಲಿ ಸೆರೆಯಾಗಿದೆ. ಈ ಒಂದು ದೃಶ್ಯವೀಗ ಭ್ರಷ್ಟಾಚಾರ, ಬೆಟ್ಟಿಂಗ್ ಮತ್ತು ಪಂದ್ಯದ ಒಳಗಿನ ಮಾಹಿತಿ ಸೋರಿಕೆಯಂತಹ ಹತ್ತಾರು ಅನುಮಾನಗಳ ಕಿಡಿಯನ್ನು ಹೊತ್ತಿಸಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಕ್ಷಿಪಣಿ ಬಿಡಿಭಾಗಗಳ ಖರೀದಿಯಲ್ಲಿ ಸ್ವಜನಪಕ್ಷಪಾತ; ಬಿಡಿಎಲ್ ಮಾಜಿ ಮುಖ್ಯಸ್ಥನ...

ಕ್ಷಿಪಣಿಯ ಆಪ್ಟಿಕಲ್ ಸೈಟ್‌ಗಳ ಪೂರೈಕೆಗಾಗಿ ಭಾರತ್ ಡೈನಾಮಿಕ್ಸ್ ಲಿಮಿಟೆಡ್ (BDL) ತನ್ನದೇ ಸಂಸ್ಥೆಯ ಮಾಜಿ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕರ (CMD) ಪತ್ನಿಯ ಒಡೆತನದ ಖಾಸಗಿ ಕಂಪನಿಗೆ 'ತುರ್ತು' ನೆಪವೊಡ್ಡಿ 56.8 ಕೋಟಿ...

ನುಡಿ ನಮನ | ಚೆರುವಯಲ್ ರಾಮನ್ – ಭತ್ತದ...

ಕೃಷಿ ಎಂದರೆ ಕೇವಲ ಬೆಳೆ ಬೆಳೆಯುವುದಲ್ಲ; ಬಿತ್ತನೆಗೆ ಸೂಕ್ತವಾದ ಬೀಜಗಳನ್ನು ಆಯ್ಕೆ ಮಾಡುವುದು, ಅವುಗಳನ್ನು ಸಂಗ್ರಹಿಸುವುದು ಹಾಗೂ ಮುಂದಿನ ಋತುವಿಗೆ ಉಳಿಸುವುದೂ ಕೃಷಿಯ ಅವಿಭಾಜ್ಯ ಅಂಗ ಎನ್ನುತ್ತಿದ್ದ ರಾಮನ್, ತಮ್ಮ ಇಡೀ ಜೀವನವನ್ನೇ...

ಬರಗಾಲದ ದಸರಾದಲ್ಲಿ ಕಂಬಳದ ಹಠ: ಜನಾಭಿಪ್ರಾಯಕ್ಕೆ ಬೆಲೆಯಿಲ್ಲವೇ?

ನೀರಿನ ಅಭಾವ, ಪರಿಸರ ನಾಶ, ಸಾರ್ವಜನಿಕ ಹಣದ ವೆಚ್ಚದ ನಡುವೆ ಸರ್ಕಾರದ ಸಮರ್ಥನೆ; ಇತಿಹಾಸದ ಹೆಸರಿನಲ್ಲಿ ವಿವಾದ, ಆಡಳಿತದ ನಡೆಗೆ ಸಾರ್ವಜನಿಕರ ಪ್ರಶ್ನೆ. ರಾಜ್ಯದ ಜನತೆ ಬರಗಾಲದ ಸಂಕಷ್ಟ ಎದುರಿಸುತ್ತಿರುವಾಗ, ರೈತರು ಮಳೆ-ಬೆಳೆಯಿಲ್ಲದೆ ಕಂಗಾಲಾಗಿರುವಾಗ,...

ಇಂಡಿಯನ್ ಪ್ರೀಮಿಯರ್ ಲೀಗ್ (IPL) 2026ರ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ವಿರುದ್ಧದ ಪಂದ್ಯದ ವೇಳೆ ಡಗೌಟ್‌ನಲ್ಲಿ ಮೊಬೈಲ್ ಫೋನ್ ಬಳಸಿದ ರಾಜಸ್ಥಾನ್ ರಾಯಲ್ಸ್ ತಂಡದ ಮ್ಯಾನೇಜರ್ ರೋಮಿ ಭಿಂದರ್ ಅವರಿಗೆ ಬಿಸಿಸಿಐನ ಭ್ರಷ್ಟಾಚಾರ ನಿಗ್ರಹ ಮತ್ತು ಭದ್ರತಾ ಘಟಕ (ACSU) ಶೋಕಾಸ್ (ಕಾರಣ ಕೇಳಿ) ನೋಟಿಸ್ ಜಾರಿ ಮಾಡಿದೆ. 48 ಗಂಟೆಗಳ ಒಳಗೆ ಈ ಬಗ್ಗೆ ಸೂಕ್ತ ವಿವರಣೆ ನೀಡುವಂತೆ ಸೂಚಿಸಲಾಗಿದೆ.

ಏಪ್ರಿಲ್ 10ರಂದು ಗುವಾಹಟಿಯ ಬರ್ಸಾಪರಾ ಕ್ರೀಡಾಂಗಣದಲ್ಲಿ ನಡೆದ ಆರ್‌ಸಿಬಿ ಮತ್ತು ರಾಜಸ್ಥಾನ್ ರಾಯಲ್ಸ್ ನಡುವಿನ ಪಂದ್ಯದ ವೇಳೆ ಈ ಘಟನೆ ನಡೆದಿದೆ. ರಾಜಸ್ಥಾನ್ ರಾಯಲ್ಸ್ ತಂಡ 202 ರನ್‌ಗಳ ಗುರಿ ಬೆನ್ನತ್ತಿದ್ದಾಗ, 11ನೇ ಓವರ್‌ನಲ್ಲಿ ಮ್ಯಾನೇಜರ್ ರೋಮಿ ಭಿಂದರ್ ಅವರು ಡಗೌಟ್‌ನಲ್ಲಿ ಕುಳಿತು ಮೊಬೈಲ್ ಫೋನ್ ಬಳಸುತ್ತಿರುವ ದೃಶ್ಯ ನೇರಪ್ರಸಾರದಲ್ಲಿ ಸೆರೆಯಾಗಿತ್ತು. ಅವರ ಪಕ್ಕದಲ್ಲೇ ಯುವ ಆಟಗಾರ ವೈಭವ್ ಸೂರ್ಯವಂಶಿ ಕೂಡ ಕುಳಿತಿದ್ದರು. ಈ ದೃಶ್ಯವು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತ ಬಿಸಿಸಿಐ, ತಕ್ಷಣವೇ ಕಠಿಣ ಕ್ರಮಕ್ಕೆ ಮುಂದಾಗಿದೆ.

ಬಿಸಿಸಿಐ ಮತ್ತು ಐಪಿಎಲ್ ನಿಯಮಾವಳಿಗಳ ಪ್ರಕಾರ, ಆಟಗಾರರು ಮತ್ತು ಪಂದ್ಯದ ಅಧಿಕಾರಿಗಳ ಪ್ರದೇಶದಲ್ಲಿ (PMOA – Players and Match Officials Area) ಯಾವುದೇ ಸಂವಹನ ಸಾಧನಗಳು ಅಥವಾ ಮೊಬೈಲ್ ಫೋನ್‌ಗಳನ್ನು ಬಳಸುವಂತಿಲ್ಲ. ತಂಡದ ಮ್ಯಾನೇಜರ್‌ಗಳಿಗೆ ಮೊಬೈಲ್ ಇಟ್ಟುಕೊಳ್ಳಲು ವಿನಾಯಿತಿ ಇದ್ದರೂ, ಅದನ್ನು ಕೇವಲ ಡ್ರೆಸ್ಸಿಂಗ್ ರೂಮ್‌ನೊಳಗೆ ಮಾತ್ರ ಬಳಸಬೇಕು. ಆದರೆ, ಭಿಂದರ್ ಅವರು ಡಗೌಟ್ ಬಳಿ ಕುಳಿತು ಫೋನ್ ಬಳಸಿರುವುದು ನಿಯಮಗಳ ಅತಿ ದೊಡ್ಡ ಉಲ್ಲಂಘನೆಯಾಗಿದೆ.

ಇದನ್ನು ಓದಿದ್ದೀರಾ? ಕಪ್ಪು ಮೈಬಣ್ಣ ಭೇದಭಾವಕ್ಕೆ ಅತ್ಯುತ್ತಮ ಆಟವೇ ಪ್ರತ್ಯುತ್ತರ: ಅನುಭವ ತೋಡಿಕೊಂಡ ಟೆನಿಸ್ ದಿಗ್ಗಜ

ಡಗೌಟ್‌ನಲ್ಲಿ ಮೊಬೈಲ್ ಬಳಕೆಯನ್ನು ಕೇವಲ ಸಾಮಾನ್ಯ ತಪ್ಪು ಎಂದು ಪರಿಗಣಿಸಲು ಬಿಸಿಸಿಐ ಸಿದ್ಧವಿಲ್ಲ. ಭ್ರಷ್ಟಾಚಾರ ನಿಗ್ರಹ ದಳ ತನಿಖೆ ಆರಂಭಿಸಿರುವುದರಿಂದ, ಪಂದ್ಯದ ವೇಳೆ ಬೆಟ್ಟಿಂಗ್, ಬುಕ್ಕಿಗಳ ಜೊತೆ ಸಂಪರ್ಕ ಅಥವಾ ಪಂದ್ಯದ ಒಳಗಿನ ಮಾಹಿತಿಯನ್ನು ಸೋರಿಕೆ ಮಾಡುವಂತಹ ಬೇರೆ ಯಾವುದೇ ನಿಗೂಢ ಚಟುವಟಿಕೆಗಳು ನಡೆಯುತ್ತಿದೆಯೇ ಎಂಬ ಅನುಮಾನಗಳು ಹುಟ್ಟಿಕೊಂಡಿವೆ. ಫೋನ್‌ನ ಕಾಲ್ ಹಿಸ್ಟರಿ ಮತ್ತು ಡೇಟಾವನ್ನು ಪರಿಶೀಲಿಸಿದ ನಂತರವಷ್ಟೇ ಇದರ ಹಿಂದಿನ ನೈಜ ಉದ್ದೇಶವೇನು ಎಂಬುದು ಸಂಪೂರ್ಣವಾಗಿ ಬಯಲಾಗಲಿದೆ.

ಮೂಲಗಳ ಪ್ರಕಾರ, ರೋಮಿ ಭಿಂದರ್ ಅವರು ಇತ್ತೀಚೆಗಷ್ಟೇ ಗಂಭೀರವಾದ ಶ್ವಾಸಕೋಶದ ಸಮಸ್ಯೆಯಿಂದ ಚೇತರಿಸಿಕೊಳ್ಳುತ್ತಿದ್ದಾರೆ. ಅವರಿಗೆ ಅಸ್ತಮಾ ಕೂಡ ಇದ್ದು, ಡ್ರೆಸ್ಸಿಂಗ್ ರೂಮ್‌ಗೆ ಪದೇ ಪದೇ ಮೆಟ್ಟಿಲು ಹತ್ತಿ ಹೋಗಲು ಸಾಧ್ಯವಾಗುತ್ತಿಲ್ಲ. ಈ ವೈದ್ಯಕೀಯ ಸಮಸ್ಯೆಯ ಬಗ್ಗೆ ಟೂರ್ನಿಗೂ ಮುನ್ನವೇ ಅವರು ಬಿಸಿಸಿಐಗೆ ಮಾಹಿತಿ ನೀಡಿದ್ದರು. ಅಲ್ಲದೆ, ತಾವು ಫೋನ್‌ನಲ್ಲಿ ಯಾರಿಗೂ ಕರೆ ಮಾಡುತ್ತಿರಲಿಲ್ಲ, ಬದಲಾಗಿ ಪ್ರಾಯೋಜಕತ್ವ ಮತ್ತು ತಂಡದ ಲಾಜಿಸ್ಟಿಕಲ್ ವಿಷಯಗಳನ್ನು ಮಾತ್ರ ನೋಡಿಕೊಳ್ಳುತ್ತಿದ್ದೆ ಎಂದು ಅವರು ಸಮರ್ಥಿಸಿಕೊಂಡಿದ್ದಾರೆ ಎನ್ನಲಾಗಿದೆ.

ಈ ಪ್ರಕರಣದ ಕುರಿತು ಪ್ರತಿಕ್ರಿಯಿಸಿರುವ ಬಿಸಿಸಿಐ ಜಂಟಿ ಕಾರ್ಯದರ್ಶಿ ದೇವಜಿತ್ ಸೈಕಿಯಾ, “ಇದೊಂದು ಆಂತರಿಕ ವಿಚಾರಣೆ. ಅವರು ತಮ್ಮ ಉತ್ತರವನ್ನು ನೀಡಲಿದ್ದಾರೆ, ನಂತರ ಮುಂದಿನ ಕ್ರಮದ ಬಗ್ಗೆ ನಿರ್ಧರಿಸಲಾಗುವುದು” ಎಂದಿದ್ದಾರೆ. ರೋಮಿ ಭಿಂದರ್ ಅವರು 2008 ರಿಂದಲೂ ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸಿಯೊಂದಿಗೆ ಕೆಲಸ ಮಾಡುತ್ತಿದ್ದು, ನಿಯಮಗಳ ಬಗ್ಗೆ ಅವರಿಗೆ ಅರಿವಿದೆ. ಅವರು ನೀಡುವ ಸ್ಪಷ್ಟನೆಯ ಆಧಾರದ ಮೇಲೆ, ಅವರಿಗೆ ದಂಡ ವಿಧಿಸಲಾಗುತ್ತದೆಯೋ ಅಥವಾ ಟೂರ್ನಿಯಿಂದ ಅಮಾನತು ಮಾಡಲಾಗುತ್ತದೆಯೋ ಎಂಬುದು ಮುಂದಿನ 48 ಗಂಟೆಗಳಲ್ಲಿ ನಿರ್ಧಾರವಾಗಲಿದೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕನ್ನಾಟ್ ಪ್ಲೇಸ್‌ನಲ್ಲಿ ಸಿಜೆಪಿ ಪ್ರತಿಭಟನೆ: ತಡೆ ನೀಡಲು ದೆಹಲಿ ಹೈಕೋರ್ಟ್ ನಕಾರ

ಮುಖ್ಯ ಚುನಾವಣಾ ಆಯುಕ್ತರ (ಸಿಇಸಿ) ರಾಜೀನಾಮೆಗೆ ಆಗ್ರಹಿಸಿ ಅಕ್ಟೋಬರ್ 16ರಂದು ದೆಹಲಿಯ...

ಔರಾದ್‌ | ನೀರು, ಆರೋಗ್ಯ ಸೇವೆ ಪರಿಶೀಲನೆ; ಕಾರ್ಮಿಕರ ಸಮಸ್ಯೆ ಆಲಿಸಿದ ಸಿಇಒ

ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ, ಆರೋಗ್ಯ ಸೇವೆ ಹಾಗೂ ಅಭಿವೃದ್ಧಿ...

ರಾಜ್ಯದ 12 ಜಿಲ್ಲೆಗಳಲ್ಲಿ ಮುಂದಿನ 3 ದಿನ ಭಾರೀ ಮಳೆ: ಹವಾಮಾನ ಇಲಾಖೆ

ತೀವ್ರ ಮಳೆ ಕೊರತೆಯಿಂದ ಕೂಡಿದ್ದ ಮುಂಗಾರು ಹಂಗಾಮು ಕೊನೆಗೊಂಡಿದೆ. ಹಿಂಗಾರು ಆರಂಭವಾಗಿದೆ....