ಕಪ್ಪು ಮೈಬಣ್ಣ ಭೇದಭಾವಕ್ಕೆ ಅತ್ಯುತ್ತಮ ಆಟವೇ ಪ್ರತ್ಯುತ್ತರ: ಅನುಭವ ತೋಡಿಕೊಂಡ ಟೆನಿಸ್ ದಿಗ್ಗಜ ವಿಜಯ್ ಅಮೃತ್‌ರಾಜ್

Date:

ಕ್ರೀಡೆಯಲ್ಲಿ ಮೈಬಣ್ಣದ ಆಧಾರದ ಮೇಲೆ ತಾರತಮ್ಯ ಮಾಡಲಾಗುತ್ತದೆ ಎಂದು ಬೇಸರಗೊಂಡು, ಮಾಜಿ ಕ್ರಿಕೆಟಿಗ ಲಕ್ಷ್ಮಣ್ ಶಿವರಾಮಕೃಷ್ಣನ್ ಅವರು ಇತ್ತೀಚೆಗೆ ಬಿಸಿಸಿಐ ಕಾಮೆಂಟರಿ ಕೆಲಸದಿಂದಲೂ ಹೊರಬಂದರು. ಭಾರತದ ಟೆನಿಸ್ ದಿಗ್ಗಜ ವಿಜಯ್ ಅಮೃತ್‌ರಾಜ್‌ ಅವರಿಗೂ ಹಿಂದೊಮ್ಮೆ ಇಂತಹ ಅನುಭವಗಳಾಗಿದ್ದವು. ಈ ಬಗ್ಗೆ ಟೈಮ್ಸ್‌ ಆಫ್ ಇಂಡಿಯಾದ ಪತ್ರಕರ್ತೆ ಪ್ರಜ್ವಲ್ ಹೆಗ್ಡೆ ಅವರ ಜೊತೆಗಿನ ಸಂದರ್ಶನದಲ್ಲಿ, ವಿಜಯ್ ಅಮೃತ್‌ರಾಜ್ ಅವರು ತಾವು ಎದುರಿಸಿದ ತಾರತಮ್ಯ, ತಮ್ಮ ಅಮ್ಮ ಬೀರಿದ ತಾಯಿಯ ಪ್ರಭಾವ ಹಾಗೂ ಇಂದಿನ ಟೆನಿಸ್ ತಾರೆಗಳಾದ ಅಲ್ಕರಾಜ್ ಮತ್ತು ಸಿನ್ನರ್ ಅವರ ಬಗ್ಗೆಯೂ ಮನಬಿಚ್ಚಿ ಮಾತನಾಡಿದ್ದಾರೆ.

- Advertisement -

ಪ್ರಜ್ವಲ್ ಹೆಗ್ಡೆ: ಮೈಬಣ್ಣ ಕಪ್ಪು ಎಂಬ ಕಾರಣಕ್ಕಾಗಿ ನೀವು ಎಂದಾದರೂ ತಾರತಮ್ಯ ಎದುರಿಸಿದ್ದೀರಾ?

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಡಾ. ಟಿ.ಎಸ್.‌ ಚನ್ನೇಶ್‌ ಸರಣಿ | ವೈದ್ಯಕೀಯ ನೊಬೆಲ್‌...

ನಮ್ಮ ಮೆದುಳು, ಭಾವನೆಗಳನ್ನು, ವರ್ತನೆಗಳನ್ನು ಮತ್ತು ದೈಹಿಕ ಕಾರ್ಯಗಳನ್ನು ಹೇಗೆ ನಿಯಂತ್ರಿಸುತ್ತದೆ ಎಂಬುದನ್ನು ಸಂಶೋಧನೆಯಿಂದ ಬಿಡಿಸಿಟ್ಟು 2026ರ ವೈದ್ಯಕೀಯ ನೊಬೆಲ್‌ ಪ್ರಶಸ್ತಿಗೆ ಪಾತ್ರರಾದ ಮೂವರು ಸಂಶೋಧಕರು ಮತ್ತು ಸಂಶೋಧನೆಯ ಸುತ್ತಲಿನ ವಿಶ್ಲೇಷಣಾತ್ಮಕ ಬರಹ ಈ...

ಪೊಲೀಸ್ ಸುಧಾರಣೆ | ಹೈಟೆಕ್ ಪೊಲೀಸಿಂಗ್ Vs ವಾಸ್ತವ:...

ಪೊಲೀಸ್‌ ಇಲಾಖೆಯನ್ನು ಆಧುನೀಕರಿಸಲು AI, ಸೈಬರ್‌ ತಂತ್ರಜ್ಞಾನ, ಡಿಜಿಟಲ್‌ ತನಿಖೆ, ಸಿಸಿಟಿವಿ, ಬಾಡಿ ಕ್ಯಾಮೆರಾ ಸೇರಿದಂತೆ ಹಲವು ತಂತ್ರಜ್ಞಾನಗಳು ಪ್ರವೇಶಿಸುತ್ತಿವೆ. ಆದರೆ ಹೈಟೆಕ್‌ ಆಗುತ್ತಿರುವ ಪೊಲೀಸ್‌ ವ್ಯವಸ್ಥೆ ಜನರ ಬದುಕಿಗೆ ಎಷ್ಟು ಹತ್ತಿರವಾಗುತ್ತಿದೆ?...

ಐದು ಭಾಷೆ, ಆರು ದಶಕ, ಅನಂತ ಪ್ರಯೋಗ: ಭಾರತೀಯ...

ಬದುಕಿನ ಕೊನೆಯ ಉಸಿರಿನವರೆಗೂ ಕೇವಲ ಸಿನಿಮಾವನ್ನೇ ಶ್ವಾಸವಾಗಿಸಿಕೊಂಡಿದ್ದ, 95ನೇ ವಯಸ್ಸಿನಲ್ಲೂ ಹೊಸ ಕಥೆಯ ಕನಸು ಕಾಣುತ್ತಿದ್ದ ಭಾರತೀಯ ಚಿತ್ರರಂಗದ ಅಪ್ರತಿಮ ದಾರ್ಶನಿಕ ಸಿಂಗೀತಂ ಶ್ರೀನಿವಾಸರಾವ್ ನಮ್ಮೊಂದಿಗಿಲ್ಲ. ಆರು ದಶಕಗಳ ಕಾಲ ತಮ್ಮ ಅನಂತ...

ವಿಜಯ್ ಅಮೃತ್‌ರಾಜ್:  ಕೆಲವರು ನನ್ನನ್ನು ಇಷ್ಟಪಡುವುದಿಲ್ಲ ಎಂದು ಹೇಳಿದ್ದಿದೆ. ಆದರೆ ಅದು ಮೈಬಣ್ಣ, ಜನಾಂಗ ಅಥವಾ ಧರ್ಮದ ಕಾರಣಕ್ಕೇ ಎಂದು ನನಗೆ ಖಚಿತವಾಗಿ ಹೇಳಲು ಸಾಧ್ಯವಿಲ್ಲ. ಕ್ರೀಡೆಯ ಅತಿ ದೊಡ್ಡ ವಿಶೇಷತೆ ಎಂದರೆ ಅಲ್ಲಿ ಪ್ರತಿಭೆಗೆ ಮಾತ್ರ ಬೆಲೆ ಸಿಗುತ್ತದೆ.

ಶಿವರಾಮಕೃಷ್ಣನ್ ಅವರ ವಿಚಾರ ನನಗೆ ಸರಿಯಾಗಿ ತಿಳಿದಿಲ್ಲ. ಆದರೆ, ಮೈಬಣ್ಣದ ಕಾರಣಕ್ಕಾಗಿ ಯಾರನ್ನಾದರೂ ಕೆಲಸದಿಂದ ತೆಗೆಯಲಾಗುತ್ತದೆ ಎಂದರೆ ನಂಬಲು ಕಷ್ಟವಾಗುತ್ತದೆ. ಏಕೆಂದರೆ ಕಾಮೆಂಟರಿ ಮಾಡುವುದು ಕೂಡ ಒಂದು ವಿಶೇಷ ಪ್ರತಿಭೆ. ಎಲ್ಲಾ ಶ್ರೇಷ್ಠ ಆಟಗಾರರು ಒಳ್ಳೆಯ ಕಾಮೆಂಟೇಟರ್ ಆಗಲು ಸಾಧ್ಯವಿಲ್ಲ. ಆದರೆ, ಶಿವರಾಮಕೃಷ್ಣನ್ ಅವರು ನಿಜವಾಗಿಯೂ ತಾರತಮ್ಯ ಅನುಭವಿಸಿದ್ದರೆ ಅದು ವೈಯಕ್ತಿಕವಾಗಿ ಬಹಳ ನೋವು ಕೊಡುತ್ತದೆ. ನನಗೆ ಅವರ ಬಗ್ಗೆ ಬೇಸರವಿದೆ. ಮುಖ್ಯ ಪ್ರಶ್ನೆ ಏನಂದರೆ, ಇಂಥ ಪರಿಸ್ಥಿತಿಯಿಂದ ಹೊರಬರುವುದು ಹೇಗೆ? ಏಕೆಂದರೆ ಇದು ಕೇವಲ ಅನ್ನದ ಅಥವಾ ವೃತ್ತಿಯ ಪ್ರಶ್ನೆಯಲ್ಲ, ನಾವು ಪ್ರೀತಿಸುವ ಕ್ರೀಡೆ ಕೂಡ ಹೌದು.

ಪ್ರಜ್ವಲ್ ಹೆಗ್ಡೆ: ಅಂತಹ ತಾರತಮ್ಯದಿಂದ ಹೊರಬರುವುದು ಹೇಗೆ?

ವಿಜಯ್ ಅಮೃತ್‌ರಾಜ್: ಇದಕ್ಕೆ ನನ್ನದೇ ಒಂದು ಉದಾಹರಣೆ ಕೊಡುತ್ತೇನೆ. 1973ರಲ್ಲಿ ನಾನು ಅಮೆರಿಕದ ನ್ಯೂ ಹ್ಯಾಂಪ್‌ಶೈರ್‌ನಲ್ಲಿ ಒಂದು ಟೆನಿಸ್ ಟೂರ್ನಿ ಆಡುತ್ತಿದ್ದೆ. ಆ ಟೂರ್ನಿಯಲ್ಲಿ ಪ್ರಖ್ಯಾತ ಆಟಗಾರರಾದ ರಾಡ್ ಲೇವರ್ ಮತ್ತು ಜಿಮ್ಮಿ ಕಾನರ್ಸ್ ಕೂಡ ಆಡುತ್ತಿದ್ದರು. ಮೊದಲನೆಯದಾಗಿ , ಆಗ ಟೆನಿಸ್  ಕೇವಲ ಬಿಳಿಯರ ಆಟವಾಗಿತ್ತು. ಎರಡನೆಯದಾಗಿ, ಟೂರ್ನಿ ನಡೆಯುತ್ತಿದ್ದ ಹೋಟೆಲ್‌ನಲ್ಲಿ ಹೋಟಲ್‌ನಲ್ಲಿ ವಯಸ್ಸಾದ ಬಿಳಿಯರೇ ತುಂಬಿದ್ದರು.  ರಾತ್ರಿ ಊಟಕ್ಕೆ ಎಲ್ಲರೂ ಕೋಟ್ ಮತ್ತು ಟೈ ಧರಿಸಿ ಬರಬೇಕಿತ್ತು. ನನಗೆ ಆಗ ಕೇವಲ 19 ವರ್ಷ. ನನ್ನ ಬಳಿ ಅಷ್ಟೊಂದು ಕೋಟ್-ಟೈಗಳು ಇರಲಿಲ್ಲ. ಹಾಗಾಗಿ ನಾನು ಮದ್ರಾಸ್ ಶರ್ಟ್, ಜೀನ್ಸ್ ಪ್ಯಾಂಟ್ ಮತ್ತು ಕೊಲ್ಹಾಪುರಿ ಚಪ್ಪಲಿ ಹಾಕಿಕೊಂಡು ಹೋಗಿದ್ದೆ.

ನಾನು ಅಲ್ಲಿಗೆ ಹೋದಾಗ ಕೋಣೆಯಲ್ಲಿದ್ದ ಎಲ್ಲರೂ ನನ್ನನ್ನೇ ವಿಚಿತ್ರವಾಗಿ ನೋಡುತ್ತಿದ್ದರು. ಆದರೆ ಆ ವಾರ ನಾನು ಸತತವಾಗಿ ಪಂದ್ಯಗಳನ್ನು ಗೆದ್ದೆ. ಸೋಲುವ ಹಂತದಲ್ಲಿದ್ದರೂ ಹೋರಾಡಿ ಪ್ರಖ್ಯಾತ ಆಟಗಾರ ರಾಡ್ ಲೇವರ್ ಅವರನ್ನು ಸೋಲಿಸಿದೆ. ಫೈನಲ್ ಪಂದ್ಯದಲ್ಲಿ ಕಾನರ್ಸ್ ವಿರುದ್ಧ ಆಡಿದೆ. ಅಲ್ಲಿ 8,000 ಪ್ರೇಕ್ಷಕರಿದ್ದರು, ಎಲ್ಲರೂ ಬಿಳಿಯರೇ. ಅವರಲ್ಲಿ ಕೇವಲ ಇಬ್ಬರು ಮಾತ್ರ ನನ್ನ ಎದುರಾಳಿಯ ಪರವಾಗಿದ್ದರು. ಕೊನೆಗೆ ಆ ಫೈನಲ್ ಪಂದ್ಯವನ್ನು ನಾನು ಗೆದ್ದೆ.  ಅಚ್ಚರಿಯೆಂದರೆ, ಅಂದು ರಾತ್ರಿ ನಾನು ಊಟಕ್ಕೆ ಹೋದಾಗ ಆ ಹೋಟೆಲ್‌ನಲ್ಲಿದ್ದ ಅನೇಕ ಬಿಳಿಯರು ‘ಚಪ್ಪಲಿ’ ಧರಿಸಿಕೊಂಡು ಬಂದಿದ್ದರು. ನಮ್ಮ ಸಾಧನೆ ಮತ್ತು ನಮ್ಮ ವರ್ತನೆಯಿಂದ ಜನರ ಮನಸ್ಸನ್ನು ಗೆದ್ದು, ಅವರ ತಪ್ಪು ನಂಬಿಕೆಗಳನ್ನು ಬದಲಾಯಿಸಬಹುದು ಎಂಬುದಕ್ಕೆ ಇದೊಂದು ಉದಾಹರಣೆ ಅಷ್ಟೇ.

ಪ್ರಜ್ವಲ್ ಹೆಗ್ಡೆ: ಹೊರದೇಶಕ್ಕಿಂತ ಭಾರತದಲ್ಲೇ ನೀವು ನಿಮ್ಮ ಮೈಬಣ್ಣದ ತಾರತಮ್ಯವನ್ನು ಹೆಚ್ಚು ಅನುಭವಿಸಿದ್ದೀರಾ?

ವಿಜಯ್ ಅಮೃತ್‌ರಾಜ್: ಇದಕ್ಕೆ ಪ್ರಾಮಾಣಿಕ ಉತ್ತರವೆಂದರೆ, ಒಂದು ವೇಳೆ ನಾನು ಅದನ್ನು ಅನುಭವಿಸಿದ್ದರೂ, ಅದು ನನಗೆ ಗೊತ್ತಾಗಲಿಲ್ಲ. ‘ಯಾವತ್ತೂ ದೂರು ಹೇಳಬೇಡ, ನಿನ್ನ ಕೆಲಸದಲ್ಲಿ ನೀನು ಅತ್ಯುತ್ತಮವಾಗಿರು’ ಎಂದು ನಮ್ಮ ತಾಯಿ ಯಾವಾಗಲೂ ನಮಗೆ ಹೇಳುತ್ತಿದ್ದರು. ಹಾಗಾಗಿ, 1972ರ ಕ್ರಿಸ್‌ಮಸ್ ದಿನದಂದು, ಕೋಲ್ಕತ್ತಾದಲ್ಲಿ ರಾಮನಾಥನ್ ಕೃಷ್ಣನ್ ಅವರನ್ನು ಸೋಲಿಸಿ ನಾನು ಮೊದಲ ಬಾರಿಗೆ ನ್ಯಾಷನಲ್ಸ್ ಗೆದ್ದಾಗ, ಮತ್ತು ನಾನು ಹಾಗೂ ಆನಂದ್ (ವಿಜಯ್ ಅವರ ಸಹೋದರ ಅಮೃತ್‌ರಾಜ್) ಡಬಲ್ಸ್ ಗೆದ್ದಾಗ, ಹಾಗೂ ನನ್ನ ಕಿರಿಯ ಸಹೋದರ ಅಶೋಕ್ ಜೂನಿಯರ್ಸ್ ವಿಭಾಗದಲ್ಲಿ ಗೆದ್ದಾಗ (ಇದೆಲ್ಲವೂ ಒಂದೇ ದಿನದಲ್ಲಿ ನಡೆಯಿತು), ನಿಮ್ಮ ಮೈಬಣ್ಣ ಯಾವುದು, ಯಾವ ಧರ್ಮದವರು ಅಥವಾ ಯಾವ ಭಾಷೆ ಮಾತನಾಡುತ್ತೀರಿ ಎಂಬುದು ಅಲ್ಲಿ ಲೆಕ್ಕಕ್ಕೆ ಬರಲಿಲ್ಲ. ಅಮ್ಮನ ಆ ಮಾತುಗಳು ಬಹಳ ಪ್ರಸ್ತುತ ಎಂದು ನಾನು ಭಾವಿಸುತ್ತೇನೆ.

ನಮ್ಮ ತಾಯಿ ಬಹಳ ಸಾಮಾನ್ಯ ಮಹಿಳೆ. ಆದರೆ, ಅವರು ನನ್ನ ಬದುಕಿನಲ್ಲಿ ಅಸಾಧಾರಣವಾದದ್ದನ್ನು ಸಾಧಿಸುವಂತೆ ಮಾಡಿದರು. ನನ್ನಿಂದ ಸಾಧ್ಯವಿಲ್ಲ ‘ಎನ್ನುವ ಸ್ಥಿತಿಯಲ್ಲಿದ್ದ ಮಗುವಿನಲ್ಲಿ, ‘ನೀನು ಇದನ್ನು ಸಾಧಿಸಿಯೇ ತೀರುತ್ತೀಯ’ ಎಂದು ಹೇಳಿ ಹುರಿದುಂಬಿಸುವ ಶಕ್ತಿ ಆ ಸಾಮಾನ್ಯ ತಾಯಿಗೆ ಎಲ್ಲಿಂದ ಬಂತೋ ಗೊತ್ತಿಲ್ಲ. ಇನ್ನು ತಾರತಮ್ಯದ ಬಗ್ಗೆ ಹೇಳುವುದಾದರೆ, ಹೌದು, ನನಗೂ ಯಾವುದೋ ಒಂದು ಹಂತದಲ್ಲಿ ತಾರತಮ್ಯ ಎದುರಾಗಿರಬಹುದು. ಆದರೆ, ನನ್ನ ಸಂಪೂರ್ಣ ಗಮನವೆಲ್ಲ ಆಟದಲ್ಲಿ ಅತ್ಯುತ್ತಮ ಸಾಧನೆ ಮಾಡುವುದರ ಕಡೆಗೇ ಇದ್ದಿದ್ದರಿಂದ, ಆ ತಾರತಮ್ಯ ನನ್ನ ಅರಿವಿಗೆ ಬರಲಿಲ್ಲ.

ಇದನ್ನು ಓದಿದ್ದೀರಾ? IPL | ಒಂದೆಡೆ ಮನರಂಜನೆಯ ಮಹಾಪೂರ, ಮತ್ತೊಂದೆಡೆ ಜೂಜಾಟದ ಕರಾಳ ಘೋರ

ಪ್ರಜ್ವಲ್ ಹೆಗ್ಡೆ: ನ್ಯೂ ಹ್ಯಾಂಪ್‌ಶೈರ್‌ನ ಆ ಎಲ್ಲ ಸಂಜೆಗಳಲ್ಲಿ ಕನ್ನಡಿ ನೋಡಿಕೊಂಡಾಗ,ಆ 19 ವರ್ಷದ ಯುವಕನ ಮನಸ್ಸಿನಲ್ಲಿ ಏನಿತ್ತು?

ವಿಜಯ್ ಅಮೃತ್‌ರಾಜ್: ಕೋಟ್ ಮತ್ತು ಟೈ ಧರಿಸಬೇಕೆಂಬುದು ಅಲ್ಲಿನ ನಿರೀಕ್ಷೆಯಾಗಿತ್ತು. ಆದರೆ ಅದು ನನ್ನ ಬಳಿ ಇರಲಿಲ್ಲ ಎಂಬುದು ನನ್ನದೇ ತಪ್ಪು. ಅದು ನಮ್ಮ ಆರ್ಥಿಕ ಪರಿಸ್ಥಿತಿಯ ವಿಚಾರ, ಅಲ್ಲವೇ? ನೀವು ಎಲ್ಲಿಂದ ಬಂದಿದ್ದೀರಿ, ನೀವು ಹೇಗಿದ್ದೀರಿ, ನಿಮ್ಮ ಮೇಲಿರುವ ನಿಮ್ಮದೇ ಆದ ನಂಬಿಕೆ ಹಾಗೂ ನಿಮ್ಮನ್ನು ಇಲ್ಲಿಯವರೆಗೆ ಕರೆತಂದ ನಿಮ್ಮ ಕನಸುಗಳು- ಇವೆಲ್ಲವೂ ಬಹಳ ಮುಖ್ಯವಾಗುತ್ತವೆ. 60ರ ದಶಕದ ಅಂತ್ಯ ಮತ್ತು 70ರ ದಶಕದ ಆರಂಭದ ಮದ್ರಾಸ್‌ನಿಂದ (ಚೆನ್ನೈ), ಯಾವುದೇ ರೀತಿಯ ಪರಿಚಯವೇ ಇಲ್ಲದ ಹೊಚ್ಚ ಹೊಸ ಜಗತ್ತಿಗೆ ನೀವು ಬರುತ್ತಿದ್ದೀರಿ. ಆ ನಂತರ, ಅವರಲ್ಲಿದ್ದ ಅಥವಾ ಅವರು ಬೆಳೆದು ಬಂದಂತಹ ಯಾವುದೇ ಸೌಲಭ್ಯಗಳಿಲ್ಲದೆ ಅಲ್ಲಿಗೆ ಹೋಗಿ ಜಗತ್ತಿನ ಅತ್ಯುತ್ತಮ ಆಟಗಾರರೊಂದಿಗೆ ಸ್ಪರ್ಧಿಸಬೇಕಿತ್ತು… ಕ್ರೀಡೆ ನನಗೆ ಕಲಿಸಿದ್ದು ಅದನ್ನೇ. ನಾನು ಅತ್ಯುನ್ನತ ಮಟ್ಟದಲ್ಲಿ ಸ್ಪರ್ಧಿಸಬಲ್ಲೆ, ಏಕೆಂದರೆ ನಾನು ಅದಕ್ಕೆ ತಕ್ಕಂತೆ ಸಮರ್ಥನಾಗಿದ್ದೇನೆ. ಅಲ್ಲಿ ನಾನು ಕಪ್ಪೇ ಅಥವಾ ಬಿಳುಪೇ, ಕ್ರಿಶ್ಚಿಯನ್, ಮುಸ್ಲಿಂ ಅಥವಾ ಹಿಂದೂವೇ ಎಂಬುದು ಪ್ರಶ್ನೆಯಾಗಿರಲಿಲ್ಲ; ಬದಲಿಗೆ, ಆಟದಲ್ಲಿ ನಾನು ಎಷ್ಟು ಸಮರ್ಥನಾಗಿದ್ದೆ ಎಂಬುದಷ್ಟೇ ಮುಖ್ಯವಾಗಿತ್ತು.

ಪ್ರಜ್ವಲ್ ಹೆಗ್ಡೆ: ಮಿಯಾಮಿ ಓಪನ್ ಸಮಯದಲ್ಲಿ ಕಾರ್ಲೋಸ್ ಅಲ್ಕರಾಜ್ ಅವರ ಆಕ್ರೋಶದ ಬಗ್ಗೆ ನಿಮ್ಮ ಅಭಿಪ್ರಾಯವೇನು?

ವಿಜಯ್ ಅಮೃತ್‌ರಾಜ್: ನೀವು ಅಲ್ಕರಾಜ್ ಮತ್ತು ಸಿನ್ನರ್ (ಯಾನಿಕ್) ಅವರನ್ನು ಗಮನಿಸಿ, ಅವರಿಬ್ಬರೂ ವಿಶ್ವದ ನಂಬರ್ ಒನ್ ಆಟಗಾರರೇ ಮತ್ತು ಇಬ್ಬರ ಆಟದ ಶೈಲಿಗಳು ವಿಭಿನ್ನವಾಗಿವೆ. ಅವರು ಆಡುವ ರೀತಿ, ಕೋರ್ಟ್‌ನಲ್ಲಿ ಅವರು ನಡೆದುಕೊಳ್ಳುವ ರೀತಿ ಮತ್ತು ಪ್ರೇಕ್ಷಕರೊಂದಿಗೆ ಅವರು ಬೆರೆಯುವ ರೀತಿ ವಿಭಿನ್ನವಾಗಿದೆ. ಅಲ್ಕರಾಜ್ ಅವರು ಪ್ರೇಕ್ಷಕರೊಂದಿಗೆ ಬೆರೆಯುವ ರೀತಿ, ಅವರ ಮುಖದಲ್ಲಿರುವ ನಗು ಹಾಗೂ ಅವರ ಆಟದ ಶೈಲಿಯನ್ನು ನೋಡಿದರೆ, ಅವರು ದಿಗ್ಗಜ ಆಟಗಾರ ಜಿಮ್ಮಿ ಕಾನರ್ಸ್ ಅವರನ್ನು ನೆನಪಿಸುತ್ತಾರೆ. ಆದರೆ ಕಾನರ್ಸ್‌ಗಿಂತಲೂ ಅಲ್ಕರಾಜ್ ಬಹಳ ಸೌಮ್ಯ ಹಾಗೂ ಶಾಂತ ಸ್ವಭಾವದವರು. ಓರ್ವ ಶ್ರೇಷ್ಠ ಟೆನಿಸ್ ಆಟಗಾರನಿಗೆ ಬೇಕಾದ ಎಲ್ಲಾ ಕೌಶಲ್ಯಗಳೂ ಅಲ್ಕರಾಜ್ ಬಳಿ ಇವೆ; ಹಾಗಾಗಿಯೇ ಅವರನ್ನು ರೋಜರ್ ಫೆಡರರ್ ಅವರಿಗೂ ಹೋಲಿಸಲಾಗುತ್ತದೆ.

ಇನ್ನೊಂದೆಡೆ, ಸಿನ್ನರ್ ಅವರಂತಹ ಆಟಗಾರನನ್ನು ನೀವು ನೋಡಿದಾಗ, (ಇವಾನ್) ಲೆಂಡ್ಲ್ ಅವರಂತೆ ವಿಶ್ವದ ನಂಬರ್ ಒನ್ ಆಗಲು ಅವರು ಇನ್ನಷ್ಟು ಹೆಚ್ಚು ಕಠಿಣ ಶ್ರಮ ಹಾಕಿದ್ದಾರೆ ಎಂದು ನಾನು ಭಾವಿಸುತ್ತೇನೆ. ಅಲ್ಕರಾಜ್ ಅವರ ದೃಷ್ಟಿಕೋನದಿಂದ ನೋಡುವುದಾದರೆ, ಅವರ ಮನಸ್ಸಿನಲ್ಲಿ ಸ್ವಲ್ಪ ಏರುಪೇರಾದರೆ, ಸಿನ್ನರ್‌ಗಿಂತ ಹೆಚ್ಚಾಗಿ ಅವರು ಕೊಂಚ ವಿರಾಮ ತೆಗೆದುಕೊಳ್ಳುವುದು ಒಳ್ಳೆಯದು ಎಂದು ನನಗನ್ನಿಸುತ್ತದೆ. ಅವರಿಬ್ಬರೂ ಎರಡು ವಿಭಿನ್ನ ವ್ಯಕ್ತಿತ್ವಗಳು, ಆ ಸ್ವಾತಂತ್ರ್ಯವನ್ನು ನಾವು ಅವರಿಗೆ ನೀಡಲೇಬೇಕಾಗುತ್ತದೆ.

ವಿಜಯ್ ಅಮೃತ್‌ರಾಜ್ ಬಾಲ್ಯ,ಟೆನಿಸ್ ಅಂಗಳದ ಐತಿಹಾಸಿಕ ಸಾಧನೆಗಳು

ವಿಜಯ್ ಅಮೃತ್‌ರಾಜ್ ಅವರು ಡಿಸೆಂಬರ್ 14, 1953 ರಂದು ತಮಿಳುನಾಡಿನ ಮದ್ರಾಸ್‌ನಲ್ಲಿ ಸಾಮಾನ್ಯ ಕುಟುಂಬದಲ್ಲಿ (ಇಂದಿನ ಚೆನ್ನೈ) ಜನಿಸಿದರು. ಬಾಲ್ಯದಲ್ಲಿ ಶ್ವಾಸಕೋಶದ ಸಮಸ್ಯೆಯಿಂದ ಬಳಲುತ್ತಿದ್ದರೂ, ತಮ್ಮ ತಾಯಿಯ ಬೆಂಬಲ ಮತ್ತು ಅಚಲವಾದ ವಿಶ್ವಾಸದಿಂದ ಕಠಿಣ ಪರಿಶ್ರಮ ಪಟ್ಟು ಭಾರತ ಕಂಡ ಶ್ರೇಷ್ಠ ಟೆನಿಸ್ ಆಟಗಾರರಲ್ಲಿ ಒಬ್ಬರಾಗಿ ಹೊರಹೊಮ್ಮಿದರು. 1970 ಮತ್ತು 80ರ ದಶಕದಲ್ಲಿ ಅಂತಾರಾಷ್ಟ್ರೀಯ ಟೆನಿಸ್ ಅಂಗಳದಲ್ಲಿ ಭಾರತವನ್ನು ಯಶಸ್ವಿಯಾಗಿ ಪ್ರತಿನಿಧಿಸಿದ ಇವರು, ಪ್ರತಿಷ್ಠಿತ ವಿಂಬಲ್ಡನ್ (1973 ಮತ್ತು 1981) ಹಾಗೂ ಯುಎಸ್ ಓಪನ್ (1973 ಮತ್ತು 1974) ಟೂರ್ನಿಗಳಲ್ಲಿ ಕ್ವಾರ್ಟರ್-ಫೈನಲ್ ಪ್ರವೇಶಿಸಿ ಐತಿಹಾಸಿಕ ಸಾಧನೆ ಮಾಡಿದರು. ತಮ್ಮ ವೃತ್ತಿಜೀವನದಲ್ಲಿ 15 ಎಟಿಪಿ (ATP) ಸಿಂಗಲ್ಸ್ ಮತ್ತು 13 ಡಬಲ್ಸ್ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿರುವ ವಿಜಯ್, 1980ರಲ್ಲಿ ವಿಶ್ವ ಟೆನಿಸ್ ರ್ಯಾಂಕಿಂಗ್‌ನಲ್ಲಿ 16ನೇ ಸ್ಥಾನಕ್ಕೆ ಏರಿದ್ದು ಅವರ ಕ್ರೀಡಾಬದುಕಿನ ಅತ್ಯುತ್ತಮ ಮೈಲಿಗಲ್ಲಾಗಿದೆ.

​ಡೇವಿಸ್‌ ಕಪ್, ಪ್ರಶಸ್ತಿಗಳು ಮತ್ತು ಬಹುಮುಖ ಪ್ರತಿಭೆ

ಪ್ರತಿಷ್ಠಿತ ‘ಡೇವಿಸ್ ಕಪ್’ ಟೂರ್ನಿಯಲ್ಲಿ ಭಾರತವನ್ನು ಯಶಸ್ವಿಯಾಗಿ ಮುನ್ನಡೆಸಿದ್ದ ಅವರು, 1974 ಮತ್ತು 1987ರಲ್ಲಿ ಭಾರತ ತಂಡವು ಫೈನಲ್ ತಲುಪುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಕ್ರೀಡಾ ಕ್ಷೇತ್ರಕ್ಕೆ ಅವರು ನೀಡಿದ ಅಸಾಧಾರಣ ಕೊಡುಗೆಯನ್ನು ಪರಿಗಣಿಸಿ ಭಾರತ ಸರ್ಕಾರವು 1983ರಲ್ಲಿ ಅವರಿಗೆ ‘ಪದ್ಮಶ್ರೀ’ ಪ್ರಶಸ್ತಿ ನೀಡಿ ಗೌರವಿಸಿದೆ. ಟೆನಿಸ್ ಅಂಗಳದಾಚೆಗೂ ಬಹುಮುಖ ಪ್ರತಿಭೆಯಾಗಿ ಗುರುತಿಸಿಕೊಂಡಿರುವ ಇವರು, ಜೇಮ್ಸ್ ಬಾಂಡ್ ಸರಣಿಯ ‘ಆಕ್ಟೋಪಸ್ಸಿ’ (Octopussy) ಹಾಗೂ ‘ಸ್ಟಾರ್ ಟ್ರೆಕ್’ನಂತಹ ಹಾಲಿವುಡ್ ಸಿನಿಮಾಗಳಲ್ಲೂ ನಟಿಸಿದ್ದಾರೆ. ಕ್ರೀಡೆಗೆ ನೀಡಿದ ಜೀವಮಾನದ ಕೊಡುಗೆಗಾಗಿ ಇತ್ತೀಚೆಗಷ್ಟೇ (2024) ಅವರು ಪ್ರತಿಷ್ಠಿತ ‘ಇಂಟರ್ನ್ಯಾಷನಲ್ ಟೆನಿಸ್ ಹಾಲ್ ಆಫ್ ಫೇಮ್’ (International Tennis Hall of Fame) ಗೌರವಕ್ಕೆ ಪಾತ್ರರಾಗಿದ್ದು, ಈ ಸಾಧನೆ ಮಾಡಿದ ಮೊದಲ ಏಷ್ಯಾದ ಪುರುಷ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.

ವಿಜಯ್‌ ಸಹೋದರರು ಟೆನಿಸ್‌ ದಿಗ್ಗಜರು

ವಿಜಯ್ ಅಮೃತ್‌ರಾಜ್ ಅವರ ಕ್ರೀಡಾಬದುಕಿನ ಯಶಸ್ಸಿನ ಜೊತೆಗೆ ಅವರ ಇಬ್ಬರು ಸಹೋದರರಾದ ಆನಂದ್ ಅಮೃತ್‌ರಾಜ್ ಮತ್ತು ಅಶೋಕ್ ಅಮೃತ್‌ರಾಜ್ ಅವರ ವೈಯಕ್ತಿಕ ಸಾಧನೆಗಳೂ ಜಾಗತಿಕ ಮಟ್ಟದಲ್ಲಿ ಗಮನಾರ್ಹವಾಗಿವೆ. ವಿಜಯ್ ಅವರ ಅಣ್ಣ ಆನಂದ್ ಅಮೃತ್‌ರಾಜ್ ಕೂಡ ಅತ್ಯುತ್ತಮ ಟೆನಿಸ್ ಆಟಗಾರರಾಗಿದ್ದು, ವಿಜಯ್ ಅವರೊಂದಿಗೆ ಸೇರಿ ಡಬಲ್ಸ್‌ನಲ್ಲಿ ಭಾರತಕ್ಕೆ ಹಲವು ಐತಿಹಾಸಿಕ ಗೆಲುವುಗಳನ್ನು ತಂದುಕೊಟ್ಟಿದ್ದಾರೆ. 1976ರ ವಿಂಬಲ್ಡನ್ ಡಬಲ್ಸ್ ಸೆಮಿಫೈನಲ್ ಪ್ರವೇಶಿಸಿದ್ದು ಹಾಗೂ 1974ರ ಡೇವಿಸ್ ಕಪ್ ಫೈನಲ್ ತಲುಪಿದ ಭಾರತ ತಂಡದಲ್ಲಿ ಆನಂದ್ ಅವರೂ ಪ್ರಮುಖರಾಗಿದ್ದರು.

ಮತ್ತೊಂದೆಡೆ, ಕಿರಿಯ ಸಹೋದರ ಅಶೋಕ್ ಅಮೃತ್‌ರಾಜ್ ಅವರು ಆರಂಭದಲ್ಲಿ ಟೆನಿಸ್ ಆಟಗಾರರಾಗಿ ವಿಂಬಲ್ಡನ್‌ನಲ್ಲಿ ಪಾಲ್ಗೊಂಡಿದ್ದರೂ, ನಂತರದ ದಿನಗಳಲ್ಲಿ ಅಮೆರಿಕದ ಹಾಲಿವುಡ್‌ ಸಿನಿಮಾ ರಂಗದ ಕಡೆ ಮುಖಮಾಡಿದರು. ಪ್ರಸ್ತುತ ಅಶೋಕ್ ಅವರು ತಮ್ಮ ‘ಹೈಡ್ ಪಾರ್ಕ್ ಎಂಟರ್‌ಟೈನ್‌ಮೆಂಟ್’ ಸಂಸ್ಥೆಯ ಮೂಲಕ ನೂರಕ್ಕೂ ಹೆಚ್ಚು ಹಾಲಿವುಡ್‌ ಚಲನಚಿತ್ರಗಳನ್ನು ನಿರ್ಮಿಸಿರುವ ಯಶಸ್ವಿ ಹಾಗೂ ಖ್ಯಾತ ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದಾರೆ. ವಿಶೇಷವೆಂದರೆ, ಆನಂದ್, ವಿಜಯ್ ಮತ್ತು ಅಶೋಕ್- ಈ ಮೂವರೂ ಸಹೋದರರು ಪ್ರತಿಷ್ಠಿತ ವಿಂಬಲ್ಡನ್ ಟೂರ್ನಿಯಲ್ಲಿ ಆಡಿರುವುದು ಟೆನಿಸ್ ಇತಿಹಾಸದಲ್ಲಿಯೇ ಒಂದು ಅಪರೂಪದ ಹಾಗೂ ಹೆಮ್ಮೆಯ ಸಂಗತಿಯಾಗಿದೆ.

ಅನುವಾದ: ಕೆ ಚೇತನ್ ಕುಮಾರ್

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮಲ್ಲೇಶ್ವರಂನಲ್ಲಿ ಫಾರ್ಮ್-7‌ ದುರ್ಬಳಕೆ ಆರೋಪ; ʼಈ ದಿನʼ ವರದಿ ಆಧರಿಸಿ ಕಾಂಗ್ರೆಸ್ ದೂರು

ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದಲ್ಲಿ ಅಲ್ಪಸಂಖ್ಯಾತ ಸಮುದಾಯದ ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ...

ಕಮಲನಗರ | ಅರ್ಹ ವೈದ್ಯಕೀಯ ಪದವಿ ಇಲ್ಲದೆ ವೈದ್ಯ ವೃತ್ತಿ: ಕ್ಲಿನಿಕ್ ಸೀಜ್

ಕಮಲನಗರ ತಾಲ್ಲೂಕಿನ ಚಾಂದೋರಿ ಗ್ರಾಮದಲ್ಲಿ ಯಾವುದೇ ವೈದ್ಯಕೀಯ ಪದವಿ ಇಲ್ಲದೆ ಅಕ್ರಮವಾಗಿ...

ವಿಜಯಪುರ | ಮತದಾರರ ಹೆಸರಳಿಸಲು ನಕಲಿ ಮರಣ ಪ್ರಮಾಣಪತ್ರ ಬಳಕೆ; ತನಿಖೆಗೆ ಕಾಂಗ್ರೆಸ್ ಒತ್ತಾಯ

ವಿಜಯಪುರ ನಗರ ವಿಧಾನಸಭಾ ಕ್ಷೇತ್ರದಲ್ಲಿ ಜೀವಂತ ಮತದಾರರನ್ನು ಮೃತಪಟ್ಟಿದ್ದಾರೆಂದು ತೋರಿಸಿ ಮತದಾರರ...