ಲೀಗ್ ಹಂತದ ಪ್ರಮುಖ ಆರು ಪಂದ್ಯಗಳನ್ನು ಸತತವಾಗಿ ಗೆದ್ದು, ಪ್ಲೇ ಆಫ್ ಪ್ರವೇಶಿಸುವ ಮೂಲಕ ಪ್ರಶಸ್ತಿ ಸುತ್ತಿಗೆ ತಲುಪುವ ಭರವಸೆ ಮೂಡಿಸಿದ್ದ ಆರ್‌ಸಿಬಿ, ಎಲಿಮಿನೇಟರ್ ಪಂದ್ಯದಲ್ಲಿ ಎಡವಿದ್ದು, ಕಪ್ ಗೆಲ್ಲುವ ಕನಸು ಮತ್ತೆ ಕನಸಾಗಿಯೇ ಉಳಿದಿದೆ.
ಗುಜರಾತ್‌ನ ಅಹ್ಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ 17ನೇ ಆವೃತ್ತಿ ಐಪಿಎಲ್‌ನ ಎಲಿಮಿನೇಟರ್‌ನಲ್ಲಿ ಸಂಜು ಸ್ಯಾಮ್ಸನ್ ನೇತೃತ್ವದ ರಾಜಸ್ಥಾನ್ ರಾಯಲ್ಸ್ ತಂಡವು ಆರ್‌ಸಿಬಿಯನ್ನು 4 ವಿಕೆಟ್‌ಗಳಿಂದ ಸೋಲಿಸಿದೆ.
𝐇𝐀𝐋𝐋𝐀 𝐁𝐎𝐋!! 🩷#RRvRCB #IPLonJioCinema #TATAIPL #TATAIPLPlayoffs pic.twitter.com/aMIsZ6XLZB
— JioCinema (@JioCinema) May 22, 2024
ರಾಜಸ್ಥಾನ ತಂಡದ ಸಂಘಟಿತ ಬೌಲಿಂಗ್‌ಗೆ ರನ್ ಗಳಿಸಲು ಪರದಾಡಿದ್ದ ಆರ್‌ಸಿಬಿಯ ಬ್ಯಾಟರ್‌ಗಳು, ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 172 ರನ್ ದಾಖಲಿಸಿತ್ತು. ಈ ಗುರಿಯನ್ನು ಬೆನ್ನಟ್ಟಿದ ರಾಜಸ್ಥಾನ ತಂಡವು 19 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 174 ರನ್ ದಾಖಲಿಸುವ ಮೂಲಕ ಗೆಲುವು ದಾಖಲಿಸಿತು.
ಮೊದಲ ವಿಕೆಟಿಗೆ ಯಶಸ್ವಿ ಜೈಸ್ವಾಲ್ ಮತ್ತು ಟಾಮ್ ಕ್ಯಾಡ್ಮೋರ್ 33 ಎಸೆತಗಳಲ್ಲಿ 46 ರನ್ ಹೊಡೆದರು. ಟಾಮ್ ಕ್ಯಾಡ್ಮೋರ್ 20 ರನ್ ಗಳಿಸಿ ಔಟಾದರೆ, ಯಶಸ್ವಿ ಜೈಸ್ವಾಲ್ 45 ರನ್(30 ಎಸೆತ, 8 ಬೌಂಡರಿ) ಹೊಡೆದು ವಿಕೆಟ್ ಒಪ್ಪಿಸಿದರು. ನಾಯಕ ಸಂಜು ಸ್ಯಾಮ್ಸನ್ 17 ರನ್ ಸಿಡಿಸಿ, ಸ್ಟಂಪ್ ಔಟಾದರು.
THE SEASON ENDS FOR RCB. 💔
From having 1 win out of the first 8 matches to qualifying for the Playoffs was a statement. Feel for them, they played some extraordinary cricket, but unfortunately not good enough in the Eliminator. Comeback stronger next year, RCB. 👏 pic.twitter.com/C6OcIT7v2N
— Mufaddal Vohra (@mufaddal_vohra) May 22, 2024
112 ರನ್‌ಗಳಿಸಿ ಉತ್ತಮ ಸ್ಥಿತಿಯಲ್ಲಿದ್ದ ರಾಜಸ್ಥಾನ ವಿರಾಟ್ ಕೊಹ್ಲಿ ಅವರ ಅತ್ಯುತ್ತಮ ಥ್ರೋನಿಂದಾಗಿ 4ನೇ ವಿಕೆಟ್ ಕಳೆದುಕೊಂಡಿತು. 8 ರನ್ ಗಳಿಸಿದ್ದ ಧ್ರುವ್ ಜುರೆಲ್ ಎರಡನೇ ರನ್ ಓಡುವಾಗ ರನೌಟ್‌ಗೆ ಬಲಿಯಾದರು.
ಕೊನೆಯಲ್ಲಿ ರಿಯಾನ್ ಪರಾಗ್ 26 ಎಸೆತಗಳಲ್ಲಿ 36 ರನ್(2 ಬೌಂಡರಿ, 2 ಸಿಕ್ಸರ್) ಹಾಗೂ ಹೆಟ್ಮೇಯರ್ 26 ರನ್(14 ಎಸೆತ, 3 ಬೌಂಡರಿ, 1 ಸಿಕ್ಸರ್) ಗಳಿಸಿ, ಸಿರಾಜ್‌ಗೆ ವಿಕೆಟ್ ಒಪ್ಪಿಸಿದರು. ಪೊವೆಲ್ ಔಟಾಗದೇ 16 ರನ್ ಹೊಡೆದ ಪರಿಣಾಮ ರಾಜಸ್ಥಾನ ಪಂದ್ಯವನ್ನು 19 ಓವರ್‌ನಲ್ಲೇ ಗೆದ್ದುಕೊಂಡಿತು.
Our dream run has come to an unfortunate end tonight, but the pride and passion we’ve shown will forever inspire us. 🫡
Hold your heads high, team. You gave it everything. ❤️🩹#PlayBold #ನಮ್ಮRCB #IPL2024 #RRvRCB pic.twitter.com/PIHIjSo1zF
— Royal Challengers Bengaluru (@RCBTweets) May 22, 2024
ಇಂದು ಗೆದ್ದಿರುವ ರಾಜಸ್ಥಾನ ತಂಡವು ಎರಡನೇ ಕ್ವಾಲಿಫೈಯರ್ ಪಂದ್ಯಕ್ಕೆ ಅರ್ಹತೆ ಗಿಟ್ಟಿಸಿಕೊಂಡಿದೆ. ಆರ್‌ಸಿಬಿ ಸೋಲುವ ಮೂಲಕ ಟೂರ್ನಿಯಿಂದಲೇ ಹೊರಬಿದ್ದಿದೆ. ಎರಡನೇ ಕ್ವಾಲಿಫೈಯರ್ ಪಂದ್ಯವು ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಚೆನ್ನೈಯಲ್ಲಿ ಮೇ 24ರಂದು ನಡೆಯಲಿದೆ. ಈ ಪಂದ್ಯವನ್ನು ಗೆದ್ದವರು ಫೈನಲ್‌ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಎದುರಿಸಲಿದ್ದಾರೆ.
