ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್ ಕ್ರಿಕೆಟ್ ಪಂದ್ಯದ ಮೊದಲ ದಿನದಲ್ಲಿ ಭಾರತ ಉತ್ತಮ ಶುಭಾರಂಭ ಮಾಡಿದೆ.
ಇಂಗ್ಲೆಂಡ್ ಮೊದಲ ಇನಿಂಗ್ಸ್‌ನಲ್ಲಿ 246 ರನ್‌ಗಳಿಗೆ ಉತ್ತರವಾಗಿ ಭಾರತ ತಂಡ ಮೊದಲ ಇನಿಂಗ್ಸ್‌ನಲ್ಲಿ ದಿನಾದಾಂತ್ಯಕ್ಕೆ 23 ಓವರ್‌ಗಳಲ್ಲಿ ಒಂದು ವಿಕೆಟ್ ನಷ್ಟಕ್ಕೆ 119 ರನ್ ಗಳಿಸಿದೆ. ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ಅಜೇಯ 76 ರನ್ ಹಾಗೂ ಶುಭಮನ್ ಗಿಲ್ ಅಜೇಯ 14 ರನ್ ಗಳಿಸಿದ್ದರು. ಟೀಂ ಇಂಡಿಯಾ ಮೊದಲ ಇನಿಂಗ್ಸ್‌ನಲ್ಲಿ ಮುನ್ನಡೆ ಪಡೆಯಲು 127 ರನ್ ಗಳಿಸಬೇಕಿದೆ.
ನಾಯಕ ರೋಹಿತ್ ಶರ್ಮಾರೊಂದಿಗೆ ಇನಿಂಗ್ಸ್ ಆರಂಭಿಸಿದ ಜೈಸ್ವಾಲ್ ಮೊದಲ ವಿಕೆಟ್ ನಷ್ಟಕ್ಕೆ 80 ರನ್ ಕಲೆ ಹಾಕಿದರು. ರೋಹಿತ್ 13ನೇ ಓವರ್‌ನಲ್ಲಿ 24 ರನ್ ಗಳಿಸಿ ಲೀಚ್ ಬೌಲಿಂಗ್ ನಲ್ಲಿ ಔಟಾದರು. 70 ಚೆಂಡುಗಳಲ್ಲಿ ರನ್ ಗಳಿಸಿದ ಜೈಸ್ವಾಲ್ ಅವರ ಆಟದಲ್ಲಿ 9 ಬೌಂಡರಿ ಹಾಗೂ 3 ಭರ್ಜರಿ ಸಿಕ್ಸರ್‌ಗಳಿದ್ದವು.
ಸ್ಪಿನ್ನರ್‌ಗಳ ದಾಳಿಗೆ ಇಂಗ್ಲೆಂಡ್ ತತ್ತರ
ಹೈದರಾಬಾದ್‌ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ಮೊದಲು ಬ್ಯಾಟಿಂಗ್ ಆಯ್ದುಕೊಂಡಿತು. ಟೀಂ ಇಂಡಿಯಾ ಅನುಭವಿ ಸ್ಪಿನ್ನರ್ ಗಳ ದಾಳಿಗೆ ಸಿಲುಕಿದ ಆಂಗ್ಲರ ಪಡೆ ಮೊದಲ ಇನಿಂಗ್ಸ್ ನಲ್ಲಿ 64.3 ಓವರ್‌ಗಳಲ್ಲಿ 246 ರನ್‌ಗಳಿಗೆ ಆಲೌಟ್ ಆಯಿತು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ದೇವೇಗೌಡರ ದೈವಭಕ್ತಿ ಮತ್ತು ಕುಟುಂಬ ಕಲ್ಯಾಣ
ಇಂಗ್ಲೆಂಡ್ ಪರ ನಾಯಕ ಅರ್ಧ ಶತಕ (70) ಬಾರಿಸಿದ್ದನ್ನು ಬಿಟ್ಟರೆ ಉಳಿದ ಆಟಗಾರರು 40ರ ಗಡಿ ದಾಟಲಿಲ್ಲ. ಝಾಕ್ ಕ್ರಾಲಿ(20), ಬೆನ್ ಡಕೆಟ್(35), ಜಾನಿ ಬೈರ್ಸ್ಟೋ(37), ಜೋ ರೂಟ್ (29), ಟಾಮ್ ಹಾರ್ಟ್ಲಿ(23) ರನ್ ಗಳಿಸಿ ತಂಡದ ಮೊತ್ತ 240 ದಾಟಲು ಕಾರಣರಾದರು.
ಭಾರತದ ಪರ ಅಶ್ವಿನ್ 68/3, ಅಕ್ಸರ್ ಪಟೇಲ್ 33/2, ರವೀಂದ್ರ ಜಡೇಜಾ 88/3 ಹಾಗೂ ಬುಮ್ರಾ 28/2 ವಿಕೆಟ್ ಕಬಳಿಸಿ ಇಂಗ್ಲೆಂಡ್ ತಂಡವನ್ನು ಕಟ್ಟಿ ಹಾಕಿದರು.