ತಮ್ಮ ಡಬ್ಲ್ಯೂಡಬ್ಲ್ಯೂಇ ರಸ್ಲಿಂಗ್ ವೃತ್ತಿಜೀವನಕ್ಕೆ 16 ಬಾರಿ ವಿಶ್ವ ಚಾಂಪಿಯನ್ ಪಟ್ಟ ಅಲಂಕರಿಸಿದ ಜಾನ್ ಸಿನ ವಿದಾಯ ಘೋಷಿಸಿದ್ದಾರೆ. 2025ರಲ್ಲ ತನ್ನ ಡಬ್ಲ್ಯೂಡಬ್ಲ್ಯೂಇ ಕ್ರೀಡಾ ಪ್ರಕಾರದಿಂದ ನಿವೃತ್ತಿ ಪಡೆಯುವುದಾಗಿ ಘೋಷಿಸಿದ್ದಾರೆ.
ಕೆನಡಾದ ಟೊರೊಂಟೊದಲ್ಲಿನ ಮನಿ ಇನ್ ದಿ ಬ್ಯಾಂಕ್ ಟೂರ್ನಿಯಲ್ಲಿ ತಮ್ಮ ನಿವೃತ್ತಿ ಪ್ರಕಟಿಸಿದ್ದಾರೆ. ‘ದಿ ಲಾಸ್ಟ್ ಟೈಮ್ ಈಸ್ ನೌ’ ಎಂದು ಬರೆದ ಟಿ-ಶರ್ಟ್ ಧರಿಸಿ ಸಿನ ತನ್ನ ನಿವೃತ್ತಿಯನ್ನು ಪ್ರಕಟಿಸಿದ್ದಾರೆ. ಅವರ ಟಿ-ಶರ್ಟ್‌ನಲ್ಲಿ ‘ಜಾನ್ ಸಿನ ಫೇರ್‌ವೆಲ್ ಟೂರ್ 2025’ ಎಂದೂ ಬರೆಯಲಾಗಿತ್ತು.
ಪ್ರೇಕ್ಷಕರನ್ನು ಉದ್ದೇಶಿಸಿ ಮಾತನಾಡಿದ ಜಾನ್ ಸಿನ, “ನಾನು ಎರಡು ದಶಕಗಳಿಂದ ಡಬ್ಲ್ಯೂಡಬ್ಲ್ಯೂಇನಲ್ಲಿದ್ದೇನೆ. ಆ ಸಮಯದಲ್ಲಿ ನಾವು ಈಗ ನೋಡಿದರೆ, ನಂಬಲಾಗದ ಸಮೃದ್ಧಿಯ ಅಲೆಗಳನ್ನು ನಾನು ನೋಡಿದ್ದೇನೆ” ಎಂದು ಸ್ಮರಿಸಿದ್ದಾರೆ.
ಇದನ್ನು ಓದಿದ್ದೀರಾ? 14ನೇ ಏಕದಿನ ವಿಶ್ವಕಪ್ ಕ್ರಿಕೆಟ್ ಇಂದಿನಿಂದ ಆರಂಭ: ತಂಡಗಳು, ಪಂದ್ಯಗಳು, ಕ್ರೀಡಾಂಗಣ ಇತ್ಯಾದಿ ಫುಲ್ ಡೀಟೇಲ್ಸ್
“ಈ ಸಮಯದಲ್ಲಿ ಹಾಟೆಸ್ಟ್ ಟಿಕೆಟ್ ಎಂಬುದರಲ್ಲಿ ಸಂದೇಹವಿಲ್ಲ. ಆದರೆ ನಾನು ನಿಜವಾದ ಕಷ್ಟವನ್ನು ಸಹ ನೋಡಿದ್ದೇನೆ. ಯಾರಿಗೂ ನಿಮ್ಮ ಹೆಸರು ತಿಳಿದಿಲ್ಲದ, ಯಾರೂ ನಿಮ್ಮ ಸ್ನೇಹಿತರಾಗಲು ಬಯಸದ, ಕೆಲವೇ ಅಭಿಮಾನಿಗಳು ಮಾತ್ರ ನಿಮ್ಮ ಪರವಾಗಿ ನಿಲ್ಲುವ ಕ್ಷಣವನ್ನು ನಾನು ನೋಡಿದ್ದೇನೆ” ಎಂದು ಹೇಳಿದ್ದಾರೆ.
“ಆ ವರ್ಷಗಳಲ್ಲಿ ನಾನು ಕಲಿತ ಪ್ರಮುಖ ಮತ್ತು ಪ್ರಭಾವಶಾಲಿ ವಿಷಯವೆಂದರೆ ಡಬ್ಲ್ಯೂಡಬ್ಲ್ಯೂಇ ಏನೇ ಆಗಿರಲ್ಲಿ ಕೆನಡಿಯನ್ನರು ಯಾವಾಗಲೂ ಕಾಣಿಸಿಕೊಳ್ಳುತ್ತಾರೆ” ಎಂದಿದ್ದಾರೆ.
ಹಾಗೆಯೇ 2025ರಲ್ಲಿ ಲಾಸ್ ವೇಗಾಸ್‌ನಲ್ಲಿ ನಡೆವ ರಾಯಲ್ ರಂಬಲ್, ಎಲಿಮಿನೇಷನ್ ಚೇಂಬರ್ ಮತ್ತು ರೆಸಲ್‌ಮೇನಿಯಾ 41 ಅವರ ಕೊನೆಯ ಪಂದ್ಯ ಎಂದು ಜಾನ್ ಸಿನ ಬಹಿರಂಗಪಡಿಸಿದರು.
BREAKING: @JohnCena announces retirement from in-ring competition, stating that #WrestleMania 41 in Las Vegas will be his last. pic.twitter.com/TB6U3QtO1h
— WWE (@WWE) July 7, 2024