ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ಮುಂಬೈ ಇಂಡಿಯನ್ಸ್ ತಂಡದ ವಿರುದ್ಧ ನಡೆದ ಐಪಿಎಲ್ ಪಂದ್ಯದಲ್ಲಿ ಗೆಲುವು ಸಾಧಿಸುವುದರೊಂದಿಗೆ ಕೆಕೆಆರ್ ತಂಡವು ಪ್ಲೇ ಆಫ್‌ಗೆ ಎಂಟ್ರಿ ಕೊಟ್ಟಿದೆ. ಆ ಮೂಲಕ 2024ರ ಐಪಿಎಲ್ ಸೀಸನ್‌ನ ಮೊದಲ ತಂಡವಾಗಿ ಪ್ಲೇ-ಆಫ್‌ಗೆ ಪ್ರವೇಶ ಪಡೆಯಿತು.
Shathe cholo #KnightsArmy…pi𝐐ture abhi baaki hai! 💜 pic.twitter.com/V6jpFBCZYO
— KolkataKnightRiders (@KKRiders) May 11, 2024
ಮಳೆಬಾಧಿತ ಇಂದಿನ ಪಂದ್ಯವನ್ನು 16 ಓವರ್‌ಗಳಿಗೆ ಮೀಸಲಿರಿಸಲಾಗಿತ್ತು. ಟಾಸ್ ಸೋತಿದ್ದ ಕೆಕೆಆರ್ ಮೊದಲು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟಿತ್ತು. ಮುಂಬೈ ಬೌಲಿಂಗ್‌ನ ಎದುರಲ್ಲಿ ರನ್ ಗಳಿಸಲು ಪರದಾಡಿದರಾದರೂ, 16 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 157 ರನ್ ಗಳಿಸಿತ್ತು.
Joy at the Eden Gardens for the @KKRiders 💜
The @ShreyasIyer15-led side enter the #TATAIPL 2024 Playoffs with a clinical win 👏👏
Scorecard ▶️ https://t.co/4BkBwLMkq0#KKRvMI pic.twitter.com/fyQ1yUtFm4
— IndianPremierLeague (@IPL) May 11, 2024
ಈ ಗುರಿಯನ್ನು ಬೆನ್ನಟ್ಟುವಲ್ಲಿ ವಿಫಲವಾದ ಮುಂಬೈ, ಕೋಲ್ಕತ್ತಾದ ಕರಾರುವಾಕ್ಕಾದ ಬೌಲಿಂಗ್‌ನಿಂದಾಗಿ 16 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 138 ರನ್ ಗಳಿಸಲಷ್ಟೇ ಶಕ್ತವಾಯಿತು. ಕೊನೆಯಲ್ಲಿ 18 ರನ್‌ಗಳಿಂದ ಸೋಲೊಪ್ಪಿತು.
ಮುಂಬೈ ಪರ ಬ್ಯಾಟಿಂಗ್‌ನಲ್ಲಿ ಇಶಾನ್ ಕಿಶನ್ 40, ತಿಲಕ್ ವರ್ಮಾ 32, ನಮನ್ ಧೀರ್ 17 ರನ್ ಗಳಿಸಿ, ಗರಿಷ್ಠ ಸ್ಕೋರರ್ ಎನಿಸಿಕೊಂಡರು.
ಕೆಕೆಆರ್ ಪರ ಬೌಲಿಂಗ್‌ನಲ್ಲಿ ನಿತೀಶ್ ರಾಣಾ, ಆ್ಯಂಡ್ರೂ ರಸೆಲ್ ಹಾಗೂ ವರುಣ್ ಚಕ್ರವರ್ತಿ ತಲಾ ಎರಡು ವಿಕೆಟ್ ಗಳಿಸಿದರೆ, ಸುನಿಲ್ ನರೇನ್ ಒಂದು ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು.
ಕೋಲ್ಕತ್ತಾ ನೈಟ್ ರೈಡರ್ಸ್ ಈವರೆಗೆ ಆಡಿರುವ 12 ಪಂದ್ಯಗಳಲ್ಲಿ 9 ಗೆಲುವು ಹಾಗೂ ಮೂರು ಸೋಲಿನೊಂದಿಗೆ ಪ್ಲೇ ಆಫ್ ಪ್ರವೇಶಿಸಿತು. ಶ್ರೇಯಸ್ ಅಯ್ಯರ್ ನೇತೃತ್ವದ ತಂಡವು ಸದ್ಯ 1.43 ನೆಟ್ ರನ್‌ರೇಟ್ ಹೊಂದಿದೆ. ಇನ್ನೂ ಎರಡು ಲೀಗ್ ಪಂದ್ಯಗಳು ಬಾಕಿ ಇವೆ.
KKR TEAM THANKING EDEN GARDENS. ❤️
– Gautam Gambhir giving signed tennis balls to the crowd, a beautiful gesture by GG and KKR. pic.twitter.com/zja6dnyyWg
— Mufaddal Vohra (@mufaddal_vohra) May 11, 2024