ಲಖನೌ ಸೂಪರ್ ಜೈಂಟ್ಸ್ ತಂಡದ ಸ್ಪಿನ್ನರ್ ದಿಗ್ವೇಶ್ ರಥಿ ಅವರು ಲೀಗ್‌ನ ನೀತಿ ಸಂಹಿತೆಯನ್ನು ಪದೇ ಪದೇ ಉಲ್ಲಂಘಿಸಿದ್ದಕ್ಕಾಗಿ ಐಪಿಎಲ್ ಆಡಳಿತ ಮಂಡಳಿಯು ಒಂದು ಪಂದ್ಯದ ಅಮಾನತು ಶಿಕ್ಷೆಯನ್ನು ವಿಧಿಸಿದೆ.
ನಿನ್ನೆ ನಡೆದ ಎಸ್‌ಆರ್‌ಎಚ್ – ಎಲ್‌ಎಸ್‌ಜಿ ತಂಡದ ನಡುವಿನ ಪಂದ್ಯದಲ್ಲಿ ಹೈದರಾಬಾದ್ ಆಟಗಾರ ಅಭಿಷೇಕ್ ಶರ್ಮಾ ಅವರನ್ನು ಔಟ್ ಮಾಡಿದ ಬಳಿಕ ಎಲ್ಎಸ್‌ಜಿ ಸ್ಪಿನ್ನರ್ ದಿಗ್ವೇಶ್ ರಾಥಿ, ನೋಟ್ ಬುಕ್ ರೀತಿಯಲ್ಲಿ ಸಂಭ್ರಮಿಸಿದರು.ಈ ಋತುವಿನಲ್ಲಿ ಮೂರನೇ ಬಾರಿಗೆ ಐಪಿಎಲ್ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಕ್ಕಾಗಿ ದಿಗ್ವೇಶ್ ತಪ್ಪಿತಸ್ಥರೆಂದು ಬಿಸಿಸಿಐ ತೀರ್ಪು ನೀಡಿದೆ. ಆದ್ದರಿಂದ, ಸ್ಪಿನ್ನರ್‌ಗೆ ಪಂದ್ಯ ಶುಲ್ಕದ ಶೇಕಡಾ 50 ರಷ್ಟು ದಂಡ ವಿಧಿಸಲಾಯಿತು ಜೊತೆಗೆ ಗುಜರಾತ್ ಟೈಟಾನ್ಸ್ ವಿರುದ್ಧದ ಎಲ್‌ಎಸ್‌ಜಿಯ ಮುಂದಿನ ಪಂದ್ಯದಿಂದ ಅಮಾನತುಗೊಳಿಸಲಾಗಿದೆ.
“ಬಿಸಿಸಿಐನ ಆರ್ಟಿಕಲ್ 2.5 ರ ಅಡಿಯಲ್ಲಿ ಇದು ದಿಗ್ವೇಶ್ ಅವರ ಮೂರನೇ ಲೆವೆಲ್ 1 ಅಪರಾಧವಾಗಿದೆ. ಈ ತಪ್ಪಿನಿಂದಾಗಿ ಅವರು ಎರಡು ಋಣಾತ್ಮಕ ಅಂಕಗಳನ್ನು ಸಂಗ್ರಹಿಸಿದ್ದಾರೆ. ಈ ಮೊದಲು ಅವರು ಪಂಜಾಬ್ ಕಿಂಗ್ಸ್ ವಿರುದ್ಧ ಒಂದು ಋಣಾತ್ಮಕ ಅಂಕ ಮತ್ತು ಮುಂಬೈ ಇಂಡಿಯನ್ಸ್ ವಿರುದ್ಧ ಎರಡು ಋಣಾತ್ಮಕ ಅಂಕಗಳನ್ನು ಸಂಗ್ರಹಿಸಿದ್ದರು” ಎಂದು ಐಪಿಎಲ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಇದನ್ನು ಓದಿದ್ದೀರಾ? ಐಪಿಎಲ್ 2025: ಪ್ಲೇ ಆಫ್‌ನಲ್ಲಿ ಯಾರ್ಯಾರು ಆಡುವುದಿಲ್ಲ: ಆಟಗಾರರ ಪಟ್ಟಿ ಇಲ್ಲಿದೆ
“ಈ ಋತುವಿನಲ್ಲಿ ದಿಗ್ವೇಶ್ ಐದು ಋಣಾತ್ಮಕ ಅಂಕಗಳನ್ನು ಹೊಂದಿರುವುದರಿಂದ ಒಂದು ಪಂದ್ಯದ ಅಮಾನತು ಶಿಕ್ಷೆ ವಿಧಿಸಲಾಗುತ್ತದೆ. ಮೇ 22ರಂದು ಅಹಮದಾಬಾದ್‌ನಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ಎಲ್‌ಎಸ್‌ಜಿ ವಿರುದ್ಧದ ಮುಂದಿನ ಪಂದ್ಯಕ್ಕೆ ದಿಗ್ವೇಶ್ ಅವರನ್ನು ಅಮಾನತುಗೊಳಿಸಲಾಗುತ್ತದೆ” ಎಂದು ತಿಳಿಸಲಾಗಿದೆ.
ದಿಗ್ವೇಶ್ ರಥಿ ಈ ರೀತಿ ಸಂಭ್ರಮಿಸಿದ್ದಕ್ಕಾಗಿ ಸನ್‌ರೈಸರ್ಸ್ ಹೈದರಾಬಾದ್ ತಂಡದ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ ದಿಗ್ವೇಶ್ ರಥಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಇಬ್ಬರ ನಡುವೆಯೂ ಮೈದಾನದಲ್ಲಿ ಮಾತಿನ ಚಕಮಕಿ ನಡೆಯಿತು. ಇಬ್ಬರ ನಡುವಣ ಜಗಳವು ತಾರಕ್ಕೇರುತ್ತಿದ್ದಂತೆ ಅಂಪೈರ್ ಹಾಗೂ ಸಹ ಆಟಗಾರರು ಮಧ್ಯ ಪ್ರವೇಶಿಸಿದರು.
Digvesh as youngester should learn how behave on field
as all spectators observing on going match.
If same thing is happened all amount match should be collected.