ಶಾರ್ದೂಲ್ ಠಾಕೂರ್, ನಿಕೋಲಸ್ ಪೂರನ್ ಮತ್ತು ಮಿಚೆಲ್ ಮಾರ್ಷ್ ಅದ್ಭುತ ಆಟದಿಂದ ಲಖನೌ ಸೂಪರ್ ಜೈಂಟ್ಸ್ ತಂಡ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ 5 ವಿಕೆಟ್ಗಳ ಗೆಲುವು ಸಾಧಿಸಿದೆ.
ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2025ರ ಏಳನೇ ಪಂದ್ಯದಲ್ಲಿ ರಿಷಭ್ ಪಂತ್ ಪಡೆ ಐಪಿಎಲ್ 18ನೇ ಆವೃತ್ತಿಯ ಮೊದಲ ಗೆಲುವು ಕಂಡಿದೆ. ಕಳೆದ ಪಂದ್ಯದಲ್ಲಿ ಲಖನೌ ತಂಡ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸೋಲು ಅನುಭವಿಸಿತ್ತು. ಇತ್ತ ಎಸ್ಆರ್ಹೆಚ್ ಕಳೆದ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡವನ್ನು ಸೋಲಿಸಿತ್ತು.
ಈ ಪಂದ್ಯದಲ್ಲಿ ಟಾಸ್ ಗೆದ್ದ ಲಖನೌ ಸೂಪರ್ ಜೈಂಟ್ಸ್ ನಾಯಕ ರಿಷಭ್ ಪಂತ್ ಬೌಲಿಂಗ್ ಮಾಡಲು ನಿರ್ಧರಿಸಿದರು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಸನ್ರೈಸರ್ಸ್ ಹೈದರಾಬಾದ್ ತಂಡ ನಿಗದಿತ 20 ಓವರ್ಗಳಲ್ಲಿ 190 ರನ್ಗಳನ್ನು ಕಲೆ ಹಾಕಿತು. ಎಸ್ಆರ್ಹೆಚ್ ತಂಡದ ನೀಡಿದ ಸವಾಲಿನ ಗುರಿ ಬೆನ್ನಟ್ಟಿದ ಲಖನೌ ಸೂಪರ್ ಜೈಂಟ್ಸ್ ತಂಡ 5 ವಿಕೆಟ್ ಕಳೆದುಕೊಂಡು ಕೇವಲ 16.1ಓವರ್ಗಳಲ್ಲಿ 193 ರನ್ ಗಳಿಸಿ ಗೆಲುವಿನ ನಗೆ ಬೀರಿತು.
ಈ ಸುದ್ದಿ ಓದಿದ್ದೀರಾ? ಐಪಿಎಲ್ 2025 | ಮಿಂಚಿದ ಇಶಾನ್ ಕಿಶನ್, ವಿಘ್ನೇಶ್ ಪುತ್ತೂರ್ ಮತ್ತು ನೂರ್ ಅಹ್ಮದ್
ಲಖನೌ ವಿರುದ್ಧದ ಪಂದ್ಯದಲ್ಲಿ ಎಸ್ಆರ್ಹೆಚ್ ಬೃಹತ್ ಮೊತ್ತ ಕಲೆ ಹಾಕುವ ಸಂದೇಶ ನೀಡಿತ್ತು. ಆದರೆ ಲಖನೌ ಸ್ಟಾರ್ ಆಲ್ರೌಂಡರ್ ಶಾರ್ದೂಲ್ ಠಾಕೂರ್ ಎಸ್ಆರ್ಹೆಚ್ ಲೆಕ್ಕಚಾರವನ್ನು ತಲೆಕಳಗೆ ಮಾಡಿದರು. ಪರಿಣಾಮ ಎಸ್ಆರ್ಹೆಚ್ 200 ರನ್ಗಳ ಗಡಿಯನ್ನು ದಾಟಲು ಸಾಧ್ಯವಾಗಲಿಲ್ಲ. ಶಾರ್ದೂಲ್ ಠಾಕೂರ್ 4 ವಿಕೆಟ್ ಪಡೆದು ಮಿಂಚಿದರು.
ಹೈದರಾಬಾದ್ ಅಬ್ಬರಕ್ಕೆ ಬ್ರೇಕ್ ಲಖನೌ ಪರ ನಿಕೋಲಸ್ ಪೂರನ್ ಮತ್ತು ಮಿಚೆಲ್ ಮಾರ್ಷ್ ಮತ್ತೊಂದು ಬಿಗ್ ಇನಿಂಗ್ಸ್ ಆಡಿದರು. ಹೈದರಾಬಾದ್ ಬೌಲರ್ಗಳ ಬೆವರಿಳಿಸಿದ ಈ ಜೋಡಿ 116 ರನ್ಗಳ ಭರ್ಜರಿ ಜೊತೆಯಾಟ ಆಡುವ ಮೂಲಕ ಲಖನೌ ತಂಡದ ಗೆಲುವಿಗೆ ಪ್ರಮುಖ ಪಾತ್ರವಹಿಸಿದರು.
ಸ್ಪೋಟಕ ಬ್ಯಾಟಿಂಗ್ ಮಾಡಿದ ಪೂರಾನ್ ಕೇವಲ 25 ಎಸೆತಗಳಲ್ಲಿ 6 ಬೌಂಡರಿ ಮತ್ತು 6 ಸಿಕ್ಸರ್ಗಳ ನೆರವಿನಿಂದ 70 ರನ್ ಗಳಿಸಿದರು. ಮಾರ್ಷ್ ಕೇವಲ 31 ಎಸೆತಗಳಲ್ಲಿ 7 ಬೌಂಡರಿ ಮತ್ತು 2 ಸಿಕ್ಸರ್ಗಳಿಂದ 52 ರನ್ ಬಾರಿಸಿ ಮಿಂಚಿದರು. ಇದಾದ ನಂತರ, ಕೊನೆಯಲ್ಲಿ ಅಬ್ದುಲ್ ಸಮದ್ (22) ಮತ್ತು ಡೇವಿಡ್ ಮಿಲ್ಲರ್ (13) ಒಟ್ಟಾಗಿ ಗುರಿಯನ್ನು ಸುಲಭವಾಗಿ ಬೆನ್ನಟ್ಟಿದರು.
ಎಸ್ಆರ್ಹೆಚ್ ಪರ ನಾಯಕ ಪ್ಯಾಟ್ ಕಮ್ಮಿನ್ಸ್ 2 ವಿಕೆಟ್ ಕಬಳಿಸಿದ ಸಂಭ್ರಮಿಸಿದರೆ, ಆಡಮ್ ಝಂಪಾ, ಹರ್ಷಲ್ ಪಟೇಲ್, ಮೊಹಮ್ಮದ್ ಶಮಿ ತಲಾ ಒಂದೊಂದು ವಿಕೆಟ್ ಪಡೆದರು. ಪಂದ್ಯದ ಪವರ್ ಪ್ಲೇನಲ್ಲಿ ಎರಡು ವಿಕೆಟ್ ಹಾಗೂ ಡೆತ್ ಓವರ್ಗಳಲ್ಲಿ ಎರಡು ವಿಕೆಟ್ ಪಡೆದು ಮಿಂಚಿದ ಶಾರ್ದೂಲ್ ಠಾಕೂರ್ಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸದ್ಯ ಎಲ್ಎಸ್ಜಿ ಆಡಿದ 2 ಪಂದ್ಯಗಳಲ್ಲಿ 1 ಜಯ, 1 ಸೋಲು ಕಂಡಿದ್ದು ಅಂಕ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ.