ಲಕ್ನೋದ ಅಟಲ್ ಬಿಹಾರಿ ವಾಜಪೇಯಿ ಏಕನಾ ಸ್ಟೇಡಿಯಂನಲ್ಲಿ ಇಂದು ನಡೆದ ಇಂಡಿಯನ್ ಪ್ರೀಮಿಯರ್ ಲೀಗ್‌ನ (ಐಪಿಎಲ್) 21ನೇ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡವು ಗುಜರಾತ್ ಟೈಟನ್ಸ್ ತಂಡವನ್ನು 33 ರನ್‌ಗಳಿಂದ ಸೋಲಿಸಿದೆ.
ಟಾಸ್ ಗೆದ್ದ ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕ ಕೆಎಲ್ ರಾಹುಲ್ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದರು. ಮಾರ್ಕ್ ಸ್ಟೋಯ್ನಿಸ್ ಅವರ ಅರ್ಧಶತಕದ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 163 ರನ್ ಗಳಿಸಿತ್ತು.
LUCKNOW SUPERGIANTS DEFEATED GUJARAT TITANS FOR THE FIRST TIME IN HISTORY. ⭐ pic.twitter.com/ADl3GEOZ2I
— Mufaddal Vohra (@mufaddal_vohra) April 7, 2024
ಈ ಗುರಿಯನ್ನು ಬೆನ್ನಟ್ಟುವಲ್ಲಿ ವಿಫಲಗೊಂಡ ಶುಭ್‌ಮನ್ ಗಿಲ್ ನೇತೃತ್ವದ ಗುಜರಾತ್ ತಂಡ, ಯಶ್ ಠಾಕೂರ್ ಅವರ ದಾಳಿಗೆ ಬಲಿಯಾಗಿ 18.5 ಓವರ್‌ಗಳಲ್ಲಿ 130 ರನ್‌ಗಳಿಗೆ ಆಲೌಟಾಯಿತು. ಲಕ್ನೋ ಪರ 3.5 ಓವರ್‌ಗಳನ್ನು ಎಸೆದ ಯಶ್ ಠಾಕೂರ್, ಕೇವಲ 30 ರನ್ ನೀಡಿ 5 ವಿಕೆಟ್‌ಗಳನ್ನು ಕಿತ್ತರು. ಆ ಮೂಲಕ ಈ ಸೀಸನ್(2024)ನಲ್ಲಿ 5 ವಿಕೆಟ್ ಗೊಂಚಲು ಪಡೆದ ಮೊದಲ ಬೌಲರ್ ಆಗಿ ಗುರುತಿಸಿಕೊಂಡರು.
There’s no beating LSG when there’s 160+ to chase!
The hosts get their first ever win against Gujarat Titans with a sensational bowling effort 🙌https://t.co/PKNxxAboK6 #LSGvGT #IPL2024 pic.twitter.com/jXyPCF4BXi
— ESPNcricinfo (@ESPNcricinfo) April 7, 2024
ಶುಭ್‌ಮನ್ ಗಿಲ್ 21 ಎಸೆತಗಳಲ್ಲಿ 19 ರನ್ ಗಳಿಸಿ ಔಟಾದರೆ, ರಾಹುಲ್ ತೆವಾಟಿಯಾ 30 ರನ್ ಗಳಿಸಿದರು. 31 ರನ್ ಗಳಿಸಿದ ಸಾಯಿ ಸುದರ್ಶನ್ ಗುಜರಾತ್ ಪರ ಹೆಚ್ಚು ಸ್ಕೋರರ್ ಎನಿಸಿದರು. 1 ರನ್ ಗಳಿಸಿದ್ದ ನ್ಯೂಜಿಲ್ಯಾಂಡಿನ ಕೇನ್ ವಿಲಿಯಮ್ಸನ್ ರವಿ ಬಿಷ್ಣೋಯ್ ಹಿಡಿದ ಅದ್ಭುತ ಕಾಟ್ & ಬೌಲ್ಢ್ ಕ್ಯಾಚ್‌ಗೆ ಬಲಿಯಾದರು. ಕೇನ್ ವಿಲಿಯಮ್ಸನ್ ತನ್ನತ್ತ ಬಾರಿಸಿದ್ದ ಚೆಂಡನ್ನು ಅದ್ಭುತವಾಗಿ ಹಕ್ಕಿಯಂತೆ ಹಾರಿ ಹಿಡಿಯುವ ಮೂಲಕ ಪೆವಿಲಿಯನ್ ಹಾದಿ ತೋರಿಸಿದರು.
𝗦𝗧𝗨𝗡𝗡𝗘𝗥 😲
Flying Bishoni ✈️
Ravi Bishnoi pulls off a stunning one-handed screamer to dismiss Kane Williamson 👏👏
Watch the match LIVE on @starsportsindia and @JioCinema 💻📱#TATAIPL | #LSGvGT pic.twitter.com/Le5qvauKbf
— IndianPremierLeague (@IPL) April 7, 2024
ಕೊನೆಯಲ್ಲಿ ಗುಜರಾತ್ ಟೈಟನ್ಸ್ ತಂಡವು 18.5 ಓವರ್‌ಗಳಲ್ಲಿ 130 ರನ್‌ಗಳಿಗೆ ಆಲೌಟಾಯಿತು. ಲಕ್ನೋ ಹಾಗೂ ಗುಜರಾತ್ ಈವರೆಗೆ ಐಪಿಎಲ್‌ನಲ್ಲಿ ಆಡಿದ್ದ 4 ಪಂದ್ಯಗಳಲ್ಲಿ ಗುಜರಾತ್ ಮೇಲುಗೈ ಸಾಧಿಸಿತ್ತು. ಐದನೇ ಪಂದ್ಯದಲ್ಲಿ ಲಕ್ನೋ ತಂಡವು ಜಯಗಳಿಸುವ ಮೂಲಕ ಗುಜರಾತ್ ವಿರುದ್ಧ ಮೊದಲ ಗೆಲುವು ಪಡೆಯಿತು.
ಲಕ್ನೋ ತಂಡದ ಪರ ಯಶ್ ಠಾಕೂರ್ 5 ವಿಕೆಟ್ ಹೊರತುಪಡಿಸಿ, ಕೃನಾಲ್ ಪಾಂಡ್ಯಾ 3, ರವಿ ಬಿಷ್ಣೋಯ್ ಹಾಗೂ ನವೀನ್ ಉಲ್ ಹಕ್ ತಲಾ ಒಂದೊಂದು ವಿಕೆಟ್ ಪಡೆಯುವಲ್ಲಿ ಸಫಲರಾದರು.
