ಬುಧವಾರ(ಅ. 25) ನವದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆದ 2023ರ ಐಸಿಸಿ ಏಕದಿನ ವಿಶ್ವಕಪ್‌ನ 24ನೇ ಪಂದ್ಯದಲ್ಲಿ ನೆದರ್‌ಲ್ಯಾಂಡ್ಸ್ ತಂಡ ಆಸ್ಟ್ರೇಲಿಯಾ ವಿರುದ್ಧ ಹೀನಾಯ ಸೋಲು ಅನುಭವಿಸಿದೆ.
ಗೆಲ್ಲಲು 400 ರನ್‌ಗಳ ಬೃಹತ್ ಗುರಿ ಪಡೆದಿದ್ದ ನೆದರ್‌ಲ್ಯಾಂಡ್ಸ್ ತಂಡ, 21 ಓವರ್‌ಗಳಲ್ಲಿ 90 ರನ್‌ಗಳಿಗೆ ಆಲೌಟ್ ಆಗುವ ಮೂಲಕ 309 ರನ್‌ಗಳಿಂದ ಸೋಲೊಪ್ಪಿಕೊಂಡಿತು.
Australia register the largest victory by runs in the history of the @cricketworldcup 🙌#AUSvNED | #CWC23 | 📝: https://t.co/0yVJkpO6XJ pic.twitter.com/aV6jXH68Qk
— ICC (@ICC) October 25, 2023
ಆಸೀಸ್‌ನ ಬಿಗು ಬೌಲಿಂಗ್‌ಗೆ ರನ್ ಗಳಿಸಲು ಪರದಾಡಿದ ನೆದರ್‌ಲ್ಯಾಂಡ್ಸ್ ತಂಡದ ಪರ ಆರಂಭಿಕ ಆಟಗಾರ ವಿಕ್ರಮ್‌ಜೀತ್ ಸಿಂಗ್ 25 ರನ್ ಗಳಿಸಿದ್ದು ಮಾತ್ರ ಅತಿ ಹೆಚ್ಚು ರನ್. ಮೂವರು ಆಟಗಾರರು ಶೂನ್ಯ ಸುತ್ತಿದರು. ನೆದರ್‌ಲ್ಯಾಂಡ್ಸ್ ತಂಡದ ನಾಯಕ ಸ್ಕಾಟ್ ಎಡ್‌ವರ್ಡ್ಸ್ 12 ರನ್ ಗಳಿಸಿ ಔಟಾಗದೆ ಉಳಿದರು.
ಇದನ್ನು ಓದಿದ್ದೀರಾ? ವಿಶ್ವಕಪ್ ಕ್ರಿಕೆಟ್ | ಅತ್ಯಂತ ವೇಗದ ಶತಕ ಬಾರಿಸಿ ದಾಖಲೆ ಸೃಷ್ಟಿಸಿದ ಮ್ಯಾಕ್ಸ್‌ವೆಲ್
ಆಸ್ಟ್ರೇಲಿಯಾ ಪರ ಸ್ಪಿನ್ನರ್ ಆಡಂ ಝಾಂಪ ಮೂರು ಓವರ್ ಎಸೆದು ಕೇವಲ 8 ರನ್ ನೀಡಿ 4 ವಿಕೆಟ್ ಕಬಳಿಸಿದು. ಉಳಿದಂತೆ ಮಿಚೆಲ್ ಮಾರ್ಷ್ 19ಕ್ಕೆ 2, ವೇಗಿಗಳಾದ ಕಮ್ಮಿನ್ಸ್, ಮಿಚೆಲ್ ಸ್ಟಾರ್ಕ್, ಜೋಶ್ ಹ್ಯಾಝಲ್‌ವುಡ್ ತಲಾ ಒಂದೊಂದು ವಿಕೆಟ್ ಗಳಿಸಿದರು.
AUSTRALIA REGISTER THE FIRST 300+ RUNS VICTORY IN THE WORLD CUP HISTORY. pic.twitter.com/OPJ1UpSZaH
— Mufaddal Vohra (@mufaddal_vohra) October 25, 2023
ಮೊದಲು ಬ್ಯಾಟಿಂಗ್ ನಡೆಸಿದ್ದ ಆಸ್ಟ್ರೇಲಿಯಾ ತಂಡ, ಡೇವಿಡ್ ವಾರ್ನರ್ ಮತ್ತು ಗ್ಲೆನ್ ಮ್ಯಾಕ್ಸ್‌ವೆಲ್ ಅವರ ವಿಶ್ವದಾಖಲೆಯ ಭರ್ಜರಿ ಶತಕದ ನೆರವಿನಿಂದ ನಿಗದಿತ 50 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 399 ರನ್‌ಗಳನ್ನು ಗಳಿಸಿ, ನೆದರ್‌ಲ್ಯಾಂಡ್ಸ್‌ಗೆ 400 ರನ್‌ಗಳ ಗುರಿ ನೀಡಿತ್ತು.
How good was that from Australia? 💪#AUSvNED | #CWC23 pic.twitter.com/sTVQBlumgu
— ESPNcricinfo (@ESPNcricinfo) October 25, 2023
ವಿಶ್ವ ದಾಖಲೆಯ ಶತಕ ಸಿಡಿಸಿದ್ದ ಗ್ಲೆನ್ ಮ್ಯಾಕ್ಸ್‌ವೆಲ್ ಕೇವಲ 44 ಎಸೆತಗಳಲ್ಲಿ 9 ಬೌಂಡರಿ ಹಾಗೂ 8 ಭರ್ಜರಿ ಸಿಕ್ಸ್‌ನ ನೆರವಿನೊಂದಿಗೆ 106 ರನ್ ಗಳಿಸಿ, ಔಟಾಗಿದ್ದರು. ಅರ್ಹವಾಗಿಯೇ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.