ಇಂಡಿಯನ್ ಪ್ರೀಮಿಯರ್ ಲೀಗ್ 2024ರ ಪ್ಲೇಆಫ್ಗಳು ಸಮೀಪಿಸುತ್ತಿರುವಂತೆ ವಿರಾಟ್ ಕೊಹ್ಲಿಯ ಬ್ಯಾಟಿಂಗ್ ಪರಾಕ್ರಮದ ಬಗ್ಗೆ ಆಸ್ಟ್ರೇಲಿಯಾದ ಮಾಜಿ ಆರಂಭಿಕ ಆಟಗಾರ ಮ್ಯಾಥ್ಯೂ ಹೇಡನ್ ಮಹತ್ವದ ಹೇಳಿಕೆಯೊಂದನ್ನು ನೀಡಿದ್ದಾರೆ.
ಆರ್ಸಿಬಿಯ ಸ್ಟಾರ್ ಪ್ಲೇಯರ್ ಕೊಹ್ಲಿಯ 2016ರ ಸೀಸನ್ನ ಆಟದ ಬಗ್ಗೆ ಹೇಡನ್ ಮಾತನಾಡಿದ್ದಾರೆ. 2016ರಲ್ಲಿ ವಿರಾಟ್ 16 ಪಂದ್ಯಗಳಲ್ಲಿ ನಾಲ್ಕು ಶತಕಗಳು ಸೇರಿ 973 ರನ್ಗಳನ್ನು ಗಳಿಸಿದ್ದು, ಆರೆಂಜ್ ಕ್ಯಾಪ್ ಗೆದಿದ್ದರು. ಜೊತೆಗೆ ಆರ್ಸಿಬಿ ಫೈನಲ್ ತಲುಪಲು ಅಭೂತಪೂರ್ವ ಕೊಡುಗೆ ನೀಡಿದ್ದರು.
ಸ್ಟಾರ್ ಸ್ಪೋರ್ಟ್ಸ್ನಲ್ಲಿ ಮಾತನಾಡಿದ ಹೇಡನ್, ಕೊಹ್ಲಿಯ ಪ್ರಸ್ತುತ ಫಾರ್ಮ್ ಮತ್ತು ದೃಢನಿರ್ಧಾರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಇದನ್ನು ಓದಿದ್ದೀರಾ? ಐಪಿಎಲ್ | ಧರ್ಮಶಾಲಾದಲ್ಲಿ ಮಿಂಚಿದ ವಿರಾಟ್ ಕೊಹ್ಲಿ: ಆರ್ಸಿಬಿಗೆ ಪಂಜಾಬ್ ವಿರುದ್ಧ ಭರ್ಜರಿ ಜಯ
“ಅವರು (ಕೊಹ್ಲಿ) ಐಪಿಎಲ್ 2016ರ ಪ್ರದರ್ಶನವನ್ನು ನಾವು ಇಂದಿಗೂ ನೆನಯಬಹುದು. ಆದ್ದರಿಂದ ಎಲ್ಲಕ್ಕಿಂತ ಹೆಚ್ಚಾಗಿ, ಇದು ಶಕ್ತಿ ಮತ್ತು ಆಟದ ಪ್ರೀತಿ, ಉತ್ಸಾಹ, ಬದ್ಧತೆಯನ್ನು ವಿವರಿಸುತ್ತದೆ ಎಂದು ನಾನು ಭಾವಿಸುತ್ತೇನೆ. ಮೈದಾನದಲ್ಲಿರಲಿ ಅಥವಾ ಕೈಯಲ್ಲಿ ಬ್ಯಾಟ್ ಇರಲಿ ನೀವು ಈ ಮಹಾನ್ ವ್ಯಕ್ತಿಯನ್ನು ವೈಭವೀಕರಿಸಬಹುದು. ಇದು ಕ್ರೇಜ್ ಆಗಿದೆ” ಎಂದು ಹೇಳಿದ್ದಾರೆ.
ಇದನ್ನು ಓದಿದ್ದೀರಾ? ಅಂಪೈರ್ ಜೊತೆ ವಾಗ್ವಾದ: ಕೊಹ್ಲಿಗೆ ಶೇ.50 ರಷ್ಟು ದಂಡ
ವಿರಾಟ್ ಕೊಹ್ಲಿ ಈ ಐಪಿಎಲ್ ಸೀಸನ್ನಲ್ಲಿ 14 ಪಂದ್ಯಗಳಲ್ಲಿ 708 ರನ್ ಗಳಿಸಿದ್ದಾರೆ. ಇನ್ನು ಆರ್ಸಿಬಿ ಫೈನಲ್ಗೆ ತಲುಪಿದರೆ ಇನ್ನೂ ಮೂರು ಇನ್ನಿಂಗ್ಸ್ಗಳಲ್ಲಿ ಕೊಹ್ಲಿ ಆಡಬಹುದು.
ಇನ್ನು ಸಿಎಸ್ಕೆ ವಿರುದ್ಧದ ಆರ್ಸಿಬಿ ಪಂದ್ಯದ ಸಂದರ್ಭದಲ್ಲಿ ಮೈದಾನದಲ್ಲಿ ಕೊಹ್ಲಿಯ ತೀವ್ರತೆಯನ್ನು ಹೇಡನ್ ಬೊಟ್ಟು ಮಾಡಿದ್ದಾರೆ. ಆರ್ಸಿಬಿ ತವರಿನ ಪ್ರೇಕ್ಷಕರನ್ನು ಸೆಳೆಯುವ ಮತ್ತು ಎದುರಾಳಿ ತಂಡದ ಬೆಂಬಲಿಗರನ್ನು ಮೌನಗೊಳಿಸುವ ಕೊಹ್ಲಿ ಸಾಮರ್ಥ್ಯವನ್ನು ಉಲ್ಲೇಖಿಸಿದ್ದಾರೆ.
“ವಿಷಯವೆಂದರೆ, ಅವರು (ಕೊಹ್ಲಿ) ತುಂಬಾ ಬದ್ಧರಾಗಿದ್ದಾರೆ ಮತ್ತು ಅವರು ಅದನ್ನು ಪ್ರೇಕ್ಷಕರಿಗೆ ಸಹ ನೀಡುತ್ತಾರೆ. ಅವರು ಸಿಎಸ್ಕೆ ಅಭಿಮಾನಿಗಳಿಗೆ ಶಾಂತವಾಗಿರಲು ಒಂದೆರಡು ಬಾರಿ ಹೇಳಿದ್ದಾರೆ” ಎಂದು ಹೇಡನ್ ಹೇಳಿದ್ದಾರೆ.
ಇದನ್ನು ಓದಿದ್ದೀರಾ? ಐಪಿಎಲ್ | ವಿರಾಟ್ ಕೊಹ್ಲಿ ಬಳಿಕ ಅತಿ ಹೆಚ್ಚು ಶತಕ ಸಿಡಿಸಿದ ಬ್ಯಾಟರ್ ಜೋಸ್ ಬಟ್ಲರ್
ಆರ್ಸಿಬಿ ತಂಡವು ಲೀಗ್ ಹಂತವನ್ನು ಏಳು ಗೆಲುವು, ಏಳು ಸೋಲುಗಳು ಮತ್ತು 14 ಅಂಕಗಳನ್ನು ಹೊಂದಿರುವ ಸಿಎಸ್ಕೆ, ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ಗಿಂತ ಹೆಚ್ಚಿನ ನೆಟ್-ರನ್-ರೇಟ್ನೊಂದಿಗೆ ನಾಲ್ಕನೇ ಸ್ಥಾನದಲ್ಲಿ ಮುಗಿಸಿದೆ.
ಮೇ 22 ರಂದು ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿರುವ ಎಲಿಮಿನೇಟರ್ ಪಂದ್ಯದಲ್ಲಿ ಆರ್ಸಿಬಿ ರಾಜಸ್ಥಾನ್ ರಾಯಲ್ಸ್ ಅನ್ನು ಎದುರಿಸಲಿದೆ. ಈ ಪಂದ್ಯದಲ್ಲಿ ವಿಜೇತ ತಂಡ ಮೇ 24 ರಂದು ಚೆನ್ನೈನಲ್ಲಿ ಕ್ವಾಲಿಫೈಯರ್ 2 ಆಟವನ್ನು ಆಡಲಿದೆ. ಫೈನಲ್ ಪಂದ್ಯ ಮೇ 26ರಂದು ನಡೆಯಲಿದೆ.