ಟೀಂ ಇಂಡಿಯಾ ಆಟಗಾರ ಹಾಗೂ ಕರ್ನಾಟಕ ರಣಜಿ ತಂಡದ ನಾಯಕ ಮಾಯಾಂಕ್ ಅಗರ್ವಾಲ್ ದಿಢೀರ್ ತ್ರಿಪುರಾದ ಅಗರ್ತಲ ವಿಮಾನ ನಿಲ್ದಾಣದಲ್ಲಿ ದಿಢೀರ್ ಅಸ್ವಸ್ಥಗೊಂಡ ಕಾರಣ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಅಗರ್ತಲಾದಿಂದ ಸೂರತ್‌ಗೆ ಹೊರಡುತ್ತಿದ್ದ ವಿಮಾನದಲ್ಲಿ ಕರ್ನಾಟಕ ರಣಜಿ ತಂಡದ ನಾಯಕ ಮಾಯಾಂಕ್ ಅಗರ್‌ವಾಲ್ ತಿಳಿಯದೆ ರಾಸಾಯನಿಕಯುಕ್ತ ದ್ರವ್ಯ ಸೇವಿಸಿದ ಕಾರಣ ಅವರ ಬಾಯಿ ಹಾಗೂ ಗಂಟಲು ಹಾನಿಯಾಗಿದೆ ಎನ್ನಲಾಗಿದೆ.
ಈ ಹಿನ್ನೆಲೆಯಲ್ಲಿ ಅಗರ್‌ವಾಲ್ ಅವರನ್ನು ಅಗರ್ತಲಾದ ಐಎಲ್‌ಎಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಚಾತುರ್ಯದಿಂದ ರಾಸಾಯನಿಕಯುಕ್ತ ದ್ರವ್ಯ ಸೇವಿಸಿದ್ದೆ ಘಟನೆಗೆ ಕಾರಣ ಎನ್ನಲಾಗಿದೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ರಾಮ ನೆಲೆ ನಿಂತರೂ ನಿಲ್ಲದ ನಾಟಕ
ಚಿಕಿತ್ಸೆ ನೀಡುತ್ತಿರುವ ವೈದ್ಯರ ಪ್ರಕಾರ ಮಾಯಾಂಕ್ ಅಗರ್‌ವಾಲ್ ಅವರು ಅಪಾಯದಿಂದ ಪಾರಾಗಿದ್ದಾರೆ. ಕ್ರಿಕೆಟ್ ಆಟಗಾರನ ಆರೋಗ್ಯದ ಬಗ್ಗೆ ವೈದ್ಯರು ಹೆಚ್ಚಿನ ಮಾಹಿತಿ ನೀಡದಿದ್ದರೂ ಹೆಚ್ಚಿನ ಅಪಾಯವಿಲ್ಲ ಎಂದು ತಿಳಿಸಿದ್ದಾರೆ.
2023-24ರ ರಣಜಿ ಋತುವಿನ ಕರ್ನಾಟಕ ನಾಯಕರಾಗಿರುವ ಮಾಯಾಂಕ್ ಅಗರ್‌ವಾಲ್ ತ್ರಿಪುರ ವಿರುದ್ಧ ಪಂದ್ಯವಿದ್ದ ಕಾರಣ ಅಗರ್ತಲಾಕ್ಕೆ ಆಗಮಿಸಿದ್ದರು. ನಿನ್ನೆ ಮುಕ್ತಾಯಗೊಂಡ ಪಂದ್ಯದಲ್ಲಿ ಕರ್ನಾಟಕ 29 ರನ್‌ಗಳಿಂದ ಜಯಗಳಿಸಿತ್ತು.
ಸೂರತ್‌ನಲ್ಲಿ ರೈಲ್ವೆಸ್ ವಿರುದ್ಧ ಮುಂದಿನ ಪಂದ್ಯವಾಡುವ ಸಲುವಾಗಿ ಅಗರ್ತಲ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು.
32 ವರ್ಷದ ಮಾಯಾಂಕ್ ಭಾರತದ ಪರ 21 ಟೆಸ್ಟ್ ಪಂದ್ಯಗಳನ್ನಾಡಿದ್ದು 41ರ ಸರಾಸರಿಯಂತೆ 1488 ರನ್ ಗಳಿಸಿದ್ದಾರೆ. ಇದರಲ್ಲಿ 6 ಅರ್ಧ ಶತಕಗಳು ಹಾಗೂ 2 ಶತಕಗಳಿವೆ.