ಶ್ವಾನಗಳೊಂದಿಗೆ 42ನೇ ಹುಟ್ಟುಹಬ್ಬ ಆಚರಿಸಿಕೊಂಡ ಧೋನಿ

Date:

Advertisements

ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್‌​ ಧೋನಿ ಅವರು ಜುಲೈ 7 ರಂದು ತಮ್ಮ ಶ್ವಾನಗಳೊಂದಿಗೆ ವಿಶಿಷ್ಟವಾಗಿ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ.

ತಮ್ಮ 42ನೇ ಹುಟ್ಟುವನ್ನು ತಾವು ಸಾಕಿದ ಶ್ವಾನಗಳೊಂದಿಗೆ ಕೇಕ್‌ ಕತ್ತರಿಸಿ ಅವುಗಳಿಗೆ ತಿನ್ನಿಸುವ ಮೂಲಕ ಆಚರಿಸಿಕೊಂಡಿಸದ್ದಾರೆ. ಕೂಲ್‌ ಕ್ಯಾಪ್ಟನ್‌ ನಡೆಗೆ ಲಕ್ಷಾಂತರ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿ ಶುಭ ಹಾರೈಸಿದ್ದಾರೆ.

“ನಿಮ್ಮ ಎಲ್ಲ ಆತ್ಮೀಯ ಶುಭಾಶಯಗಳಿಗೆ ತುಂಬಾ ಧನ್ಯವಾದಗಳು. ನನ್ನ ಜನ್ಮದಿನದಂದು ನಾನು ಹೇಗೆ ಸೆಲೆಬ್ರೇಟ್​ ಮಾಡಿದ್ದೇನೆ ಎಂಬುದರ ಒಂದು ದೃಶ್ಯ” ಎಂದು ಅಭಿಮಾನಿಗಳ ಶುಭ ಹಾರೈಕೆಗೆ ಸಂದೇಶ ನೀಡಿದ್ದಾರೆ.

Advertisements

ಮಹೇಂದ್ರ ಸಿಂಗ್‌ ಧೋನಿ ಹುಟ್ಟು ಹಬ್ಬಕ್ಕೆ ಸಚಿನ್‌ ಸೇರಿದಂತೆ ಕ್ರಿಕೆಟ್ ದಿಗ್ಗಜರು, ಸಿನಿಮಾ ನಟರು ಹಾಗೂ ರಾಜಕಾರಣಿಗಳು ಶುಭ ಹಾರೈಸಿದ್ದಾರೆ.

ಮಾಹಿ ತಮ್ಮ ಕ್ರಿಕೆಟ್ ಜೀವನದಲ್ಲಿ ಒಟ್ಟು 332 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಟೀಮ್ ಇಂಡಿಯಾದ ನಾಯಕರಾಗಿದ್ದರು. ಅವರ ನಾಯಕತ್ವದ ಅವಧಿಯಲ್ಲಿ ಭಾರತ ತಂಡವು 178 ಪಂದ್ಯಗಳನ್ನು ಗೆದ್ದರೆ, 120 ಪಂದ್ಯಗಳಲ್ಲಿ ಸೋತಿದೆ. 13 ಪಂದ್ಯಗಳು ಅನಿರ್ದಿಷ್ಟವಾಗಿ ಉಳಿದಿದ್ದರೆ, 6 ಟೈ ಮತ್ತು 15 ಡ್ರಾನಲ್ಲಿ ಅಂತ್ಯಗೊಂಡಿದೆ.

350 ಏಕದಿನದ ಕ್ರಿಕೆಟ್ ಆಡಿರುವ ಧೋನಿ, 50.57 ಸರಾಸರಿಯಂತೆ ಒಟ್ಟು 10,773 ರನ್ ಗಳಿಸಿದ್ದಾರೆ. ಇದರಲ್ಲಿ 10 ಶತಕ ಹಾಗೂ 73 ಅರ್ಧ ಶತಕಗಳೂ ಸೇರಿವೆ. ಧೋನಿಯವರ ಗರಿಷ್ಠ ಸ್ಕೋರ್ 183.

ಮಹೇಂದ್ರ ಸಿಂಗ್ ಧೋನಿ ತಮ್ಮ 39ನೇ ವಯಸ್ಸಿನಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದರು. ಸಾಮಾಜಿಕ ಮಾಧ್ಯಮದ ಮೂಲಕ 15 ಆಗಸ್ಟ್ 2020 ರಂದು ತಮ್ಮ ನಿವೃತ್ತಿಯನ್ನು ಘೋಷಿಸಿದರು. ಸದ್ಯ ಐಪಿಎಲ್‌ನ ಚೆನ್ನೈ ಸೂಪರ್‌ ಕಿಂಗ್ಸ್‌ ನಾಯಕರಾಗಿ ತಂಡವನ್ನು ಮುನ್ನಡೆಸುತ್ತಿದ್ದಾರೆ. ಧೋನಿ ನಾಯಕತ್ವದಲ್ಲಿ ಸಿಎಸ್‌ಕೆ ಐದು ಬಾರಿ ಟ್ರೋಫಿ ಜಯಗಳಿಸಿದೆ.

ಈ ಸುದ್ದಿ ಓದಿದ್ದೀರಾ? ಬಿಸಿಸಿಐ ಆಯ್ಕೆ ಸಮಿತಿ ಅಧ್ಯಕ್ಷರಾಗಿ ಅಜಿತ್‌ ಅಗರ್ಕರ್‌ ನೇಮಕ; ಅನುಭವಗಳ ನಡುವೆ ಹಲವು ಸವಾಲುಗಳು?

ರಾಂಚಿಯಲ್ಲಿ ನೆಲೆಸಿರುವ ಮಾಹಿ 1070 ಕೋಟಿ ರೂ. ಆಸ್ತಿಯ ಒಡೆಯ. ಧೋನಿ ಅವರ ಮಾಸಿಕ ಆದಾಯ 4 ಕೋಟಿ ರೂ.ಗಿಂತ ಹೆಚ್ಚಿದೆ. ಒಂದು ವರ್ಷದಲ್ಲಿ ಅವರು 50 ಕೋಟಿಗೂ ಹೆಚ್ಚು ಗಳಿಸುತ್ತಾರೆ. ಧೋನಿ ಅವರ ಐಪಿಎಲ್‌ನ ಒಂದು ಆವೃತ್ತಿಯ ಸಂಭಾವನೆ 12 ಕೋಟಿ ರೂ. ಹಲವೆಡೆ ಸುಮಾರು 620 ಕೋಟಿಗೂ ಹೆಚ್ಚು ಹೂಡಿಕೆ ಮಾಡಿದ್ದಾರೆ. ಇದಲ್ಲದೆ, ಅವರ ಟಿ20 ಪಂದ್ಯದ ಶುಲ್ಕ 2 ಲಕ್ಷ ಮತ್ತು ರಿಟೈನರ್ ಶುಲ್ಕ 1 ಕೋಟಿ. ಐಪಿಎಲ್ ಸಂಭಾವನೆ 12 ಕೋಟಿಯಷ್ಟಿದೆ.

ಮಾಹಿ ಬಳಿ ವಿಶ್ವದ ಐಷಾರಾಮಿ ಕಾರುಗಳಿವೆ. ಅದರಲ್ಲಿ ಹಮ್ಮರ್, ಪೋರ್ಷೆ 911, ಆಡಿ, ಮರ್ಸಿಡಿಸ್, ಮಿತ್ಸುಬಿಷಿ ಪಜೆರೊ, ರೇಂಜ್ ರೋವರ್ ಮತ್ತು ಇನ್ನೂ ಅನೇಕ ವಾಹನಗಳು ಅವರ ಗ್ಯಾರೇಜ್‌ನಲ್ಲಿವೆ. ಇದಲ್ಲದೆ ಹಾರ್ಲೆ ಡೇವಿಡ್‌ಸನ್ ಫ್ಯಾಟ್ ಬಾಯ್, ಕವಾಸಕಿ ನಿಂಜಾ ಹೆಚ್2 ಮತ್ತು ಕಾನ್ಫೆಡರೇಟ್ ಹೆಲ್‌ಕ್ಯಾಟ್ ಎಕ್ಸ್32 ಬೈಕ್‌ಗಳನ್ನು ಹೊಂದಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತಾಂತ್ರಿಕ ಕಾರಣದಿಂದ ಯುವಕನಿಗೆ ಸಿಕ್ಕ ಆರ್‌ಸಿಬಿ ಆಟಗಾರನ ಸಿಮ್‌; ಕೊಹ್ಲಿ, ಎಬಿಡಿಯಿಂದ ನಿತ್ಯ ಕರೆ!

ಛತ್ತೀಸ್‌ಗಢದ ಯುವಕನೊಬ್ಬನಿಗೆ ತಾಂತ್ರಿಕ ದೋಷದಿಂದಾಗಿ ಆರ್‌ಸಿಬಿ ತಂಡದ ನಾಯಕ ರಜತ್ ಪಾಟೀದಾರ್‌ರ...

ಬಿಸಿಸಿಐ ಷರತ್ತಿನಿಂದ ವಿರಾಟ್‌, ರೋಹಿತ್‌ 2027ರ ಏಕದಿನ ವಿಶ್ವಕಪ್‌ ಕನಸು ಕಮರಿ ಹೋಗಲಿದೆಯೇ?

ಟೀಂ ಇಂಡಿಯಾದ ದಿಗ್ಗಜ ಆಟಗಾರರಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ...

ಊಹಾಪೋಹಗಳಿಗೆ ತೆರೆ: ಭಾರತ–ಪಾಕ್‌ ಏಷ್ಯಾಕಪ್‌ ಕ್ರಿಕೆಟ್‌ ಪಂದ್ಯ ರದ್ದಾಗುವುದಿಲ್ಲ

ಪಹಲ್ಗಾಮ್‌ ಉಗ್ರ ದಾಳಿಯ ನಂತರ ಭಾರತ–ಪಾಕಿಸ್ತಾನದ ನಡುವಿನ ಬಿಕ್ಕಟ್ಟು ಹೆಚ್ಚಾದ ಹಿನ್ನೆಲೆಯಲ್ಲಿ...

ಕೇರಳ ಭೇಟಿ ರದ್ದುಗೊಳಿಸಿದ ಮೆಸ್ಸಿ ನೇತೃತ್ವದ ಅರ್ಜೆಂಟೀನಾ ತಂಡ

ಲಿಯೊನೆಲ್ ಮೆಸ್ಸಿ ನೇತೃತ್ವದ ಫೀಫಾ ವಿಶ್ವಕಪ್ ವಿಜೇತ ಅರ್ಜೆಂಟೀನಾ ತಂಡವನ್ನು ಕೇರಳಕ್ಕೆ...

Download Eedina App Android / iOS

X