ಇಂಡಿಯನ್ ಪ್ರೀಮಿಯರ್ ಲೀಗ್ನ 31ನೇ ಪಂದ್ಯದಲ್ಲಿ ನಿಯಮ ಮೀರಿದ ಬ್ಯಾಟ್ಗಳನ್ನು ಬಳಸಲು ಮುಂದಾಗಿ ಕೆಕೆಆರ್ ತಂಡದ ಸುನಿಲ್ ನರೈನ್ ಹಾಗೂ ಅನ್ರಿಕ್ ನೋಕಿಯಾ ಸಿಕ್ಕಿ ಬಿದ್ದಿದ್ದಾರೆ. ಚಂಡೀಗಢದ ಮುಲ್ಲನ್ಪುರ್ನ ಎಂವೈಎಸ್ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಪಂಜಾಬ್ ಕಿಂಗ್ಸ್ ತಂಡವು 15.3 ಓವರ್ಗಳಲ್ಲಿ 111 ರನ್ಗಳಿಸಿ ಆಲೌಟ್ ಆಯಿತು.
ಈ ಗುರಿಯನ್ನು ಬೆನ್ನಟ್ಟಲು ಆರಂಭಿಕನಾಗಿ ಕಣಕ್ಕಿಳಿಯಲು ಮುಂದಾಗಿದ್ದ ಸುನಿಲ್ ನರೈನ್ ಅವರ ಬ್ಯಾಟ್ ಅನ್ನು ಅಂಪೈರ್ ಪರಿಶೀಲಿಸಿದ್ದಾರೆ. ಈ ಪರಿಶೀಲನೆ ವೇಳೆ ನರೈನ್ ಬಳಸಲು ಮುಂದಾಗಿದ್ದ ಬ್ಯಾಟ್ ಅಗಲದಿಂದ ಕೂಡಿರುವುದು ಕಂಡು ಬಂದಿದೆ. ಹೀಗಾಗಿ ಆ ಬ್ಯಾಟ್ ಅನ್ನು ಬಳಸಲು ಅಂಪೈರ್ ಅನುಮತಿ ನೀಡಿರಲಿಲ್ಲ.
ಇದಾದ ಬಳಿಕ ಕೆಕೆಆರ್ ಪರ 11ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಎನ್ರಿಕ್ ನೋಕಿಯಾ ಕೂಡ ನಿಗದಿಪಡಿಸಿದ್ದಕ್ಕಿಂತ ದಪ್ಪದ ಬ್ಯಾಟ್ನೊಂದಿಗೆ ಆಗಮಿಸಿದ್ದರು. ಈ ಬಗ್ಗೆ ಸಂದೇಹಗೊಂಡ ಅಂಪೈರ್ ಗೇಜ್ನೊಂದಿಗೆ ಬ್ಯಾಟ್ ಪರಿಶೀಲಿಸಿದರು. ಈ ವೇಳೆ ಬ್ಯಾಟ್‌ನ ಹಿಂಭಾಗವು ನಿಗದಿತ ಮಿತಿಗಿಂತ ದೊಡ್ಡದಿರುವುದು ಕಂಡುಬಂದಿದೆ. ಹೀಗಾಗಿ ಬ್ಯಾಟ್ ಬದಲಿಸುವಂತೆ ಸೂಚಿಸಿದರು.
ಇಂಡಿಯನ್ ಪ್ರೀಮಿಯರ್ ಲೀಗ್ ಪಂದ್ಯಾವಳಿಗಾಗಿ ಬ್ಯಾಟ್‌ನ ಆಯಾಮಗಳಿಗೆ ಮಿತಿಯನ್ನು ನಿಗದಿಪಡಿಸಿದೆ. ಅದರ ಪ್ರಕಾರ ಬ್ಯಾಟ್‌ನ ಮಧ್ಯ ಭಾಗದ ಅಗಲ 2.64 ಇಂಚುಗಳಿಗಿಂತ ಹೆಚ್ಚಿರಬಾರದು. ಬ್ಯಾಟ್‌ನ ಬ್ಲೇಡ್ ಈ ಆಯಾಮಗಳನ್ನು ಮೀರಬಾರದು. ಅಗಲ: 4.25 ಇಂಚು/10.8 ಸೆಂಮೀ, ಆಳ: 2.64 ಇಂಚು/6.7 ಸೆಂಮೀ, ಅಂಚುಗಳು: 1.56 ಇಂಚು/4.0 ಸೆಂಮೀ ಇರಬೇಕು.ಇದಲ್ಲದೆ, ಯಾವುದೇ ಬ್ಯಾಟ್ ‘ಬ್ಯಾಟ್ ಗೇಜ್’ ಮೂಲಕವೇ ಹಾದುಹೋಗುವಂತಿರಬೇಕು. ಇಷ್ಟಿದ್ದರೆ ಯಾವುದೇ ಸಮಸ್ಯೆಯಿಲ್ಲ. ಇದರಲ್ಲಿ ಚೂರು ವ್ಯತ್ಯಾಸವಾದರೂ ಬ್ಯಾಟ್‌ಅನ್ನು ಬದಲಿಸಬೇಕಾಗುತ್ತದೆ.
ಈ ಸುದ್ದಿ ಓದಿದ್ದೀರಾ? IPL 2025: ಬ್ಯಾಟರ್‌ಗಳು ಅಳತೆ ಮೀರಿದ ಬ್ಯಾಟ್ ಬಳಸುತ್ತಿದ್ದಾರೆಯೇ? ಅಂಪೈರ್‌ಗಳು ಪರಿಶೀಲಿಸುವುದೇಕೆ?
ಇದನ್ನು ಆನ್ ಫೀಲ್ಡ್ ಅಂಪೈರ್‌ಗಳು ಗೇಜ್ ಬಳಸಿ ಪರಿಶೀಲಿಸಲಿದ್ದಾರೆ. ಈ ಪರಿಶೀಲನೆಯಲ್ಲಿ ಅಂಪೈರ್ ಬಳಸುವ ಗೇಜ್ ಮೂಲಕ ಬ್ಯಾಟ್ ಹಾದು ಹೋದರೆ ಮಾತ್ರ ಬ್ಯಾಟಿಂಗ್ ಮುಂದುವರೆಸಲು ಅವಕಾಶ ನೀಡಲಾಗುತ್ತದೆ.
ಅಂದರೆ 4 ಸೆಂಟಿಮೀಟರ್ ಇಂಚುಗಳಿಗಿಂತ ಹೆಚ್ಚಿನ ಅಗಲವಾದ ಬ್ಯಾಟ್ ಬಳಸಲು ಅವಕಾಶವಿಲ್ಲ. ಹೀಗಾಗಿ ಬ್ಯಾಟ್ಗಳ ಅಗಲದ ಮೇಲೆ ಸಂದೇಹ ಮೂಡಿದರೆ ಅಂಪೈರ್ ಮೈದಾನದಲ್ಲೇ ಪರಿಶೀಲಿಸುತ್ತಿದ್ದಾರೆ.
ಐಪಿಎಲ್ನಲ್ಲಿ ಬ್ಯಾಟ್ ಪರಿಶೀಲನೆ ನಿಯಮವನ್ನು ಜಾರಿಗೊಳಿಸಲು ಮುಖ್ಯ ಕಾರಣ ಬ್ಯಾಟರ್ಗಳ ಅಬ್ಬರ. ಕೆಲ ಬ್ಯಾಟ್ಸ್ಮನ್ಗಳು ಹೆಚ್ಚಿನ ಅಗಲದ ಬ್ಯಾಟ್ ಬಳಸಿದ್ದಾರೆ ಎಂದು ಆರೋಪಗಳು ಕೇಳಿ ಬಂದಿದೆ. ಹೀಗಾಗಿ ಬಿಸಿಸಿಐ ಕಠಿಣ ನಿಯಮದೊಂದಿಗೆ ಬ್ಯಾಟ್ ಪರಿಶೀಲಿಸಲು ಮುಂದಾಗಿದ್ದಾರೆ.
ಅದರಂತೆ ಇದೀಗ ಪ್ರತಿ ಪಂದ್ಯಗಳಲ್ಲೂ ಬ್ಯಾಟ್ ಪರಿಶೀಲನೆ ನಡೆಯುತ್ತಿದೆ. ಇದರ ನಡುವೆ ಇದೀಗ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಸುನಿಲ್ ನರೈನ್ ಹಾಗೂ ಆ್ಯಂಡ್ರೆ ರಸೆಲ್ ನಿಗದಿತ ಮಿತಿಗಿಂತ ಹೆಚ್ಚಿನ ಅಗಲ ಮತ್ತು ದಪ್ಪದ ಬ್ಯಾಟ್ ಬಳಸಲು ಮುಂದಾಗಿರುವುದು ಕಂಡು ಬಂದಿದೆ.
https://x.com/Zsports/status/1912344728546472350?ref_src=twsrc%5Etfw%7Ctwcamp%5Etweetembed%7Ctwterm%5E1912344728546472350%7Ctwgr%5Ed0a57d3b45ffa0dfb83926a21f341a594469e084%7Ctwcon%5Es1&ref_url=https%3A%2F%2Ftv9kannada.com%2Fsports%2Fcricket-news%2Fipl-2025-sunil-narine-and-andre-russells-bat-doesnt-pass-umpires-check-1008022.html