ಶುಕ್ರವಾರ ನಡೆದ ದೋಹಾ ಡೈಮಂಡ್ ಲೀಗ್ ಪುರುಷರ ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ, ಎರಡು ಬಾರಿ ಒಲಿಂಪಿಕ್ ಪದಕ ಗೆದ್ದಿರುವ ನೀರಜ್ ಚೋಪ್ರಾ ಅಂತಿಮವಾಗಿ 90 ಮೀಟರ್ ದೂರವನ್ನು ದಾಟಿ ದಾಖಲೆ ಬರೆದರು. ಒಲಿಂಪಿಕ್ ಚಿನ್ನ ಮತ್ತು ಬೆಳ್ಳಿ ಪದಕ ಗೆದ್ದಿರುವ ನೀರಜ್ 90 ಮೀಟರ್ ದೂರವನ್ನು ಎಂದಿಗೂ ದಾಟಿರಲಿಲ್ಲ. ಆದರೆ ಶುಕ್ರವಾರ 90.23 ಮೀಟರ್ ಜಾವೆಲಿನ್ ಎಸೆದರು.
2022ರ ಸ್ಟಾಕ್‌ಹೋಮ್ ಡೈಮಂಡ್ ಲೀಗ್‌ನಲ್ಲಿ 89.94 ಮೀಟರ್ ದೂರ ಜಾವೆಲಿನ್ ಎಸೆದರು. ಇದೀಗ ದೋಹಾ ಡೈಮಂಡ್ ಲೀಗ್‌ನಲ್ಲಿ ನೀರಜ್ ತಮ್ಮ ಮೂರನೇ ಪ್ರಯತ್ನದಲ್ಲಿ 90.23 ಮೀಟರ್ ದೂರ ಎಸೆಯುವ ಮೂಲಕ ಈ ಸಾಧನೆ ಮಾಡಿದ ಮೊದಲ ಭಾರತೀಯ ಅಥ್ಲೀಟ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಇದನ್ನು ಓದಿದ್ದೀರಾ? ದೋಹಾ ಡೈಮಂಡ್ ಲೀಗ್; ನೀರಜ್ ಚೋಪ್ರಾ `ಚಿನ್ನ’ದ ಥ್ರೋ!
ಆದರೆ ಜರ್ಮನಿಯ ಜೂಲಿಯನ್ ವೆಬರ್ 91.06 ಮೀಟರ್ ದೂರ ಜಾವೆಲಿನ್ ಎಸೆದು ಅಗ್ರಸ್ಥಾನ ಪಡೆದ ಕಾರಣ ನೀರಜ್ ಚೋಪ್ರಾ ಎರಡನೇ ಸ್ಥಾನಕ್ಕೆ ಇಳಿದರು.
VIDEO | Two-time Olympic medalist Neeraj Chopra finally breached the 90m mark with a stunning 90.23m attempt in the Doha Diamond League men's javelin throw event on Friday.
— Press Trust of India (@PTI_News) May 16, 2025
Neeraj, who has won the Olympic gold as well as silver medal, never breached the 90m mark before this… pic.twitter.com/PMrUxRBCOq
ವಿಶ್ವ ಮಟ್ಟದ ಸ್ಪರ್ಧೆಯಲ್ಲಿ 90 ಮೀಟರ್ ಗಡಿಯನ್ನು ದಾಟಿದ ಮೊದಲ ಭಾರತೀಯ ಜಾವೆಲಿನ್ ಎಸೆತಗಾರ ಎಂಬ ಹೆಗ್ಗಳಿಕೆಗೆ ನೀರಜ್ ಪಾತ್ರರಾಗಿದ್ದಾರೆ. 2022ರ ಜೂನ್‌ನಲ್ಲಿ ಸ್ಟಾಕ್‌ಹೋಮ್‌ನಲ್ಲಿ ಸ್ಥಾಪಿಸಲಾದ 89.94 ಮೀಟರ್‌ನ ತನ್ನ ಅಸ್ತಿತ್ವದಲ್ಲಿರುವ ದಾಖಲೆಯನ್ನು ನೀರಜ್ ಅವರು ಮುರಿದಿರುವ ಕಾರಣ ಇದು ಭಾರತಕ್ಕೆ ಹೊಸ ರಾಷ್ಟ್ರೀಯ ದಾಖಲೆಯೂ ಆಗಿದೆ.
