ಲೌಸನ್ನೆ ಡೈಮಂಡ್ ಲೀಗ್‌ನಲ್ಲಿ ಭಾರತದ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಈ ಸೀಸನ್‌ನಲ್ಲೇ ಅತ್ಯುತ್ತಮ ಪ್ರದರ್ಶನವನ್ನು ನೀಡಿದರೂ ಕೂಡಾ ಎರಡನೇ ಸ್ಥಾನ ಪಡೆದರು.
89.49 ಮೀಟರ್ ಎಸೆತದೊಂದಿಗೆ ನೀರಜ್ ಚೋಪ್ರಾ ಎರಡನೇ ಸ್ಥಾನದಲ್ಲಿದ್ದರೆ, ಗ್ರೆನಡಾದ ಆಂಡರ್ಸನ್ ಪೀಟರ್ಸ್ 90.61 ಮೀಟರ್ ಎಸೆದು ಮೊದಲ ಸ್ಥಾನ ಪಡೆದರು.
26 ವರ್ಷದ ನೀರಜ್ ಚೋಪ್ರಾ ನಾಲ್ಕ ಸುತ್ತು ಮುಗಿಯುವವರೆಗೂ ನಾಲ್ಕನೇ ಸ್ಥಾನದಲ್ಲಿಯೇ ಇದ್ದರು. ಆದರೆ ಐದನೇ ಪ್ರಯತ್ನದಲ್ಲಿ ಅವರು 85.58 ಮೀಟರ್ ದೂರಕ್ಕೆ ಜಾವೆಲಿನ್ ಎಸೆದರು.
ಇದನ್ನು ಓದಿದ್ದೀರಾ? Paris Olympics | ಚಿನ್ನ ಗೆದ್ದ ಪಾಕ್‌ನ ನದೀಂ ಬಗ್ಗೆ ನೀರಜ್ ಚೋಪ್ರಾ ತಾಯಿಯ ಪ್ರೀತಿ ಮಾತು!
ಕೊನೆಯ ಪ್ರಯತ್ನದಲ್ಲಿ ಅದ್ಭುತ ಪ್ರದರ್ಶನ ತೋರಿದ ನೀರಜ್ ಚೋಪ್ರಾ 89.49 ಮೀಟರ್ ದೂರಕ್ಕೆ ಎಸೆದು ಎರಡನೇ ಸ್ಥಾನ ತನ್ನದಾಗಿಸಿಕೊಂಡಿದ್ದಾರೆ. 87.08 ಮೀಟರ್ ಎಸೆದ ಜರ್ಮನಿಯ ಜಾವೆಲಿನ್ ತಾರೆ ಜ್ಯೂಲಿಯನ್ ವೆಬೆರ್ ಕಂಚು ಗೆದ್ದರು.
ಮೂರು ವರ್ಷ ಮುನ್ನ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕವನ್ನು ಗೆದ್ದುಕೊಂಡಿದ್ದ ನೀರಜ್ ಚೋಪ್ರಾ ಇತ್ತೀಚೆಗೆ ನಡೆದ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದಿದ್ದರು. 2022ರ ಡೈಮಂಡ್ ಲೀಂಗ್‌ನಲ್ಲಿ ನೀರಜ್ ಚೋಪ್ರಾ ಚಾಂಪಿಯನ್ ಆಗಿದ್ದರು. ಆದರೆ ಕಳೆದ ವರ್ಷ ಯೂಜಿನ್ ಡೈಮಂಡ್ ಲೀಗ್ ಫೈನಲ್‌ನಲ್ಲಿ ದ್ವಿತೀಯ ಸ್ಥಾನ ಪಡೆದಿದ್ದರು.
You're also a the descendants of Rana!
— Prince yadav (@i_m_prince22) August 22, 2024
Throw the javelin as far as it can go!
Thanks golden boy gives us 2nd spot we're proud of you. You're always be our Diamond 💎 ❤️#NeerajChopra #DiamondLeague #Javelinpic.twitter.com/A8T6G3fFmE pic.twitter.com/SZ1zWcosh5