2025ರಲ್ಲಿ ನಡೆಯುವ ಐಪಿಎಲ್‌ನ ಹರಾಜು ಪ್ರಕ್ರಿಯೆಯಲ್ಲಿ ನಗಣ್ಯವಾಗಿದ್ದ ಟೀಮ್ ಇಂಡಿಯಾ ಆಟಗಾರ ಶಾರ್ದೂಲ್ ಠಾಕೂರ್ ಇದೀಗ ರಣಜಿಯಲ್ಲಿ ಫೀನಿಕ್ಸ್‌ನಂತೆ ಫಾರ್ಮ್‌ಗೆ ಬಂದಿದ್ದಾರೆ. ಉತ್ತಮ ಪ್ರದರ್ಶನ ನೀಡುತ್ತಿದ್ದು, ಕ್ರಿಕೆಟ್ ಪ್ರೇಮಿಗಳು ಚಿತ್ತ ಸೆಳೆದಿದ್ದಾರೆ.
ಪ್ರಸ್ತುತ ನಡೆಯುತ್ತಿರುವ ರಣಜಿ ಟ್ರೋಫಿ ಕ್ರಿಕೆಟ್ ಸರಣಿಯಲ್ಲಿ ಶಾರ್ದೂಲ್ ಅವರು ಮುಂಬೈ ತಂಡದ ಭಾಗವಾಗಿದ್ದರು. ಗುರುವಾರ, ಮುಂಬೈನಲ್ಲಿ ನಡೆದ ಮುಂಬೈ-ಮೇಘಾಲಯ ನಡುವಿನ ಪಂದ್ಯದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಹ್ಯಾಟ್ರಿಕ್ ವಿಕೆಟ್ ಪಡೆದು, ಸಾಧನೆ ಮಾಡಿದ್ದಾರೆ.
ಮುಂಬೈ ತಂಡದ ಪರವಾಗಿ ಬೌಲಿಂಗ್ ಮಾಡಿದ ಶಾದೂರ್ಲ್, ಮೂರನೇ ಓವರ್‌ನಲ್ಲಿ ಮೆಘಾಲಯ ತಂಡದ ಬ್ಯಾಟರ್ ಅನಿರುದ್ಧ್ ಬಿ, ಸುಮಿತ್ ಕುಮಾರ್ ಮತ್ತು ಜಸ್ಕಿರತ್ ಅವರನ್ನು ಔಟ್ ಮಾಡಿದ್ದಾರೆ. ಹ್ಯಾಟ್ರಿಕ್ ವಿಕೆಟ್ ಗಳಿಸಿದ್ದಾರೆ.
ರಣಜಿಯಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವ ಶಾರ್ದೂಲ್ ಈವರೆಗೆ 7 ಪಂದ್ಯಗಳನ್ನು ಆಡಿದ್ದು, 20 ವಿಕೆಟ್‌ಗಳನ್ನು ಪಡೆದಿದ್ದಾರೆ. ಮಾತ್ರವಲ್ಲದೆ, ಬ್ಯಾಟಿಂಗ್‌ನಲ್ಲೂ ಅಬ್ಬರಿಸುತ್ತಿದ್ದು, ಒಂದು ಶತಕ ಮತ್ತು ಎರಡು ಅರ್ಧಶತಕಗಳೊಂದಿಗೆ 297 ರನ್‌ಗಳನ್ನು ಗಳಿಸಿದ್ದಾರೆ.
ಶಾರ್ದೂಲ್ ಠಾಕೂರ್ ಐಪಿಎಲ್‌ನಲ್ಲಿ ಹಲವು ತಂಡಗಳಲ್ಲಿ ಆಡಿದ್ದರು. ಆರಂಭದಲ್ಲಿ, 2012ರಲ್ಲಿ ಮುಂಬೈ ಇಂಡಿಯನ್ಸ್ ತಂಡದಲ್ಲಿದ್ದರು, 2015 ಮತ್ತು 2016ದಲ್ಲಿ ಕಿಂಗ್ಸ್ XI ಪಂಜಾಬ್, 2017 ರೈಸಿಂಗ್ ಪುಣೆ ಸೂಪರ್‌ಜೈಂಟ್ಸ್, 2018–2021, 2024ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್, 2022ರಲ್ಲಿ ದೆಹಲಿ ಕ್ಯಾಪಿಟಲ್ಸ್ ಹಾಗೂ 2023ರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದಲ್ಲಿ ಆಡಿದ್ದರು. ಆದರೆ, ಈ ಬಾರಿ ಅವರನ್ನು ಯಾವುದೇ ತಂಡವು ಹರಾಜಿನಲ್ಲಿ ಖರೀದಿಸಿಲ್ಲ. ಹೀಗಾಗಿ, ಐಪಿಎಲ್‌ನಿಂದ ಹೊರಗುಳಿದಿದ್ದಾರೆ.