ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್ 2023ರ ಟೂರ್ನಿಯಲ್ಲಿ ಮತ್ತೊಂದು ಅಚ್ಚರಿ ಫಲಿತಾಂಶ ಬಂದಿದೆ. ಸತತ ಎರಡು ಪಂದ್ಯಗಳನ್ನು ಗೆದ್ದು ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿದ್ದ ಪ್ರಬಲ ದಕ್ಷಿಣ ಆಫ್ರಿಕಾ ತಂಡವನ್ನು ರ‍್ಯಾಂಕಿಂಗ್‌ನ ಕೊನೆಯ ಸ್ಥಾನದಲ್ಲಿರುವ ನೆದರ್ಲೆಂಡ್ಸ್ ತಂಡ 38 ರನ್‌ಗಳಿಂದ ಸೋಲಿಸಿ ತಾನು ಕೂಡ ಪ್ರಬಲ ತಂಡ ಎಂದು ಸಾಬೀತುಪಡಿಸಿದೆ.
ಕಳೆದ ಎರಡು ದಿನಗಳ ಹಿಂದೆ ಹಾಲಿ ಚಾಂಪಿಯನ್ ಇಂಗ್ಲೆಂಡ್ ತಂಡವನ್ನು ಅಫ್ಘಾನಿಸ್ತಾನ್ ಸೋಲಿಸಿತ್ತು.
ಹಿಮಾಚಲ ಪ್ರದೇಶದ ಧರ್ಮಶಾಲಾ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ನೆದರ್ಲೆಂಡ್ಸ್ ನೀಡಿದ 246 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಹರಿಣಗಳ ತಂಡ 42.5 ಓವರ್‌ಗಳಲ್ಲಿ 207 ರನ್‌ಗಳಷ್ಟನ್ನೆ ಗಳಿಸಿ ಆಲೌಟ್ ಆಯಿತು.
ಅತ್ಯುತ್ತಮ ಬೌಲಿಂಗ್ ಮಾಡಿದ ಪಾಲ್ ವ್ಯಾನ್ ಮೀಕೆರೆನ್ 40/2, ಲೋಗನ್ ವ್ಯಾನ್ ಬೀಕ್ 60/3, ರೋಲೋಫ್ ವ್ಯಾನ್ ಡೆರ್ ಮೆರ್ವೆ 34/2 ಹಾಗೂ ಬಾಸ್ ಡಿ ಲೀಡೆ 36/2 ವಿಕೆಟ್ ಕಬಳಿಸಿ ಗೆಲುವಿನ ರೂವಾರಿಗಳಾದರು.
78 Runs | 69 Balls | 10 4s, 1 6 | 113.04 SR 🔥🔥🔥
Scott Edwards has pushed Netherlands to 245/8 in 43 overs. Can they stun South Africa two World Cups in a row? 😬 pic.twitter.com/RPMUWUaRh2
— Cricbuzz (@cricbuzz) October 17, 2023
ದಕ್ಷಿಣ ಆಫ್ರಿಕಾ ಪರ ಡೇವಿಡ್ ಮಿಲ್ಲರ್ (43), ಬೌಲರ್ ಕೇಶವ್ ಮಹಾರಾಜ್(40) ಹಾಗೂ ಹೆನ್ರಿಕ್ ಕ್ಲಾಸೆನ್ (28) ರನ್ ಗಳಿಸಿದ್ದನ್ನು ಬಿಟ್ಟರೆ ಉಳಿದ ಬ್ಯಾಟ್ಸ್‌ಮನ್‌ಗಳು ಗೆಲುವಿಗಾಗಿ ಹೋರಾಟ ನಡೆಸಲಿಲ್ಲ.
ಈ ಮೊದಲು ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ತಂಡದ ನಾಯಕ ಟೆಂಬಾ ಬವುಮಾ ನೆದರ್ಲೆಂಡ್ಸ್ ತಂಡವನ್ನು ಬ್ಯಾಟಿಂಗ್ ಆಹ್ವಾನಿಸಿದರು.
ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿದ ಡಚ್ಚರ ತಂಡದ ನಾಯಕ ಸ್ಕಾಟ್ ಎಡ್ವರ್ಡ್ ಹಾಗೂ ಬೌಲರ್‌ಗಳ ಉತ್ತಮ ಪ್ರದರ್ಶನದಿಂದ 43 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 245 ರನ್‌ಗಳ ಸ್ಪರ್ಧಾತ್ಮಕ ಮೊತ್ತ ದಾಖಲಿಸಿತು.
OUT – SIX DOWN!
Bowled him – Jansen falls to van Meekeren. This is getting INTENSE 🤯 #CWC23 #SAvNED LIVE ▶️ https://t.co/EQ0tBxWBpF pic.twitter.com/lo9tylMA2y
— ESPNcricinfo (@ESPNcricinfo) October 17, 2023
ಈ ಸುದ್ದಿ ಓದಿದ್ದೀರಾ? ಭಾರತೀಯ ಕ್ರಿಕೆಟ್ ಪ್ರಿಯರಿಗೆ ಶುಭಸುದ್ದಿ: 2028ರ ಒಲಿಂಪಿಕ್ಸ್‌ಗೆ ಟಿ20 ಕ್ರಿಕೆಟ್ ಸೇರ್ಪಡೆ
ಮಳೆಯಿಂದ ತಡವಾಗಿ ಆರಂಭಗೊಂಡ ಪಂದ್ಯದಲ್ಲಿ ಉಭಯ ತಂಡಗಳಿಗೂ ತಲಾ 43 ಓವರ್ ನಿಗದಿಪಡಿಸಲಾಯಿತು.
ಮೊದಲು ಬ್ಯಾಟಿಂಗ್ ಆರಂಭಿಸಿದ ಡಚ್ಚರಿಗೆ ಉತ್ತಮ ಆರಂಭ ಸಿಗಲಿಲ್ಲ. ಆರಂಭಿಕ ಆಟಗಾರ ವಿಕ್ರಮ್‌ಜಿತ್ ಸಿಂಗ್ 2(16) ರನ್ ಗಳಿಸಿ ಕಗೀಸೊ ರಬಾಡಾಗೆ ವಿಕೆಟ್ ಒಪ್ಪಿಸಿದರು. ಅವರ ಬೆನ್ನಲ್ಲೇ ಮ್ಯಾಕ್ಸ್ ಒಡೌಡ್ 18(25) ರನ್ ಗಳಿಸಿ ಎರಡನೆಯವರಾಗಿ ವಿಕೆಟ್ ಒಪ್ಪಿಸಿದರು. ಮಾರ್ಕೊ ಜಾನ್ಸೆನ್ ಎಸೆತದಲ್ಲಿ ಕೀಪರ್ ಡಿ ಕಾಕ್ ಕ್ಯಾಚ್ ಹಿಡಿದು ತಂಡಕ್ಕೆ ಮುನ್ನಡೆ ತಂದುಕೊಟ್ಟರು.
ರಬಾಡ ಎಸೆತದಲ್ಲಿ ಬಾಸ್ ಡಿ ಲೀಡೆ 2(7) ರನ್ ಗಳಿಸಿದ್ದಾಗ ಎಲ್‌ಬಿ ಬಲೆಗೆ ಬಿದ್ದರು. ಅವರ ಬೆನ್ನಲ್ಲೇ ಕಾಲಿನ್ ಅಕರ್ಮನ್ ಕೂಡಾ 13(25) ರನ್ ಗಳಿಸಿ ಜೆರಾಲ್ಡ್ ಕೋಟ್ಜಿಗೆ ವಿಕೆಟ್ ಒಪ್ಪಿಸಿದರು.
ಸಂಕಷ್ಟದಲ್ಲಿದ್ದ ತಂಡವನ್ನು 200 ರನ್‌ಗಳ ಗಡಿ ದಾಟಿಸಿದವರು ನಾಯಕ ಎಡ್ವರ್ಡ್ಸ್ ಮತ್ತು ಮೆರ್ವೆ. ಇವರಿಬ್ಬರೂ ಎಂಟನೇ ವಿಕೆಟ್‌ಗೆ ಅರ್ಧಶತಕದ ಜೊತೆಯಾಟವಾಡಿದರು.
ನಾಯಕನ ಆಟವಾಡಿದ ಎಡ್ವರ್ಡ್ಸ್ 69 ಎಸೆತಗಳಲ್ಲಿ 78 ರನ್ ಪೇರಿಸಿದರೆ, ಮೆರ್ವೆ 19 ಚೆಂಡುಗಳಲ್ಲಿ 29 ರನ್ ಸ್ಫೋಟಿಸಿದರು. ಕೊನೆಯಲ್ಲಿ ಬಂದ ಆರ್ಯನ್ ದತ್ ಕೇವಲ 9 ಎಸೆತಗಳಲ್ಲಿ 3 ಸ್ಫೋಟಕ ಸಿಕ್ಸರ್ ಸಹಿತ 23 ರನ್ ಗಳಿಸಿದರು. ಮುರಿಯದ 9ನೇ ವಿಕೆಟ್‌ಗೆ ಇವರಿಬ್ಬರೂ ಕೇವಲ 19 ಎಸೆತಗಳಲ್ಲಿ 41 ರನ್ ಕಲೆಹಾಕಿದರು.