ಮೌಂಟ್ ಮೌಂಗನುಯಿ ಮೈದಾನದಲ್ಲಿ ನಡೆದ ಮೂರನೇ ಮತ್ತು ಕೊನೆಯ ಏಕದಿನ ಪಂದ್ಯದಲ್ಲಿ ನ್ಯೂಜಿಲೆಂಡ್ ಪಾಕಿಸ್ತಾನವನ್ನು ಸೋಲಿಸಿದೆ. ಈ ಮೂಲಕ ಮೂರು ಪಂದ್ಯಗಳನ್ನೂ ಗೆದ್ದು ನ್ಯೂಜಿಲೆಂಡ್ ಕ್ಲೀನ್ ಸ್ವೀಪ್ ಮಾಡಿದೆ. ಪಾಕಿಸ್ತಾನಕ್ಕೆ ಭಾರೀ ಮುಖಭಂಗವಾಗಿದೆ.
ಈ ಹಿಂದೆ ಎರಡು ಪಂದ್ಯಗಳಲ್ಲಿ ಗೆಲುವು ಕಂಡಿದ್ದ ನ್ಯೂಜಿಲೆಂಡ್ ಮೂರನೇ ಪಂದ್ಯದಲ್ಲಿ 43 ರನ್‌ಗಳ ಅಂತರದಲ್ಲಿ ಗೆದ್ದು 3-0 ಕ್ಲೀನ್ ಸ್ವೀಪ್ ಸಾಧಿಸಿದೆ. ಈ ಹಿಂದೆ ನಡೆದ ಐದು ಪಂದ್ಯಗಳ ಟಿ-20 ಸರಣಿಯಲ್ಲೂ ನ್ಯೂಜಿಲೆಂಡ್ 4-1 ಅಂತರದಲ್ಲಿ ಭರ್ಜರಿ ಜಯ ಸಾಧಿಸಿದೆ.
ಇದನ್ನು ಓದಿದ್ದೀರಾ? ನ್ಯೂಜಿಲೆಂಡ್-ಇಂಡಿಯಾ ಟೆಸ್ಟ್ | ಮೊದಲ ಇನಿಂಗ್ಸ್‌ನಲ್ಲಿ 46 ಕ್ಕೆ ಆಲೌಟ್; ಕೊಹ್ಲಿ ಸೇರಿ ಐವರು ಶೂನ್ಯ ಸಂಪಾದನೆ
ಮೊದಲು ಬ್ಯಾಂಟಿಂಗ್ ನಡೆಸಿದ್ದ ನ್ಯೂಜಿಲೆಂಡ್, ಎಂಟು ವಿಕೆಟ್ ಕಳೆದುಕೊಂಡು ಪಾಕಿಸ್ತಾನಕ್ಕೆ 264 ರನ್‌ಗಳ ಗುರಿ ನೀಡಿತ್ತು. ಈ ಗುರಿ ಬೆನ್ನಟ್ಟಿದ ಪಾಕಿಸ್ತಾನ 221 ರನ್‌ಗಳಲ್ಲೇ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿದೆ.
A series sweep to end the 24/25 New Zealand Summer of Cricket! Ben Sears leading the charge again with successive five-wicket bags and career-best ODI figures (5-34). Catch-up on all scores | https://t.co/fwZlrRKJKE 📲 #NZvPAK #CricketNation pic.twitter.com/C410af5x9A
— BLACKCAPS (@BLACKCAPS) April 5, 2025
ನ್ಯೂಜಿಲೆಂಡ್ ಬೌಲರ್ ಬೆನ್ ಸೀಯರ್ಸ್ ಐದು ವಿಕೆಟ್ ಕಬಳಿಸಿದ್ದಾರೆ. ನಾಯಕ ಮೈಕಲ್ ಬ್ರೇಸ್‌ವೆಲ್ (59), ರೈಸ್ ಮರಿಯು (58) ಅರ್ಧಶತಕ ಸಾಧಿಸಿದ್ದಾರೆ. ಡ್ಯಾರಿಲ್ ಮಿಚಲ್ 43, ಹೆನ್ರಿ ನಿಕೋಲಸ್ 31, ಟಿಮ್ ಸೀಫರ್ಟ್ 26 ರನ್‌ಗಳನ್ನು ತಂಡಕ್ಕೆ ನೀಡಿದ್ದಾರೆ.
