ಏಕದಿನ ವಿಶ್ವಕಪ್ 2023ರ 14ನೇ ಆವೃತ್ತಿಯ 16ನೇ ಪಂದ್ಯದಲ್ಲಿ ಅಫ್ಘಾನಿಸ್ತಾನ ವಿರುದ್ಧ ನ್ಯೂಜಿಲೆಂಡ್ ಭರ್ಜರಿ ಜಯ ಸಾಧಿಸುವುದರೊಂದಿಗೆ ಗೆಲುವಿನ ಓಟ ಮುಂದುವರಿಸಿದೆ.
ಚೆನ್ನೈನ ಚೆಪಾಕ್ ಮೈದಾನದಲ್ಲಿ ಬ್ಯಾಟಿಂಗ್ ಮತ್ತು ಬೌಲಿಂಗ್‌ನಲ್ಲಿ ಅಬ್ಬರಿಸಿದ ಟಾಮ್ ಲಥಮ್ ಬಳಗ ಅಫ್ಘಾನಿಸ್ತಾನ ತಂಡವನ್ನು 149 ರನ್ನುಗಳಿಂದ ಮಣಿಸಿ ಪ್ರಸಕ್ತ ವಿಶ್ವಕಪ್ ಆವೃತ್ತಿಯಲ್ಲಿ ಸತತ ನಾಲ್ಕನೇ ಜಯ ಸಾಧಿಸಿದೆ.
New Zealand continue their unbeaten run in #CWC23 with yet another emphatic win in Chennai 👊#NZvAFG 📝: https://t.co/2MEcSjgyXA pic.twitter.com/r6tiqMz7HA
— ICC Cricket World Cup (@cricketworldcup) October 18, 2023
ನ್ಯೂಜಿಲೆಂಡ್ ನೀಡಿದ್ದ 289 ರನ್‌ಗಳನ್ನು ಬೆನ್ನಟ್ಟಿದ ಅಫ್ಘಾನಿಸ್ತಾನ 34.4 ಓವರ್‌ಗಳಲ್ಲಿ 139 ರನ್‌ಗಳಿಗೆ ಆಲೌಟ್ ಆಯಿತು. ಅಫ್ಘಾನ್ ಪರ ರಹಮತ್ ಶಾ(36) ಹಾಗೂ ಅಜ್ಮತುಲ್ಲಾ ಒಮರ್ಜಾಯ್(27) ರನ್ ಗಳಿಸಿದ್ದನ್ನು ಬಿಟ್ಟರೆ ಉಳಿದ ಆಟಗಾರರು ಕಿವೀಸ್ ಬೌಲಿಂಗ್ ದಾಳಿಗೆ ಪೆವಿಲಿಯನ್ ದಡ ಸೇರಿದರು.
ಈ ಸುದ್ದಿ ಓದಿದ್ದೀರಾ? ಭಾರತೀಯ ಕ್ರಿಕೆಟ್ ಪ್ರಿಯರಿಗೆ ಶುಭಸುದ್ದಿ: 2028ರ ಒಲಿಂಪಿಕ್ಸ್‌ಗೆ ಟಿ20 ಕ್ರಿಕೆಟ್ ಸೇರ್ಪಡೆ
ನ್ಯೂಜಿಲೆಂಡ್ ಪರ ಲಾಕಿ ಫರ್ಗುಸನ್ 19/3, ಮಿಚೆಲ್ ಸ್ಯಾಂಟ್ನರ್ 39/3 ಹಾಗೂ ಟ್ರೆಂಟ್ ಬೌಲ್ಟ್ 18/2 ವಿಕೆಟ್ ಕಿತ್ತು ಗೆಲುವಿನ ರೂವಾರಿಗಳಾದರು.
A 144-run stand between Glenn Phillips [71 off 80] and Tom Latham [68 off 74] has powered New Zealand to a strong total of 288!
Afghanistan have a task on their hands after a lackadaisical fielding performance #AFGvsNZ pic.twitter.com/tJYu9TqeBt
— Cricbuzz (@cricbuzz) October 18, 2023
ಮೊದಲು ಬ್ಯಾಟಿಂಗ್ ಮಾಡಿದ ಕಿವೀಸ್, ಟಾಮ್ ಲಥಮ್ ಮತ್ತು ಗ್ಲೆನ್ ಫಿಲಿಪ್ಸ್ ಶತಕದ ಜೊತೆಯಾಟದ ನೆರವಿನಿಂದ 6 ವಿಕೆಟ್ ಕಳೆದುಕೊಂಡು 288 ರನ್ ಗಳಿಸಿತು.
ನ್ಯೂಜಿಲೆಂಡ್ ಪರ ವಿಲ್ ಯಂಗ್ ಮತ್ತು ರಚಿನ್ ರವೀಂದ್ರ ಉತ್ತಮ ಜೊತೆಯಾಟ ನಡೆಸಿದರು. ಉಭಯ ಬ್ಯಾಟರ್‌ಗಳಿಂದ ಅರ್ಧಶತಕದ ಜೊತೆಯಾಟ ಬಂತು. 41 ಎಸೆತಗಳಲ್ಲಿ 32 ರನ್ ಗಳಿಸಿದ್ದ ರಚಿನ್ ರವಿಂದ್ರ, ಒಮರ್ಜಾಯ್ ಎಸೆತದಲ್ಲಿ ಬೋಲ್ಡ್ ಆದರು.
ಅರ್ಧಶತಕ ಸಿಡಿಸಿ ಆಡುತ್ತಿದ್ದ ವಿಲ್ ಯಂಗ್ 54(64) ರನ್ ಗಳಿಸಿ ಔಟಾದರು. ಗ್ಲೆನ್ ಫಿಲಿಪ್ಸ್ 80 ಎಸೆತಗಳಲ್ಲಿ 71 ರನ್ ಸಿಡಿಸಿದರು. ಅಲ್ಲದೆ ನಾಯಕ ಲಥಮ್ ಜೊತೆಗೆ 144(153) ರನ್‌ಗಳ ಬೃಹತ್ ಜೊತೆಯಾಟವಾಡಿದರು. ನಾಯಕನ ಆಟವಾಡಿದ ಲಥಮ್ 68 ರನ್ ಗಳಿಸಿದರು.