ನ್ಯೂಜಿಲೆಂಡ್ ತಂಡ ಐಸಿಸಿ ವಿಶ್ವಕಪ್ ಟೂರ್ನಿಯ ತನ್ನ ಕೊನೆಯ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ 5 ವಿಕೆಟ್‌ಗಳ ಅಂತರದಲ್ಲಿ ಜಯಗಳಿಸಿತು. ಈ ಗೆಲುವಿನೊಂದಿಗೆ ಕಿವೀಸ್ ಪಡೆ ತನ್ನ ಸೆಮಿ ಹಾದಿಯನ್ನು ಉತ್ತಮ ರನ್‌ರೇಟ್‌ನೊಂದಿಗೆ ಭದ್ರಪಡಿಸಿಕೊಂಡಿದೆ.
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಶ್ರೀಲಂಕಾ ನೀಡಿದ 172 ರನ್‌ಗಳ ಸವಾಲನ್ನು ಬೆನ್ನಟ್ಟಿದ ನ್ಯೂಜಿಲೆಂಡ್ ತಂಡ 23.2 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ ಗೆಲುವಿನ ಗುರಿ ಮುಟ್ಟಿತು.
ನ್ಯೂಜಿಲೆಂಡ್ ಪರ ಡೇರಿಲ್ ಮಿಚೆಲ್ (43), ಟೆವೊನ್ ಕಾನ್ವೆ (45), ರಚಿನ್ ರವೀಂದ್ರ (42) ಗೆಲುವಿನ ರೂವಾರಿಗಳಾದರು.
ಶ್ರೀಲಂಕಾ 7 ಸೋಲು ಹಾಗೂ 2 ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ 9 ನೇ ಸ್ಥಾನದೊಂದಿಗೆ ಟೂರ್ನಿಯಿಂದ ನಿರ್ಗಮಿಸಿತು.
ಐದನೇ ಗೆಲುವಿನೊಂದಿಗೆ ಉತ್ತಮ ರನ್‌ರೇಟ್‌ನಲ್ಲಿರುವ ನ್ಯೂಜಿಲೆಂಡ್ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಪಾಕಿಸ್ತಾನ ಅಥವಾ ಅಫ್ಘಾನಿಸ್ತಾನ ಸೆಮಿಫೈನಲ್ ಪ್ರವೇಶಿಸಬೇಕಾದರೆ ಉತ್ತಮ ರನ್ ಸರಾಸರಿಯಲ್ಲಿ ತನ್ನ ಎದುರಾಳಿ ತಂಡದ ವಿರುದ್ಧ ಅಮೋಘವಾಗಿ ಜಯ ಸಾಧಿಸಬೇಕಾಗಿದೆ.
ಈ ಸುದ್ದಿ ಓದಿದ್ದೀರಾ? ಒಂದೇ ಬಾಲ್‌ಗೆ ಎರಡು ವಿಕೆಟ್: ಕ್ರಿಕೆಟ್ ಇತಿಹಾಸದಲ್ಲಿ ಮೊದಲ ಬಾರಿಗೆ ‘ಟೈಮ್ಡ್ ಔಟ್’ಗೆ ಮ್ಯಾಥ್ಯೂಸ್ ಔಟ್
ಈ ಮೊದಲು ಟಾಸ್ ಗೆದ್ದ ನ್ಯೂಜಿಲೆಂಡ್ ತಂಡದ ನಾಯಕ ಕೇನ್ ವಿಲಿಯಮ್ಸ್‌ನ್ ಶ್ರೀಲಂಕಾ ತಂಡವನ್ನು ಬ್ಯಾಟಿಂಗ್ ಆಹ್ವಾನಿಸಿದರು.
New Zealand made a solid push to affirm their place in the top four with a crucial victory over Sri Lanka 👊#NZvSL | #CWC23 | 📝: https://t.co/2hBz4ErQKl pic.twitter.com/ssQiL653dw
— ICC Cricket World Cup (@cricketworldcup) November 9, 2023
ಕೇನ್ ವಿಲಿಯಮ್ಸನ್ ಲೆಕ್ಕಾಚಾರ ಕೈಹಿಡಿಯಿತು. ಚಿನ್ನಸ್ವಾಮಿಯ ಬ್ಯಾಟಿಂಗ್ ಪಿಚ್‌ನಲ್ಲಿ ಬ್ಯಾಟ್ ಬೀಸಿದ ಲಂಕಾ ಒಂದರ ಮೇಲೊಂದರಂತೆ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿತು.
ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ ಕಿವೀಸ್ ಬೌಲರ್‌ಗಳ ದಾಳಿಗೆ ತತ್ತರಿಸಿ 46.4 ಓವರ್‌ಗಳಲ್ಲಿ 171 ರನ್ ಗಳಿಸಿ ಆಲೌಟ್ ಆಯಿತು.
ಕುಸಾಲ್ ಪೆರೇರಾ (51), ಮಹೇಶ್ ತೀಕ್ಷಣ (38) ರನ್ ಗಳಿಸಿದ್ದನ್ಬು ಬಿಟ್ಟರೆ ಉಳಿದ ಬ್ಯಾಟ್ಸ್ಮನ್‌ಗಳ್ಯಾರು 20ರ ಗಡಿ ದಾಟಲಿಲ್ಲ.
ಕಿವೀಸ್ ಪರ ಬೋಲ್ಟ್ 3 ವಿಕೆಟ್ ಪಡೆದರೆ, ಫರ್ಗ್ಯಸನ್, ಸ್ಯಾಂಟ್ನರ್ ಹಾಗೂ ರವೀಂದ್ರ ತಲಾ 2 ವಿಕೆಟ್ ಪಡೆದರು.