ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಸತತ ಐದು ಪಂದ್ಯಗಳನ್ನು ಗೆದ್ದು ಉತ್ತಮ ಫಾರ್ಮ್‌ನಲ್ಲಿದ್ದ ಟೀಮ್ ಇಂಡಿಯಾ, ಇಂದು ಇಂಗ್ಲೆಂಡ್ ವಿರುದ್ಧ ಲಕ್ನೋದ ಏಕನಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 6ನೇ ಪಂದ್ಯದಲ್ಲಿ ಆರಂಭಿಕ ಆಘಾತ ಅನುಭವಿಸಿದೆ.
ಇಂಗ್ಲೆಂಡ್ ವಿರುದ್ಧದ ಇಂದಿನ ಪಂದ್ಯದಲ್ಲಿ ಟಾಸ್ ಸೋತ ರೋಹಿತ್ ಪಡೆ, ಮೊದಲು ಬ್ಯಾಟಿಂಗ್ ನಡೆಸುತ್ತಿದೆ. ಜೋಸ್ ಬಟ್ಲರ್ ನೇತೃತ್ವದ ಆಂಗ್ಲ ಪಡೆ ಬಿಗಿ ಬೌಲಿಂಗ್ ಮಾಡುತ್ತಿದ್ದು, 50 ರನ್ ಗಳಿಸುವಷ್ಟರಲ್ಲೇ ಪ್ರಮುಖ ಮೂರು ವಿಕೆಟ್‌ಗಳನ್ನು ಕಿತ್ತು, ಆರಂಭಿಕ ಆಘಾತ ನೀಡಿದ್ದಾರೆ.
Not often that Virat Kohli falls without troubling the scorers #INDvENG #CWC23 pic.twitter.com/A7S3hvslEH
— ESPNcricinfo (@ESPNcricinfo) October 29, 2023
ನಾಯಕ ರೋಹಿತ್ ಶರ್ಮಾರೊಂದಿಗೆ ಬ್ಯಾಟಿಂಗ್ ಆರಂಭಿಸಿದ್ದ ಯುವ ಬ್ಯಾಟರ್ ಶುಭಮನ್ ಗಿಲ್ 13 ಎಸೆತಗಳನ್ನು ಎದುರಿಸಿ ಒಂದು ಬೌಂಡರಿಯ ನೆರವಿನೊಂದಿಗೆ ಕೇವಲ 9 ರನ್ ಗಳಿಸಿದ್ದಾಗ ವೋಕ್ಸ್ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆದರು.
ಆ ಬಳಿಕ ರೋಹಿತ್ ಶರ್ಮಾಗೆ ಜೊತೆಯಾದ, ಉತ್ತಮ ಫಾರ್ಮ್‌ನಲ್ಲಿದ್ದ ಬ್ಯಾಟರ್ ವಿರಾಟ್ ಕೊಹ್ಲಿ 9 ಎಸೆತಗಳನ್ನು ಎದುರಿಸಿ, ವಿಲ್ಲಿ ಎಸೆತದಲ್ಲಿ ದೊಡ್ಡ ಹೊಡೆತಕ್ಕೆ ಯತ್ನಿಸಿ, ಸ್ಟೋಕ್ಸ್‌ಗೆ ಕ್ಯಾಚಿತ್ತು ಶೂನ್ಯದೊಂದಿಗೆ ನಿರ್ಗಮಿಸಿದರು. ಆ ಮೂಲಕ ಈ ಬಾರಿಯ ವಿಶ್ವಕಪ್ ಟೂರ್ನಿಯಲ್ಲಿ ಮೊದಲ ಬಾರಿಗೆ ವಿರಾಟ್ ಕೊಹ್ಲಿ ಶೂನ್ಯಕ್ಕೆ ಔಟಾಗಿದ್ದಾರೆ.
Kohli gone for 0️⃣! 😱
He holes out to Ben Stokes at mid-off and David Willey has our second!
🇮🇳 2️⃣7️⃣-2️⃣#EnglandCricket | #CWC23 pic.twitter.com/X2LqXocCTY
— England Cricket (@englandcricket) October 29, 2023
ಬಳಿಕ ಬಂದ ಶ್ರೇಯಸ್ ಅಯ್ಯರ್, ಹಾಲಿ ಚಾಂಪಿಯನ್‌ಗಳ ಬಿಗು ಬೌಲಿಂಗ್‌ಗೆ ರನ್ ಗಳಿಸಲು ಪರದಾಡಿದರು. ಕೊನೆಯಲ್ಲಿ 16 ಎಸೆತಗಳನ್ನು ಎದುರಿಸಿ ಕೇವಲ 4 ರನ್ ಗಳಿಸಿದ್ದಾಗ, ವೋಕ್ಸ್ ಎಸೆತದಲ್ಲಿ ವುಡ್‌ಗೆ ಕ್ಯಾಚಿತ್ತು ಪೆವಿಲಿಯನ್‌ಗೆ ಹಿಂದಿರುಗಿದರು.
Just how good has Chris Woakes been today? 👏❤️ #EnglandCricket | #CWC23 pic.twitter.com/dWYyaXvgc9
— England Cricket (@englandcricket) October 29, 2023
ಸದ್ಯ 20 ಓವರ್‌ಗಳು ಮುಗಿದಿದ್ದು, ಟೀಮ್ ಇಂಡಿಯಾ ಬ್ಯಾಟರ್‌ಗಳು ರನ್ ಗಳಿಸಲು ಪರದಾಡುತ್ತಿದ್ದಾರೆ.
ಸದ್ಯ ಕ್ರೀಸ್‌ನಲ್ಲಿ ನಾಯಕ ರೋಹಿತ್ ಶರ್ಮಾ 44 ರನ್ ಗಳಿಸಿ ಕ್ರೀಸ್‌ನಲ್ಲಿದ್ದರೆ, 16 ರನ್ ಗಳಿಸಿ ಕನ್ನಡಿಗ ಕೆ ಎಲ್ ರಾಹುಲ್ ಸಾಥ್ ನೀಡುತ್ತಿದ್ದಾರೆ. ಈ ಜೊತೆಯಾಟ ಮುಂದುವರಿದರೆ ದೊಡ್ಡ ಮೊತ್ತದ ಗುರಿಯನ್ನು ನಿರೀಕ್ಷಿಸಬಹುದು. 20 ಓವರ್ ಮುಕ್ತಾಯಕ್ಕೆ ಟೀಮ್ ಇಂಡಿಯಾ 3 ವಿಕೆಟ್ ಕಳೆದುಕೊಂಡು, 73 ರನ್ ಗಳಿಸಿದೆ.
Shreyas Iyer dismissed for 4 in 16 balls. pic.twitter.com/g5KXng8IRa
— Mufaddal Vohra (@mufaddal_vohra) October 29, 2023
ಕಳೆದ 5 ಪಂದ್ಯಗಳಲ್ಲೂ ಚೇಸ್ ಮಾಡಿ, ಟೀಮ್ ಇಂಡಿಯಾ ಎಲ್ಲವನ್ನೂ ಗೆದ್ದುಕೊಂಡಿತ್ತು. ಇಂದು ಮೊದಲು ಬ್ಯಾಟಿಂಗ್ ಆರಂಭಿಸಿರುವ ಟೀಂ ಇಂಡಿಯಾ, ಸತತ ಸೋಲಿನಿಂದ ಕಂಗೆಟ್ಟು, ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿರುವ ಇಂಗ್ಲೆಂಡ್ ವಿರುದ್ಧ ಗೆಲುವಿಗಾಗಿ ಬೃಹತ್ ರನ್ ಪೇರಿಸಬೇಕಿದೆ.
COME ONNNN!!!!! 🏴
This is more like it! Chris Woakes has another and Shreyas Iyer goes for 4️⃣ from 1️⃣6️⃣ balls….
🇮🇳 4️⃣0️⃣-3️⃣#EnglandCricket | #CWC23 pic.twitter.com/Tdb7PqKrov
— England Cricket (@englandcricket) October 29, 2023
ಈ ಪಂದ್ಯದೊಂದಿಗೆ ರೋಹಿತ್ ಶರ್ಮಾ ನಾಯಕನಾಗಿ 100ನೇ ಪಂದ್ಯವಾಡುತ್ತಿದ್ದಾರೆ. ಏಕದಿನ ವಿಶ್ವಕಪ್ ಇತಿಹಾಸ ಗಮನಿಸಿದರೆ ಕಳೆದ 20 ವರ್ಷಗಳಿಂದ ಇಂಗ್ಲೆಂಡ್ ವಿರುದ್ಧ ಭಾರತ ಗೆದ್ದೇ ಇಲ್ಲ. ವಿಶ್ವಕಪ್ ಇತಿಹಾಸದಲ್ಲಿ ಎರಡೂ ತಂಡಗಳು ಒಟ್ಟು 8 ಬಾರಿ ಪರಸ್ಪರ ಎದುರಾಗಿವೆ. ಎಲ್ಲ ಪಂದ್ಯಗಳಲ್ಲೂ ಇಂಗ್ಲೆಂಡ್ ತಂಡವೇ ಮೇಲುಗೈ ಸಾಧಿಸಿರುವುದು ವಿಶೇಷ. ಭಾರತ 3ರಲ್ಲಿ ಗೆದ್ದಿದ್ದರೆ, 4ರಲ್ಲಿ ಇಂಗ್ಲೆಂಡ್ ತಂಡ ಜಯಿಸಿತ್ತು. 1 ಪಂದ್ಯ ಟೈನಲ್ಲಿ ಅಂತ್ಯಗೊಂಡಿತ್ತು.