ಆ್ಯಶಸ್ ಸರಣಿಯ ಮೊದಲ ದಿನವೇ 19 ವಿಕೆಟ್‌ಗಳ ಪತನ; ಮಿಂಚಿದ ಸ್ಟಾರ್ಕ್‌, ಸ್ಟೋಕ್ಸ್‌

Date:

ವಿಶ್ವದ ಕ್ರಿಕೆಟ್ ಪ್ರೇಮಿಗಳ ಕುತೂಹಲ ಕೆರಳಿಸಿರುವ ಇಂಗ್ಲೆಂಡ್ ಮತ್ತು ಆಸೀಸ್‌ ನಡುವಿನ ಆ್ಯಶಸ್ 2025-26 ಸರಣಿ ಇಂದಿನಿಂದ ಶುರುವಾಗಿದ್ದು, ಆಸ್ಟ್ರೇಲಿಯಾದ ಪರ್ತ್‌ನ ಆಪ್ಟಸ್ ಕ್ರೀಡಾಂಗಣದಲ್ಲಿ ನಡೆಯುವ ಮೊದಲ ಟೆಸ್ಟ್‌ ಪಂದ್ಯದ ಮೊದಲ ದಿನವೇ 19 ವಿಕೆಟ್‌ಗಳು ಪತನಗೊಂಡಿವೆ.

- Advertisement -

ಟಾಸ್‌ ಗೆದ್ದ ಇಂಗ್ಲೆಂಡ್‌ ಮೊದಲು ಬ್ಯಾಟಿಂಗ್‌ ಆಯ್ದುಕೊಂಡು ಫೀಲ್ಡಿಂಗ್‌ ಮಾಡುವ ಅವಕಾಶವನ್ನು ಆತಿಥೇಯ ಆಸೀಸ್‌ಗೆ ಬಿಟ್ಟುಕೊಟ್ಟಿತ್ತು. ಬೌಲಿಂಗ್‌ನಲ್ಲಿ ಬಿಗಿ ಹಿಡಿತ ಸಾಧಿಸುವ ಮೂಲಕ 172 ರನ್‌ಗಳಿಗೆ ಆಂಗ್ಲರನ್ನು ಕಟ್ಟಿಹಾಕಿದ್ದ ಆಸೀಸ್‌ ಬ್ಯಾಟಿಂಗ್‌ನಲ್ಲಿ ಹೀನಾಯ ಪ್ರದರ್ಶನ ನೀಡಿದೆ. ಮೊದಲ ದಿನದ ಅಂತ್ಯಕ್ಕೆ ಕೇವಲ 123 ರನ್‌ಗಳಿಗೆ 9 ವಿಕೆಟ್‌ ಕಳೆದುಕೊಂಡಿದೆ. ನಥಾನ್‌ ಲಿಯಾನ್‌ (3 ರನ್‌), ಬ್ರೆಂಡನ್ ಡಾಗೆಟ್ (0) ಕ್ರೀಸ್‌ನಲ್ಲಿದ್ದು, ಶನಿವಾರ 2ನೇ ದಿನದ ಆಟ ಆರಂಭಿಸಲಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬಿಯಾಂಡ್ ಬೆಂಗಳೂರು: ಡಿಜಿಟಲ್ ಆರ್ಥಿಕತೆಯಲ್ಲಿ ರಾಯಚೂರಿಗೆ ಸಿಗುವುದೇ ಪ್ರತ್ಯೇಕ...

ಕರ್ನಾಟಕದ ಅಭಿವೃದ್ಧಿ ಬೆಂಗಳೂರಿಗೆ ಮಾತ್ರ ಸೀಮಿತವಾಗದೆ ರಾಜ್ಯದ ವಿವಿಧ ನಗರಗಳಿಗೂ ತಲುಪಬೇಕು ಎಂಬ ಉದ್ದೇಶದಿಂದ ರಾಜ್ಯ ಸರ್ಕಾರದ ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ (KDEM) ‘Beyond Bengaluru’ ಯೋಜನೆಯನ್ನು ಜಾರಿಗೊಳಿಸಿದೆ. ಐಟಿ, ಐಟಿಇಎಸ್,...

ರಾಯಚೂರು | ಸ್ಥಳೀಯ ಸಂಸ್ಥೆ ಚುನಾವಣೆ: ಆಕಾಂಕ್ಷಿಗಳ ಲೆಕ್ಕಾಚಾರ...

ಜಿಲ್ಲಾ ಪಂಚಾಯತ್‌ ಮತ್ತು ತಾಲೂಕು ಪಂಚಾಯಿತಿ ಕ್ಷೇತ್ರಗಳ ಕರಡು ಮೀಸಲಾತಿ ಪ್ರಕಟವಾಗುತ್ತಿದ್ದಂತೆ ರಾಯಚೂರು ಜಿಲ್ಲೆಯಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣಾ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಮೀಸಲಾತಿ ಬದಲಾವಣೆಯಿಂದ ಕೆಲವರ ಸ್ಪರ್ಧೆಯ ಲೆಕ್ಕಾಚಾರ ತಲೆಕೆಳಗಾಗಿದ್ದರೆ, ಮತ್ತೊಂದೆಡೆ...

ಹೊಸ ಓದು | ನಟರಾಜ್ ಹುಳಿಯಾರ್ ಅವರ ‘ಡಾಕ್ಟರ್...

ಇತ್ತೀಚೆಗೆ ಲೋಕಾರ್ಪಣೆಗೊಂಡ ನಟರಾಜ್ ಹುಳಿಯಾರ್ ಅವರ 'ಡಾಕ್ಟರ್ ಸಾಹೇಬ್- ರಾಮಮನೋಹರ ಲೋಹಿಯಾ ಜೀವನಯಾನ' ಕೃತಿಯಿಂದ ಆಯ್ದ 'ಲೋಹಿಯಾ ಮತ್ತು ಕರ್ನಾಟಕ' ಅಧ್ಯಾಯ, ಭಾನುವಾರದ ವಿರಾಮದ ಓದಿಗಾಗಿ... 'ಮಾರ್ಕ್ಸ್, ಗಾಂಧಿ ಅಂಡ್ ಸೋಷಲಿಸಂ' ಪುಸ್ತಕಕ್ಕೆ ಮುನ್ನುಡಿ...

ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ಇಂಗ್ಲೆಂಡ್‌ ವೇಗಿ ಮಿಚೆಲ್‌ ಸ್ಟಾರ್ಕ್‌ ವೇಗಕ್ಕೆ ಧೂಳಿಪಟವಾಯಿತು. ಮೊದಲ ಓವರ್‌ನಲ್ಲೇ ಝಾಕ್‌ ಕ್ರಾವ್ಲಿ ವಿಕೆಟ್‌ ಕೀಳುವ ಮೂಲಕ ಇಂಗ್ಲೆಂಡ್‌ಗೆ ಸ್ಟಾರ್ಕ್‌ ಆಘಾತ ನೀಡಿದರು. ಇನ್ನೂ ಮಧ್ಯಮ ಕ್ರಮಾಂಕದಲ್ಲಿ ಹ್ಯಾರಿ ಬ್ರೂಕ್‌ ಅಮೋಘ ಅರ್ಧಶತಕ (52 ರನ್‌, 61 ಎಸೆತ, 5 ಬೌಂಡರಿ, 1 ಸಿಕ್ಸರ್)‌, ಓಲಿ ಪೋಪ್‌ 46 ರನ್‌ (58 ಎಸೆತ, 4 ಬೌಂಡರಿ), ಜೇಮಿ ಸ್ಮಿತ್‌ (33 ರನ್‌ (22 ಎಸೆತ, 6 ಬೌಂಡರಿ) ಗಳಿಸಿದ್ದು ಬಿಟ್ಟರೆ, ಉಳಿದ ಆಟಗಾರರು ಅಲ್ಪ ಮೊತ್ತಕ್ಕೆ ಪೆವಿಲಿಯನ್‌ ಸೇರಿಕೊಂಡರು. ಭಾರೀ ನಿರೀಕ್ಷೆ ಮೂಡಿಸಿದ್ದ ಜೋ ರೂಟ್‌ ಶೂನ್ಯ ಸುತ್ತಿದರೆ, ನಾಯಕ ಬೆನ್‌ ಸ್ಟೋಕ್ಸ್‌ 6 ರನ್‌ ಗಳಿಸಿ ಪೆವಿಲಿಯನ್‌ ಸೇರಿಕೊಂಡರು.

ಇದನ್ನು ಓದಿದ್ದೀರಾ? ರಣಜಿ ಟ್ರೋಫಿ | ಚಂಡೀಗಢ ವಿರುದ್ಧ ಕರ್ನಾಟಕಕ್ಕೆ ಭರ್ಜರಿ ಜಯ; ಕ್ವಾರ್ಟರ್ ಫೈನಲ್‌ ಕನಸು ಜೀವಂತ

ಇನ್ನು ಆಸ್ಟ್ರೇಲಿಯಾ ಪರ ಅತ್ಯುತ್ತಮ ಬೌಲಿಂಗ್‌ ದಾಳಿ ನಡೆಸಿದ ಮಿಚೆಲ್‌ ಸ್ಟಾರ್ಕ್‌ 12.5 ಓವರ್‌ಗಳಲ್ಲಿ 58 ರನ್‌ಗಳಿಗೆ 7 ವಿಕೆಟ್‌ ಕಿತ್ತರೆ, ಬ್ರೆಡನ್‌ ಡಾಗೆಟ್‌ 2 ವಿಕೆಟ್‌, ಕ್ಯಾಮರೂನ್‌ ಗ್ರೀನ್‌ 1 ವಿಕೆಟ್‌ ಪಡೆದು ಮಿಂಚಿದರು.

ಬ್ಯಾಟಿಂಗ್‌ನಲ್ಲಿ ಹೀನಾಯ ಪ್ರದರ್ಶನ ಕಂಡರೂ ಬೌಲಿಂಗ್‌ನಲ್ಲಿ ಆರ್ಭಟಿಸಿದ ಇಂಗ್ಲೆಂಡ್‌, ಮೊದಲ ದಿನ ಆಸೀಸ್‌ ತಂಡವನ್ನು ಅಲ್ಪ ಮೊತ್ತಕ್ಕೆ ಕಟ್ಟಿಹಾಕುವಲ್ಲಿ ಯಶಸ್ವಿಯಾಗಿದೆ. ಆಂಗ್ಲರ ದಾಳಿಗೆ ತತ್ತರಿಸಿದ ಆಸೀಸ್‌ ಮೊದಲ ದಿನ ಕೇವಲ 123 ರನ್‌ಗಳಿಗೆ 9 ವಿಕೆಟ್‌ ಕಳೆದುಕೊಂಡಿದೆ. ಇಂಗ್ಲೆಂಡ್‌ ಪರ ನಾಯಕ ಬೆನ್‌ ಸ್ಟೋಕ್ಸ್‌ 5 ವಿಕೆಟ್‌ ಕಬಳಿಸಿದರೆ, ಬ್ರ್ಯಾಂಡನ್‌ ಕರ್ಸ್‌, ಜೋಫ್ರಾ ಆರ್ಚರ್‌ ತಲಾ 2 ವಿಕೆಟ್‌ ಕಿತ್ತರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು | ಏಷ್ಯನ್ ಗೇಮ್ಸ್: ಕಂಚಿನ ಪದಕ ಗೆದ್ದ ಸ್ನೇಹ ಎಸ್. ಎಸ್ ಗೆ ಟಿ.ಡಿ ರಾಜೇಗೌಡ ಅಭಿನಂದಿಸಿದ್ದಾರೆ 

ಜಪಾನ್‌ನ ಐಚಿ-ನಗೋಯಾದಲ್ಲಿ ನಡೆಯುತ್ತಿರುವ ಪ್ರತಿಷ್ಠಿತ 2026ರ ಏಷ್ಯನ್ ಗೇಮ್ಸ್‌ನ ಮಿಶ್ರ 4x100...

ಹ್ಯಾಟ್ರಿಕ್ ಗೆಲುವಿನ ಬೆನ್ನಲ್ಲೇ ನಾಯಕತ್ವಕ್ಕೆ ವಿದಾಯ: ದಿಟ್ಟ ನಿರ್ಧಾರದೊಂದಿಗೆ ನಿರ್ಗಮಿಸಿದ ಹರ್ಮನ್‌ಪ್ರೀತ್ ಕೌರ್

ಭಾರತ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಸ್ಥಾನದಿಂದ ಕೆಳಗಿಳಿಯುತ್ತಿರುವುದಾಗಿ ಹರ್ಮನ್‌ಪ್ರೀತ್ ಕೌರ್...

ಏಷ್ಯನ್ ಗೇಮ್ಸ್ : ತಂಡಗಳ ಯಶಸ್ಸಿನ ನಡುವೆ ವ್ಯಕ್ತಿಗತ ಚಿನ್ನದ ಕೊರತೆ; ಒಲಿಂಪಿಕ್ಸ್‌ಗೆ ಎಚ್ಚರಿಕೆಯ ಗಂಟೆ

ಭಾರತದ ಸಾಂಪ್ರದಾಯಿಕ ಕ್ರೀಡಾ ಶಕ್ತಿಗಳಾದ ಅಥ್ಲೆಟಿಕ್ಸ್ ಮತ್ತು ಶೂಟಿಂಗ್ ವಿಭಾಗಗಳು ಈ...