ಇಂದು 2024ರ ಟಿ20 ವಿಶ್ವಕಪ್‌ನ 19 ನೇ ಪಂದ್ಯದಲ್ಲಿ ಭಾರತವು ತನ್ನ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಎದುರಿಸುತ್ತಿದೆ. ಈ ಪಂದ್ಯ ನ್ಯೂಯಾರ್ಕ್‌ನ ನಸ್ಸೌ ಕೌಂಟಿ ಇಂಟರ್‌ನ್ಯಾಶನಲ್ ಸ್ಟೇಡಿಯಂನಲ್ಲಿ ನಡೆಯುತ್ತಿದೆ.
Toss: Babar wins and Pakistan will bowl first
👉 https://t.co/Vl1gwzcPbh | #INDvPAK | #T20WorldCup pic.twitter.com/eVTqgfmkl5
— ESPNcricinfo (@ESPNcricinfo) June 9, 2024
ಮಳೆಯಿಂದಾಗಿ ಟಾಸ್ ವಿಳಂಬಗೊಂಡಿತ್ತು. ಮಳೆ ನಿಂತ ಬಳಿಕ ಟಾಸ್ ನಡೆದಿದ್ದು, ಟೀಮ್ ಇಂಡಿಯಾ ವಿರುದ್ಧ ಟಾಸ್ ಗೆದ್ದ ಬಾಬರ್ ಆಝಂ ನೇತೃತ್ವದ ಪಾಕಿಸ್ತಾನ ತಂಡ, ಬೌಲಿಂಗ್ ಆಯ್ದುಕೊಂಡಿದೆ.
ಪಾಕಿಸ್ತಾನವು ತಂಡದಲ್ಲಿ ಒಂದು ಬದಲಾವಣೆ ಮಾಡಿದೆ. ಪಾಕ್ ತಂಡದಲ್ಲಿ ದಢೂತಿ ದೇಹ ಹೊಂದಿ ಸುದ್ದಿಯಲ್ಲಿರುವ ಆಝಂ ಖಾನ್ ಅವರಿಗೆ ವಿಶ್ರಾಂತಿ ನೀಡಿದೆ. ಅವರ ಬದಲಿಗೆ ಇಮಾದ್ ವಾಸೀಮ್ ಅವರಿಗೆ ಅವಕಾಶ ನೀಡಿದೆ.
ಪಾಕಿಸ್ತಾನವು ತಮ್ಮ ಆರಂಭಿಕ ಪಂದ್ಯದಲ್ಲಿ ಕ್ರಿಕೆಟ್ ಶಿಶು ಹಾಗೂ ಟಿ20 ವಿಶ್ವಕಪ್‌ನ ಆತಿಥ್ಯ ವಹಿಸಿಕೊಂಡಿರುವ ಅಮೆರಿಕ(USA) ವಿರುದ್ಧ ಸೋತಿತ್ತು. ಈ ಹಿನ್ನೆಲೆಯಲ್ಲಿ ಸೂಪರ್ 8ರ ಘಟ್ಟಕ್ಕೆ ತಲುಪಬೇಕಾದರೆ ಟೀಮ್ ಇಂಡಿಯಾ ವಿರುದ್ಧ ಗೆಲ್ಲಲೇಬೇಕಾದ ಒತ್ತಡದಲ್ಲಿದೆ. ಟೀಮ್ ಇಂಡಿಯಾವು ತಮ್ಮ ಮೊದಲ ಪಂದ್ಯದಲ್ಲಿ ಐರ್ಲ್ಯಾಂಡ್ ತಂಡವನ್ನು ಸೋಲಿಸಿತ್ತು.
Rohit Sharma forgot he had the toss coin inside his pocket. 😂👌 pic.twitter.com/LeQ3xpcz2e
— Mufaddal Vohra (@mufaddal_vohra) June 9, 2024
ಟಾಸ್ ವೇಳೆ ಗಲಿಬಿಲಿಗೊಂಡ ರೋಹಿತ್ ಶರ್ಮಾ!
ಟಾಸ್ ವೇಳೆ ಟೀಮ್ ಇಂಡಿಯಾ ಕಪ್ತಾನ ರೋಹಿತ್ ಶರ್ಮಾ ಗಲಿಬಿಲಿಗೊಂಡ ಪ್ರಸಂಗ ನಡೆಯಿತು.
ಕಮೆಂಟರಿ ಮಾಡುತ್ತಿದ್ದ ಮಾಜಿ ಕ್ರಿಕೆಟಿಗ ರವಿಶಾಸ್ತ್ರಿ, ಈಗ ರೋಹಿತ್ ಶರ್ಮಾ ಟಾಸ್ ಮಾಡಲಿದ್ದಾರೆ ಎಂದರು. ಆಗ ಕಾಯಿನ್ ತನ್ನ ಕಿಸೆಯಲ್ಲಿದ್ದುದನ್ನು ಮರೆತಿದ್ದ ರೋಹಿತ್ ಶರ್ಮಾ, ಒಮ್ಮೆಗೇ ಗಲಿಬಿಲಿಗೊಂಡರು. ಬಳಿಕ ನೆನಪಾಗಿ ಕಿಸೆಯಿಂದ ಕಾಯಿನ್ ತೆಗೆದು, ಚಿಮ್ಮಿಸಿದರು. ಈ ಬೆಳವಣಿಗೆ ಪಾಕ್ ನಾಯಕ ಬಾಬರ್ ಆಝಂ ಹಾಗೂ ನೆರೆದಿದ್ದವರು ನಗುವಂತೆ ಮಾಡಿತು.
#BabarAzam has won the toss & it’s a no-brainer decision to bowl first!
Good toss to win on this pitch as both teams look to refurbish the #GreatestRivalry!
The match will begin at 8:50 PM IST because of a slight rain delay! (No overs lost)#INDvPAK | LIVE NOW |… pic.twitter.com/LzC0faqwkh
— Star Sports (@StarSportsIndia) June 9, 2024
ಟೀಮ್ ಇಂಡಿಯಾ ತಂಡ
Game on 🍿
Imad Wasim in for Azam Khan, India unchanged
👉 https://t.co/Vl1gwzcPbh | #INDvPAK | #T20WorldCup pic.twitter.com/RqDdVVdSYJ
— ESPNcricinfo (@ESPNcricinfo) June 9, 2024
ರೋಹಿತ್ ಶರ್ಮಾ(ನಾಯಕ), ವಿರಾಟ್ ಕೊಹ್ಲಿ, ರಿಷಭ್ ಪಂತ್ (ವಿಕೆಟ್ ಕೀಪರ್), ಸೂರ್ಯ ಕುಮಾರ್ ಯಾದವ್, ಶಿವಂ ದುಬೆ, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಅಕ್ಸರ್ ಪಟೇಲ್, ಮೊಹಮ್ಮದ್ ಸಿರಾಜ್, ಜಸ್ಪ್ರೀತ್ ಬುಮ್ರಾ, ಅರ್ಷ್‌ದೀಪ್ ಸಿಂಗ್
ಪಾಕಿಸ್ತಾನ ಪ್ಲೇಯಿಂಗ್ XI:
🚨 TOSS & PLAYING XI 🚨
Pakistan win the toss and opt to field first 🏏
One change for the team today 🇵🇰#INDvPAK | #T20WorldCup | #WeHaveWeWill pic.twitter.com/Cf0ZHykn87
— Pakistan Cricket (@TheRealPCB) June 9, 2024
ಬಾಬರ್ ಆಝಂ(ನಾಯಕ), ಮೊಹಮ್ಮದ್ ರಿಝ್ವಾನ್ (ವಿಕೆಟ್ ಕೀಪರ್), ಫಖರ್ ಝಮಾನ್, ಹಾರಿಸ್ ರೌಫ್, ಇಫ್ತಿಕಾರ್ ಅಹ್ಮದ್, ಇಮಾದ್ ವಾಸೀಮ್, ಮೊಹಮ್ಮದ್ ಆಮಿರ್, ನಸೀಮ್ ಶಾ, ಶಾದಾಬ್ ಖಾನ್, ಶಾಹೀನ್ ಶಾಹ್ ಅಫ್ರೀದಿ, ಉಸ್ಮಾನ್ ಖಾನ್
