ಐಸಿಸಿ ಏಕದಿನ ವಿಶ್ವಕಪ್ 2023ರ 14ನೇ ಟೂರ್ನಿಯ ಶ್ರೀಲಂಕಾ ಹಾಗೂ ಪಾಕಿಸ್ತಾನ ನಡುವೆ ನಡೆದ ರೋಚಕ ಹಣಾಹಣಿ ಪಂದ್ಯದಲ್ಲಿ ಪಾಕಿಸ್ತಾನ 6 ವಿಕೆಟ್‌ಗಳ ಗೆಲುವು ಸಾಧಿಸಿತು.
ರನ್‌ಗಳ ಸುರಿಮಳೆಯೆ ಹರಿದಿದ್ದ ಹೈದರಾಬಾದ್‌ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಶ್ರೀಲಂಕಾ ನೀಡಿದ 345 ರನ್‌ಗಳ ಬೃಹತ್ ಸವಾಲನ್ನು ಬೆನ್ನಟ್ಟಿದ ಪಾಕಿಸ್ತಾನ ಅಬ್ದುಲ್ಲಾ ಶಫೀಕ್ (113) ಹಾಗೂ ಮೊಹಮ್ಮದ್ ರಿಜ್ವಾನ್(131) ಆಕರ್ಷಕ ಶತಕಗಳ ನೆರವಿನಿಂದ 48.2 ಓವರ್‌ಗಳಲ್ಲಿ 4 ವಿಕೆಟ್ ನಷ್ಟದೊಂದಿಗೆ ಜಯಗಳಿಸಿತು.
ಸ್ಫೋಟಕ ಆಟಗಾರರಾದ ಇಮಾಮ್-ಉಲ್-ಹಕ್ ಹಾಗೂ ಬಾಬರ್ ಆಜಂ ಔಟಾದ ನಂತರ ಬ್ಯಾಟ್ ಬೀಸ ತೊಡಗಿದ ಅಬ್ದುಲ್ಲಾ ಶಫೀಕ್ ಹಾಗೂ ಮೊಹಮ್ಮದ್ ರಿಜ್ವಾನ್ 3ನೇ ವಿಕೆಟ್ ಜೊತೆಯಾಟಕ್ಕೆ 176 ರನ್‌ಗಳ ಜೊತೆಯಾಟವಾಡಿದರು. 33.1 ಓವರ್‌ನಲ್ಲಿ ಮಧುಶಂಕ ಬೌಲಿಂಗ್‌ನಲ್ಲಿ ಅಬ್ದುಲ್ಲಾ ಶಫೀಕ್ ಪೆವಿಲಿಯನ್‌ಗೆ ತೆರಳಿದ ನಂತರ ಐದನೇ ಕ್ರಮಾಂಕದ ಆಟಗಾರ ಸೌದ್ ಶಕೀಲ್(31) ಹಾಗೂ ಇಫ್ತಿಕರ್ ಅಹಮದ್ (22 ಅಜೇಯ) ಅವರ ಜೊತೆಗೂಡಿದ ಮೊಹಮ್ಮದ್ ರಿಜ್ವಾನ್ ತಮ್ಮ ಅಜೇಯ ಆಟದೊಂದಿಗೆ ಪಾಕಿಸ್ತಾನ ತಂಡವನ್ನು ಗೆಲುವಿನ ದಡಕ್ಕೆ ಮುಟ್ಟಿಸಿದರು.
ಅಬ್ದುಲ್ಲಾ ಶಫೀಕ್ 103 ಚೆಂಡುಗಳಲ್ಲಿ 10 ಬೌಂಡರಿ, 3 ಸಿಕ್ಸರ್‌ಗಳೊಂದಿಗೆ 113 ರನ್ ಸಿಡಿಸಿದರೆ, ಮೊಹಮ್ಮದ್ ರಿಜ್ವಾನ್ 121 ಎಸೆತಗಳಲ್ಲಿ 8 ಬೌಂಡರಿ ಹಾಗೂ 3 ಸಿಕ್ಸರ್‌ಗಳೊಂದಿಗೆ ಅಜೇಯ 131 ರನ್ ಬಾರಿಸಿದರು.
2 World Cup matches, 2 fifties!
Mohammad Rizwan's consistency >>>>>#CWC23 #PAKvSL LIVE ▶️ https://t.co/hAwrIa3ird pic.twitter.com/s5wKKj7Hfy
— ESPNcricinfo (@ESPNcricinfo) October 10, 2023
ಒಂದೇ ಪಂದ್ಯದಲ್ಲಿ ತಲಾ ತಂಡದಿಂದ ಎರಡೆರಡು ಶತಕದಂತೆ ನಾಲ್ಕು ಶತಕ ಮೂಡಿ ಬಂದಿದ್ದು ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ದಾಖಲೆಯಾಗಿದೆ
ಈ ಮೊದಲು ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಶ್ರೀಲಂಕಾ ಕುಶಾಲ್ ಮೆಂಡಿಸ್ ಹಾಗೂ ಸದೀರ ಸಮರವಿಕ್ರಮ ಅವರ ಭರ್ಜರಿ ಶತಕಗಳ ನೆರವಿನಿಂದ 50 ಓವರ್‌ಗಳ 9 ವಿಕೆಟ್ ನಷ್ಟಕ್ಕೆ 344 ರನ್‌ಗಳ ಬೃಹತ್ ಮೊತ್ತ ಕಲೆ ಹಾಕಿತು.
ಹಸನ್ ಅಲಿ ಎರಡನೇ ಓವರ್‌ನಲ್ಲಿಯೇ ಕುಶಾಲ್ ಪೆರೇರಾ ಔಟಾದ ನಂತರ ಪಾತುಂ ನಿಸ್ಸಾಂಕ ಅವರೊಂದಿಗೆ ಜೊತೆಯಾಟವಾಡಿದ ಸ್ಪೋಟಕ ಆಟಗಾರ ಕುಸಾಲ್ ಮೆಂಡಿಸ್ ಸಿಕ್ಸರ್, ಬೌಂಡರಿಗಳ ಸುರಿಮಳೆ ಬಾರಿಸಿದರು.
ಈ ಸುದ್ದಿ ಓದಿದ್ದೀರಾ? ಏಕದಿನ ವಿಶ್ವಕಪ್ 2023 | ಬಾಂಗ್ಲಾ ವಿರುದ್ಧ ಇಂಗ್ಲೆಂಡ್‌ಗೆ ಭಾರೀ ಗೆಲುವು
ಪಾಕ್ ಬೌಲರ್‌ಗಳನ್ನು ಹಿಗ್ಗಾಮುಗ್ಗಾ ದಂಡಿಸಿದ ಕುಸಾಲ್ 77 ಎಸೆತಗಳಲ್ಲಿ 14 ಆಕರ್ಷಕ ಬೌಂಡರಿ ಹಾಗೂ 6 ಭರ್ಜರಿ ಸಿಕ್ಸರ್‌ಗಳನ್ನು ಸಿಡಿಸಿ 122 ರನ್ ಬಾರಿಸಿ 28.5 ಓವರ್‌ನಲ್ಲಿ ಹಸನ್ ಅಲಿ ಬೌಲಿಂಗ್‌ನಲ್ಲಿ ಪೆವಿಲಿಯನ್‌ಗೆ ತೆರಳಿದರು.
Can Pakistan chase this down? 🧐
Remember, Sri Lanka have never beaten Pakistan in the men's ODI World Cup history! #PAKvSL #ICCWorldCup2023 pic.twitter.com/WV8QiyUyt3
— Cricbuzz (@cricbuzz) October 10, 2023
ಪಾತುಂ ನಿಸ್ಸಾಂಕ ಕೂಡ 61 ಚೆಂಡುಗಳಲ್ಲಿ ಅರ್ಧ ಶತಕ ಬಾರಿಸಿದರು. ಇವರ ಆಟದಲ್ಲಿ 7 ಬೌಂಡರಿ ಇ ಸಿಕ್ಸರ್ ಒಳಗೊಂಡಿತ್ತು.
ಇವರಿಬ್ಬರು ಔಟಾದ ನಂತರ ಕೊನೆಯ ಕ್ರಮಾಂಕದ ಉಳಿದ ಆಟಗಾರರೊಂದಿಗೆ ಆಟವಾಡಿದ ಸದೀರ ಸಮರವಿಕ್ರಮ 89 ಚೆಂಡುಗಳಲ್ಲಿ 11 ಬೌಂಡರಿ ಎರಡು ಸಿಕ್ಸರ್‌ನೊಂದಿಗೆ 108 ರನ್ ಸ್ಫೋಟಿಸಿ ತಂಡ 340 ಗಡಿ ದಾಟಲು ಕಾರಣರಾದರು.
ಬಾಂಗ್ಲಾ ಪರ ಹಸನ್ ಅಲಿ 71/4, ಹಾರಿಸ್ ರೌಫ್ 64/2 ವಿಕೆಟ್ ಕಬಳಿಸಿ ಯಶಸ್ವಿ ಬೌಲರ್‌ಗಳೆನಿಸಿದರು.