ಪ್ಯಾರಾಲಿಂಪಿಕ್ಸ್: ದಾಖಲೆಯ 29 ಪದಕಗಳನ್ನು ಗೆದ್ದ ಭಾರತ

Date:

Advertisements

ಪ್ಯಾರಿಸ್ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತದ ಪ್ರಯಾಣ ಅಂತ್ಯಗೊಳಿಸಿದೆ. ಈ ಬಾರಿಯ ಪ್ಯಾರಾಲಿಂಪಿಕ್ಸ್​ನಲ್ಲಿ ಇತಿಹಾಸ ಸೃಷ್ಟಿಸಿದ ಭಾರತ ದಾಖಲೆಯ 29 ಪದಕ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಇವುಗಳಲ್ಲಿ ಏಳು ಚಿನ್ನ, 9 ಬೆಳ್ಳಿ ಮತ್ತು 13 ಕಂಚು ಸೇರಿವೆ. ವಾಸ್ತವವಾಗಿ ಪ್ಯಾರಾಲಿಂಪಿಕ್ಸ್​ ಇತಿಹಾಸದಲ್ಲಿ ಭಾರತ ಇಷ್ಟು ಸಂಖ್ಯೆಯ ಪದಕಗಳನ್ನು ಗೆದ್ದಿದ್ದು, ಇದೇ ಮೊದಲು. ಇದಕ್ಕೂ ಮೊದಲು ಟೊಕಿಯೋ ಪ್ಯಾರಾಲಿಂಪಿಕ್​ನಲ್ಲಿ 19 ಪದಕಗಳನ್ನು ಗೆದ್ದಿದ್ದು, ಭಾರತದ ಅತ್ಯುತ್ತಮ ಪ್ರದರ್ಶನವಾಗಿತ್ತು.

ಕ್ರೀಡಾಕೂಟದ ಕೊನೆಯ ದಿನವಾದ ಇಂದು ಭಾರತದ ಪ್ಯಾರಾ ಅಥ್ಲೀಟ್ ಪೂಜಾ ಓಜಾ, ಮಹಿಳೆಯರ ಪ್ಯಾರಾ ಕ್ಯಾನೋ ಕೆಎಲ್‌1 200 ಮೀಟರ್ ಸ್ಪರ್ಧೆಯ ಸೆಮಿಫೈನಲ್‌ನಲ್ಲಿ ನಾಲ್ಕನೇ ಸ್ಥಾನ ಪಡೆಯುವ ಮೂಲಕ ಫೈನಲ್‌ ರೇಸ್​ನಿಂದ ಹೊರಬಿದ್ದರು. ಇದರೊಂದಿಗೆ ಭಾರತದ ಅಭಿಯಾನವೂ ಕೊನೆಗೊಂಡಿತು.

ಈ ಸುದ್ದಿ ಓದಿದ್ದೀರಾ? ಕೇಂದ್ರ ಸರ್ಕಾರದ ರೈಲ್ವೆ ಉದ್ಯೋಗಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್‌ಗೆ ವಿನೇಶ್ ಫೋಗಟ್ ಸೇರ್ಪಡೆ

Advertisements

ಟೊಕಿಯೋ ಪ್ಯಾರಾಲಿಂಪಿಕ್​ನಲ್ಲಿ 5 ಚಿನ್ನ, 8 ಬೆಳ್ಳಿ ಹಾಗೂ 6 ಕಂಚಿನ ಪದಕ ಸೇರಿದಂತೆ ಒಟ್ಟು 19 ಪದಕ ಗೆದ್ದಿದ್ದ ಭಾರತ ಪದಕಗಳ ಪಟ್ಟಿಯಲ್ಲಿ ಅಂತಿಮವಾಗಿ 24ನೇ ಸ್ಥಾನವನ್ನು ಪಡೆದುಕೊಂಡಿತ್ತು. ಈ ಬಾರಿ ಭಾರತದ ಅಥ್ಲೀಟ್​ಗಳ ಪ್ರದರ್ಶನ ಗಮನಾರ್ಹವಾಗಿತ್ತು. 29 ಪದಕಗಳಲ್ಲದೆ ಹಲವು ಅಥ್ಲೀಟ್​ಗಳು ಕೂದಲೆಳೆ ಅಂತರದಲ್ಲಿ ಪದಕಗಳನ್ನು ಕಳೆದುಕೊಂಡರು. ಇನ್ನು ಕೆಲವರು ಸೆಮಿಫೈನಲ್​ ಸುತ್ತಿಗೆ ಅರ್ಹತೆ ಪಡೆದು, ಅಲ್ಲಿ ಪರಾಭವಗೊಂಡು ಕಂಚಿನ ಪದಕಕ್ಕಾಗಿ ನಡೆದ ಪಂದ್ಯದಲ್ಲೂ ಸೋತರು. ಹೀಗಾಗಿ ಹಲವು ವಿಭಾಗಗಳಲ್ಲಿ ಭಾರತ ಪದಕ ವಂಚಿತವಾಗಬೇಕಾಯಿತು. ಒಟ್ಟಾರೆಯಾಗಿ 29 ಪದಕ ಗೆದ್ದಿರುವ ಭಾರತ ಪ್ರಸ್ತುತ ಪದಕ ಪಟ್ಟಿಯಲ್ಲಿ 18ನೇ ಸ್ಥಾನದಲ್ಲಿದೆ. ಕ್ರೀಡಾಕೂಟದಲ್ಲಿ ಇನ್ನು ಕೆಲವು ಪಂದ್ಯಗಳಿರುವ ಕಾರಣ ಕೆಲವು ಪದಕಗಳ ನಿರೀಕ್ಷೆಯಿದೆ.

ಭಾರತದ ಪದಕಗಳ ಪಟ್ಟಿ

1. ಮಹಿಳೆಯರ 10 ಮೀಟರ್ ಏರ್ ರೈಫಲ್ ಸ್ಟ್ಯಾಂಡಿಂಗ್ ಎಸ್‌ಎಚ್1 (ಶೂಟಿಂಗ್) ನಲ್ಲಿ ಅವನಿ ಲೆಖರಾ – ಚಿನ್ನ

2. ಮಹಿಳೆಯರ 10 ಮೀಟರ್ ಏರ್ ರೈಫಲ್ ಸ್ಟ್ಯಾಂಡಿಂಗ್ ಎಸ್‌ಎಚ್1 (ಶೂಟಿಂಗ್) ನಲ್ಲಿ ಮೋನಾ ಅಗರ್ವಾಲ್ – ಕಂಚು

3. ಮಹಿಳೆಯರ 100 ಮೀ ಟಿ35 (ಅಥ್ಲೆಟಿಕ್ಸ್) ನಲ್ಲಿ ಪ್ರೀತಿ ಪಾಲ್ – ಕಂಚು

4. ಪುರುಷರ 10 ಮೀಟರ್ ಏರ್ ಪಿಸ್ತೂಲ್  ಎಸ್‌ಹೆಚ್1 (ಶೂಟಿಂಗ್) ನಲ್ಲಿ ಮನೀಶ್ ನರ್ವಾಲ್ – ಬೆಳ್ಳಿ

5. ಮಹಿಳೆಯರ 10ಮೀ ಏರ್ ಪಿಸ್ತೂಲ್ ಎಸ್‌ಹೆಚ್‌1 (ಶೂಟಿಂಗ್) ನಲ್ಲಿ ರುಬಿನಾ ಫ್ರಾನ್ಸಿಸ್ – ಕಂಚು

6. ಮಹಿಳೆಯರ 200 ಮೀ ಟಿ35 (ಅಥ್ಲೆಟಿಕ್ಸ್) ನಲ್ಲಿ ಪ್ರೀತಿ ಪಾಲ್ – ಕಂಚು

7. ಪುರುಷರ ಹೈಜಂಪ್ ಟಿ47 (ಅಥ್ಲೆಟಿಕ್ಸ್)ನಲ್ಲಿ ನಿಶಾದ್ ಕುಮಾರ್ – ಬೆಳ್ಳಿ

8. ಪುರುಷರ ಡಿಸ್ಕಸ್ ಥ್ರೋ ಎಫ್56 (ಅಥ್ಲೆಟಿಕ್ಸ್) ನಲ್ಲಿ ಯೋಗೇಶ್ ಕಥುನಿಯಾ – ಬೆಳ್ಳಿ

9. ಪುರುಷರ ಸಿಂಗಲ್ಸ್ ಎಸ್‌ಎಲ್3 (ಬ್ಯಾಡ್ಮಿಂಟನ್) ನಲ್ಲಿ ನಿತೇಶ್ ಕುಮಾರ್ – ಚಿನ್ನ

10. ಮಹಿಳೆಯರ ಸಿಂಗಲ್ಸ್ ಎಸ್‌ಯು5 (ಬ್ಯಾಡ್ಮಿಂಟನ್) ನಲ್ಲಿ ತುಳಸಿಮತಿ ಮುರುಗೇಶನ್ – ಬೆಳ್ಳಿ

11. ಮಹಿಳೆಯರ ಸಿಂಗಲ್ಸ್ ಎಸ್‌ಯು5 (ಬ್ಯಾಡ್ಮಿಂಟನ್) ಮನೀಶಾ ರಾಮದಾಸ್ – ಕಂಚು

12. ಪುರುಷರ ಸಿಂಗಲ್ಸ್ ಎಸ್‌ಎಲ್4 (ಬ್ಯಾಡ್ಮಿಂಟನ್) ಸುಹಾಸ್ ಯತಿರಾಜ್ – ಬೆಳ್ಳಿ

13. ಮಿಶ್ರ ತಂಡ ಕಾಂಪೌಂಡ್ ಓಪನ್ (ಆರ್ಚರಿ) ರಾಕೇಶ್ ಕುಮಾರ್ – ಶೀತಲ್ ದೇವಿ – ಕಂಚು

14. ಪುರುಷರ ಜಾವೆಲಿನ್ ಎಫ್64 (ಅಥ್ಲೆಟಿಕ್ಸ್) ಸುಮಿತ್ ಆಂಟಿಲ್– ಚಿನ್ನ

15. ಮಹಿಳೆಯರ ಸಿಂಗಲ್ಸ್ ಎಸ್‌ಹೆಚ್‌6 (ಬ್ಯಾಡ್ಮಿಂಟನ್) ನಲ್ಲಿ ನಿತ್ಯ ಶ್ರೀ ಶಿವನ್ – ಕಂಚು

16. ಮಹಿಳೆಯರ 400 ಮೀ ಟಿ20 (ಅಥ್ಲೆಟಿಕ್ಸ್) ನಲ್ಲಿ ದೀಪ್ತಿ ಜೀವನ್​ಜಿ – ಕಂಚು

17. ಪುರುಷರ ಜಾವೆಲಿನ್ ಎಫ್46 (ಅಥ್ಲೆಟಿಕ್ಸ್) ನಲ್ಲಿ ಸುಂದರ್ ಸಿಂಗ್ ಗುರ್ಜರ್ – ಕಂಚು

18. ಪುರುಷರ ಜಾವೆಲಿನ್ ಎಫ್46 (ಅಥ್ಲೆಟಿಕ್ಸ್) ನಲ್ಲಿ ಅಜೀತ್ ಸಿಂಗ್ – ಬೆಳ್ಳಿ

19. ಪುರುಷರ ಹೈಜಂಪ್ ಟಿ63 (ಅಥ್ಲೆಟಿಕ್ಸ್) ನಲ್ಲಿ ಮರಿಯಪ್ಪನ್ ತಂಗವೇಲು – ಕಂಚು

20. ಪುರುಷರ ಹೈ ಜಂಪ್ ಟಿ63 (ಅಥ್ಲೆಟಿಕ್ಸ್) ನಲ್ಲಿ ಶರದ್ ಕುಮಾರ್ – ಬೆಳ್ಳಿ

21. ಪುರುಷರ ಶಾಟ್ ಪುಟ್ ಎಫ್46 (ಅಥ್ಲೆಟಿಕ್ಸ್) ನಲ್ಲಿ ಸಚಿನ್ ಖಿಲಾರಿ – ಬೆಳ್ಳಿ

22. ಪುರುಷರ ವೈಯಕ್ತಿಕ ರಿಕರ್ವ್ (ಆರ್ಚರಿ) ಹರ್ವಿಂದರ್ ಸಿಂಗ್– ಚಿನ್ನ

23. ಪುರುಷರ ಕ್ಲಬ್‌ ಥ್ರೋ 51 (ಅಥ್ಲೆಟಿಕ್ಸ್) ನಲ್ಲಿ ಧರಂಬೀರ್ – ಚಿನ್ನ

24. ಪುರುಷರ ಕ್ಲಬ್  ಥ್ರೋ 51 (ಅಥ್ಲೆಟಿಕ್ಸ್) ನಲ್ಲಿ ಪ್ರಣವ್ ಸೂರ್ಮಾ – ಬೆಳ್ಳಿ

25. ಜೂಡೋ ಪುರುಷರ 60 ಕೆಜಿ ವಿಭಾಗದಲ್ಲಿ ಕಪಿಲ್ ಪರ್ಮಾರ್ – ಕಂಚು

26. ಟಿ64 ಹೈಜಂಪ್ (ಅಥ್ಲೆಟಿಕ್ಸ್) ಪ್ರವೀಣ್ ಕುಮಾರ್ – ಚಿನ್ನ

27. ಪುರುಷರ ಶಾಟ್‌ಪುಟ್‌  ಎಫ್57 (ಅಥ್ಲೆಟಿಕ್ಸ್) ಹೊಕಾಟೊ ಸೆಮಾ – ಕಂಚು

28. ಮಹಿಳೆಯರ 200 ಮೀ ಟಿ12 (ಅಥ್ಲೆಟಿಕ್ಸ್) ಸಿಮ್ರಾನ್ ಸಿಂಗ್ – ಕಂಚು

29. ಪುರುಷರ ಜಾವೆಲಿನ್ ಎಫ್41 (ಅಥ್ಲೆಟಿಕ್ಸ್) ನಲ್ಲಿ ನವದೀಪ್ ಸಿಂಗ್ – ಚಿನ್ನ

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತಾಂತ್ರಿಕ ಕಾರಣದಿಂದ ಯುವಕನಿಗೆ ಸಿಕ್ಕ ಆರ್‌ಸಿಬಿ ಆಟಗಾರನ ಸಿಮ್‌; ಕೊಹ್ಲಿ, ಎಬಿಡಿಯಿಂದ ನಿತ್ಯ ಕರೆ!

ಛತ್ತೀಸ್‌ಗಢದ ಯುವಕನೊಬ್ಬನಿಗೆ ತಾಂತ್ರಿಕ ದೋಷದಿಂದಾಗಿ ಆರ್‌ಸಿಬಿ ತಂಡದ ನಾಯಕ ರಜತ್ ಪಾಟೀದಾರ್‌ರ...

ಬಿಸಿಸಿಐ ಷರತ್ತಿನಿಂದ ವಿರಾಟ್‌, ರೋಹಿತ್‌ 2027ರ ಏಕದಿನ ವಿಶ್ವಕಪ್‌ ಕನಸು ಕಮರಿ ಹೋಗಲಿದೆಯೇ?

ಟೀಂ ಇಂಡಿಯಾದ ದಿಗ್ಗಜ ಆಟಗಾರರಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ...

ಊಹಾಪೋಹಗಳಿಗೆ ತೆರೆ: ಭಾರತ–ಪಾಕ್‌ ಏಷ್ಯಾಕಪ್‌ ಕ್ರಿಕೆಟ್‌ ಪಂದ್ಯ ರದ್ದಾಗುವುದಿಲ್ಲ

ಪಹಲ್ಗಾಮ್‌ ಉಗ್ರ ದಾಳಿಯ ನಂತರ ಭಾರತ–ಪಾಕಿಸ್ತಾನದ ನಡುವಿನ ಬಿಕ್ಕಟ್ಟು ಹೆಚ್ಚಾದ ಹಿನ್ನೆಲೆಯಲ್ಲಿ...

ಕೇರಳ ಭೇಟಿ ರದ್ದುಗೊಳಿಸಿದ ಮೆಸ್ಸಿ ನೇತೃತ್ವದ ಅರ್ಜೆಂಟೀನಾ ತಂಡ

ಲಿಯೊನೆಲ್ ಮೆಸ್ಸಿ ನೇತೃತ್ವದ ಫೀಫಾ ವಿಶ್ವಕಪ್ ವಿಜೇತ ಅರ್ಜೆಂಟೀನಾ ತಂಡವನ್ನು ಕೇರಳಕ್ಕೆ...

Download Eedina App Android / iOS

X